Home
ಸುದ್ದಿಜಾಲ

ಭಿನ್ನ ಡಿಸೈನ್‌ ಇರುವ ಈ ಫೋನ್‌ ಈಗ ಸಖತ್ ಡಿಸ್ಕೌಂಟ್‌ ಬೆಲೆಯಲ್ಲಿ ಲಭ್ಯ!

ಪ್ರಸ್ತುತ ಫ್ಲಿಪ್‌ಕಾರ್ಟ್‌ ತಾಣದಲ್ಲಿ ಈಗ ಬಿಗ್‌ ಬಿಲಿಯನ್‌ ಡೇಸ್‌ 2024 (Flipkart Big Billion Days Sale 2024) ಮಾರಾಟದಲ್ಲಿ ಆಯ್ದ ಮೊಬೈಲ್‌ಗಳು ಭರ್ಜರಿ ಡಿಸ್ಕೌಂಟ್‌ ಬೆಲೆಯಲ್ಲಿ ಖರೀದಿಗೆ ಲಭ್ಯ ಇವೆ. ಇನ್ನು ಮೊಬೈಲ್ ಖರೀದಿಸುವ ಗ್ರಾಹಕರು ಲಭ್ಯ ಇರುವ ಬ್ಯಾಂಕ್‌ ಆಫರ್‌ಗಳನ್ನು ಪಡೆದುಕೊಂಡರೆ, ಮತ್ತಷ್ಟು ಡಿಸ್ಕೌಂಟ್‌ ಖಚಿತ. ಇದೀಗ ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ವೆಬ್‌ಸೈಟ್‌ನಲ್ಲಿ CMF Phone 1 ಮೊಬೈಲ್ ಗ್ರಾಹಕರು OMG ಎನ್ನವಂತಹ ಡಿಸ್ಕೌಂಟ್‌ ದರದಲ್ಲಿ ಖರೀದಿಗೆ ಲಭ್ಯ ಇದೆ.

ಹೌದು, ದೈತ್ಯ ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ಪ್ಲಾಟ್‌ಫಾರ್ಮ್‌ನಲ್ಲಿ CMF Phone 1 ಮೊಬೈಲ್ ಶೇ. 25% ರಷ್ಟು ಡಿಸ್ಕೌಂಟ್‌ ಪಡೆದಿದೆ. ಈ ಫೋನಿನ 6 GB RAM + 128 GB ಸ್ಟೋರೇಜ್‌ ವೇರಿಯಂಟ್‌ ಅನ್ನು ಖರೀದಿದಾರರು 14,999ರೂ. ಗಳ ಕೊಡುಗೆಯ ಬೆಲೆಯಲ್ಲಿ ಖರೀದಿ ಮಾಡಬಹುದು. ಇದರ ಜೊತೆಗೆ ಹೆಚ್ಚುವರಿಯಾಗಿ ಆಯ್ದ ಬ್ಯಾಂಕ್‌ಗಳ ಆಫರ್‌ ಪಡೆದುಕೊಂಡರೆ, 12,999ರೂ. ಗಳಿಗೆ ಸಹ ಲಭ್ಯವಾಗಲಿವೆ.

ಭಿನ್ನ ಡಿಸೈನ್‌ ಇರುವ ಈ ಫೋನ್‌ ಈಗ ಸಖತ್ ಡಿಸ್ಕೌಂಟ್‌ ಬೆಲೆಯಲ್ಲಿ ಲಭ್ಯ!

ಹಾಗೆಯೇ ಗ್ರಾಹಕರು ಈ ಫೋನ್‌ ಬ್ಲ್ಯಾಕ್‌, ಲೈಟ್‌ ಗ್ರೀನ್, ಬ್ಲೂ ಮತ್ತು ಆರೆಂಜ್‌ ಕಲರ್‌ ಆಯ್ಕೆಯಲ್ಲಿ ಈ ಫೋನ್‌ ಖರೀದಿಸಬಹುದು. ಇನ್ನು ಇದರ ಸೆಲ್ಫಿ ಕ್ಯಾಮೆರಾವು 16 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿ ಇದೆ. ಅಲ್ಲದೇ ಇದು 33W ಫಾಸ್ಟ್‌ ಚಾರ್ಜಿಂಗ್‌ ಸೌಲಭ್ಯವನ್ನು ಹೊಂದಿದೆ. ಹಾಗಾದರೇ CMF Phone 1 ಫೋನ್‌ ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ ಓದಿರಿ.

CMF Phone 1 - ಫೀಚರ್ಸ್‌ ಹೀಗಿವೆ

CMF Phone 1 ಫೋನ್‌ 6.7 ಇಂಚಿನ ಫುಲ್‌ ಹೆಚ್‌ಡಿ+ ಅಮೋಲೆಡ್‌ ಡಿಸ್‌ಪ್ಲೇ ಅನ್ನು ಒಳಗೊಂಡಿದ್ದು, ಇದು 2000 nits ಬ್ರೈಟ್ನೆಸ್‌ ಸಾಮರ್ಥ್ಯ ಪಡೆದಿದೆ. ಅಲ್ಲದೇ 120Hz ರಿಫ್ರೆಶ್ ರೇಟ್‌ ಆಯ್ಕೆ ಒಳಗೊಂಡಿದ್ದು, ಈ ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಚಿಪ್‌ಸೆಟ್‌ ಪ್ರೊಸೆಸರ್‌ ಪವರ್‌ನಲ್ಲಿ ಕಾರ್ಯ ಮಾಡಲಿದೆ. ಅಲ್ಲದೇ ಇದು ಇತ್ತೀಚಿನ ಆಂಡ್ರಾಯ್ಡ್‌ 14 ಓಎಸ್‌ ಸಪೋರ್ಟ್‌ ಸಹ ಮಾಡುತ್ತದೆ.

CMF Phone 1 ಫೋನ್‌ 6 GB RAM + 128 GB ಹಾಗೂ 8 GB RAM + 128 GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆ ಒಳಗೊಂಡಿದೆ. ಅಲ್ಲದೇ ಇದು ಡ್ಯುಯಲ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಪಡೆದಿದ್ದು, ಇದರ ಮುಖ್ಯ ಕ್ಯಾಮೆರಾವು 50 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿ ಇದೆ. ಹಾಗೆಯೇ ಈ ಫೋನಿನ ಎರಡನೇ ಕ್ಯಾಮೆರಾವು 2 ಮೆಗಾ ಪಿಕ್ಸೆಲ್‌ ಡೆಪ್ತ್ ಸೆನ್ಸರ್ ಸೌಲಭ್ಯ ಹೊಂದಿದೆ. ಮುಂಭಾಗದಲ್ಲಿ ಇದರ ಸೆಲ್ಫಿ ಕ್ಯಾಮೆರಾವು 16 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಕ್ಯಾಮೆರಾ ಸೌಲಭ್ಯ ನೀಡಲಾಗಿದೆ.

CMF Phone 1 ಫೋನ್‌ 5000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯ ಕೂಡಾ ಹೊಂದಿದ್ದು, ಇದಕ್ಕೆ ಅನುಗುಣವಾಗಿ 33 W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಸಹ ಪಡೆದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಈ ಫೋನ್‌ ಡ್ಯುಯಲ್ 4G VoLTE, ವೈ ಫೈ 6, ಜಿಪಿಎಸ್‌, ಯುಎಸ್‌ಬಿ ಟೈಪ್-ಸಿ, ಸೈಡ್‌ ಮೌಂಟ್‌ ಫಿಂಗರ್‌ಫ್ರಿಂಟ್ ಸೆನ್ಸಾರ್ ಆಯ್ಕೆಗಳನ್ನು ಒಳಗೊಂಡಿದೆ. ಅಲ್ಲದೇ ಫೋನಿನ ಬ್ಯಾಕ್‌ ಕವರ್‌ ಬದಲಾಯಿಸುವ ಸೌಲಭ್ಯ ಈ ಫೋನಿನಲ್ಲಿ ಇದೆ.

Best Mobiles in India

English summary
CMF Phone 1 now available at big price drop on Flipkart Big Billion Days Sale 2024. check full details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+