Home
ಸುದ್ದಿಜಾಲ

ಭಾರತಕ್ಕೆ ಕೋಕ-ಕೋಲಾ ಫೋನ್‌ ಬರುತ್ತೆ!..ನೋಡೊಕೆ ಯಾವ ತರಹ ಇದೆ ಗೊತ್ತಾ?

ಸದ್ಯ ಸ್ಮಾರ್ಟ್‌ಫೊನ್‌ ಮಾರುಕಟ್ಟೆಯಲ್ಲಿ ತ್ರೀವ ಪೈಪೋಟಿ ಇದೆ. ಪ್ರಮುಖ ಮೊಬೈಲ್‌ ಸಂಸ್ಥೆಗಳು ಮಾರುಕಟ್ಟೆಯಲ್ಲಿ ಅಬ್ಬರಿಸಲು ಹೊಸ ಹೊಸ ಅಪ್‌ಡೇಟ್‌ಗಳೊಂದಿಗೆ ಲಗ್ಗೆ ಇಡುತ್ತಿವೆ. ಹೀಗಿದ್ದರೂ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯತ್ತ ನೂತನ ಕಂಪನಿಗಳು ಆಕರ್ಷಿತವಾಗುತ್ತಿವೆ. ಇದೀಗ ಅಮೆರಿಕಾದ ಜನಪ್ರಿಯ ದೈತ್ಯ ಪಾನೀಯ ಸಂಸ್ಥೆ ಕೋಕಕೋಲಾ (Coca-Cola) ಸಹ ಈಗ ಸ್ಮಾರ್ಟ್‌ಫೋನ್‌ ವಲಯಕ್ಕೆ ಎಂಟ್ರಿ ನೀಡಲಿದ್ದು, ಹೊಸ ಅಲೆ ಎಬ್ಬಿಸಿದೆ.

ಅಮೆರಿಕಾದ

ಹೌದು, ಅಮೆರಿಕಾದ ಪಾನೀಯ (beverage) ಸಂಸ್ಥೆ ಕೋಕ-ಕೋಲಾ (Coca-Cola) ಸಹ ಸ್ಮಾರ್ಟ್‌ಫೋನ್‌ ಕ್ಷೇತ್ರಕ್ಕೆ ಪ್ರವೇಶ ಮಾಡಲಿದೆ ಎಂದು ಪ್ರಮುಖ ಟಿಪ್‌ಸ್ಟಾರ್‌ ಮುಕುಲ್‌ ಶರ್ಮಾ ಅವರು ತಮ್ಮ ಟ್ವಿಟ್‌ ಮೂಲಕ ತಿಳಿಸಿದ್ದಾರೆ.

ಸ್ಮಾರ್ಟ್‌ಫೋನ್

ಕೋಕ-ಕೋಲಾ (Coca-Cola) ಸ್ಮಾರ್ಟ್‌ಫೋನ್ ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಎಂಟ್ರಿ ಕೊಡಲಿದೆ. ಕೋಕಾ-ಕೋಲಾ ತನ್ನ ಮುಂಬರುವ ಸ್ಮಾರ್ಟ್‌ಫೋನ್‌ಗಾಗಿ ಸ್ಮಾರ್ಟ್‌ಫೋನ್ ಬ್ರಾಂಡ್‌ನೊಂದಿಗೆ ಕೈ ಜೋಡಿಸಲಿದೆ ಎಂದು ಮುಕುಲ್‌ ಶರ್ಮಾ ಮಾಹಿತಿ ಹಂಚಿಕೊಂಡಿದ್ದಾರೆ. ಹಾಗೆಯೇ ಬರಲಿರುವ ನೂತನ ಸ್ಮಾರ್ಟ್‌ಫೋನ್‌ ವಿನ್ಯಾಸ ಬಗ್ಗೆ ಹಾಗೂ ಬ್ಯಾಕ್‌ ಪ್ಯಾನೆಲ್‌ ಬಗ್ಗೆಯೂ ಫೋಟೊ ಶೇರ್ ಮಾಡಿಕೊಂಡಿದ್ದಾರೆ.

ಕೆಂಪು

ಟಿಪ್‌ಸ್ಟಾರ್‌ ಮುಕುಲ್‌ ಶರ್ಮಾ ಕೋಕ-ಕೋಲಾದ ಬರಲಿರುವ ಹೊಸ ಫೋನ್‌ನ ವಿನ್ಯಾಸವನ್ನು ಶೇರ್ ಮಾಡಿದ್ದು, ಫೋನ್‌ ಕೆಂಪು ಬಣ್ಣದ ವೇರಿಯಂಟ್‌ನಲ್ಲಿ ಮಾರುಕಟ್ಟೆ ಪ್ರವೇಶಿಸಲಿದೆ ಎಂಬುದನ್ನು ಸೂಚಿಸುತ್ತದೆ. ಇನ್ನು ಶೇರ್ ಮಾಡಿರುವ ಫೋಟೊದಲ್ಲಿ ಫೋನ್‌ ಹಿಂಭಾಗದ ಪ್ಯಾನೆಲ್‌ನಲ್ಲಿ ಕೋಕಾ-ಕೋಲಾ (Coca-Cola) ಬ್ರ್ಯಾಂಡಿಂಗ್ ಅನ್ನು ದೊಡ್ಡ ಫಾಂಟ್‌ನಲ್ಲಿ ಕಾಣಿಸಿರುವುದನ್ನು ಗಮನಿಸಬಹುದು. ಅಂದಾಹಗೆ ಕೋಕಾ-ಕೋಲಾ ಸ್ಮಾರ್ಟ್‌ಫೋನ್ ಈ ತ್ರೈಮಾಸಿಕದಲ್ಲಿ ಬಿಡುಗಡೆ ಮಾಡಲಿದೆ ಎಂದು ಮುಕುಲ್‌ ಶರ್ಮಾ ಹೇಳಿದ್ದಾರೆ.

ಕೋಕ-ಕೋಲಾ ಸ್ಮಾರ್ಟ್‌ಫೋನ್‌ ನಿರೀಕ್ಷಿತ ಫೀಚರ್ಸ್‌

ಕೋಕ-ಕೋಲಾ ಸ್ಮಾರ್ಟ್‌ಫೋನ್‌ ನಿರೀಕ್ಷಿತ ಫೀಚರ್ಸ್‌

ಮುಕುಲ್‌ ಶರ್ಮಾ ಶೇರ್ ಮಾಡಿರುವ ಫೋಟೊ ಪ್ರಕಾರ, ಕೋಕ-ಕೋಲಾ ಸ್ಮಾರ್ಟ್‌ಫೋನ್‌ ಹಿಂದಿನ ಪ್ಯಾನೆಲ್‌ ಲುಕ್‌ ಆಕರ್ಷಕ ರೆಡ್‌ ಲುಕ್‌ನಲ್ಲಿದೆ. ಈ ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆಯನ್ನು ಪಡೆದಿರುವುದಾಗಿ ತಿಳಿದುಬರುತ್ತದೆ. ಕ್ಯಾಮೆರಾ ಜೊತೆಗೆ ಎಲ್ಇಡಿ ಫ್ಲ್ಯಾಷ್ ಅನ್ನು ಪಡೆದಿರಲಿದೆ. ಇನ್ನು ಕೋಕ ಕೋಲಾ ಫೋನ್ ಬಹುತೇಕ ರಿಯಲ್‌ಮಿ 10, ರಿಯಲ್‌ಮಿ C33 ಮತ್ತು ಒಪ್ಪೋ A78 ಫೋನಿನ ಕ್ಯಾಮೆರಾ ಲೆನ್ಸ್‌ಗಳೆಂತೆ ಕಂಡು ಬರುತ್ತದೆ.

ಫಿಂಗರ್‌ಪ್ರಿಂಟ್

ಆದಾಗ್ಯೂ, ಕೋಕ-ಕೋಲಾ ಸ್ಮಾರ್ಟ್‌ಫೋನ್‌ ಲೀಕ್ ರೆಂಡರ್‌ಗಳು ಪವರ್ ಬಟನ್‌ನ ಬಗ್ಗೆ ಸ್ಪಷ್ಟ ಮಾಹಿತಿ ಹೊರಹಾಕಿಲ್ಲ. ಆದರೆ ಫಿಂಗರ್‌ಪ್ರಿಂಟ್ ಸ್ಕ್ಯಾನರ್‌ನಂತೆ ಪವರ್ ಬಟನ್ ಇರುವುದನ್ನು ನಿರೀಕ್ಷಿಸಬಹುದಾಗಿದೆ. ಫೋನ್ ಹಿಂಭಾಗದಲ್ಲಿ ಪಾನೀಯ ಬಾಟಲಿಗಳ ಮೇಲೆ ಇರುವಂತೆ ಕೋಕಾ-ಕೋಲಾ ಶೈಲಿಯಲ್ಲಿ ಬೃಹತ್ ಫಾಂಟ್‌ನಲ್ಲಿ ಕೋಕಾ-ಕೋಲಾ ಹೆಸರು ಪ್ರಮುಖ ಹೈಲೈಟ್‌ ಆಗಿ ಕಾಣಿಸಿಕೊಂಡಿರಲಿದೆ.

ಸ್ಮಾರ್ಟ್‌ಫೋನ್‌

ಹಾಗೆಯೇ ಕೋಕ-ಕೋಲಾ ಸ್ಮಾರ್ಟ್‌ಫೋನ್‌ ಗ್ರೇಡಿಯಂಟ್ ಬ್ಯಾಕ್ ಪ್ಯಾನೆಲ್ ಅನ್ನು ಹೊಂದಿರಬಹುದು ಎಂದು ಹೇಳಲಾಗುತ್ತಿದೆ. ಇನ್ನು ಫೋನ್‌ ಹಿಮಭದಿಯ ಕೆಂಪು ಬಣ್ಣದ ಛಾಯೆಯು ಹೆಚ್ಚು ಗಾಢವಾಗಿ ಕಾಣುತ್ತದೆ. ಹೊಸದಾಗಿ ಬರಲಿರುವ ಈ ಸ್ಮಾರ್ಟ್‌ಫೋನ್‌ ದೇಶಿಯ ಮಾರುಕಟ್ಟೆಯಲ್ಲಿ ಯಾವ ಕಮಾಲ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ. ಆದರೆ ಈ ಫೋನ್ ಬಹುತೇಕ ರಿಯಲ್‌ಮಿ 10 ಹೋಲುತ್ತದೆ ಎನ್ನಲಾಗಿದೆ.

ಪ್ರೊಸೆಸರ್‌

ರಿಯಲ್‌ಮಿ 10 5G ಸ್ಮಾರ್ಟ್‌ಫೋನ್‌ 6.4 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಸೂಪರ್ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 1,080 x 2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಈ ಫೋನ್ ಡೈಮೆನ್ಸಿಟಿ 700 SoC ಪ್ರೊಸೆಸರ್‌ ಸಾಮರ್ಥ್ಯ ಪಡೆದಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 12 ಓಎಸ್ ಪಡೆದಿದೆ. ಜೊತೆಗೆ ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಹೊಂದಿದೆ. ಇದಲ್ಲದೆ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಪವರ್ ಇದ್ದು, ಇದು 33W ವರೆಗೆ ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

Best Mobiles in India

English summary
American beverage corporation Coca-Cola will be teaming up with a smartphone brand to launch a new device in India. know more details in kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+