'ಜಿ ಸೂಟ್‌'ನಲ್ಲೂ ಬರುತ್ತಿದೆ ಗೂಗಲ್‌ನ ಜನಪ್ರಿಯ ಗೌಪ್ಯ ಮೋಡ್!

|

ಇದೇ ಜೂನ್ 25 ರಿಂದ ಗೂಗಲ್ 'ಜಿ ಸೂಟ್‌' ಕೂಡ ಕಾನ್ಫಿಡೆನ್ಷಿಯಲ್ ಮೋಡ್‌ (ಗೌಪ್ಯ ಮೋಡ್) ಅನ್ನು ಪಡೆದುಕೊಳ್ಳಲಿದೆ ಎಂದು ಗೂಗಲ್ ಕಂಪೆನಿ ತಿಳಿಸಿದೆ. ಗೂಗಲ್ ತನ್ನ ಅಧಿಕೃತ ಬ್ಲಾಗ್‌ನಲ್ಲಿ ಈ ಬಗ್ಗೆ ಬರೆದುಕೊಂಡಿದ್ದು, ಕಳೆದ ವರ್ಷ ಗೂಗಲ್‌ ಜಿಮೇಲ್‌ನಲ್ಲಿ ಪರಿಚಯಗೊಂಡಿದ್ದ ಕಾನ್ಫಿಡೆನ್ಷಿಯಲ್ ಮೋಡ್‌ ಇದೀಗ ಕಂಪನಿಯು 'ಜಿ ಸೂಟ್‌'ಗೂ ವಿಸ್ತರಣೆಯಾಗುತ್ತಿದೆ.

ಈ ಕಾನ್ಫಿಡೆನ್ಷಿಯಲ್ ಮೋಡ್‌ ಅಥವಾ ಗೌಪ್ಯ ಮೋಡ್ ಪ್ರಬಲವಾದ ಫೀಚರ್ ಆಗಿದ್ದು, ಸೂಕ್ಷ್ಮ ವಿವರಗಳನ್ನು ಒಳಗೊಂಡಿರುವ ಸಂದೇಶಗಳನ್ನು ನೀವು ಕಳುಹಿಸಲು ಸಹಾಯಕವಾಗುತ್ತದೆ. ಒಂದು ವೇಳೆ ಇ ಮೇಲ್‌ ಏನಾದರೂ ಹ್ಯಾಕ್ ಆದರೆ, ಅದರ ಸಂಪುರ್ಣ ಮಾಹಿತಿಯನ್ನು ಇದು ಸಂರಕ್ಷಿಸುತ್ತದೆ. ಇಷ್ಟು ಮಾತ್ರವಲ್ಲದೇ ಹಲವು ವಿಶೇಷ ಫೀಚರ್ಸ್‌ಗಳು ಅತ್ಯುತ್ತಮವಾಗಿವೆ.

'ಜಿ ಸೂಟ್‌'ನಲ್ಲೂ ಬರುತ್ತಿದೆ ಗೂಗಲ್‌ನ ಜನಪ್ರಿಯ ಗೌಪ್ಯ ಮೋಡ್!

ಅವುಗಳಲ್ಲಿ ಮುಖ್ಯವಾಗಿ, ಇಮೇಲ್‌ಗಳನ್ನು ವರ್ಗಿಕೃತವಾಗಿ ವಿಂಗಡಿಸಲು, ನಿಮ್ಮ ಸಂದೇಶದ ಮುಕ್ತಾಯ ದಿನಾಂಕವನ್ನು ಹೊಂದಿಸಲು, ಇ ಮೇಲೆ ಪ್ರವೇಶವನ್ನು ಕಡಿತಗೊಳಿಸಲು, ಸಂದೇಶ ಸ್ವೀಕರಿಸುವವರು ಸಂದೇಶಗಳನ್ನು ಇತರರಿಗೆ ರವಾನಿಸಲು ಸಾಧ್ಯವಾದಂತೆ ಮಾಡಲು ಮತ್ತು ಇಮೇಲ್‌ಗಳನ್ನು ವರ್ಗಿಕೃತವಾಗಿ ವಿಂಗಡಿಸಲು ನೆರವಾಗುವಂತಹ ಫೀಚರ್ಸ್ ಇದರಲ್ಲಿವೆ.

ನಿಮ್ಮ ಇ ಮೇಲ್‌ ಸುರಕ್ಷತೆಯ ದೃಷ್ಟಿಯಿಂದಲೂ ಈ ಮೋಡ್‌ ಹೆಚ್ಚು ಉಪಯೋಗಕಾರಿಯಾಗಿದೆ. ಒಂದು ವೇಳೆ ಇ ಮೇಲ್‌ ಏನಾದರೂ ಹ್ಯಾಕ್ ಆದರೆ ಮಾಹಿತಿಯನ್ನು ಇದು ಸಂರಕ್ಷಿಸುತ್ತದೆ. ಇದು ನಿಮ್ಮ ಮೇಲ್‌ಗಳಲ್ಲಿ ಅಂತರ್‌ ನಿರ್ಮಿತ ಮಾಹಿತಿ ನಿರ್ವಹಣೆಯನ್ನು ಮಾಡುತ್ತದೆ. ಜತೆಗೆ ಇ ಮೇಲ್‌ಗಳನ್ನು ಎಕ್ಸಾಪೈರೇಷನ್ ಡೇಟ್‌ ಅಳವಡಿಸಲು ಸಹ ಅವಕಾಶವನ್ನು ಕಲ್ಪಿಸುತ್ತದೆ.

'ಜಿ ಸೂಟ್‌'ನಲ್ಲೂ ಬರುತ್ತಿದೆ ಗೂಗಲ್‌ನ ಜನಪ್ರಿಯ ಗೌಪ್ಯ ಮೋಡ್!

ಎಲ್ಲದಕ್ಕಿಂತ ಹೆಚ್ಚಾಗಿ ಈ ಕಾನ್ಫಿಡೆನ್ಷಿಯಲ್‌ ಮೋಡ್‌ನೊಂದಿಗೆ ಇ ಮೇಲ್‌ ಸ್ವೀಕರಿಸುವವರಿಗೆ ಅದನ್ನು ಫಾರ್ವರ್ಡ್‌, ಕಾಪಿ, ಪ್ರಿಂಟ್‌ ಅಥವಾ ಡೌನ್‌ಲೋಡ್‌ ಮಾಡುವ ಯಾವುದೇ ಅವಕಾಶವನ್ನು ಇದು ನಿರಾಕರಿಸುತ್ತದೆ. ಇದರಿಂದಾಗಿ ಜಿಮೇಲ್‌ನಲ್ಲಿ ಜನಪ್ರಿಯವಾಗಿದ್ದ ಕಾನ್ಫಿಡೆನ್ಷಿಯಲ್ ಮೋಡ್‌ ಇದೀಗ ಈ ಫೀಚರ್ 'ಜಿ ಸೂಟ್‌'ಗೂ ವಿಸ್ತರಣೆಯಾಗಿ ಗಮನಸೆಳೆದಿದೆ.

ಓದಿರಿ: 'ಮಾಡರ್ನ್ ಮಗು' ಮೊದಲು ಮಾತನಾಡಿದ ಪದ ಕೇಳಿ ಒಂದು ಕ್ಷಣ ಬೆಚ್ಚಿಬಿದ್ದ ಪೋಷಕರು!!

Best Mobiles in India

English summary
Gmail’s confidential mode will be on by default for G Suite users starting June 25th. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X