Subscribe to Gizbot

ಪಾಸ್‌ಪೋರ್ಟ್‌ನಲ್ಲಿ ಚಿಪ್ ಅಳವಡಿಕೆ: ಇ-ಪಾಸ್‌ಪೋರ್ಟ್‌ ಗುಟ್ಟೇನು..?

Written By:

ಇನ್ನು ಮುಂದೆ ಭಾರತೀಯ ಪಾಸ್‌ಪೋರ್ಟ್‌ಗಳನ್ನು ನಕಲಿ ಮಾಡುವುದು ಸಾಧ್ಯವಾಗುವುದಿಲ್ಲ. ಕಾರಣ ಅತೀ ಹೆಚ್ಚಿನ ಭದ್ರತೆಯ ದೃಷ್ಟಿಯಿಂದ ಬೆಳೆಯುತ್ತಿರುವ ಟೆಕ್ನಾಲಜಿಯ ಸಹಾಯದಿಂದ ಪಾಸ್‌ಪೋರ್ಟ್‌ಗಳಲ್ಲಿ ಚಿಪ್ ಅಳವಡಿಸಲು ಸರಕಾರ ಚಿಂತನೆ ನಡೆಸಿದೆ.

ಪಾಸ್‌ಪೋರ್ಟ್‌ನಲ್ಲಿ ಚಿಪ್ ಅಳವಡಿಕೆ: ಇ-ಪಾಸ್‌ಪೋರ್ಟ್‌ ಗುಟ್ಟೇನು..?

ಓದಿರಿ: ನೀವಿನ್ನು ಜಿಯೋ ಪ್ರೈಮ್ ಸದಸ್ಯರಾಗಿಲ್ಲವೇ..? ಹಾಗಿದ್ದರೆ ನೀವು ಈ ಸ್ಟೋರಿ ಓದಲೇ ಬೇಕು

ಶೀಘ್ರವೇ ಪಾಸ್‌ಪೋರ್ಟ್‌ಗಳು ಟೆಕ್ನಾಲಜಿಯನ್ನು ಬಳಸಿಕೊಂಡು ಮತ್ತಷ್ಟು ಸುರಕ್ಷಿತವಾಗಿಲಿವೆ. ರಾಜ್ಯಸಭೆಯಲ್ಲಿ ಉತ್ತರ ನೀಡಿದ ವಿದೇಶಾಂಗ ರಾಜ್ಯ ಸಚಿವ ವಿ.ಕೆ.ಸಿಂಗ್, ಕೇಂದ್ರ ಸರ್ಕಾರವು ಚಿಪ್ ಹೊಂದಿರುವಂತಹ ಇ-ಪಾಸ್‌ಪೋರ್ಟ್‌ಗಳನ್ನು ತಯಾರಿಸಲು ಒಪ್ಪಿಗೆಯನ್ನು ಸೂಚಿಸಿದ್ದು, ಶೀಘ್ರವೆ ಚಿಪ್ ಹೊಂದಿರುವ ಇ-ಪಾಸ್‌ಪೋರ್ಟ್‌ಗಳು ಜನ ಸಾಮಾನ್ಯರ ಕೈ ಸೇರಲಿದೆ ಎಂದಿದ್ದಾರೆ.

ಇ-ಪಾಸ್‌ಪೋರ್ಟ್‌ಗಳಲ್ಲಿ ಚಿಪ್‌ವೊಂದನ್ನು ಅಳವಡಿಸಲಾಗುವುದು, ಇದು ಪಾಸ್‌ಪೋರ್ಟ್‌ ಹೊಂದಿರುವವರ ವಿಳಾಸ, ಸಹಿ ಸೇರಿದಂತೆ ಹಲವು ವಿಷಯಗಳನ್ನು ಅಡಕವಾಗಿಸಿಕೊಳ್ಳಲಿದೆ. ಇದರಿಂದಾಗಿ ನಕಲಿ ಪಾಸ್‌ಪೋರ್ಟ್‌ಗಳ ಹಾವಳಿಯನ್ನು ಸಂಪೂರ್ಣವಾಗಿ ತಡೆಯಬಹುದಾಗಿದೆ ಎಂದಿದ್ದಾರೆ.

ಪಾಸ್‌ಪೋರ್ಟ್‌ನಲ್ಲಿ ಚಿಪ್ ಅಳವಡಿಕೆ: ಇ-ಪಾಸ್‌ಪೋರ್ಟ್‌ ಗುಟ್ಟೇನು..?

ಓದಿರಿ: ವಾಟ್ಸ್‌ಆಪ್ ನಲ್ಲಿ ಖಾಲಿ ಮೇಸೆಜ್ ಕಳುಹಿಸುವುದು ಹೇಗೆ..? ಖಂಡಿತ ನಿಮಗೆ ಇದು ಗೊತ್ತಿಲ್ಲ..!!

ಇ-ಪಾಸ್‌ಪೋರ್ಟ್‌ಗಳ ಬಳಕೆಯಿಂದಾಗಿ ಭಯೋತ್ವಾದಕರು ಮತ್ತು ಕಳ್ಳರು ಭಾರತೀಯ ಪಾಸ್‌ಪೋರ್ಟ್‌ಗಳ ಸಹಾಯ ಪಡೆದು ದೇಶವನ್ನು ಹೊಕ್ಕುವುದು ಮತ್ತು ದೇಶದಿಂದ ಕಾಲ್ಕಿತ್ತುವುದನ್ನು ತಡೆಯಬಹುದಲ್ಲದೇ, ಪಾಸ್‌ಪೋರ್ಟ್fದಾರರ ಮಾಹಿತಿಯೂ ಭದ್ರವಾಗಿರಲಿದೆ ಎನ್ನಲಾಗಿದೆ. 

Read more about:
English summary
Chip enabled e-passports with high security features may soon be rolled out as government has started preparation for introducing it. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot