Home
ಸುದ್ದಿಜಾಲ

'ಮಾಡರ್ನ್ ಮಗು' ಮೊದಲು ಮಾತನಾಡಿದ ಪದ ಕೇಳಿ ಒಂದು ಕ್ಷಣ ಬೆಚ್ಚಿಬಿದ್ದ ಪೋಷಕರು!!

ಮಗು ಮೊದಲು ಮಾತನಾಡುವ ಪದ ಅಮ್ಮ ಎಂಬುದು ಲೋಕರೂಢಿ. ಆ ಕಾರಣದಿಂದಲೇ ತಾಯಿಗೆ ಅಮ್ಮ ಎಂದು ಎಲ್ಲಾ ಭಾಷೆಗಳಲ್ಲೂ ಸ್ಥಾನವಿದೆ. ಆದರೆ, ಈ ತಂತ್ರಜ್ಞಾನ ಪ್ರಪಂಚ ಅಂತಹದೊಂದು ಲೋಕರೂಢಿಯನ್ನೇ ಸುಳ್ಳಾಗಿಸಿದೆ. ಮಗು ಮೊದಲ ಬಾರಿ ಮಾತನಾಡುವಾಗ ಅಪ್ಪನ ಹೆಸರು ಹೇಳುತ್ತೋ ಅಮ್ಮನ ಹೆಸರು ಹೇಳುತ್ತೋ ಎಂದು ಕಾಯುತ್ತಿದ್ದ ಪೋಷಕರು ಒಂದು ಕ್ಷಣ ಬೆಚ್ಚಿಬಿದ್ದಿರುವ ಘಟನೆ ಇತ್ತೀಚಿಗೆ ಇಂಗ್ಲೇಂಡ್‌ನಲ್ಲಿ ನಡೆದಿದೆ.

ಹೌದು, ಮಗು ಮೊದಲ ಬಾರಿ ಮಾತನಾಡುವಾಗ ಅಪ್ಪನ ಹೆಸರು ಹೇಳುತ್ತೋ ಅಮ್ಮನ ಹೆಸರು ಹೇಳುತ್ತೋ ಎಂದು ಕಾಯುತ್ತಿದ್ದ ಪೋಷಕರಿಗೆ 11 ತಿಂಗಳ ಮಗಳು ಆಡಿದ ಮೊದಲ ಮಾತು ತಲೆತಿರುಗುವಂತೆ ಮಾಡಿದೆ. ಯುನೈಟೆಡ್‌ ಕಿಂಗ್‌ಡಮ್ ಡಾರ್ಸೆಟ್‌ನ ಬ್ಲಾಂಡ್‌ಫೋರ್ಡ್ ಫೋರಂ ಮೂಲದ ಕುಟುಂಬವೊಂದರಲ್ಲಿ ಜನಿಸಿರುವ ಮಗು ಅಮ್ಮ ಎನ್ನುವುದಕ್ಕಿಂತ ಮುಂಚೆಯೇ 'ಅಲೆಕ್ಸಾ' ಎಂದು ಪದೇ ಪದೇ ಹೇಳಿದೆ ಎಂಬ ಸುದ್ದಿ ಇದೀಗ ವೈರಲ್ ಆಗಿದೆ.

'ಮಾಡರ್ನ್ ಮಗು' ಮೊದಲು ಮಾತನಾಡಿದ ಪದ ಕೇಳಿ ಒಂದು ಕ್ಷಣ ಬೆಚ್ಚಿಬಿದ್ದ ಪೋಷಕರು!!

ತನ್ನ ಮಗು ನಿದ್ದೆಯಿಂದ ಎದ್ದ ಕೂಡಲೇ ಅಲೆಕ್ಸಾ ಎಂದು ಕೂಗಿಕೊಳ್ಳುತ್ತಾಳೆ ಎಂದು ಆ ಮುಗುವಿನ ಪೋಷಕರು ಮಾಧ್ಯಮಗಳಿಗೆ ತಿಳಿಸಿದ್ದು, ಮಗು ಮಮ್ಮಿ ಎನ್ನುತ್ತೋ ಡ್ಯಾಡಿ ಎನ್ನುತ್ತೋ ಎಂದು ನಾವು ಜಗಳವಾಡಿಕೊಳ್ಳುತ್ತಿದ್ದೆವು. ಆದರೆ, ನಮ್ಮ ಮಗು ಸಂಪೂರ್ಣವಾಗಿ ವಿಭಿನ್ನ ಮಾರ್ಗದಲ್ಲಿ ಹೋಗಿದೆ ಎಂದು ಆ ಹೆಣ್ಣುಮಗುವಿನ ತಂದೆ ಲಿಯಾಮ್ ಹೇಳಿದ್ದಾರೆ. ಇನ್ನು ಇದನ್ನು ಅರಗಿಸಿಕೊಳ್ಳಲು ಸಾಧ್ಯವಾಗ ಕೇತಾಯಿ ಕ್ಯಾಥರೀನ್ ಶಾಕ್‌ ಆಗಿದ್ದಾರೆ.

ಅಲೆಕ್ಸಾ ಎಂಬ ಪದ ಅನ್ನಬೆಲ್ಲಾಗೆ ( 'ಅಲೆಕ್ಸಾ'ಎಂದು ಹೇಳುತ್ತಿರುವ ಮಗು) ಗೀಳಿನಂತೆ ಆಗಿದ್ದು ಅದನ್ನು ಪದೇ ಪದೇ ಹೇಳುತ್ತಿರುತ್ತಾಳೆ. 11 ತಿಂಗಳ ಮಗಳು ಆಡಿದ ಮೊದಲ ಮಾತು ಕೂಡ ಅದೇ ಆಗಿದೆ. ಈಗೀಗ ನಿದ್ದೆಯಿಂದ ಎದ್ದ ಕೂಡಲೇ ಅಲೆಕ್ಸಾ ಎಂದು ಕೂಗಿಕೊಳ್ಳುತ್ತಾಳೆ. ಇದರಿಂದ ನಮಗೆ ಆಕೆ ಎಚ್ಚರವಾಗಿರುವುದು ಗೊತ್ತಾಗುತ್ತದೆ. ಆದರೆ, ಅಪ್ಪನ ಹೆಸರು ಹೇಳದೇ, ಅಮ್ಮನ ಹೆಸರು ಹೇಳದೇ ಇರುವುದು ಆಶ್ಚರ್ಯ ಎಂದು ಅವರು ಹೇಳಿದ್ದಾರೆ.

'ಮಾಡರ್ನ್ ಮಗು' ಮೊದಲು ಮಾತನಾಡಿದ ಪದ ಕೇಳಿ ಒಂದು ಕ್ಷಣ ಬೆಚ್ಚಿಬಿದ್ದ ಪೋಷಕರು!!

ಇತ್ತೀಚಿಗೆ ಹೋಮ್ ವಾಯಿಸ್ ಹೋಮ್ ಅಸಿಸ್ಟೆಂಟ್ ಸಾಧನಗಳ ಬಳಕೆ ಹೆಚ್ಚಾಗುತ್ತಿದೆ. ವಾಯ್ಸ್ ಮೂಲಕವೇ ಹಲವು ಕಾರ್ಯಗಳನ್ನು ಮಾಡಬಹುದಾದ ಈ ಹೋಮ್ ಅಸಿಸ್ಟೆಂಟ್ ಸಾಧನಗಳಲ್ಲಿ ಅಮೆಜಾನ್ ಕಂಪೆನಿಯ 'ಅಲೆಕ್ಸಾ' ಮೊದಲ ಸ್ಥಾನದಲ್ಲಿದೆ. ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಹೆಚ್ಚು ಹೋಮ್ ಅಸಿಸ್ಟೆಂಟ್ ಸಾಧನಗಳನ್ನು ಬಳಸುತ್ತಿರುವಂತೆಯೇ ಈ ಮಗುವಿನ ಮನೆಯಲ್ಲೂ ಅಲೆಕ್ಸಾವನ್ನು ಬಳಸಲಾಗಿತ್ತು. ಅದರಿಂದಾಗಿಯೇ ಈ ಎಡವಟ್ಟು ನಡೆದಿದೆ.

ಓದಿರಿ: ಚೀನಾದ ಈ​​​​ ಜೈಲಿನಲ್ಲಿ ಮಾತ್ರ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ!!

Best Mobiles in India

English summary
Modern-day baby' shocks parents with her first word Alexa ... the fact that whether your child's first word would be 'Maa' or 'Papa'? ... Annabelle's mother, Catherine even got herhusband Liam to see the girl say her first words. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+