Home
ಸುದ್ದಿಜಾಲ

iPhone: ಈ ವರ್ಷ ಐಫೋನ್‌ ಬಳಕೆದಾರರು ಬಳಸಿದ ಟಾಪ್‌ ಆಪ್‌ಗಳಿವು: ಮೊದಲ ಸ್ಥಾನದಲ್ಲಿ ಚೀನೀ ಆಪ್!

ಆಪಲ್‌ ಅಗಾಗ್ಗೆ ಐಫೋನ್‌ಗಳ (iPhone) ವಿಷಯಕ್ಕೆ ಸಂಬಂಧಿಸಿದಂತೆ ಕೆಲವು ಮಾಹಿತಿಗಳನ್ನು ಬಹಿರಂಗಪಡಿಸುತ್ತಲೇ ಇರುತ್ತದೆ. ಅದರಂತೆ ಈಗ ಐಫೋನ್‌ನಲ್ಲಿ ಈ ವರ್ಷ ಹೆಚ್ಚು ಬಳಕೆ ಮಾಡಲಾದ ಆಪ್‌ಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಇದರಲ್ಲಿ ಚೀನಾದ ಆಪ್‌ ಟಾಪ್‌ ಸ್ಥಾನ ಪಡೆದಿದೆ.

ಹೌದು, ಐಫೋನ್‌ಗಳು ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳಾಗಿದ್ದು, ಈ ಫೋನ್‌ಗಳಿಗೆ ಜಾಗತಿಕವಾಗಿ ಭರ್ಜರಿ ಬೇಡಿಕೆ ಇದೆ. ಇದರೊಂದಿಗೆ ಐಫೋನ್ 15 ಸರಣಿ (iPhone 15 series) ಫೋನ್‌ಗಳು ಮಾರುಕಟ್ಟೆಯಲ್ಲಿ ಭರ್ಜರಿಯಾಗಿ ಸದ್ದು ಮಾಡುತ್ತಿದ್ದು, ಈ ಎಲ್ಲಾ ಬೆಳವಣಿಗೆ ನಡುವೆ 2023 ರಲ್ಲಿ ಐಫೋನ್‌ಗಳಲ್ಲಿ ಬಳಕೆ ಮಾಡಲಾದ ಟಾಪ್‌ ಆಪ್‌ಗಳು ಯಾವುವು ಅನ್ನೋ ಮಾಹಿತಿ ಬಹಿರಂಗ ಆಗಿದೆ. ಹಾಗಿದ್ರೆ, ಯಾವೆಲ್ಲಾ ಆಪ್‌ಗಳನ್ನು ಐಫೋನ್‌ ಬಳಕೆದಾರರು ಹೆಚ್ಚಾಗಿ ಬಳಸಿದ್ದಾರೆ ಅನ್ನುವ ಇಂಟ್ರೆಸ್ಟಿಂಗ್‌ ಮಾಹಿತಿ ಇಲ್ಲಿದೆ ನೋಡಿ.

ಈ ವರ್ಷ ಐಫೋನ್‌ ಬಳಕೆದಾರರು ಬಳಸಿದ ಆಪ್‌ಗಳಿವು: ಮೊದಲ ಸ್ಥಾನದಲ್ಲಿ ಚೀನೀ ಆಪ್!

2023 ರಲ್ಲಿ ಐಫೋನ್‌ಗಳಲ್ಲಿ ಹೆಚ್ಚು ಡೌನ್‌ಲೋಡ್ ಮಾಡಿದ ಆಪ್‌ಗಳು: 2023 ರಲ್ಲಿ ಐಫೋನ್‌ಗಳಲ್ಲಿ ಬಳಕೆ ಮಾಡಲಾದ ಆಪ್‌ಗಳಲ್ಲಿ ಚೀನಾದ ಆಪ್‌ ಪ್ರಮುಖ ಸ್ಥಾನ ಪಡೆದಿದೆ ಹಾಗಂದ ಮಾತ್ರಕ್ಕೆ ನೀವು ಟಿಕ್‌ಟಾಕ್‌ (Tiktok) ಇರಬಹುದು ಎಂದುಕೊಳ್ಳಬೇಡಿ. ಈ ವರ್ಷ ಹೆಚ್ಚು ಇನ್‌ಸ್ಟಾಲ್‌ ಆದ ಆಪ್‌ ಅಂದರೆ ಅದುವೇ ಇ-ಕಾಮರ್ಸ್ ಕಂಪನಿ ಟೆಮು (Temu). 2023 ರಲ್ಲಿ ಯುಎಸ್‌ ನಲ್ಲಿ ಆಪಲ್‌ನ ಹೆಚ್ಚು ಡೌನ್‌ಲೋಡ್ ಮಾಡಲಾದ ಉಚಿತ ಆಪ್‌ ಇದಾಗಿದೆ. ಈ ಆಪ್‌ ಅಮೆಜಾನ್‌ಗಿಂತಲೂ ಹೆಚ್ಚಿನ ಜನರನ್ನು ಆಕರ್ಷಿಸಿದೆ.

ಟೆಕ್ ದೈತ್ಯ ಆಪಲ್‌ ಇದೀಗ ವರ್ಷದ ಅಗ್ರ ಐಫೋನ್ ಆಪ್‌ಗಳ ಬಗ್ಗೆ ಮಾಹಿತಿ ನೀಡಿದೆ. ಇದರಲ್ಲಿ ಉಚಿತ ಮತ್ತು ಪಾವತಿ ಮಾಡಿ ಬಳಕೆ ಮಾಡುವ ಆಪ್‌ ಪಟ್ಟಿಗಳನ್ನು ಉಲ್ಲೇಖಿಸಲಾಗಿದೆ. ಅದರಂತೆ ಈ ವರ್ಷ ಯುಎಸ್‌ನಲ್ಲಿ, ಚೈನೀಸ್ ಮೂಲದ ಕಂಪನಿಗಳ ಆಪ್‌ಗಳು ಈ ಹಿಂದೆ ಯುಎಸ್‌ ಟೆಕ್ ದೈತ್ಯರಾದ ಮೆಟಾ ಮತ್ತು ಗೂಗಲ್‌ (Meta,Google) ಹೊಂದಿದ್ದ ಸ್ಥಾನಗಳನ್ನು ವಶಕ್ಕೆ ಪಡೆದುಕೊಂಡಿವೆ. ಬೀಜಿಂಗ್ ಮೂಲದ ಬೈಟ್‌ಡ್ಯಾನ್ಸ್‌ ಮತ್ತು ಟಿಕ್‌ಟಾಕ್‌ ಆಪ್‌ಗಳು ನಂ. 3 ಮತ್ತು ನಂ. 5 ರಲ್ಲಿವೆ. ಈ ಸ್ಥಾನಗಳನ್ನು ಕ್ರಮವಾಗಿ ಮೆಟಾ ಮತ್ತು ಗೂಗಲ್ 2022 ರಲ್ಲಿ ಹೊಂದಿತ್ತು.

ಈ ವರ್ಷ ಐಫೋನ್‌ ಬಳಕೆದಾರರು ಬಳಸಿದ ಆಪ್‌ಗಳಿವು: ಮೊದಲ ಸ್ಥಾನದಲ್ಲಿ ಚೀನೀ ಆಪ್!

ಈ ವರ್ಷ ಯುಎಸ್‌ನಲ್ಲಿ ಟಿಕ್‌ಟಾಕ್ ಬಗ್ಗೆ ಆದ ನಕಾರಾತ್ಮಕ ಗಮನವು ಅದರ ಹೊಳಪನ್ನು ಸ್ವಲ್ಪಮಟ್ಟಿಗೆ ಕಡಿಮೆ ಮಾಡಿದೆಯಾದರೂ ಅದರ ಆಕರ್ಷಣೆಯನ್ನು ಸಂಪೂರ್ಣವಾಗಿ ತಗ್ಗಿಸಲು ಸಾಧ್ಯವಾಗಲಿಲ್ಲ. ಟಿಕ್‌ಟಾಕ್ ನಂ. 1 ಅಪ್ಲಿಕೇಶನ್‌ನಿಂದ ಈಗ ನಂ. 5 ಅಪ್ಲಿಕೇಶನ್‌ಗೆ ಜಾರಿದೆ. ಆದಾಗ್ಯೂ, ಬ್ಲೂಮ್‌ಬರ್ಗ್‌ನಲ್ಲಿನ ವರದಿಯ ಪ್ರಕಾರ, ಯುಎಸ್ ಗ್ರಾಹಕರು ಟೆಮು ಆಪ್ ಅನ್ನು ಬಳಕೆ ಮಾಡುವ ಮೂಲಕ ಚೈನೀಸ್ ಆಪ್‌ಗಳನ್ನು ತಿರಸ್ಕರಿಸಿಲ್ಲ ಎನ್ನುವುದು ಈ ಮೂಲಕ ತಿಳಿದುಬಂದಿದೆ.

ಇನ್ನು ಯುಎಸ್ ನಲ್ಲಿನ ಗ್ರಾಹಕರು ಅಮೆಜಾನ್‌ನಲ್ಲಿ ಸರಾಸರಿ 10 ನಿಮಿಷ ಕಳೆದರೆ, ಟೆಮು ಆಪ್‌ನಲ್ಲಿ ದಿನಕ್ಕೆ 18 ನಿಮಿಷಗಳನ್ನು ಕಳೆಯುತ್ತಿದ್ದಾರೆ ಎಂದು ಹೇಳಲಾಗಿದೆ. ಈ ವಿಭಾಗದಲ್ಲಿ ಕಿರಿಯ ವಯಸ್ಸಿನ ಬಳಕೆದಾರರು ದಿನಕ್ಕೆ ಸರಾಸರಿ 19 ನಿಮಿಷಕ್ಕೂ ಹೆಚ್ಚಿನ ಸಮಯವನ್ನು ಕಳೆದಿದ್ದಾರೆ ಎಂದು ವರದಿಯಾಗಿದೆ. ಅದರಲ್ಲೂ ಈ ಆಪ್‌ ಅನ್ನು ಆರ್ಥಿಕ ಕುಸಿತದ ಸಮಯದಲ್ಲಿ ಹೆಚ್ಚಾಗಿ ಬಳಕೆ ಮಾಡಲಾಗಿದೆ ಎನ್ನುವ ಮಾಹಿತಿ ತಿಳಿದುಬಂದಿದೆ.

ಈ ವರ್ಷ ಐಫೋನ್‌ ಬಳಕೆದಾರರು ಬಳಸಿದ ಆಪ್‌ಗಳಿವು: ಮೊದಲ ಸ್ಥಾನದಲ್ಲಿ ಚೀನೀ ಆಪ್!

ಯಾವೆಲ್ಲಾ ಇತರೆ ಆಪ್‌ಗಳು ಟಾಪ್ ಸ್ಥಾನ ಪಡೆದುಕೊಂಡಿವೆ?: ಮೊದಲ ಸ್ಥಾನದಲ್ಲಿ ಟೆಮು ಆಪ್‌ ಇದ್ದರೆ ಎರಡನೇ ಸ್ಥಾನವನ್ನು ಕ್ಯಾಪ್ಕಟ್ ಆಪ್‌ ಪಡೆದುಕೊಂಡಿದೆ. ಇದು ವಿಡಿಯೋ ಎಡಿಟಿಂಗ್‌ ಆಪ್‌ ಆಗಿದೆ. ಇದರೊಂದಿಗೆ ಮ್ಯಾಕ್ಸ್‌ ಮೂರನೇ ಸ್ಥಾನ, ಥ್ರೆಡ್ಸ್‌ ನಾಲ್ಕನೇ ಸ್ಥಾನ, ಟಿಕ್‌ಟಾಕ್ ಐದನೇ ಸ್ಥಾನ, ಇನ್‌ಸ್ಟಾಗ್ರಾಮ್‌ ಆರನೇ ಸ್ಥಾನ, ಗೂಗಲ್ ಏಳನೇ ಸ್ಥಾನ ಹಾಗೂ ಯೂಟ್ಯೂಬ್‌ ಎಂಟನೇ ಸ್ಥಾನ, ವಾಟ್ಸಾಪ್‌ ಒಂಭತ್ತನೇ ಸ್ಥಾನ ಮತ್ತು ಜಿಮೇಲ್‌ ಹತ್ತನೇ ಸ್ಥಾನ ಪಡೆದುಕೊಂಡಿದೆ.

Best Mobiles in India

English summary
The information on the top apps used by iPhone users in the US has been revealed. Temu app has got the top position in this category.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+