Home
ಸುದ್ದಿಜಾಲ

Wi-Fi adapter: ಕನ್ಸಿಸ್ಟನ್ಟ್ ಇನ್ಫೋಸಿಸ್ಟಮ್ಸ್ ಮಿನಿ ವೈ-ಫೈ ಯುಎಸ್‌ಬಿ ಅಡಾಪ್ಟರ್ ಲಾಂಚ್‌: ಫೀಚರ್ಸ್‌ ಏನು? ಬೆಲೆ ಎಷ್ಟು?

ವೈ-ಫೈ ಅಡಾಪ್ಟರ್ (Wi-Fi adapter) ನಿಮ್ಮ ವೈರ್ಡ್ ಡಿವೈಸ್‌ನಲ್ಲಿ ವೈ-ಫೈ ಸಿಗ್ನಲ್‌ಗಳನ್ನು ತೆಗೆದುಕೊಳ್ಳಲು ಅನುಮತಿಸುವ ಕೆಲಸ ಮಾಡುತ್ತದೆ. ಅದರಂತೆ ವಿವಿಧ ಟೆಕ್‌ ಕಂಪೆನಿಗಳು ಸುಧಾರಿತ ಫೀಚರ್ಸ್‌ ಆಯ್ಕೆಯೊಂದಿಗೆ ಹೊಸ ವೈ-ಫೈ ಅಡಾಪ್ಟರ್ ಅನ್ನು ಅನಾವರಣ ಮಾಡುತ್ತಿದ್ದು, ಈ ನಡುವೆ ಕನ್ಸಿಸ್ಟನ್ಟ್ ಇನ್ಫೋಸಿಸ್ಟಮ್ಸ್ ಮಿನಿ ವೈ-ಫೈ ಯುಎಸ್‌ಬಿ ಅಡಾಪ್ಟರ್ ಅನ್ನು ಲಾಂಚ್‌ ಮಾಡಿದೆ.

ಹೌದು, ಕನ್ಸಿಸ್ಟನ್ಟ್ ಇನ್ಫೋಸಿಸ್ಟಮ್ಸ್ ವಿವಿಧ ಉದ್ದೇಶಗಳಿಗಾಗಿ ಬಳಕೆ ಮಾಡಿಕೊಳ್ಳಬಹುದಾದ ಮಿನಿ ವೈ-ಫೈ ಯುಎಸ್‌ಬಿ ಅಡಾಪ್ಟರ್ (Consistent Wi-Fi USB Adapter) ಅನ್ನು ಲಾಂಚ್ ಮಾಡಿದೆ. ಈ ಡಿವೈಸ್‌ ಚಿಕ್ಕದಾಗಿದ್ದರು ಇದರ ಸಾಮರ್ಥ್ಯ ಬೆಟ್ಟದಷ್ಟಿದೆ. ಹಾಗೆಯೇ ಈ ಪೋರ್ಟಬಲ್ ಡಿವೈಸ್‌ ಯುಎಸ್‌ಬಿ ಶೈಲಿಯ ಫಾರ್ಮ್ ಫ್ಯಾಕ್ಟರ್ ಅನ್ನು ಹೊಂದಿದ್ದು ಎಲ್ಲಾ ಡಿವೈಸ್‌ಗಳಿಗೆ ಸುಲಭವಾಗಿ ಕನೆಕ್ಟ್‌ ಆಗುತ್ತದೆ. ಹಾಗಿದ್ರೆ, ಈ ಡಿವೈಸ್‌ನ ಪ್ರಮುಖ ಫೀಚರ್ಸ್‌ ಹಾಗೂ ಬೆಲೆ ಎಷ್ಟು ಅನ್ನೋದನ್ನು ತಿಳಿಸಿಕೊಡಲಾಗಿದೆ ಓದಿರಿ.

ಕನ್ಸಿಸ್ಟನ್ಟ್ ಇನ್ಫೋಸಿಸ್ಟಮ್ಸ್ ಮಿನಿ ವೈ-ಫೈ ಯುಎಸ್‌ಬಿ ಅಡಾಪ್ಟರ್ ಲಾಂಚ್‌!

ಮಿನಿ ವೈ-ಫೈ ಯುಎಸ್‌ಬಿ ಅಡಾಪ್ಟರ್: ಈ ಪೋರ್ಟಬಲ್ ಡಿವೈಸ್‌ ಎಲ್ಲಾ ಡಿವೈಸ್‌ಗಳಿಗೆ ಸುಲಭವಾಗಿ ಸಂಪರ್ಕ ಕಲ್ಪಿಸಿಕೊಡಲಿದ್ದು, 150 Mbps ಮತ್ತು 300 Mbps ವೇಗವನ್ನು ಬೆಂಬಲಿಸುತ್ತದೆ. ಇದರೊಂದಿಗೆ ಸ್ಥಳೀಯ ಇಂಟರ್ನೆಟ್‌ಗೆ ಸೀಮಿತವಾಗಿರುವ ದೂರದ ಪ್ರದೇಶಗಳಲ್ಲಿ ವಾಸಿಸುವ ಅಥವಾ ಕೆಲಸ ಮಾಡುವವರಿಗೆ ಅದರಲ್ಲೂ ಆಗಾಗ್ಗೆ ಪ್ರಯಾಣಿಸುವವರಿಗೆ ಇದು ತುಂಬಾ ಪ್ರಯೋಜನಕಾರಿಯಾಗಿದೆ.

ಕನ್ಸಿಸ್ಟನ್ಟ್ ವೈ-ಫೈ ಯುಎಸ್‌ಬಿ ಅಡಾಪ್ಟರ್ ಬಹುಮುಖಿಯಾಗಿದೆ. ಇದು ಎರಡನೇ ತಲೆಮಾರಿನ ಹೈ-ಸ್ಪೀಡ್ ಮೋಡ್‌ನೊಂದಿಗೆ ಕಾಣಿಸಿಕೊಂಡಿದೆ. ಜೊತೆಗೆ ವಿಡಿಯೋ ಸ್ಟ್ರೀಮಿಂಗ್ ಮತ್ತು ಪ್ರಯಾಣದಲ್ಲಿರುವಾಗ ಇಂಟರ್ನೆಟ್ ಕರೆಗಳಿಗೆ ಯೋಗ್ಯವಾದ ಆಯ್ಕೆಯಾಗಿದೆ ಎಂದರೆ ತಪ್ಪಾಗಲಾರದು. ಇದರ ಮಿನಿಯೇಚರ್ ವಿನ್ಯಾಸದಿಂದ ಸುಲಭವಾಗಿ ಡೆಸ್ಕ್‌ಟಾಪ್ ಅಥವಾ ಲ್ಯಾಪ್‌ಟಾಪ್‌ಗೆ ಸಂಪರ್ಕಿಸಬಹುದು.

ಕನ್ಸಿಸ್ಟನ್ಟ್ ಇನ್ಫೋಸಿಸ್ಟಮ್ಸ್ ಮಿನಿ ವೈ-ಫೈ ಯುಎಸ್‌ಬಿ ಅಡಾಪ್ಟರ್ ಲಾಂಚ್‌!

ಇದರೊಂದಿಗೆ ಅದನ್ನು ತೆಗೆದುಹಾಕುವ ಬದಲು ಅದನ್ನು ಅಲ್ಲಿಯೇ ಬಿಡಬಹುದು. ನೀವು ಡೆಸ್ಕ್‌ಟಾಪ್ ಕಂಪ್ಯೂಟರ್ ಹೊಂದಿದ್ದರೆ, ನೀವು ಅದನ್ನು ವೈರ್‌ಲೆಸ್ ಆಗಿ ನೆಟ್‌ವರ್ಕ್‌ಗೆ ಈ ಮೂಲಕ ಸಂಪರ್ಕಿಸಬಹುದು. ವೈ-ಫೈ ಅಡಾಪ್ಟರ್ ನಿಮ್ಮ ಲ್ಯಾಪ್‌ಟಾಪ್‌ಗೆ ಹಾರ್ಡ್‌ವೇರ್ ಅಪ್‌ಗ್ರೇಡ್ ಆಗಿ ಕಾರ್ಯನಿರ್ವಹಿಸುತ್ತದೆ. ಜೊತೆಗೆ ಇತ್ತೀಚಿನ ವೈ-ಫೈ ಪೀಳಿಗೆಗೆ ನವೀಕರಿಸಲಿದ್ದು, ಈ ಮೂಲಕ ಉತ್ತಮ ಸ್ಟ್ರೀಮಿಂಗ್‌ ಅನುಭವವನ್ನು ಪಡೆದುಕೊಳ್ಳಬಹುದಾಗಿದೆ.

ವೈಫೈ ಅಡಾಪ್ಟರ್ ಅನ್ನು ಬಳಸುವುದು ನಿಮ್ಮ ವೈ-ಫೈ ಸಿಗ್ನಲ್ ಅನ್ನು ಹೆಚ್ಚಿಸಲು ಇರುವ ಸುಲಭವಾದ ಮಾರ್ಗವಾಗಿದೆ. ವಿಶೇಷವಾಗಿ ನೀವು ಹಳೆಯ ಕಂಪ್ಯೂಟರ್ ಹೊಂದಿದ್ದರೆ. ವೈ-ಫೈ ಅಡಾಪ್ಟರ್‌ನೊಂದಿಗೆ ನಿಮ್ಮ ವೈ-ಫೈ ವೇಗವನ್ನು ಬಹಳ ಪಟ್ಟು ಹೆಚ್ಚು ಮಾಡಿಕೊಳ್ಳಬಹುದು ಮತ್ತು ಈ ವ್ಯವಸ್ಥೆ ನಿಮ್ಮ ಕಂಪ್ಯೂಟರ್‌ಗೆ ಎರಡೂ ಆವರ್ತನ ಬ್ಯಾಂಡ್‌ಗಳನ್ನು ಬಳಸುವ ಸಾಮರ್ಥ್ಯವನ್ನು ನೀಡುತ್ತದೆ.

ಕನ್ಸಿಸ್ಟೆಂಟ್ ಇನ್ಫೋಸಿಸ್ಟಮ್ಸ್ ಪ್ರೈ. ಲಿಮಿಟೆಡ್ ನ ಸಿಇಒ ಮತ್ತು ಸಹ-ಸಂಸ್ಥಾಪಕ ಯೋಗೇಶ್ ಅಗರವಾಲ್ ಈ ಬಗ್ಗೆ ಮಾಹಿತಿ ನೀಡಿದ್ದು, ಮುಂಬರುವ ದಿನಗಳಲ್ಲಿ, ಬ್ರ್ಯಾಂಡ್ ತನ್ನ ಉತ್ಪನ್ನದ ಪೋರ್ಟ್‌ಫೋಲಿಯೊವನ್ನು ವಿಸ್ತರಿಸಲು ಹೊಸ ಶ್ರೇಣಿಯ ಗೇಮಿಂಗ್ ಕೀಬೋರ್ಡ್‌ಗಳು ಮತ್ತು ಮೌಸ್‌ಗಳನ್ನು ಲಾಂಚ್‌ ಮಾಡಲಿದೆ. ಹೊಸದಾಗಿ ಪ್ರಾರಂಭಿಸಲಾದ ಯುಎಸ್‌ಬಿ ಅಡಾಪ್ಟರ್‌ಗಳು ವರ್ಧಿತ ಗುಣಮಟ್ಟದೊಂದಿಗೆ ಅತ್ಯಾಧುನಿಕ ನವೀನ ಉತ್ಪನ್ನಗಳನ್ನು ತಲುಪಿಸುವ ನಮ್ಮ ಉದ್ದೇಶವನ್ನು ಪ್ರದರ್ಶಿಸುತ್ತವೆ ಎಂದಿದ್ದಾರೆ.

ಕನ್ಸಿಸ್ಟನ್ಟ್ ಇನ್ಫೋಸಿಸ್ಟಮ್ಸ್ ಮಿನಿ ವೈ-ಫೈ ಯುಎಸ್‌ಬಿ ಅಡಾಪ್ಟರ್ ಲಾಂಚ್‌!

ಕನ್ಸಿಸ್ಟನ್ಟ್ ಇನ್ಫೋಸಿಸ್ಟಮ್ಸ್ ಮಿನಿ ವೈ-ಫೈ ಯುಎಸ್‌ಬಿ ಅಡಾಪ್ಟರ್ ಬೆಲೆ ಎಷ್ಟು?: ಇದು ಎರಡು ವೇರಿಯಂಟ್‌ನಲ್ಲಿ ಲಭ್ಯ ಇದೆ. ಅಂದರೆ ಕನ್ಸಿಸ್ಟನ್ಟ್ ಇನ್ಫೋಸಿಸ್ಟಮ್ಸ್ ಮಿನಿ ವೈ-ಫೈ ಯುಎಸ್‌ಬಿ ಅಡಾಪ್ಟರ್ 150 Mbps ಗೆ 499 ರೂ., ಹಾಗೂ ಕನ್ಸಿಸ್ಟನ್ಟ್ ಇನ್ಫೋಸಿಸ್ಟಮ್ಸ್ ಮಿನಿ ವೈ-ಫೈ ಯುಎಸ್‌ಬಿ ಅಡಾಪ್ಟರ್ 300 Mbps ಬೆಲೆ 999 ರೂ. ಆಗಿದೆ. ಎರಡೂ ಡಿವೈಸ್‌ಗಳಿಗೂ ಸಹ 1-ವರ್ಷದ ವಾರಂಟಿ ಆಯ್ಕೆ ನೀಡಲಾಗಿದೆ. ಇದನ್ನು ನೀವು ಅಮೆಜಾನ್, ಕಂಪನಿಯ ಅಧಿಕೃತ ವೆಬ್‌ಸೈಟ್ ಮತ್ತು ಭಾರತದಾದ್ಯಂತ ಚಿಲ್ಲರೆ ಅಂಗಡಿಗಳಿಂದ ಖರೀದಿ ಮಾಡಬಹುದಾಗಿದೆ.

Best Mobiles in India

English summary
Consistent Infosystems has launched the Mini Wi-Fi USB Adapter which can be used for various purposes. This portable device has a USB style form factor that connects easily to all devices.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+