Home
ಸುದ್ದಿಜಾಲ

CMF Phone 1 ಫೋನ್‌ ಬೆಲೆಯಲ್ಲಿ ಭರ್ಜರಿ ಇಳಿಕೆ..ಜಬರ್ದಸ್ತ್‌ ಫೀಚರ್ಸ್‌!

ಫ್ಲಿಪ್‌ಕಾರ್ಟ್‌ ಬೋನಾಂಜಾ ಸೇಲ್ 2024 (Mobiles Bonanza Sale) ಸೇಲ್‌ ಲೈವ್‌ ಆಗಿದೆ. ಈ ವಿಶೇಷ ಮಾರಾಟ ಮೇಳದಲ್ಲಿ ಕೆಲವು ಆಯ್ದ ಮೊಬೈಲ್‌ಗಳು ಆಕರ್ಷಕ ಡಿಸ್ಕೌಂಟ್‌ ಪಡೆದಿದ್ದು, ಹಾಗೆಯೇ ಕೆಲವು ಬ್ಯಾಂಕ್‌ ಆಫರ್‌ಗಳು ಸಹ ಲಭ್ಯ ಇವೆ. ಪ್ರಸ್ತುತ ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ತಾಣದಲ್ಲಿ CMF Phone 1 ಮೊಬೈಲ್‌ ದೊಡ್ಡ ರಿಯಾಯಿತಿ ದರದಲ್ಲಿ ಖರೀದಿಗೆ ಲಭ್ಯ ಇದೆ.

ಹೌದು, ಫ್ಲಿಪ್‌ಕಾರ್ಟ್‌ ತಾಣದಲ್ಲಿ CMF Phone 1 ಫೋನ್‌ ಶೇ. 25% ರಷ್ಟು ಡಿಸ್ಕೌಂಟ್‌ ಪಡೆದಿದೆ. ಈ ಫೋನಿನ 8 GB RAM + 128 GB ಸ್ಟೋರೇಜ್‌ ವೇರಿಯಂಟ್‌ ಅನ್ನು ಗ್ರಾಹಕರು 14,999 ರೂ. ಗಳ ಕೊಡುಗೆಯ ಬೆಲೆಯಲ್ಲಿ ಖರೀದಿ ಮಾಡಬಹುದು. ಅಲ್ಲದೇ ಹೆಚ್ಚುವರಿ ಯಾಗಿ ಆಯ್ದ ಬ್ಯಾಂಕ್‌ಗಳ ಆಫರ್‌ ಪಡೆದುಕೊಂಡರೆ, ಇನ್ನಷ್ಟು ಡಿಸ್ಕೌಂಟ್‌ ಬೆಲೆಯಲ್ಲಿ ಖರೀದಿಸಲು ಚಾನ್ಸ್‌ ಕೂಡಾ ಇದೆ.

CMF Phone 1 ಫೋನ್‌ ಬೆಲೆಯಲ್ಲಿ ಭರ್ಜರಿ ಇಳಿಕೆ..ಜಬರ್ದಸ್ತ್‌ ಫೀಚರ್ಸ್‌!

ಈ ಮೊಬೈಲ್‌ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಬೆಂಬಲ ಒಳಗೊಂಡಿದ್ದು, ಇದರ ಜೊತೆಗೆ ಬ್ಲ್ಯಾಕ್‌ ಹಾಗೂ ವೈಟ್‌ ಕಲರ್‌ ಆಯ್ಕೆ ಪಡೆದಿದೆ. ಹಾಗೆಯೇ ಈ ಸ್ಟೈಲಿಶ್‌ ಮೊಬೈಲ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ರಚನೆ ಪಡೆದಿದ್ದು, ಮೊದಲ ಕ್ಯಾಮೆರಾವು 50 ಮೆಗಾ ಪಿಕ್ಸಲ್‌ ಸೆನ್ಸಾರ್‌ ಆಗಿದೆ. ಹಾಗಾದರೇ CMF Phone 1 ಫೋನಿನ ಇತರೆ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ಹಾಗೂ ಪ್ರೊಸೆಸರ್‌ ಮಾಹಿತಿ

CMF Phone 1 ಮೊಬೈಲ್‌ 6.7 ಇಂಚಿನ ಫುಲ್‌ ಹೆಚ್‌ಡಿ+ ಅಮೋಲೆಡ್‌ ಡಿಸ್‌ಪ್ಲೇ ಅನ್ನು ಒಳಗೊಂಡಿದ್ದು, ಇದು 2000 nits ಬ್ರೈಟ್ನೆಸ್‌ ಸಾಮರ್ಥ್ಯ ಹೊಂದಿದೆ. ಅಲ್ಲದೇ 120 Hz ರಿಫ್ರೆಶ್ ರೇಟ್‌ ಆಯ್ಕೆ ಒಳಗೊಂಡಿದ್ದು, ಈ ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಚಿಪ್‌ಸೆಟ್‌ ಪ್ರೊಸೆಸರ್‌ ಪವರ್‌ನಲ್ಲಿ ಕಾರ್ಯ ಮಾಡಲಿದೆ. ಅಲ್ಲದೇ ಇದು ಇತ್ತೀಚಿನ ಆಂಡ್ರಾಯ್ಡ್‌ 14 ಓಎಸ್‌ ಸಪೋರ್ಟ್‌ ಸಹ ಮಾಡುತ್ತದೆ.

ಕ್ಯಾಮೆರಾ ಸೆನ್ಸಾರ್‌ ಹಾಗೂ ಮೆಮೊರಿ ಮಾಹಿತಿ

CMF Phone 1 ಮೊಬೈಲ್‌ 6 GB RAM + 128 GB ಹಾಗೂ 8 GB RAM + 128 GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆ ಒಳಗೊಂಡಿದೆ. ಅಲ್ಲದೇ ಇದು ಡ್ಯುಯಲ್‌ ಕ್ಯಾಮೆರಾ ರದನೆ ಅನ್ನು ಪಡೆದಿದ್ದು, ಇದರ ಮುಖ್ಯ ಕ್ಯಾಮೆರಾವು 50 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿ ಇದೆ. ಅಲ್ಲದೇ ಈ ಫೋನಿನ ಎರಡನೇ ಕ್ಯಾಮೆರಾವು 2 ಮೆಗಾ ಪಿಕ್ಸೆಲ್‌ ಡೆಪ್ತ್ ಸೆನ್ಸರ್ ಸೌಲಭ್ಯ ಹೊಂದಿದೆ. ಇದರ ಸೆಲ್ಫಿ ಕ್ಯಾಮೆರಾವು 16 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಕ್ಯಾಮೆರಾ ಸೌಲಭ್ಯ ಪಡೆದಿದೆ.

ಬಿಗ್ ಬ್ಯಾಟರಿ ಹಾಗೂ ಇತರೆ ಮಾಹಿತಿ

CMF Phone 1 ಮೊಬೈಲ್‌ 5000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯ ಸಹ ಹೊಂದಿದ್ದು, ಇದಕ್ಕೆ ಅನುಗುಣವಾಗಿ 33 W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಸಹ ಒಳಗೊಂಡಿದೆ. ಇನ್ನು ಕನೆಕ್ಟಿವಿಟಿ ಆಯ್ಕೆ ಗಳಲ್ಲಿ ಈ ಫೋನ್‌ ಡ್ಯುಯಲ್ 4G VoLTE, ವೈ ಫೈ 6, ಜಿಪಿಎಸ್‌, ಯುಎಸ್‌ಬಿ ಟೈಪ್ ಸಿ, ಸೈಡ್‌ ಮೌಂಟ್‌ ಫಿಂಗರ್‌ಫ್ರಿಂಟ್ ಸೆನ್ಸಾರ್ ಆಯ್ಕೆಗಳನ್ನು ಒಳಗೊಂಡಿದೆ. ಅಲ್ಲದೇ ಫೋನಿನ ಬ್ಯಾಕ್‌ ಕವರ್‌ ಬದಲಾಯಿಸುವ ಸೌಲಭ್ಯ ಈ ಫೋನಿನ ಹೈಲೈಟ್‌ ಅಂಶ ಎನಿಸಿದೆ.

Best Mobiles in India

English summary
CMF Phone 1 Slashes Price in the Mobiles Bonanza Sale. check out offer price and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+