ಏಲಿಯನ್ ಅನ್ವೇಷಣೆಗೆ ವಿಶ್ವದ ಬೃಹತ್ ಟೆಲಿಸ್ಕೋಪ್

By Shwetha
|

ಚೀನಾ ವಿಶ್ವದ ಅತಿ ದೊಡ್ಡ ರೇಡಿಯೊ ಟೆಲಿಸ್ಕೋಪ್ ನಿರ್ಮಾಣದ ಅಮತಿಮ ಹಂತದಲ್ಲಿದೆ. ಬಾಹ್ಯಾಕಾಶ ಸಂಶೋಧನೆಯಲ್ಲೇ ಇದು ಬೀಜಿಂಗ್‌ಗೆ ಅತಿ ಮಹತ್ವದ ಸ್ಥಾನವನ್ನು ನೀಡಲಿದೆ. 30 ಪುಟ್‌ಬಾಲ್ ಪಿಚ್‌ಗಳ ಗಾತ್ರದಲ್ಲಿ ಈ ಟೆಲಿಸ್ಕೋಪ್ ನಿರ್ಮಾಣವಾಗುತ್ತಿದ್ದು ಬಿಲಿಯಗಟ್ಟಲೆ ಜ್ಯೋತಿರ್ವರ್ಷಗಳ ಅನ್ವೇಷಣೆಯನ್ನು ಇದು ಮಾಡಲಿದೆ. ಗ್ಯಾಲಕ್ಸಿಗಳು ಮತ್ತು ಸೋಲಾರ್ ಸಿಸ್ಟಮ್‌ಗಳಿಂದ ರೇಡಿಯೊ ಸಿಗ್ನಲ್‌ಗಳನ್ನು ಆರಿಸಲು ಇದಕ್ಕೆ ಸಾಧ್ಯವಾಗುತ್ತದೆ ಅಂತೆಯೇ ನೈಸರ್ಗಿಕ ಹೈಡ್ರೋಜನ್‌ನಂತಹ ಭವಿಷ್ಯದ ಸಂಪನ್ಮೂಲಗಳನ್ನು ಇದು ಅನ್ವೇಷಿಸಲಿದೆ.

ಓದಿರಿ: ಏಲಿಯನ್ ಬದುಕು ಭೂಮಿಯಲ್ಲಿ ಇದ್ದದ್ದು ಹೌದು!!!

ಬನ್ನಿ ಕೆಳಗಿನ ಸ್ಲೈಡರ್‌ಗಳಲ್ಲಿ ಮತ್ತಷ್ಟು ಮಾಹಿತಿಗಳನ್ನು ಅರಿತುಕೊಳ್ಳೋಣ.

ರೇಡಿಯೊ ಟೆಲಿಸ್ಕೋಪ್

ರೇಡಿಯೊ ಟೆಲಿಸ್ಕೋಪ್

ರೇಡಿಯೊ ಟೆಲಿಸ್ಕೋಪ್ ಸೂಕ್ಷ್ಮ ಕಿವಿಯನ್ನು ಹೊಂದಿದ್ದು, ಬ್ರಹ್ಮಾಂಡದ ಅರ್ಥಪೂರ್ಣ ರೇಡಿಯೊ ಸಂದೇಶಗಳನ್ನು ಸ್ವೀಕರಿಸುವ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಎಂಬುದಾಗಿ ಪ್ರೊಜೆಕ್ಟ್‌ನ ಮುಖ್ಯ ವಿಜ್ಞಾನಿ ನಾನ್ ರೆಂಡೊಂಗ್ ತಿಳಿಸಿದ್ದಾರೆ.

ನಿರ್ಮಾಣ ಕಾರ್ಯ

ನಿರ್ಮಾಣ ಕಾರ್ಯ

ಟೆಲಿಸ್ಕೋಪ್‌ನ ನಿರ್ಮಾಣ ಕಾರ್ಯವು 2011 ರಲ್ಲಿ ಆರಂಭಗೊಂಡಿತ್ತು ಮತ್ತು ಸಪ್ಟೆಂಬರ್ 2016 ಕ್ಕೆ ಇದನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ವಿಜ್ಞಾನಿಗಳಿದ್ದಾರೆ.

ಮೀರಿಸುವಷ್ಟು ದೊಡ್ಡದಾಗಿದೆ

ಮೀರಿಸುವಷ್ಟು ದೊಡ್ಡದಾಗಿದೆ

ವಿಶ್ವದ ಪ್ರಸ್ತುತ ಹೆಸರುವಾಸಿಯಗಿರುವ ಅತಿದೊಡ್ಡ ಸ್ಟಾರ್ ಗೇಜರ್, ಎರಿಸಿಬೊ ಟೆಲಿಸ್ಕೋಪ್ ಅನ್ನು ಮೀರಿಸುವಷ್ಟು ದೊಡ್ಡದಾಗಿದೆ ಈ ಟೆಲಿಸ್ಕೋಪ್.

ಬುದ್ಧಿವಂತ ಜೀವನ

ಬುದ್ಧಿವಂತ ಜೀವನ

ಇತ್ತೀಚಿನ ದಿನಗಳಲ್ಲಿ ಪ್ಯಾನಲ್‌ಗಳನ್ನು ಸ್ಥಾಪಿಸುವ ಕಾರ್ಯ ನಡೆಯುತ್ತಿದ್ದು, ರೆಟೀನಾ ಎಂಬುದಾಗಿ ಕೂಡ ಇದನ್ನು ಕರೆಯಬಹುದಾಗಿದೆ. ಇದು ಒಂದೊಂದು 33 ಫೀಟ್ ಉದ್ದವಾಗಿದೆ. ಗ್ಯಾಲಕ್ಸಿಯ ಹೊರಗಿರುವ ಬುದ್ಧಿವಂತ ಜೀವನವನ್ನು ಹುಡುಕಾಡಲು ಇದು ನೆರವನ್ನು ನೀಡುತ್ತಿದೆ ಎಂಬುದಾಗಿ ಚೀನಾದ ಆಸ್ಟ್ರೊನಾಮಿಕಲ್ ಸೊಸೈಟಿಯ ಡೈರೆಕ್ಟರ್ ಜನರಲ್ ವು ಕ್ಸಿಯಾಂಗ್‌ಪಿಂಗ್ ನುಡಿದಿದ್ದಾರೆ.

ಸಪ್ಟೆಂಬರ್ ಅಂತ್ಯ

ಸಪ್ಟೆಂಬರ್ ಅಂತ್ಯ

ಪ್ಯಾನೆಲ್‌ಗಳ ಸ್ಥಾಪನೆಯನ್ನು ಜೂನ್ 2016 ರಲ್ಲಿ ನಾವು ಪೂರ್ತಿ ಮಾಡುತ್ತಿದ್ದು, ಸಪ್ಟೆಂಬರ್ ಅಂತ್ಯದಂದು ಟೆಲಿಸ್ಕೋಪ್‌ನ ಎಲ್ಲಾ ಕೆಲಸವನ್ನು ನಾವು ಸಂಪೂರ್ಣಗೊಳಿಸಲಿದ್ದೇವೆ ಎಂಬುದಾಗಿ ಮುಖ್ಯ ವಿಜ್ಞಾನಿ ಲಿಡಿ ತಿಳಿಸಿದ್ದಾರೆ.

ಟೆಲಿಸ್ಕೋಪ್‌ನ ವಿನ್ಯಾಸ

ಟೆಲಿಸ್ಕೋಪ್‌ನ ವಿನ್ಯಾಸ

ಟೆಲಿಸ್ಕೋಪ್‌ನ ವಿನ್ಯಾಸವು ಅಷ್ಟೇನೂ ಕಷ್ಟವಾಗಿಲ್ಲ ಟಿವಿ ಆಂಟೆನಾಗೆ ಸಮಾನವಾಗಿದೆ ಮಹಡಿಯ ಮೇಲಿರುವ ಯಾವುದೇ ಟೆಲಿವಿಶನ್ ಆಂಟೆನಾದಂತೆಯೇ ಇದು ಇದ್ದು ಅದಕ್ಕಿಂತ ತುಂಬಾ ದೊಡ್ಡದಾಗಿದೆ ಎಂಬುದು ಲಿಡಿಯವರ ಹೇಳಿಕೆಯಾಗಿದೆ.

ಹೆಚ್ಚು ಸಿಗ್ನಲ್‌

ಹೆಚ್ಚು ಸಿಗ್ನಲ್‌

ಹೆಚ್ಚು ಸಿಗ್ನಲ್‌ಗಳನ್ನು ಸ್ವೀಕರಿಸುವ ಪ್ರದೇಶ ಮತ್ತು ಹೆಚ್ಚಿನ ನಮ್ಯತೆಯೊಂದಿಗೆ, ಎರಡು ಬಾರಿ ಹೆಚ್ಚು ವೇಗವಾಗಿ ಇದನ್ನು ಸ್ಕ್ಯಾನ್ ಮಾಡಬಹುದಾಗಿದೆ ಮತ್ತು ಸೆನ್ಸಿಟಿವಿಟಿ ಮೂರರಿಂದ ಐದು ಬಾರಿ ಹಿರಿದಾಗಿದೆ.

40 ನಿಮಿಷ

40 ನಿಮಿಷ

ವ್ಯಕ್ತಿಯೊಬ್ಬ ಟೆಲಿಸ್ಕೋಪ್‌ನಾದ್ಯಂತ ಸಂಚರಿಸಲು 40 ನಿಮಿಷಗಳನ್ನು ತೆಗೆದುಕೊಳ್ಳಬಹುದು.

ತ್ರಿಕೋನ ಫಲಕ

ತ್ರಿಕೋನ ಫಲಕ

ಅಗಾಧವಾದ ಟೆಲಿಸ್ಕೋಪ್ ಡಿಶ್ ಅನ್ನು 4,500 ಕ್ಕಿಂತಲೂ ಹೆಚ್ಚಿನ ತ್ರಿಕೋನ ಫಲಕಗಳಿಂದ ನಿರ್ಮಿಸಲ್ಪಟ್ಟಿದೆ ಮತ್ತು ಪ್ಯಾನಲ್‌ಗಳ ಬದಿಭಾಗವು 11 ಮೀಟರ್‌ಗಳ ಉದ್ದವನ್ನು ಹೊಂದಿದೆ.

ರಚನೆಯ ಒಳಭಾಗ

ರಚನೆಯ ಒಳಭಾಗ

ರಚನೆಯ ಒಳಭಾಗದಲ್ಲಿ ರೆಟೀನಾವನ್ನು ಯಶಸ್ವಿಯಾಗಿ ಕೂರಿಸಲಾಗಿದೆ. ಇದನ್ನು ಪರಿಶೀಲಿಸಲಾಗಿದ್ದು ಇದು ಸೂಕ್ತವಾಗಿ ಕಾರ್ಯನಿರ್ವಹಿಸುತ್ತಿದೆ.

ಡಿವೈಸ್‌ನಲ್ಲಿರುವ ರಿಫ್ಲೆಕ್ಟರ್

ಡಿವೈಸ್‌ನಲ್ಲಿರುವ ರಿಫ್ಲೆಕ್ಟರ್

ಡಿವೈಸ್‌ನಲ್ಲಿರುವ ರಿಫ್ಲೆಕ್ಟರ್ ಸಂಪೂರ್ಣ ವಿಶ್ವದಿಂದ ಸಿಗ್ನಲ್‌ಗಳನ್ನು ಸಂಗ್ರಹಿಸುತ್ತದೆ.

ಬಾಹ್ಯಾಕಾಶ ಕುರಿತಾದ ಹೆಚ್ಚಿನ ಹೊಸ ಅನ್ವೇಷಣೆ

ಬಾಹ್ಯಾಕಾಶ ಕುರಿತಾದ ಹೆಚ್ಚಿನ ಹೊಸ ಅನ್ವೇಷಣೆ

ಖಗೋಳಶಾಸ್ತ್ರಜ್ಞರು ಹೇಳುವಂತೆ ಬಾಹ್ಯಾಕಾಶ ಕುರಿತಾದ ಹೆಚ್ಚಿನ ಹೊಸ ಅನ್ವೇಷಣೆಗಳನ್ನು ಈ ಪರಿಕರದ ಸಹಾಯದಿಂದ ಮಾಡಬಹುದಾಗಿದೆ.

ಚೀನಾದ ಗುಜು ಪ್ರಾಂತ್ಯ

ಚೀನಾದ ಗುಜು ಪ್ರಾಂತ್ಯ

ಚೀನಾದ ಗುಜು ಪ್ರಾಂತ್ಯದಲ್ಲಿ ವಿಶ್ವದ ಅತಿದೊಡ್ಡ ಟೆಲಿಸ್ಕೋಪ್ ನಿರ್ಮಾಣವಾಗುತ್ತಿದೆ. ಇದರ ವಿಸ್ತೀರ್ಣ 1,640 ಫೀಟ್ ಆಗಿದೆ ಮತ್ತು ಇದರ ಬಿಡುಗಡೆ 2016 ಕ್ಕೆ ತೀರ್ಮಾನಿಸಲಾಗಿದೆ.

ವೇಗವಾಗಿರುವ ಸಂವೇದನೆ ಮತ್ತು ರೆಸಲ್ಯೂಶನ್

ವೇಗವಾಗಿರುವ ಸಂವೇದನೆ ಮತ್ತು ರೆಸಲ್ಯೂಶನ್

ವೇಗವಾಗಿರುವ ಸಂವೇದನೆ ಮತ್ತು ರೆಸಲ್ಯೂಶನ್ ಸ್ಥಳೀಯ ಬ್ರಹ್ಮಾಂಡದಲ್ಲಿರುವ ವಿವಿಧ ಪರಿಸರಗಳ ಸಾವಿರದಷ್ಟು ಗ್ಯಾಲಕ್ಸಿಗಳ ಸಮಗ್ರ ಅಧ್ಯಯನಕ್ಕೆ ವೇದಿಕೆಯನ್ನು ಉಂಟುಮಾಡುತ್ತದೆ ಎಂಬುದಾಗಿ ವಿಜ್ಞಾನಿಗಳು ತಿಳಿಸಿದ್ದಾರೆ.

ಇನ್ನೊಂದು ಜೀವನದ ಅನ್ವೇಷಣೆ

ಇನ್ನೊಂದು ಜೀವನದ ಅನ್ವೇಷಣೆ

ಬಾಹ್ಯಾಕಾಶದಲ್ಲಿರುವ ಇನ್ನೊಂದು ಜೀವನದ ಅನ್ವೇಷಣೆಯನ್ನು ಈ ಟೆಲಿಸ್ಕೋಪ್ ಹೊಂದಿದ್ದು, ನಾಸಾ ಅನ್ವೇಷಿಸಿದ ಭೂಮಿಯಂತಿರುವ ಗ್ರಹ ಕೆಪ್ಲರ್ - 452 ಬಿ ಯ ಅನ್ವೇಷಣೆಯಂತೆಯೇ ಹೊಸದಾದ ಜಗತ್ತನ್ನು ಕಂಡುಹಿಡಿಯುವ ಲಕ್ಷ್ಯವನ್ನು ಈ ಟೆಲಿಸ್ಕೋಪ್ ಹೊಂದಿದೆ.

1,400 ಜ್ಯೋತಿರ್ವರ್ಷಗಳಲ್ಲಿ ಇದನ್ನು ಪತ್ತೆಹಚ್ಚಲಾಗಿದೆ

1,400 ಜ್ಯೋತಿರ್ವರ್ಷಗಳಲ್ಲಿ ಇದನ್ನು ಪತ್ತೆಹಚ್ಚಲಾಗಿದೆ

ಸೌರ ವ್ಯವಸ್ಥೆಯಿಂದ ಹೊರಗೆ 1,400 ಜ್ಯೋತಿರ್ವರ್ಷಗಳಲ್ಲಿ ಇದನ್ನು ಪತ್ತೆಹಚ್ಚಲಾಗಿದೆ ಅದೂ ಕೂಡ ಸಾಂಪ್ರದಾಯಿಕ ಸ್ಪೇಸ್ ಕ್ರಾಫ್ಟ್ ಅನ್ನು ಬಳಸಿ ಇದರ ಅನ್ವೇಷಣೆಯನ್ನು ನಡೆಸಲಾಗಿದ್ದು, ಭೂಮಿಗೆ ತಲುಪಲು ಇದು 26 ವರ್ಷಗಳನ್ನು ತೆಗೆದುಕೊಂಡಿರಬಹುದು.

ಗೋಲ್ಡಿಯೊಲಾಕ್ಸ್ ಪ್ಲಾನೆಟ್

ಗೋಲ್ಡಿಯೊಲಾಕ್ಸ್ ಪ್ಲಾನೆಟ್

"ಗೋಲ್ಡಿಯೊಲಾಕ್ಸ್ ಪ್ಲಾನೆಟ್" ಎಂದು ನಾಸಾ ಕೆಪ್ಲರ್ - 452 ಬಿಯನ್ನು ಗುರುತಿಸಿದೆ. ಈ ಹೆಸರು ಏಕೆ ಬಂದಿದೆ ಎಂದರೆ ಮಾನವ ಜೀವನ ಶೈಲಿಗೆ ಇದು ಬೆಂಬಲವನ್ನು ಒದಗಿಸುತ್ತದೆ ಮತ್ತು ಸೂರ್ಯನಿಗೆ ಸೀಮಿತ ಅಂತರದಲ್ಲಿದೆ.

ಏಲಿಯನ್‌ಗಳ ಅನ್ವೇಷಣೆ

ಏಲಿಯನ್‌ಗಳ ಅನ್ವೇಷಣೆ

ಏಲಿಯನ್‌ಗಳ ಅನ್ವೇಷಣೆಯಲ್ಲೂ ಈ ಟೆಲಿಸ್ಕೋಪ್ ಕಾರ್ಯನಿರ್ವಹಿಸುತ್ತಿದ್ದು ಯುರೇನ್ ಮಾ ಅಂದರೆ ಯಾರಾದರೂ ಇದ್ದೀರಾ ಎಂಬ ಸಂಕೇತವನ್ನು ಇವುಗಳಿಗೆ ಕಳುಹಿಸಲಿದೆ.

Best Mobiles in India

English summary
China is in the final stages of building the world's largest-ever radio telescope, which will give Beijing a leading role in space research and the hunt for extra-terrestrials.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X