ಚೀನಾ ಕಂಪೆನಿಗಳ ಸ್ಮಾರ್ಟ್‌ಫೋನ್ ಮಾರಾಟದಲ್ಲಿ ಭಾರೀ ಕುಸಿತ!!

Written By:

ಸ್ಮಾರ್ಟ್‌ಫೋನ್ ಮಾರಾಟದಲ್ಲಿ ವಿಶ್ವದಲ್ಲೇ ಮುಂಚೂಣಿಯಲ್ಲಿರುವ ರಾಷ್ಟ್ರ ಚೀನಾ ಇದೇ ಮೊದಲ ಬಾರಿ ಸ್ಮಾರ್ಟ್‌ಫೋನ್ ಮಾರಾಟದಲ್ಲಿ ಕುಸಿತ ಕಂಡಿದೆ.! ಚೀನಾದಲ್ಲಿನ ಸ್ಮಾರ್ಟ್‌ಫೋನ್ ಸಾಗಣೆ ಶೇ.4 ರಷ್ಟು ಕಡಿಮೆಯಾಗಿದೆ ಎಂದು ಸಿಂಗಪೂರ್ ಮೂಲದ ಮಾರುಕಟ್ಟೆ ಸಂಶೋಧನಾ ಸಂಸ್ಥೆ ಕ್ಯಾನಲೀಸ್ ವರದಿ ಮಾಡಿದೆ.!!

ಕಳೆದ 5 ವರ್ಷಗಳ ನಂತರ 2017 ರಲ್ಲಿ ಮೊದಲ ಬಾರಿಗೆ ಚೀನಾ ಸ್ಮಾರ್ಟ್ಫೋನ್‌ಗಳ ಮಾರಾಟ ಕಡಿಮೆಯಾಗಿದ್ದು, 2017ರಲ್ಲಿ ಶೇ.14 ರಷ್ಟು ಕುಸಿತ ಕಂಡು ಕೇವಲ 459 ಮಿಲಿಯನ್ ಯುನಿಟ್ ಸ್ಮಾರ್ಟ್‌ಪೋನ್‌ಗಳನ್ನಷ್ಟೆ ಮಾರಾಟ ಮಾಡಲು ಚೀನಾ ಮೊಬೈಲ್ ಕಂಪೆನಿಗಳಿಗೆ ಸಾಧ್ಯವಾಗಿದೆ ಎಂದು ಮಾರುಕಟ್ಟೆ ಸಂಶೋಧನಾ ಸಂಸ್ಥೆ ಕ್ಯಾನಲೀಸ್ ತಿಳಿಸಿದೆ.!!

ಚೀನಾ ಕಂಪೆನಿಗಳ ಸ್ಮಾರ್ಟ್‌ಫೋನ್ ಮಾರಾಟದಲ್ಲಿ ಭಾರೀ ಕುಸಿತ!!

ಚೀನಾದ ಮೊಬೈಲ್ ಕಂಪೆನಿಗಳಲ್ಲಿಯೇ ಅತ್ಯಂತ ಹೆಚ್ಚು ಸ್ಮಾರ್ಟ್‌ಫೋನ್‌ಗಳನ್ನು ಮಾಡಿರುವ ಕೀರ್ತಿ ಹುವಾವೇ ಪಾಲಾಗಿದ್ದು, 2017 ರಲ್ಲಿ ಒಟ್ಟು 90 ಮಿಲಿಯನ್ ಫೋನ್ ಗಳನ್ನು ಮಾರಾಟ ಮಾಡಿದೆ ಎಂದು ಕ್ಯಾನಲೀಸ್ ಹೇಳಿದೆ. ಇದೇ ವೇಳೆಯಲ್ಲಿ ಓಪ್ಪೋ ಹಾಗೂ ವಿವೋ ಫೋನ್ ಗಳ ಸಾಗಣೆ ಪ್ರಮಾಣ ಶೇ.16 ರಷ್ಟು ಕುಸಿತ ಕಂಡಿದೆ.!!

ಚೀನಾ ಕಂಪೆನಿಗಳ ಸ್ಮಾರ್ಟ್‌ಫೋನ್ ಮಾರಾಟದಲ್ಲಿ ಭಾರೀ ಕುಸಿತ!!

ಓಪ್ಪೋ 19 ಮಿಲಿಯನ್ ಹಾಗೂ ವಿವೋ 17 ಮಿಲಿಯನ್ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡಿ ಎರಡು ಮತ್ತು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟರೆ, ಭಾರತದಲ್ಲಿ ನಂಬರ್ ಒನ್ ಮೊಬೈಲ್ ಕಂಪೆನಿ ಎಂಬ ಸ್ಥಾನ ಪಡೆದಿರುವ ಶಿಯೋಮಿ ತನ್ನ ದೇಶದಲ್ಲಿಯೇ ಐದನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ. ಇನ್ನು ನಾಲ್ಕನೆ ಸ್ಥಾನ ಆಪಲ್ ಪಾಲಾಗಿದೆ.!!

ಓದಿರಿ: ಬಿಡುಗಡೆಗೂ ಮುನ್ನವೇ ಸ್ಯಾಮ್‌ಸಂಗ್ 'ಗ್ಯಾಲಕ್ಸಿ S9' ಫೀಚರ್ಸ್ ಲೀಕ್!..ಇದೀಗ ವೈರೆಲ್!!

2 ನಿಮಿಷದಲ್ಲಿ Aadhaar-ಮೊಬೈಲ್ ಲಿಂಕ್ ಮಾಡುವುದು ಹೇಗೆ..? ಸಿಂಪಲ್ ಟಿಪ್ಸ್..!
English summary
China, the world's largest shipper of smartphones suffered its first-ever decline in 2017 as device shipments fell four percent.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot