Samsung: ಕ್ರಿಸ್‌ಮಸ್ ಹಿನ್ನೆಲೆ ಭರ್ಜರಿ ಅಫರ್: ಸ್ಯಾಮ್‌ಸಂಗ್ ಗ್ಯಾಲಕ್ಸಿ M ಸರಣಿ ಫೋನ್‌ಗಳು ಇನ್ನೂ ಅಗ್ಗದ ಬೆಲೆಗೆ
ಸ್ಯಾಮ್‌ಸಂಗ್ (Samsung) ಪೋನ್‌ಗಳು ಭಾರತದಲ್ಲಿ ಹೆಚ್ಚು ಜನಪ್ರಿಯತೆ ಪಡೆದುಕೊಂಡಿವೆ. ಈ ಫೋನ್‌ಗಳು ಉತ್ತಮ ಫೀಚರ್ಸ್ ಹಾಗೂ ದೀರ್ಘ ಬಾಳಿಕೆ ಬರುವ ಸಾಮರ್ಥ್ಯ ಪಡೆದಿದ್ದು, ಇದರ ನಡುವೆ ಈಗ ಸ್ಯಾಮ್‌ಸಂಗ್ ಫೋನ್ ಖರೀದಿ ಮಾಡುವವರಿಗೆ ಗುಡ್ ನ್ಯೂಸ್ ನೀಡಲಾಗಿದೆ.
ಹೌದು, ಕ್ರಿಸ್‌ಮಸ್ (Christmas) ಹಿನ್ನೆಲೆ ಸ್ಯಾಮ್‌ಸಂಗ್ ತನ್ನ M ಸರಣಿ ಮೇಲೆ ಆಫರ್ ಘೋಷಣೆ ಮಾಡಲಾಗಿದೆ. ಅಂದರೆ ಈ ವಿಶೇಷ ಸೇಲ್‌ನಲ್ಲಿ ನೀವು ಈಗ ಸ್ಯಾಮ್‌ಸಂಗ್ ಗ್ಯಾಲಕ್ಸಿ M34 5G ಹಾಗೂ ಸ್ಯಾಮ್‌ಸಂಗ್ ಗ್ಯಾಲಕ್ಸಿ M14 5G (Samsung Galaxy M34 5G, Samsung Galaxy M14 5G) ಸ್ಮಾರ್ಟ್‌ಫೋನ್‌ಗಳನ್ನು ಖರೀದಿ ಮಾಡಬಹುದಾಗಿದೆ. ಈ ಫೋನ್‌ಗಳು ಬಜೆಟ್ ಬೆಲೆಯಲ್ಲಿ ಲಭ್ಯ ಇದ್ದು, ಈ ವಿಶೇಷ ಸೇಲ್‌ನಲ್ಲೂ ಇನ್ನೂ ಕಡಿಮೆ ಬೆಲೆಗೆ ಈ ಫೋನ್‌ಗಳನ್ನು ಖರೀದಿ ಮಾಡಬಹುದಾಗಿದೆ. ಹಾಗಿದ್ರೆ, ಈ ವಿಶೇಷ ಆಫರ್ ಎಲ್ಲಿ ಲಭ್ಯ?, ಈ ಫೋನ್‌ಗಳ ಫೀಚರ್ಸ್ ಏನು ಅನ್ನೋದನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಫೋನ್‌ಗಳಿಗೆ ಆಫರ್: ಸ್ಯಾಮ್‌ಸಂಗ್‌ನ ಮಾನ್‌ಸ್ಟರ್ ಸರಣಿಯು ಬ್ರ್ಯಾಂಡ್‌ನ ನಾವೀನ್ಯತೆಗೆ ಸಾಕ್ಷಿಯಾಗಿದೆ. ಈ ಸ್ಮಾರ್ಟ್‌ಫೋನ್‌ಗಳು ಪ್ರಭಾವಶಾಲಿ ಬ್ಯಾಟರಿ ಬಾಳಿಕೆ, ಡಿಸ್‌ಪ್ಲೇ, ಪ್ರೊಸೆಸಿಂಗ್ ಪವರ್ ಸೇರಿದಂತೆ ಅನೇಕ ಪವರ್ ಫುಲ್ ಫೀಚರ್ಸ್ ಆಯ್ಕೆ ಪಡೆದುಕೊಂಡಿದ್ದು, ದೈನಂದಿನ ಬಳಕೆಗೆ ಈ ಫೋನ್‌ಗಳು ಸೂಕ್ತವಾಗಿವೆ. ಅದರಂತೆ ಸ್ಯಾಮ್‌ಸಂಗ್‌ನ ಅಧಿಕೃತ ಸೈಟ್ ಹಾಗೂ ಅಮೆಜಾನ್ ಮೂಲಕ ನೀವು ಸ್ಯಾಮ್‌ಸಂಗ್ ಗ್ಯಾಲಕ್ಸಿ M34 5G ಅನ್ನ 14999 ರೂ.ಗಳಿಗೆ ಹಾಗೂ ಸ್ಯಾಮ್‌ಸಂಗ್ ಗ್ಯಾಲಕ್ಸಿ M14 5G ಫೋನ್ ಅನ್ನು 10490ರೂ.ಗಳಿಗೆ ಕೊಂಡುಕೊಳ್ಳಬಹುದಾಗಿದೆ.
ಇನ್ನು ಈ ಎರಡೂ ಫೋನ್‌ಗಳು ಸಹ ಬ್ಯಾಟರಿ ವಿಚಾರದಲ್ಲಿ ಉತ್ತಮ ಎನಿಸಿವೆ. ಯಾಕೆಂದರೆ 6000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದುಕೊಂಡಿದ್ದು, ಎರಡೂ ಫೋನ್‌ಗಳು ಸಹ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಆಯ್ಕೆ ಪಡೆಯುವ ಮೂಲಕ ಉತ್ತಮ ಎನಿಸಿವೆ. ಅದರಲ್ಲೂ M34 5G ಫೋನ್ ನೋ ಶೇಕ್ ಫೀಚರ್ಸ್‌ನೊಂದಿಗೆ ಕ್ಯಾಮೆರಾ ಆಯ್ಕೆ ಪಡೆದಿದ್ದು, ಈ ಮೂಲಕ ಅತ್ಯುತ್ತಮ ಫೋಟೋಗಳನ್ನು ಸೆರೆಹಿಡಿಯಲು ಅನುಕೂಲ ಮಾಡಿಕೊಡಲಿದೆ.

ಹಾಗೆಯೇ M14 5G ಸ್ಮಾರ್ಟ್‌ಫೋನ್ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾದೊಂದಿಗೆ ಟ್ರಿಪಲ್ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದ್ದು, ಇದರಲ್ಲಿನ F1.8 ಲೆನ್ಸ್ ಉತ್ತಮ ಛಾಯಾಗ್ರಹಣಕ್ಕೆ ಸಹಾಯ ಮಾಡಲಿದೆ. ಜೊತೆಗೆ ಆಕರ್ಷಕ ಫಿಲ್ಟರ್‌ಗಳೊಂದಿಗೆ ಪರಿಪೂರ್ಣ ಹಬ್ಬದ ಸೆಲ್ಫಿಗಳನ್ನು ತೆಗೆದುಕೊಳ್ಳಲು ನೀವು 13 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಬಳಕೆ ಮಾಡಬಹುದು.
ಉಳಿದಂತೆ M34 5G ಫೋನ್ 6.5 ಇಂಚಿನ 120Hz ರಿಫ್ರೆಶ್ ರೇಟ್ ಆಯ್ಕೆ ಸೂಪರ್ ಅಮೋಲೆಡ್ ಡಿಸ್‌ಪ್ಲೇ ಹೊಂದಿದ್ದರೆ M14 5G ಫೋನ್ 6.6 ಇಂಚಿನ ಫುಲ್ ಹೆಚ್‌ಡಿ+ ಡಿಸ್‌ಪ್ಲೇ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದೆ. ಈ ಡಿಸ್‌ಪ್ಲೇ ಅಲ್ಟ್ರಾ-ಸ್ಮೂತ್ ಅನುಭವಕ್ಕಾಗಿ 90Hz ರಿಫ್ರೆಶ್ ರೇಟ್ ಆಯ್ಕೆ ಪಡೆದುಕೊಂಡಿದೆ. ಈ ಮೂಲಕ ಗೇಮಿಂಗ್ ಆಡುವಾಗ ಅಥವಾ ಹೆಚ್ಚಿನ ಪಿಕ್ಸೆಲ್ ವಿಡಿಯೋ ವೀಕ್ಷಣೆಯಲ್ಲಿ ಉತ್ತಮ ಅನುಭವ ಸಿಗಲಿದೆ.

ಈ ಫೋನ್‌ಗಳ ಪ್ರೊಸೆಸರ್ ವಿಚಾರಕ್ಕೆ ಬಂದರೆ M34 5G ಅಲ್ಟ್ರಾ-ಫಾಸ್ಟ್ ಎಕ್ಸಿನೋಸ್ 1280 - 5nm ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಿದ್ರೆ, M14 5G 5nm ಎಕ್ಸಿನೋಸ್ 1330 ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸುತ್ತದೆ. ಜೊತೆಗೆ M34 5G ಓಎಸ್ ಅಪ್‌ಗ್ರೇಡ್‌ಗಳು ಮತ್ತು 5 ವರ್ಷಗಳ ಭದ್ರತಾ ನವೀಕರಣಗಳನ್ನು ನೀಡಲಿದ್ದು, M14 5G 2 ಜನ್ ಓಎಸ್ ಅಪ್‌ಗ್ರೇಡ್ ಮತ್ತು 4 ವರ್ಷಗಳವರೆಗೆ ಭದ್ರತಾ ಸುರಕ್ಷತೆಯನ್ನು ನೀಡುತ್ತದೆ.


Click it and Unblock the Notifications








