"ನೋಟ್ 3 ಲೈಟ್" ಸ್ಮಾರ್ಟ್‌ಫೋನ್ ಕೇವಲ 6,999 ರೂಗೆ ಭಾರತದಲ್ಲಿ
ನಿರೀಕ್ಷೆಯಂತೆ ಚೈನೀಸ್ ಸ್ಮಾರ್ಟ್‌ಫೋನ್ ಕಂಪನಿ 'ಕೂಲ್‌ಪ್ಯಾಡ್' "ನೋಟ್ 3 ಲೈಟ್" ಸ್ಮಾರ್ಟ್‌ಫೋನ್ ಲಾಂಚ್‌ಮಾಡಿದೆ. ಈ ಸ್ಮಾರ್ಟ್‌ಫೋನ್ ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಬೆಲೆ ರೂ. 6999 ಗ್ರಾಹಕರಿಗೆ ಸಿಗಲಿದೆ. ಹಾಗಾದರೆ ಎಲ್ಲಿ ಕೊಳ್ಳಬಹುದು ಅಂತಿರಾ ? ಸ್ಮಾರ್ಟ್‌ಫೋನ್ ಕೊಳ್ಳಲು ಅಮೆಜಾನ್ ಇಂಡಿಯಾಗೆ ಹೋಗಿ ಲಾಗಿನ್ ಆಗಿ ಈಗಲೇ ರಿಜಿಸ್ಟ್ಟೇಶನ್ ಮಾಡಿಸಿಕೊಳ್ಳಿ. "ನೋಟ್ 3 ಲೈಟ್" ಸ್ಮಾರ್ಟ್‌ಫೋನ್ ಮೊದಲ ಫ್ಲ್ಯಾಶ್ ಮಾರಾಟ ಅಧಿಕೃತವಾಗಿ ಜನವರಿ 28 ರ ಮಧ್ಯಾಹ್ನದಿಂದ ಪ್ರಾರಂಭವಾಗಲಿದೆ ಎಂದು ಹೇಳಲಾಗಿದೆ.
ಓದಿರಿ: ಬ್ರ್ಯಾಂಡ್ ಫೋನ್‌ಗಳ ಮೇಲೆ ಆಕರ್ಷಕ ದರಕಡಿತ
"ನೋಟ್ 3 ಲೈಟ್" ಸ್ಮಾರ್ಟ್‌ಫೋನ್ ಬಿಳಿ ಮತ್ತು ಕಪ್ಪು ಬಣ್ಣಗಳ ವಿಭಿನ್ನತೆಯಲ್ಲಿ ದೊರೆಯಲಿದೆ. ಹಾಗಾದರೆ ಈ ಸ್ಮಾರ್ಟ್‌ಫೋನ್ ಬಗೆಗಿನ ಇನ್ನಷ್ಟು ವಿಶೇಷ ಗುಣಗಳು ಏನು ಎಂಬುದನ್ನು ಲೇಖನದಲ್ಲಿ ತಿಳಿಯಿರಿ.

"ನೋಟ್ 3 ಲೈಟ್"
ನೋಟ್ 3 ಹಿಂದಿನ ವರ್ಸನ್ ಸ್ಮಾರ್ಟ್‌ಫೋನ್‌ಗಿಂತ ಭಿನ್ನವಾಗಿದ್ದು, ಫಿಂಗರ್‌ಪ್ರಿಂಟ್ ಸ್ಕ್ಯಾನರ್, 3GB RAM ಮತ್ತು 4G LTE ಸಂಪರ್ಕ ಹೊಂದಿದೆ.

"ನೋಟ್ 3 ಲೈಟ್" ಡಿಸ್‌ಪ್ಲೇ
"ನೋಟ್ 3 ಲೈಟ್" 5 ಇಂಚಿನ ಎಚ್‌ಡಿ ಐಪಿಎಸ್ ಡಿಸ್‌ಪ್ಲೇ ಜೊತೆಗೆ 1280*720 ಪಿಕ್ಸೆಲ್ ರೆಶಲ್ಯೂಶನ್ ಹೊಂದಿದೆ. ಮಿಡಿಯಾಟೆಕ್ MT6735 ಕ್ವಾಡ್‌ಕೋರ್ ಚಿಪ್‌ಸೆಟ್ ಜೊತೆಗೆ 1.3GHz ಪ್ರೊಸೆಸರ್ಟ್ ಹೊಂದಿದೆ.

"ನೋಟ್ 3 ಲೈಟ್" ವಿಶೇಷತೆ
ಇದರ ವಿಶೇಷದಲ್ಲಿ ವಿಶೇಷ ಗುಣವೆಂದರೆ ಕಡಿಮೆ ಬೆಲೆಯ ಫೋನ್ ಆದರೂ ಸಹ 3GB RAM ಹೊಂದಿರುವುದು. ಇದೇ ಮೊದಲ ಬಾರಿಗೆ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ಗೆ ಹೆಚ್ಚು RAM ನೀಡಿರುವುದು. ಆಂತರಿಕ ಶೇಖರಣಾ ಸಾಮರ್ಥ್ಯ 16GB ಹೊಂದಿದ್ದು, ಇದನ್ನು 64 GB ಮೈಕ್ರೋ ಎಸ್‌ಡಿ ಕಾರ್ಡ್ ಆಗಿ ಬಳಸಬಹುದು.

ಫ್ರಿಂಗರ್‌ಪ್ರಿಂಟ್ ಸ್ಕ್ಯಾನರ್
ಸ್ಮಾರ್ಟ್‌ಫೋನ್ ಪ್ರಮುಖ ಅಂಶವೆಂದರೆ ಫ್ರಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಹಿಂಭಾಗದ ಕ್ಯಾಮೆರಾ ಪ್ಯಾನೆಲ್ ಕೆಳಗೆ ಅಳವಡಿಸಲಾಗಿದೆ. ಹಿಂದೆ ಲಾಂಚ್ ಮಾಡಿದ್ದ ಸ್ಮಾರ್ಟ್‌ಫೋನ್ ಸಹ ಕಡಿಮೆ ಬೆಲೆಯಲ್ಲಿಯೇ ಫ್ರಿಂಗರ್‌ಪ್ರಿಂಟ್ ಫೀಚರ್ ಹೊಂದಿತ್ತು.

ಕ್ಯಾಮೆರಾ
"ನೋಟ್ 3 ಲೈಟ್" 13MP ಆಟೋ ಫೋಕಸ್ ಮತ್ತು ಫ್ಲ್ಯಾಶ್‌ವುಳ್ಳ ಹಿಂಭಾಗ ಕ್ಯಾಮೆರಾ ಮ, 5MP ಮುಂಭಾಗ ಕ್ಯಾಮೆರಾ ಹೊಂದಿದೆ. ಫೋನ್ ಆಂಡ್ರಾಯ್ಡ್ 5.1 ಲಾಲಿಪಾಪ್ ಆಪರೇಟಿಂಗ್ ಸಿಸ್ಟಮ್ ಹೊಂದಿದೆ.

ಇತರೆ ಫೀಚರ್‌ಗಳು
* 4G ಸಂಪರ್ಕ
* ಬ್ಲೂಟೂತ್ 4.0
* ವೈ-ಫೈ
* ಗ್ರಾವಿಟಿ ಸೆನ್ಸಾರ್, ಲೈಟ್ ಸೆನ್ಸಾರ್, ಮ್ಯಾಗ್ನೆಟಿಕ್ ಸೆನ್ಸಾರ್
* 2,500mAh ಬ್ಯಾಟರಿ

ಕೂಲ್‌ಪ್ಯಾಡ್ ಬ್ಯಾಂಡ್
"ನೋಟ್ 3 ಲೈಟ್" ಸ್ಮಾಟ್‌ಫೋನ್ ಜೊತೆಗೆ ಕಂಪನಿಯೂ ಕೂಲ್‌ಬ್ಯಾಂಡ್ ಅನ್ನು ಪ್ರದರ್ಶಿಸಿದ್ದು, ಇದರ ಬೆಲೆಯನ್ನು ಖಚಿತಪಡಿಸಿಲ್ಲ. ಇದು ಫಿಟ್‌ನೆಸ್ ಬ್ಯಾಂಡ್ ಆಗಿದೆ. ಕ್ಲಾಕ್ ಮತ್ತು ಅಲಾರಂ ಬ್ಯಾಂಡ್ ಆಗಿದೆ. ಅಲ್ಲದೇ ಫೋಟೋ ಕ್ಲಿಕ್ ಅನ್ನು ಸ್ಮಾರ್ಟ್‌ಫೋನ್ ಕ್ಯಾಮೆರಾ ಮೂಲಕ ಬ್ಲೂಟೂತ್ ಸಂಪರ್ಕದಿಂದ ಮಾಡಬಹುದು.


Click it and Unblock the Notifications








