Subscribe to Gizbot

ಭಾರತದ 50 ಪರ್ಸೆಂಟ್ ಸ್ಮಾರ್ಟ್‌ಫೋನ್‌ ಮಾರುಕಟ್ಟೆ ಚೀನಾ ವಶದಲ್ಲಿದೆ!!

Written By:

ಭಾರತದಲ್ಲಿ ಚೀನಾ ಸರಕುಗಳು ಎಂದರೆ ಎಲ್ಲಿಲ್ಲದ ಬೇಡಿಕೆ. ಕಡಮೆ ಬೆಲೆಯಲ್ಲಿ ಸಿಗುವ ಯಾವುದೇ ವಸ್ತುಗಳನ್ನು ಭಾರತೀಯರು ಬಾಚಿ ತಬ್ಬಿಕೊಳ್ಳುತ್ತಾರೆ.!! ಹಾಗಾಗಿಯೇ, ಭಾರತದಲ್ಲಿ ಇಂದು ಮಾರಾಟವಾಗುತ್ತಿರುವ 50 ಪರ್ಸೆಂಟ್ ಸ್ಮಾರ್ಟ್‌ಫೋನ್‌ಗಳು ಚೀನಾದವೆ ಆಗಿವೆ.!!

ಹೌದು, ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುತ್ತಿರುವ ಚೀನಾ ಮೂಲದ ಮೊಬೈಲ್‌ ಕಂಪೆನಿಗಳು ಭಾರತದ ಅರ್ಧದಷ್ಟು ಸ್ಮಾರ್ಟ್‌ಫೋನ್ ಮಾರುಕಟ್ಟೆಯನ್ನು ತಮ್ಮ ತೆಕ್ಕೆಗೆ ಹಾಕಿಕೊಂಡಿವೆ.

ಭಾರತದ 50 ಪರ್ಸೆಂಟ್ ಸ್ಮಾರ್ಟ್‌ಫೋನ್‌ ಮಾರುಕಟ್ಟೆ ಚೀನಾ ವಶದಲ್ಲಿದೆ!!

ಭಾರತದಲ್ಲಿ ಹೆಚ್ಚು ಡೇಟಿಂಗ್ ಆಪ್‌ ಬಳಸುವವರು ಯಾರು ಗೊತ್ತಾ?

ಲೆನೊವೊ, ಶಿಯೋಮಿ, ಲಿ ಇಕೋ, ಹುವಾವೆ, ಒಪ್ಪೊ, ವಿವೊ ಸೇರಿದಂತೆ ಹಲವು ಸ್ಮಾರ್ಟ್‌ಫೊನ್‌ ಕಂಪೆನಿಗಳು ಭಾರತೀಯರ ಮನಗೆದ್ದಿದ್ದು, ಈ ಕಂಪೆನಿಯ ಸ್ಮಾರ್ಟ್‌ಫೋನ್‌ಗಳು ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಫೀಚರ್ಸ್‌ ಹೊಂದಿರುವುದೇ ಹೆಚ್ಚು ಮಾರಾಟವಾಗಲು ಕಾರಣವಾಗಿದೆ.

ಭಾರತದ 50 ಪರ್ಸೆಂಟ್ ಸ್ಮಾರ್ಟ್‌ಫೋನ್‌ ಮಾರುಕಟ್ಟೆ ಚೀನಾ ವಶದಲ್ಲಿದೆ!!

ದಕ್ಷಿಣ ಕೋರಿಯಾದ ಸ್ಯಾಮ್‌ಸಂಗ್ ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಮೊದಲ ಸ್ಥಾನವನ್ನು ಉಳಿಸಿಕೊಂಡಿದ್ದರೆ ಚೀನಾದ ಲೆನೊವೊ ಮತ್ತು ಶಿಯೋಮಿ ಕಂಪೆನಿಗಳು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನಕ್ಕೇರಿವೆ. ಇನ್ನು ಶಿಯೋಮಿಯ ರೆಡ್‌ಮಿ 3ಎಸ್ ಸ್ಮಾರ್ಟ್‌ಫೊನ್ ಕೇವಲ 6 ತಿಂಗಳಿನಲ್ಲಿ 3 ಕೋಟಿ ಮಾರಾಟವಾಗಿ ದಾಖಲೆ ನಿರ್ಮಿಸಿದೆ.

English summary
Chinese smartphone vendors last year captured about 40 per cent share in India, to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot