ಸರ್ಕಾರಿ ಕಚೇರಿಗಳಲ್ಲಿ ಐಫೋನ್‌ಗೆ ನಿರ್ಬಂಧ, ಆಫೀಸ್‌ಗೆ ತರಬೇಡಿ ಎಂದು ಅಧಿಕಾರಿಗಳಿಗೆ ತಾಕೀತು
ಐಫೋನ್‌ಗಳ (apple iphone) ಕ್ರೇಜ್ ಹಿಂದೆಂದಿಗಿಂತಲೂ ಈಗ ಹೆಚ್ಚಾಗಿದೆ. ಅದರಲ್ಲೂ ಭಾರತದಲ್ಲಿ ಈ ಫೋನ್‌ಗಳಿಗೆ ಹೆಚ್ಚಿನ ಬೇಡಿಕೆ ಇದ್ದು, ಈ ನಡುವೆ ಭಾರತದಲ್ಲೇ ಮುಂದಿನ ಸರಣಿಯ ಐಫೋನ್‌ಗಳನ್ನು ತಯಾರಿಸಲಾಗುತ್ತದೆ ಎಂಬ ವರದಿಗಳು ಸಹ ಇದೆ. ಅದರಂತೆ ಐಫೋನ್ 15 ಸರಣಿ (iPhone 15) ಫೋನ್‌ಗಳು ಇನ್ನೇನು ಕೆಲವೇ ದಿನಗಳಲ್ಲಿ ಲಾಂಚ್ ಆಗಲಿದೆ.
ಹೌದು, ಆಪಲ್ ಸಂಸ್ಥೆಯ ಐಫೋನ್‌ಗಳು ಜಾಗತಿಕವಾಗಿ ಮೆಚ್ಚುಗೆ ಪಡೆದುಕೊಂಡಿವೆ. ಈ ಕಾರಣಕ್ಕೆ ಇಡೀ ಜಗತ್ತಿನಲ್ಲೇ ಹೆಚ್ಚು ಜನಪ್ರಿಯತೆ ಇರುವ ಫೋನ್‌ಗಳ ಟಾಪ್ ಲಿಸ್ಟ್‌ನಲ್ಲಿ ಐಫೋನ್‌ಗಳೇ ಇವೆ. ಆದರೆ, ಈಗ ಈ ಸರ್ಕಾರ ಐಫೋನ್‌ಗಳನ್ನು ಸರ್ಕಾರಿ ಕಚೇರಿಗಳಲ್ಲಿ ನಿಷೇದ ಮಾಡಿದೆ. ಈ ಮೂಲಕ ಆಪಲ್ ಸಂಸ್ಥೆಗೆ ಕಳವಳ ಉಂಟು ಮಾಡಲಾಗಿದೆ. ಹಾಗಿದ್ರೆ, ಎಲ್ಲಿ ಈ ಐಫೋನ್ ನಿಷೇದ?, ಯಾಕಾಗಿ ಈ ನಿರ್ಧಾರ ಮಾಡಲಾಗಿದೆ? ಎಂಬ ಮಾಹಿತಿ ಇಲ್ಲಿದೆ ನೋಡಿ.

ಐಫೋನ್‌ಗಳ ಬಳಕೆಗೆ ನಿಷೇಧ: ಆಪಲ್‌ನ ಐಫೋನ್‌ಗಳು ಮತ್ತು ಇತರ ವಿದೇಶಿ ಬ್ರಾಂಡ್‌ನ ಡಿವೈಸ್‌ಗಳನ್ನು ಕೆಲಸಕ್ಕೆ ಬಳಕೆ ಮಾಡದಂತೆ ಅಥವಾ ಕಚೇರಿಗೆ ತರದಂತೆ ಕೇಂದ್ರ ಸರ್ಕಾರಿ ಏಜೆನ್ಸಿಗಳ ಅಧಿಕಾರಿಗಳಿಗೆ ಚೀನಾ ಆದೇಶ ನೀಡಿದೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ತನ್ನ ವರದಿಯಲ್ಲಿ ಉಲ್ಲೇಖ ಮಾಡಿದೆ. ಈ ಆದೇಶವನ್ನು ಮೇಲಾಧಿಕಾರಿಗಳು ನೀಡಿದ್ದಾರೆ. ಆದರೆ, ಈ ಆದೇಶ ಎಲ್ಲಾ ಕಡೆ ಅನ್ವಯ ಆಗುತ್ತಿದೆಯೇ ಎಂಬುದರ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ.
ಪ್ರಮುಖ ವಿಷಯ ಏನೆಂದರೆ ಮುಂದಿನ ವಾರ ಆಪಲ್ ಈವೆಂಟ್ ಇದ್ದು, ಇದಕ್ಕೂ ಮುನ್ನವೇ ಚೀನಾದಲ್ಲಿ ಈ ಆದೇಶ ಮಾಡಲಾಗಿದ್ದು, ಆಪಲ್‌ಗೆ ಹೆಚ್ಚಿನ ಕಳವಳ ಉಂಟಾಗುವಂತೆ ಮಾಡಿದೆ. ಅದರಲ್ಲೂ ಚೀನಾ-ಯುಎಸ್ ಉದ್ವಿಗ್ನತೆ ಹೆಚ್ಚಾದಂತೆ ಚೀನಾದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿದೇಶಿ ಕಂಪನಿಗಳಿಗೆ ಕಳವಳ ಹೆಚ್ಚಾಗಲಿದೆ ಎಂದು ಹೇಳಲಾಗುತ್ತಿದೆ.ಆದರೆ, ಈ ವರದಿಯಲ್ಲಿ ಆಪಲ್ ಹೆಸರು ಮಾತ್ರ ಇರುವುದು ಹಲವಾರು ಪ್ರಶ್ನೆಗೆ ಕಾರಣವಾಗಿದೆ.
ಚೀನಾ ಇತ್ತೀಚಿನ ವರ್ಷಗಳಲ್ಲಿ ಡೇಟಾ ಸುರಕ್ಷತೆಯ ಬಗ್ಗೆ ಹೆಚ್ಚು ಕಾಳಜಿ ವಹಿಸಿದೆ ಎನ್ನಲಾಗಿದೆ. ಈ ಮೂಲಕ ಕಂಪನಿಗಳಿಗೆ ಹೊಸ ಕಾನೂನುಗಳು ಮತ್ತು ಅನುಸರಣೆ ಅಗತ್ಯತೆಗಳನ್ನು ಈ ಆದೇಶದ ಮೂಲಕ ನೀಡಿದೆ ಎಂದು ತೋರುತ್ತದೆ. ಅದರಲ್ಲೂ ಮೇ ತಿಂಗಳಲ್ಲಿ ಚೀನಾವು ಯುನೈಟೆಡ್ ಸ್ಟೇಟ್ಸ್‌ನೊಂದಿಗಿನ ಬಿರುಕುಗಳನ್ನ ಬಹಿರಂಗಪಡಿಸಿದ ನಂತರ ತಂತ್ರಜ್ಞಾನದಲ್ಲಿ ಸ್ವಾವಲಂಬನೆಯನ್ನು ಸಾಧಿಸುವ ತನ್ನ ಡ್ರೈವ್‌ನಲ್ಲಿ ಪ್ರಮುಖ ಪಾತ್ರ ವಹಿಸುವಂತೆ ದೊಡ್ಡ ಸರ್ಕಾರಿ ಸ್ವಾಮ್ಯದ ಉದ್ಯಮಗಳನ್ನು (SOEs) ಒತ್ತಾಯಿಸಿದೆ.
ಅಂದರೆ ವಾಷಿಂಗ್ಟನ್ ತನ್ನ ಚಿಪ್ ಉದ್ಯಮವನ್ನು ಸ್ಪರ್ಧಾತ್ಮಕವಾಗಿ ಇರಿಸಿಕೊಳ್ಳಲು ಅಗತ್ಯವಾದ ಪ್ರಮುಖ ಡಿವೈಸ್‌ಗಳಿಗೆ ಚೀನಾದ ಪ್ರವೇಶವನ್ನು ನಿರ್ಬಂಧಿಸಲು ಮಿತ್ರರಾಷ್ಟ್ರಗಳೊಂದಿಗೆ ಕೆಲಸ ಮಾಡುತ್ತಿರುವ ಕಾರಣಕ್ಕೆ ಚೀನಾ-ಯುಎಸ್ ಉದ್ವಿಗ್ನತೆ ಹೆಚ್ಚಿದೆ. ಇದರೊಂದಿಗೆ ಬೀಜಿಂಗ್ ವಿಮಾನ ತಯಾರಕ ಬೋಯಿಂಗ್ ಮತ್ತು ಚಿಪ್ ಕಂಪನಿ ಮೈಕ್ರಾನ್ ಟೆಕ್ನಾಲಜಿ ಸೇರಿದಂತೆ ಪ್ರಮುಖ ಯುಎಸ್ ಸಂಸ್ಥೆಗಳಿಂದ ಎಲ್ಲಾ ರೀತಿಯ ಸಾಗಣೆಯನ್ನು ನಿರ್ಬಂಧಿಸಲಾಗಿದೆ.
ಯುಎಸ್ ವಾಣಿಜ್ಯ ಕಾರ್ಯದರ್ಶಿ ಗಿನಾ ರೈಮೊಂಡೋ ಅವರು ಕಳೆದ ವಾರ ಚೀನಾಕ್ಕೆ ಭೇಟಿ ನೀಡಿದ್ದಾಗ ಚೀನಾ ಬಂಡವಾಳ ಹೂಡಿಕೆ ಮಾಡುವುದಿಲ್ಲ ಎಂದು ಯುಎಸ್ ಕಂಪನಿಗಳು ತನಗೆ ದೂರು ನೀಡಿದ್ದು, ದಂಡಗಳು, ದಾಳಿಗಳು ಮತ್ತು ಇತರ ಕ್ರಮಗಳನ್ನು ಉಲ್ಲೇಖಿಸಿ ವಿಶ್ವದ ಎರಡನೇ ಅತಿದೊಡ್ಡ ವ್ಯಾಪಾರವನ್ನು ಮಾಡಲು ಅಪಾಯಕಾರಿ ಎಂದು ತಿಳಿಸಿದ್ದಾರೆ. ಇದರಲ್ಲಿ ಗಮನಿಸಬೇಕಾದ ವಿಷಯ ಏನೆಂದರೆ ಹುವಾವೇ ಮತ್ತು ಚೀನಾದ ಬೈಟ್‌ಡ್ಯಾನ್ಸ್ ಒಡೆತನದ ಕಿರು ವಿಡಿಯೋ ಪ್ಲಾಟ್‌ಫಾರ್ಮ್ ಟಿಕ್‌ಟಾಕ್ ವಿರುದ್ಧ ಯುನೈಟೆಡ್ ಸ್ಟೇಟ್ಸ್‌ನಲ್ಲಿ ನಿಷೇಧ ಕ್ರಮ ತೆಗೆದುಕೊಳ್ಳಲಾಗಿದೆ.
ಇನ್ನು ಚೀನಾ ಆಪಲ್‌ನ ಅತಿದೊಡ್ಡ ಮಾರುಕಟ್ಟೆಗಳಲ್ಲಿ ಒಂದಾಗಿದ್ದು, ಅದರ ಆದಾಯದ ಸುಮಾರು ಐದನೇ ಒಂದು ಭಾಗವನ್ನು ಉತ್ಪಾದಿಸುತ್ತದೆ. ಆದರೆ ಈಗ ತೆಗೆದುಕೊಂಡಿರುವ ನಿರ್ಧಾರದಿಂದಾಗಿ ಆಪಲ್ ದೊಡ್ಡ ನಷ್ಟವನ್ನು ಅನುಭವಿಸಬಹುದು ಎಂದು ಹೇಳಲಾಗುತ್ತಿದೆ. ಈ ನಡುವೆ ಟಾಟಾ ಗ್ರೂಪ್ ಐಫೋನ್‌ಗಳನ್ನು ತಯಾರಿಸುವ ಘಟಕವನ್ನು ಸ್ವಾಧೀನಪಡಿಸಿಕೊಳ್ಳಲು ಯೋಜಿಸಿದೆ.

ಆಪಲ್ ಸಾಮಾನ್ಯವಾಗಿ ತನ್ನ ಐಫೋನ್‌ಗಳ ತಯಾರಿಕೆ ಮತ್ತು ಜೋಡಣೆಗಾಗಿ ವಿಸ್ಟ್ರಾನ್ ಮತ್ತು ಫಾಕ್ಸ್‌ಕಾನ್ ಟೆಕ್ನಾಲಜಿ ಗ್ರೂಪ್‌ನಂತಹ ತೈವಾನೀಸ್ ಉತ್ಪಾದನಾ ದೈತ್ಯರನ್ನು ಅವಲಂಬಿಸಿದೆ. ಆದರೆ ಇನ್ಮುಂದೆ ಭಾರತದಲ್ಲೂ ಸಹ ಫೋನ್‌ಗಳನ್ನು ತಯಾರಿಸುವ ಅಥವಾ ಜೋಡಣೆ ಮಾಡುವ ಕೆಲಸ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ. ಆದರೆ ಈ ಬಗ್ಗೆ ಟಾಟಾ ಎಲ್ಲೂ ಅಧಿಕೃತ ಹೇಳಿಕೆ ನೀಡಿಲ್ಲ.


Click it and Unblock the Notifications








