Subscribe to Gizbot

ಮಾನಸಿಕ ಭಾವನೆಗಳನ್ನು ಹೇಳಲಿದೆ ಕಂಪ್ಯೂಟರ್‌ ಮೌಸ್‌

Written By:

ದಿನನಿತ್ಯ ಜೀವನದಲ್ಲಿ ಜನರು ಇತರರ ಮುಖಗಳನ್ನು ನೋಡಿ ಸಂತೋಷವಾಗಿರುವ ಬಗ್ಗೆ, ಅಥವಾ ಕೋಪಗೊಂಡ ಬಗ್ಗೆ, ಎನಾದರೂ ಒಂದು ಕಮೆಂಟ್‌ ನೀಡುತ್ತಿರುತ್ತಾರೆ. ಆದರೆ ಅವರೆಲ್ಲಾ ಮುಖದಲ್ಲಾದ ಬದಲಾವಣೆ, ನೆಡೆದುಕೊಳ್ಳುವ ರೀತಿ ನೋಡಿ ಇತರರ ಮನಸ್ಸಿನ ಸ್ಥಿತಿಗಳ ಬಗ್ಗೆ ಭವಿಷ್ಯ ನುಡಿಯುತ್ತಾರೆ. ತಂತ್ರಜ್ಞಾನದ ಬಳಕೆಗೆ ಮನುಷ್ಯ ಅಧಿಕೃತವಾಗಿ ಕಾಲಿಟ್ಟ ನಂತರದಲ್ಲಿ ಈಗ ಕಂಪ್ಯೂಟರ್‌ನ ಮೌಸ್‌ಗಳು ಸಹ ಮನುಷ್ಯ ಕೋಪದಲ್ಲಿರುವನೋ ಅಥವಾ ನಿರಾಶೆಗೊಂಡಿದ್ದಾನೋ ಎಂಬ ಭವಿಷ್ಯ ನೀಡುತ್ತದಂತೆ. ಹಾಗಾದರೆ ಅದು ಹೇಗೆ ಎಂಬ ಮಾಹಿತಿಯನ್ನು ಈ ಲೇಖನ ಓದಿ ತಿಳಿಯಿರಿ.

ಓದಿರಿ:ಆವಿಷ್ಕಾರದಲ್ಲೇ ಅರ್ಧಕ್ಕೆ ನಿಂತ ಸಿಕ್ರೇಟ್ ಟೆಕ್‌ ವೆಪನ್‌ಗಳು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕಂಪ್ಯೂಟರ್‌ನ ಮೌಸ್‌ ಭವಿಷ್ಯ ನುಡಿಯುತ್ತದೆ

ಕಂಪ್ಯೂಟರ್‌ನ ಮೌಸ್‌ ಭವಿಷ್ಯ ನುಡಿಯುತ್ತದೆ

ಬ್ರಿಘಾಮ್‌ ಯಂಗ್ ವಿಶ್ವವಿದ್ಯಾನಿಲಯದ ಜೆಫ್ಫೆರಿ ಜೆಂಕಿನ್ಸ್‌ ಎಂಬ ಪ್ರೊಫೆಸರ್ ಒಬ್ಬರು ಕಂಪ್ಯೂಟರ್‌ನ ಮೌಸ್‌ ಅನ್ನು ಕಡಿಮೆ ಮತ್ತು ನಿಖರ ವೇಗದಲ್ಲಿ ಚಲಿಸುವ ಆಧಾರದಿಂದ ಜನರ ನಕರಾತ್ಮಕ ಭಾವನೆಗಳಾದ ನಿರಾಶೆ, ದುಃಖ, ಗೊಂದಲ ಮುಂತಾದ ವರ್ತನೆಯನ್ನು ಭವಿಷ್ಯ ನುಡಿಯುವ ಬಗ್ಗೆ ಅನುಭವ ಪಡೆದಿದ್ದಾರೆ.

ಹೊಸ ಟೆಕ್ನಾಲಜಿ

ಹೊಸ ಟೆಕ್ನಾಲಜಿ

ಜೆಫ್ಫರಿಯವರ ಈ ಹೊಸ ಟೆಕ್ನಾಲಜಿಯ ವೆಬ್‌ಸೈಟ್‌ ನೀವು ನೀಡುವ ಮಾಹಿತಿಯನ್ನು ಮಾತ್ರವಲ್ಲದೇ ನಿಮ್ಮ ಬಗ್ಗೆಯೂ ಅನುಭವ ಪಡೆಯಲಿದ್ದು, ನೀವು ವೆಬ್‌ಸೈಟ್‌ಗೆ ನೀಡುವ ಮಾಹಿತಿಯನ್ನು ಅರ್ಥಮಾಡಿಕೊಳ್ಳುವ ಜೊತೆಗೆ ನಿಮ್ಮ ಮಾನಸಿಕ ಸ್ಥಿತಿಯನ್ನು ಅರ್ಥಮಾಡಿಕೊಳ್ಳುತ್ತದೆ ಎಂದು ಜೆಫ್ಫರಿ ವಿವರಿಸಿದ್ದಾರೆ.

 ಸಂಶೋಧನೆ

ಸಂಶೋಧನೆ

ಸಂಶೋಧನೆ ಪ್ರಕಾರ, ಬಳಕೆದಾರರು ನಿರಾಶೆಗೊಂಡಿದ್ದಾಗ ಅಥವಾ ಗೊಂದಲಕ್ಕೆ ಒಳಗಾದಲ್ಲಿ ಮೌಸ್‌ ಮುಂದೆ ಬಳಕೆದಾರನನ್ನು ಹಿಂಬಾಲಿಸುವುದಿಲ್ಲವಂತೆ.

ದುಃಖದಲ್ಲಿ ಮೌಸ್‌ ಚಲನೆ ನಿಧಾನ

ದುಃಖದಲ್ಲಿ ಮೌಸ್‌ ಚಲನೆ ನಿಧಾನ

ದುಃಖದಲ್ಲಿ ಮೌಸ್ ಚಲನೆ ಒಮ್ಮೆಯೇ ನಿಲ್ಲುವುದು ಅಥವಾ ನಿಧಾನವಾಗುವುದು ಎಂದು ಸಂಶೋಧನೆಯ ಪ್ರಕಾರ ಹೇಳಲಾಗಿದೆ.

ಪ್ರಖ್ಯಾತ ಅಪ್ಲಿಕೇಶನ್‌ ಕಾರ್ಯನಿರ್ವಹಿಸುವುದು ಹೇಗೆ ?

ಪ್ರಖ್ಯಾತ ಅಪ್ಲಿಕೇಶನ್‌ ಕಾರ್ಯನಿರ್ವಹಿಸುವುದು ಹೇಗೆ ?

ಈ ಅಪ್ಲಿಕೇಶನ್‌ನ ವೆಬ್‌ಸೈಟ್‌ನಲ್ಲಿ ವೆಬ್‌ ಅಭಿವೃದ್ದಿಕಾರರು ನೊಂದುಕೊಳ್ಳುವ ಮಾಹಿತಿಯನ್ನು ಸೇರ್ಪಡಿಸಲಿದ್ದು, ಅದು ನಕರಾತ್ಮಕ ಮನೋಭಾವನೆಗಳನ್ನು ಹೊರತರಲಿದೆ.

 ಆನ್‌ಲೈನ್‌ ಟಿಕೆಟ್‌

ಆನ್‌ಲೈನ್‌ ಟಿಕೆಟ್‌

ಪ್ರಸ್ತುತ ದಿನಗಳಲ್ಲಿ ಜನರು ಆನ್‌ಲೈನ್‌ ಟಿಕೆಟ್‌ಗಾಗಿ ವೆಬ್‌ಸೈಟ್ ಮೋರೆ ಹೋಗುತ್ತಾರೆ. ಅವರೆಲ್ಲಾ ಒಂದು ರೀತಿ ಕ್ರೇಜಿ ರೀತಿಯಲ್ಲಿ ಹಾಗು ಕಿರಿಚುವ ರೀತಿಯಲ್ಲಿ ಕೈಗಳನ್ನು ಬಳಸುತ್ತಾರೆ ಎಂದು ಹೇಳಲಾಗಿದೆ.

 ಮೊಬೈಲ್‌ ಡಿವೈಸ್‌ಗು ಕರ್ಸರ್‌ ಟ್ರ್ಯಾಕಿಂಗ್‌

ಮೊಬೈಲ್‌ ಡಿವೈಸ್‌ಗು ಕರ್ಸರ್‌ ಟ್ರ್ಯಾಕಿಂಗ್‌

ಮೊಬೈಲ್‌ ಡಿವೈಸ್‌ಗಳಿಗೂ ಸಹ ಕರ್ಸರ್‌ ಟ್ರ್ಯಾಕಿಂಗ್‌ ಪರಿಕಲ್ಪನೆಯನ್ನು ಸ್ವೈಪ್‌ ಮತ್ತು ಟ್ಯಾಪ್‌ಗಳ ಚಟುವಟಿಕೆಯಲ್ಲಿ ಅಳವಡಿಸಬಹುದಾಗಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Computer Mouse Can Reveal If You Are Angry. Read more for technology tips and tricks in kannada Gizbot.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot