Home
ಸುದ್ದಿಜಾಲ

AI software: ಪ್ರಪಂಚದ ಮೊದಲ ಎಐ ಸಾಫ್ಟ್‌ವೇರ್ ಎಂಜಿನಿಯರ್ ಡೆವಿನ್‌! ಏನೆಲ್ಲಾ ಕೆಲಸ ಮಾಡುತ್ತೆ?

ಎಐ ದಿನಕಳೆದಂತೆ ದೊಡ್ಡ ಮಟ್ಟದ ಆವಿಸ್ಕಾರಗಳನ್ನು ಮಾಡುವಲ್ಲಿ ಸಹಾಯಕವಾಗಿದೆ. ಅದರಂತೆ ಈಗ ಕಾಗ್ನಿಷನ್ ಕಂಪೆನಿಯು ವಿಶ್ವದ ಮೊದಲ ಎಐ ಸಾಫ್ಟ್‌ವೇರ್ ಇಂಜಿನಿಯರ್‌ ಅನ್ನು ಪರಿಚಯಿಸಿದೆ. ಇದು ಸಾಕಷ್ಟು ವಿಶೇಷ ಕೆಲಸಗಳನ್ನು ಮಾಡಲಿದೆ.

ಹೌದು, ಈಗಾಗಲೇ ಸಾಕಷ್ಟು ಸಂಸ್ಥೆಗಳು ಎಐ ಟೂಲ್ಸ್ (AI Tools) ಬಳಕೆ ಮಾಡಿಕೊಂಡು ವಿಶೇ‍ಷ ಟೂಲ್ಸ್‌ ಅನ್ನು ಪರಿಚಯಿಸಿವೆ. ಅದರಂತೆ ಈಗ ಜಾಗತಿಕವಾಗಿ ಮೊದಲ ಬಾರಿಗೆ ಎಐ ಸಾಫ್ಟ್‌ವೇರ್ ಇಂಜಿನಿಯರ್ (AI Software Engineer) ಅನ್ನು ಘೋಷಣೆ ಮಾಡಲಾಗಿದೆ. ಈ ಇಂಜಿನಿಯರ್ ಕೋಡಿಂಗ್, ವೆಬ್‌ಸೈಟ್‌ಗಳು ಮತ್ತು ಸಾಫ್ಟ್‌ವೇರ್ ಅನ್ನು ಒಂದೇ ಪ್ರಾಂಪ್ಟ್ ಮೂಲಕ ರಚಿಸುವ ಸಾಮರ್ಥ್ಯವನ್ನು ಹೊಂದಿದೆ. ಹಾಗಿದ್ರೆ, ಇದರ ಇತರೆ ಪ್ರಮುಖ ಸಾಮರ್ಥ್ಯಗಳೇನು?, ಇದರಿಂದ ಮಾನವ ಕೆಲಸಗಾರರಿಗೆ ಏನಾದರೂ ಸಮಸ್ಯೆ ಆಗಲಿದೆಯೇ ಎಂಬಿತ್ಯಾದಿ ಮಾಹಿತಿ ಇಲ್ಲಿದೆ ನೋಡಿ.

ಪ್ರಪಂಚದ ಮೊದಲ ಎಐ ಸಾಫ್ಟ್‌ವೇರ್ ಎಂಜಿನಿಯರ್ ಡೆವಿನ್‌: ಟೆಕ್ ಕಂಪನಿ ಕಾಗ್ನಿಷನ್ ಕ್ರಿಯೇಟ್‌ ಮಾಡಿದ ಡೆವಿನ್ (Devin) ಇದೀಗ ಮೊದಲ ಎಐ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಗುರುತಿಸಿಕೊಂಡಿದೆ. ನೀವು ಬಯಸುವ ಎಲ್ಲವನ್ನೂ ಇದು ಮಾಡುವ ಸಾಮರ್ಥ್ಯ ಪಡೆದಿದೆ. ಗಮನಿಸಬೇಕಾದ ವಿಷಯ ಏನೆಂದರೆ ಈ ಎಐ ಟೂಲ್ಸ್‌ ಬಳಕೆ ಮಾಡಿಕೊಂಡು ಮಾನವ ಇಂಜಿನಿಯರ್‌ಗಳನ್ನು ಬದಲಿಸುವ ಉದ್ದೇಶ ಇಲ್ಲ ಅನ್ನೋದು. ಅಂದರೆ ಮಾನವ ಕೆಲಸಗಾರರೊಂದಿಗೆ ಸೇರಿ ಕೆಲಸ ಮಾಡುವ ಸಾಮರ್ಥ್ಯ ಪಡೆದಿದೆ.

ಈ ಸಂಬಂಧ ಕಾಗ್ನಿಷನ್ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದು, ಇಂದು ನಾವು ಡೆವಿನ್ ಅನ್ನು ಪರಿಚಯಿಸಲು ಉತ್ಸುಕರಾಗಿದ್ದೇವೆ, ಡೆವಿನ್ ಎಸ್ ಡಬ್ಲ್ಯೂ ಇ ಬೆಂಚ್ ಕೋಡಿಂಗ್ ಮಾನದಂಡದಲ್ಲಿ ಹೊಸ ಅತ್ಯಾಧುನಿಕವಾಗಿದೆ. ಪ್ರಮುಖ ಎಐ ಕಂಪನಿಗಳಿಂದ ಪ್ರಾಯೋಗಿಕ ಎಂಜಿನಿಯರಿಂಗ್ ಸಂದರ್ಶನಗಳನ್ನು ಯಶಸ್ವಿಯಾಗಿ ಉತ್ತೀರ್ಣಗೊಳಿಸಿದೆ. ಜೊತೆಗೆ ಇದು ತನ್ನದೇ ಆದ ಶೆಲ್, ಕೋಡ್ ಎಡಿಟರ್ ಮತ್ತು ವೆಬ್ ಬ್ರೌಸರ್‌ನ ಬಳಕೆಯ ಮೂಲಕ ಎಂಜಿನಿಯರಿಂಗ್ ಕಾರ್ಯಗಳನ್ನು ಪರಿಹರಿಸುತ್ತದೆ ಎಂದು ಉಲ್ಲೇಖಿಸಲಾಗಿದೆ.

ಪ್ರಪಂಚದ ಮೊದಲ ಎಐ ಸಾಫ್ಟ್‌ವೇರ್ ಎಂಜಿನಿಯರ್ ಡೆವಿನ್‌! ಏನೆಲ್ಲಾ ಕೆಲಸ ಮಾಡುತ್ತೆ?

ಇನ್ನು ಈ ಎಐ ಇಂಜಿನಿಯರ್‌ ಸಂಕೀರ್ಣ ಕಾರ್ಯಗಳನ್ನು ಮಾಡುವ ಸಾಮರ್ಥ್ಯ ಪಡೆದಿದ್ದು, ಇದು ಆರಂಭದಲ್ಲಿ ಮಾಡುವ ತಪ್ಪುಗಳಿಂದ ಮತ್ತೆ ಎಚ್ಚೆತ್ತುಕೊಳ್ಳಲಿದೆ. ಹಾಗೆಯೇ ಕಾಲಾನಂತರದಲ್ಲಿ ಉತ್ತಮಗೊಳ್ಳಬಹುದು ಎಂದು ಸಂಸ್ಥೆ ತಿಳಿಸಿದೆ. ಇದರ ಜೊತೆಗೆ ಮಾನವ ಇಂಜಿನಿಯರ್‌ಗೆ ಅಗತ್ಯವಿರುವ ಎಲ್ಲಾ ಡಿವೈಸ್‌ಗಳನ್ನು ಇದು ಹೊಂದಿದೆ. ಜೊತೆಗೆ ಡೆವಿನ್ ಅನ್ನು ಎಸ್ ಡಬ್ಲ್ಯೂ ಇ ಬೆಂಚ್ ಕೋಡಿಂಗ್ ಮಾನದಂಡದ ಆಧಾರದ ಮೇಲೆ ಸಾಫ್ಟ್‌ವೇರ್ ಎಂಜಿನಿಯರಿಂಗ್ ಕಾರ್ಯಗಳನ್ನು ಮೌಲ್ಯಮಾಪನ ಮಾಡಲು ಲಭ್ಯವಿರುವ ಅತ್ಯಾಧುನಿಕ ಪರಿಹಾರವೆಂದು ಪರಿಗಣಿಸಲಾಗಿದೆ.

ಉನ್ನತ ಕೃತಕ ಬುದ್ಧಿಮತ್ತೆ ಕಂಪನಿಗಳು ನಡೆಸಿದ ಪ್ರಾಯೋಗಿಕ ಎಂಜಿನಿಯರಿಂಗ್ ಸಂದರ್ಶನಗಳಲ್ಲಿ ಎಐ ಟೂಲ್ಸ್ ಉತ್ತಮವಾಗಿ ಕೆಲಸ ಮಾಡಿದೆ. ಈ ಸಂದರ್ಶನಗಳು ಎಐ ಮತ್ತು ಸಾಫ್ಟ್‌ವೇರ್ ಎಂಜಿನಿಯರಿಂಗ್ ಕ್ಷೇತ್ರಕ್ಕೆ ಸಂಬಂಧಿಸಿದ ಕಾರ್ಯಗಳು ಮತ್ತು ಸವಾಲುಗಳನ್ನು ಹೊಂದಿದ್ದು, ಅದರಂತೆ ಈ ಟೂಲ್ಸ್‌ ನಿರೀಕ್ಷೆಗಳನ್ನು ಪೂರೈಸುವಲ್ಲಿ ಯಶಸ್ವಿಯಾಗಿದೆ. ಆದರೆ, ಡೆವಿನ್ ಕೇವಲ ಏಕವ್ಯಕ್ತಿಯಾಗಿ ಕೆಲಸ ಮಾಡುವುದಿಲ್ಲ. ಮೊದಲೇ ತಿಳಿಸಿದಂತೆ ಮಾನವ ಇಂಜಿನಿಯರ್‌ಗಳೊಂದಿಗೆ ಕೈಜೋಡಿಸಲಿದೆ.

ಪ್ರಪಂಚದ ಮೊದಲ ಎಐ ಸಾಫ್ಟ್‌ವೇರ್ ಎಂಜಿನಿಯರ್ ಡೆವಿನ್‌! ಏನೆಲ್ಲಾ ಕೆಲಸ ಮಾಡುತ್ತೆ?

ಆದರೂ ಸಹ ಡೆವಿನ್ ನಿಖರವಾಗಿ ಕೆಲವು ಕೆಲಸಗಳನ್ನು ಮಾಡಲಿದೆ. ಅವುಗಳೆಂದರೆ ಹೊಸ ತಂತ್ರಜ್ಞಾನಗಳನ್ನು ಕಲಿಯುವುದು, ಆಪ್‌ಗಳ ನಿರ್ಮಾಣ ಮತ್ತು ನಿಯೋಜನೆ, ಕೋಡ್‌ನಲ್ಲಿನ ತೊಂದರೆಯ ದೋಷಗಳನ್ನು ಕಂಡುಹಿಡಿಯುವುದು ಮತ್ತು ಸರಿಪಡಿಸುವುದು ಸೇರಿದಂತೆ ಇತರೆ ಕೆಲಸಗಳನ್ನು ಮಾಡಲಿದೆ. ಜೊತೆಗೆ ಇದು ತನ್ನದೇ ಆದ ಎಐ ಮಾದರಿಗಳಿಗೆ ತರಬೇತಿ ನೀಡಲಿದೆ ಮತ್ತು ಯೋಜನೆಗಳಲ್ಲಿ ಸಮಸ್ಯೆಗಳನ್ನು ನಿಭಾಯಿಸಲಿದೆ.

ಇದನ್ನು ಈಗಾಗಲೇ ಅಪ್‌ವರ್ಕ್‌ನಂತಹ ಪ್ಲಾಟ್‌ಫಾರ್ಮ್‌ಗಳಲ್ಲಿ ಕೆಲಸ ಮಾಡಲು ಇರಿಸಲಾಗಿದೆ. ಅಲ್ಲಿ ಇದು ನೈಜ-ಪ್ರಪಂಚದ ಕೋಡಿಂಗ್ ಕಾರ್ಯಗಳನ್ನು ಸುಲಭವಾಗಿ ನಿಭಾಯಿಸುವ ಸಾಮರ್ಥ್ಯ ಪಡೆದಿದೆ. ಕಂಪ್ಯೂಟರ್ ದೃಷ್ಟಿ ಮಾದರಿಗಳನ್ನು ಡೀಬಗ್ ಮಾಡುವುದರಿಂದ ಹಿಡಿದು ವಿವರವಾದ ವರದಿಗಳನ್ನು ಕಂಪೈಲ್ ಮಾಡುವವರೆಗೆ ಕೆಲಸ ಮಾಡಲಿದೆ.

ಪ್ರಪಂಚದ ಮೊದಲ ಎಐ ಸಾಫ್ಟ್‌ವೇರ್ ಎಂಜಿನಿಯರ್ ಡೆವಿನ್‌! ಏನೆಲ್ಲಾ ಕೆಲಸ ಮಾಡುತ್ತೆ?

AI ತಂತ್ರಜ್ಞಾನದಲ್ಲಿ ಡೆವಿನ್ ಪ್ರಮುಖ ಪ್ರಗತಿಯನ್ನು ಪ್ರತಿನಿಧಿಸುತ್ತದೆ. ಎಲ್ಲಾ ರೀತಿಯ ಅಗತ್ಯ ಕೆಲಸಗಳನ್ನು ಸ್ವಯಂಚಾಲಿತಗೊಳಿಸುವ ಮೂಲಕ ಹೆಚ್ಚು ಸಂಕೀರ್ಣ ಸಮಸ್ಯೆಗಳ ಮೇಲೆ ಕೇಂದ್ರೀಕರಿಸಲು ಇಂಜಿನಿಯರ್‌ಗಳಿಗೆ ಅಧಿಕಾರ ನೀಡಲಿದೆ. ಅಲ್ಲದೆ ಇದು ಸಾಫ್ಟ್‌ವೇರ್ ಅಭಿವೃದ್ಧಿಯಲ್ಲಿ ನಾವೀನ್ಯತೆಯ ಹೊಸ ಯುಗಕ್ಕೆ ದಾರಿ ಮಾಡಿಕೊಟ್ಟಿದೆ.

Best Mobiles in India

English summary
The first AI software Engineer AI Tools has been announced. This engineer is capable of coding, creating websites and software through a single prompt.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+