Home
ಸುದ್ದಿಜಾಲ

ಮಕ್ಕಳ ಸ್ಮಾರ್ಟ್‌ಫೋನ್ ಬಳಕೆ ಸಮಯ ದಿನಕ್ಕೆ ಗರಿಷ್ಠ 2 ಗಂಟೆಗೆ ಸೀಮಿತ?

ಸ್ಮಾರ್ಟ್‌ಫೋನ್‌ (Smartphone) ಬಳಕೆ ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಹೆಚ್ಚಾಗುತ್ತಿದೆ. ಫೋನ್‌ ಇಲ್ಲದೆ ಬೇರೆ ಏನೂ ಮಾಡಲಾರೆ ಎನ್ನುವ ಮಟ್ಟಕ್ಕೆ ಮಕ್ಕಳ ಮನಸ್ಥಿತಿ ಬೆಳೆದಿದೆ. ಈಗಾಗಲೇ ಈ ಸ್ಮಾರ್ಟ್‌ಫೋನ್‌ ಗೀಳಿನಿಂದ ಮಕ್ಕಳು ಹಲವಾರು ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಬೆಳವಣಿಗೆ ನಡುವೆ ಮಹತ್ವದ ವಿಷಯವೊಂದು ಬೆಳಕಿಗೆ ಬಂದಿದೆ.

ಹೌದು, ಸ್ಮಾರ್ಟ್‌ಫೋನ್‌ಗಳು ಇಂದು ಜನರ ಜೀವನಾಡಿಯಂತಾಗಿಬಿಟ್ಟಿವೆ. ಸ್ಮಾರ್ಟ್‌ಫೋನ್‌ ಇಲ್ಲದೆ ಬದುಕಲು ಸಾಧ್ಯವೇ ಇಲ್ಲ ಎನ್ನುವ ಅದೆಷ್ಟೋ ಜನರು ನಮ್ಮ ನಡುವೆ ಇದ್ದಾರೆ. ಈ ನಡುವೆ ಸ್ಮಾರ್ಟ್‌ಫೋನ್‌ ಬಳಕೆ ಮಕ್ಕಳಲ್ಲಿ ಕೆಟ್ಟ ಸಮಸ್ಯೆಗಳನ್ನು ನಿರ್ಮಾಣ ಮಾಡುತ್ತಿದ್ದು, ಪರಿಣಾಮ ಅವರು ಇಂಟರ್ನೆಟ್‌(Internet) ಬಳಸಲು ನಿಗದಿತ ಸಮಯ ನಿಗದಿ ಮಾಡಲು ಸರ್ಕಾರ ಸಜ್ಜಾಗಿದೆ. ಹಾಗಿದ್ರೆ, ಈ ಯಾವ ರಾಷ್ಟ್ರದಲ್ಲಿ ಈ ನಿಯಮ ಜಾರಿಗೆ ತರಲಾಗುತ್ತಿದೆ, ಪ್ರಮುಖ ಉದ್ದೇಶ ಏನು ಎಂಬ ಮಾಹಿತಿ ಇಲ್ಲಿದೆ ನೋಡಿ.

ಮಕ್ಕಳ ಸ್ಮಾರ್ಟ್‌ಫೋನ್ ಬಳಕೆ ಸಮಯ ದಿನಕ್ಕೆ ಗರಿಷ್ಠ 2 ಗಂಟೆಗೆ ಸೀಮಿತ?

ಚೀನಾದ ಇಂಟರ್ನೆಟ್ ವಾಚ್‌ಡಾಗ್ ಸೈಬರ್‌ಸ್ಪೇಸ್ ಅಡ್ಮಿನಿಸ್ಟ್ರೇಷನ್ ಆಫ್ ಚೀನಾ (CAC), ಅಪ್ರಾಪ್ತ ವಯಸ್ಕರಿಂದ ಇಂಟರ್ನೆಟ್ ಬಳಕೆಯನ್ನು ನಿರ್ಬಂಧಿಸಲು ಕರಡು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಅದರಂತೆ 16 ರಿಂದ 18 ವರ್ಷದೊಳಗಿನ ಮಕ್ಕಳು ದಿನಕ್ಕೆ ಎರಡು ಗಂಟೆಗಳ ಕಾಲ ಮಾತ್ರ ಇಂಟರ್ನೆಟ್‌ಗೆ ಪ್ರವೇಶವನ್ನು ಹೊಂದಿರಲಿದ್ದಾರೆ. ಹಾಗೆಯೇ 8 ರಿಂದ 15 ರ ನಡುವೆ ಇರುವ ಮಕ್ಕಳು ಕೇವಲ ಒಂದು ಗಂಟೆ ಮತ್ತು ಎಂಟು ವರ್ಷಕ್ಕಿಂತ ಕಡಿಮೆ ವಯಸ್ಸಿನವರು 40 ನಿಮಿಷಗಳ ವರೆಗೆ ಮೊಬೈಲ್‌ ಬಳಕೆ ಮಾಡಬಹುದಾಗಿದೆ.

ಚೀನಾದ ಸೈಬರ್‌ಸ್ಪೇಸ್ ಅಡ್ಮಿನಿಸ್ಟ್ರೇಷನ್ ಬುಧವಾರ ತನ್ನ ಸೈಟ್‌ನಲ್ಲಿ ಈ ಮೇಲೆ ತಿಳಿಸಿದ ಕರಡು ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಇನ್ನು ಅಪ್ರಾಪ್ತ ವಯಸ್ಕರ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಸೂಕ್ತವಾದ ಆಪ್‌ಗಳು ಅಥವಾ ಪ್ಲಾಟ್‌ಫಾರ್ಮ್‌ಗಳಂತಹ ಕೆಲವು ಸೇವೆಗಳಿಗೆ ಮಾತ್ರ ವಿನಾಯಿತಿ ನೀಡಲಾಗುತ್ತದೆ ಎಂದು ಈ ವೇಳೆ ತಿಳಿಸಲಾಗಿದೆ. ಆದರೆ ಯಾವ ಇಂಟರ್ನೆಟ್ ಸೇವೆಗಳಿಗೆ ವಿನಾಯಿತಿಗಳನ್ನು ನೀಡಲಾಗುತ್ತದೆ ಎಂಬುದನ್ನು ತಿಳಿಸಲಾಗಿಲ್ಲ.

ಈ ನಿರ್ಧಾರಕ್ಕೆ ಕಾರಣ ಏನು?: ಇಂಟರ್ನೆಟ್ ವ್ಯಸನವನ್ನು ಮಿತಿಗೊಳಿಸುವ ಭಾಗವಾಗಿ ಈ ನಿರ್ಧಾರ ಮಾಡಲಾಗಿದೆ. 2019 ರಲ್ಲಿ ಬೀಜಿಂಗ್ ಮಕ್ಕಳ ದೈನಂದಿನ ಆನ್‌ಲೈನ್ ಆಟದ ಸಮಯವನ್ನು ದಿನಕ್ಕೆ 90 ನಿಮಿಷಗಳಿಗೆ ಸೀಮಿತಗೊಳಿಸಿತ್ತು ಮತ್ತು 2021 ರಲ್ಲಿ ಆ ನಿರ್ಬಂಧಗಳನ್ನು ಬಿಗಿಗೊಳಿಸಿತು. ಇದಾದ ನಂತರ ವಾರಾಂತ್ಯಗಳು ಮತ್ತು ಸಾರ್ವಜನಿಕ ರಜಾದಿನಗಳಲ್ಲಿ ಮಕ್ಕಳಿಗೆ ದಿನಕ್ಕೆ ಒಂದು ಗಂಟೆ ಮಾತ್ರ ಆನ್‌ಲೈನ್ ಆಟವನ್ನು ಆಡಲು ಅವಕಾಶ ನೀಡಲಾಗಿದೆ.

ಈ ವಿಭಾಗದಲ್ಲಿ ಶಾರ್ಟ್‌ ವಿಡಿಯೋ ಮತ್ತು ಆನ್‌ಲೈನ್ ವಿಡಿಯೋ ಪ್ಲಾಟ್‌ಫಾರ್ಮ್‌ಗಳಾದ ಡೌಯಿನ್, ಬಿಲಿಬಿಲಿ ಮತ್ತು ಕುಯಿಶೌ ಯೂತ್ ಮೋಡ್‌ ಗಳ ಆಯ್ಕೆ ನೀಡಲಾಗಿದ್ದು, ಅದು ಅಪ್ರಾಪ್ತ ವಯಸ್ಕರಿಗೆ ತೋರಿಸಲಾದ ಕಂಟೆಂಟ್‌ ಪ್ರಕಾರವನ್ನು ಮತ್ತು ಅವರು ಸೇವೆಯನ್ನು ಬಳಸಬಹುದಾದ ಸಮಯವನ್ನು ನಿರ್ಬಂಧಿಸುತ್ತದೆ. ಮಕ್ಕಳಿಗೆ ವಿಜ್ಞಾನದ ಪ್ರಯೋಗಗಳಂತಹ ಶೈಕ್ಷಣಿಕ ವಿಷಯವನ್ನು ಇದರಲ್ಲಿ ಹೆಚ್ಚಾಗಿ ತೋರಿಸಲಾಗುತ್ತದಂತೆ.

ಈ ನಿಯಮದಿಂದ ಯಾರಿಗೆ ಸಮಸ್ಯೆ?: ಚೀನಾದ ಈ ನಿರ್ಧಾರ ಆನ್‌ಲೈನ್ ಗೇಮ್ ಕಂಪನಿಯಾದ ಟೆನ್ಸೆಂಟ್ ಮತ್ತು ಜನಪ್ರಿಯ ಶಾರ್ಟ್‌ವಿಡಿಯೋ ಪ್ಲಾಟ್‌ಫಾರ್ಮ್ ಡೌಯಿನ್ ಅನ್ನು ನಡೆಸುವ ಬೈಟ್‌ಡ್ಯಾನ್ಸ್‌ನಂತಹ ಸಂಸ್ಥೆಗಳ ಮೇಲೆ ತುಂಬಾ ಪರಿಣಾಮ ಬೀರುತ್ತದೆ ಎನ್ನಲಾಗಿದೆ. ಆದಾಗ್ಯೂ ಚೀನಾದಲ್ಲಿನ ಈ ಸಂಸ್ಥೆಗಳ ನಿಯಮಗಳನ್ನು ಜಾರಿಗೊಳಿಸದೆ ಬೇರೆ ದಾರಿ ಇಲ್ಲ.

ಮಕ್ಕಳ ಸ್ಮಾರ್ಟ್‌ಫೋನ್ ಬಳಕೆ ಸಮಯ ದಿನಕ್ಕೆ ಗರಿಷ್ಠ 2 ಗಂಟೆಗೆ ಸೀಮಿತ?

ಸದ್ಯಕ್ಕೆ ಈ ಕರಡು ಮಾರ್ಗಸೂಚಿಗಳು ಸೆಪ್ಟೆಂಬರ್ 2 ರವರೆಗೆ ಸಾರ್ವಜನಿಕ ಪ್ರತಿಕ್ರಿಯೆಗೆ ಮುಕ್ತವಾಗಿವೆ ಎಂದು CAC ಮಾಹಿತಿ ನೀಡಲಾಗಿದ್ದು. ಅಷ್ಟರೊಳಗೆ ಅಲ್ಲಿನ ಪೋಷಕರು ಹಾಗೂ ಸಂಬಂಧಿಸಿದವರು ಸರ್ಕಾರಕ್ಕೆ ತಮ್ಮದೇ ಆದ ಅಭಿಪ್ರಾಯಗಳನ್ನು ಹಂಚಿಕೊಳ್ಳಬಹುದಾಗಿದೆ. ಆದರೆ, ಈ ಎಲ್ಲಾ ಪ್ರಕ್ರಿಯೆ ಆದ ನಂತರ ಹೊಸ ನಿಯಮಗಳು ಯಾವಾಗ ಜಾರಿಗೆ ಬರುತ್ತವೆ ಎಂದು ಸ್ಪಷ್ಟವಾಗಿ ಉಲ್ಲೇಖ ಮಾಡಲಾಗಿಲ್ಲ.

ಭಾರತಕ್ಕೂ ಬೇಕಿದೆ ಈ ನಿಯಮ: ಚೀನಾ ಮಾತ್ರವಲ್ಲದೆ ಜಗತ್ತಿನ ಎಲ್ಲಾ ರಾಷ್ಟ್ರದಲ್ಲಿನ ಮಕ್ಕಳು ಸಹ ಸ್ಮಾರ್ಟ್‌ಫೋನ್‌ಗೆ ಮುಗಿ ಬೀಳುತ್ತಾರೆ. ಅದರಲ್ಲೂ ಭಾರತದಂತಹ ದೊಡ್ಡ ರಾಷ್ಟ್ರದಲ್ಲಿ ಮಕ್ಕಳು ಮೊಬೈಲ್‌ ಇಲ್ಲದೆ ಊಟ, ನಿದ್ದೆ ಮಾಡುವುದೇ ಇಲ್ಲ. ಕೊರೊನಾ ತರುವಾಯ ಮಕ್ಕಳಲ್ಲಿ ಮೊಬೈಲ್‌ ಬಳಕೆ ಮಿತಿಮೀರಿದ್ದು, ಈ ಸಂಬಂಧ ಸರ್ಕಾರ ಹಾಗೂ ಸಂಬಂಧಿಸಿದ ಇಲಾಖೆಗಳು ಅತಿಯಾದ ಮೊಬೈಲ್‌ ಬಳಕೆ ಬಗ್ಗೆ ಎಚ್ಚರಿಕೆ ನೀಡುತ್ತಿದ್ದರೂ ಸಹ ಯಾವುದೇ ಪ್ರಯೋಜನ ಆಗುತ್ತಿಲ್ಲ. ಪರಿಣಾಮ ಮುಂದಿನ ದಿನಗಳಲ್ಲಿ ಭಾರತವೂ ಸಹ ಈ ರೀತಿಯ ನಿರ್ಧಾರ ಮಾಡುವ ಸಾಧ್ಯತೆ ಇದೆ.

Best Mobiles in India

English summary
Smartphones have become the lifeline of people today. In between, it has been proposed to impose restrictions that children should use smartphones only for a certain amount of time in a day.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+