ಕೂಲ್‌ಟ್ರಿಕ್ಸ್ IPL ಕ್ವಿಜ್ ಕಂಟೆಸ್ಟ್ ; ಸರಿ ಉತ್ತರ ನೀಡಿ 50ರೂ ಕ್ಯಾಶ್ ಗೆಲ್ಲಿ.!
ಕ್ರಿಕೆಟ್ ಮ್ಯಾಚ್‌ಗಳು ಆರಂಭವಾದರೆ ಜಾಹಿರಾತು ಕಂಪನಿಗಳಿಗೆ ಗ್ರಾಹಕರನ್ನು ಸೆಳೆಯಲು ಸುಗ್ಗಿಕಾಲ ಬಂದಂತೆ, ಅದರಲ್ಲೂ ಐಪಿಎಲ್ ಮ್ಯಾಚ್‌ಗಳು ಶುರುವಾದರಂತು ಭರ್ಜರಿ ಧಮಾಕ ಆಫರ್‌ಗಳ ಸುರಿಮಳೆ ಸ್ಟಾರ್ಟ್ ಆಗಿಬಿಡುತ್ತದೆ. ಇದೀಗ 2019 ಐಪಿಎಲ್ ಚಾಲ್ತಿಯಲ್ಲಿದ್ದು, ಹಲವು ಕಂಪನಿಗಳು ಮತ್ತು ಆಪ್‌ಗಳು ವಿಶೇಷ ಕೊಡುಗೆಗಳನ್ನು ಕ್ರಿಕೆಟ್ ಪ್ರೇಮಿಗಳಿಗೆ ಒದಗಿಸುತ್ತಲೇ ಇವೆ. ಆದರೆ ಈ ಐಪಿಎಲ್ ಕಂಟೆಸ್ಟ್ ಕ್ಯಾಶ್ ಗೆಲ್ಲುವ ಅವಕಾಶ ನೀಡಿದೆ.

ಹೌದು, ಕೂಲ್ ಟ್ರಿಕ್ಸ್ ವತಿಯಿಂದ 'ಐಪಿಎಲ್ ಕ್ವಿಜ್ ಕಂಟೆಸ್ಟ್' ಅನ್ನು ಆಯೋಜಿಸಿದ್ದು, ಐಪಿಎಲ್ ಮ್ಯಾಚ್‌ಗೆ ಸಂಬಂಧಿಸಿದ ಪ್ರಶ್ನೇಗಳನ್ನು ಕೇಳಲಾಗುತ್ತದೆ. ಪ್ರತೀ ಪ್ರಶ್ನೆಯು ನಾಲ್ಕು ಉತ್ತರಗಳ ಆಯ್ಕೆಯನ್ನು ಹೊಂದಿರಲಿದ್ದು, ಅವುಗಳಲ್ಲಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಬೇಕು. ಸರಿ ಉತ್ತರ ನೀಡಿದವರಲ್ಲಿ ವಿಜೇತರನ್ನು ಲಕ್ಕಿ ಡ್ರಾ ಮೂಲಕ ಆಯ್ಕೆ ಮಾಡಲಾಗುತ್ತದೆ ಮತ್ತು ವಿಜೇತರಿಗೆ ಪೇಟಿಎಮ್ ಮೂಲಕ ಕ್ಯಾಶ್ ನೀಡಲಾಗುತ್ತದೆ.

ಐಪಿಎಲ್ ಮ್ಯಾಚ್‌ಗಳು ಮುಗಿಯುವರೆಗೂ ಪ್ರತಿ ದಿನ ಕ್ವಿಜ್ ನಡೆಯಲಿದ್ದು, ಸರಳ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಪ್ರತಿ ಪ್ರಶ್ನೆಗೂ ಸರಿ ಉತ್ತರ ನೀಡುವ ಗ್ರಾಹಕರಲ್ಲಿ ಕೇವಲ ಇಬ್ಬರನ್ನು ಮಾತ್ರ ವಿಜೇತರನ್ನಾಗಿ ಆಯ್ಕೆ ಮಾಡುವರು. ಒಂದು ಗಂಟೆಯ ಅವಧಿಯೊಳಗೆ ಅವರ ಪೇಟಿಎಮ್ ವಾಲೆಟ್‌ನಲ್ಲಿ ಹಣ ಜಮಾ ಆಗುವುದು. ಹಾಗಾದರೇ ಕೂಲ್ ಟ್ರಿಕ್ಸ್ ಐಪಿಎಲ್ ಕಂಟೆಸ್ಟ್ ಕುರಿತ ಇತರೆ ಮಾಹಿತಿಯ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಪ್ರಶ್ನೆಗಳು ಹೇಗಿರುತ್ತವೆ
ಪ್ರತಿದಿನ ಅಂದಿನ ಐಪಿಎಲ್ ಮ್ಯಾಚ್‌ಗೆ ಸಂಬಂಧಿಸದ ಕೆಲವು ಸರಳ ಪ್ರಶ್ನೆಗಳನ್ನು ಕೇಳಲಾಗಿರುತ್ತದೆ. ಉದಾಹರಣೆಗೆ : ಇಂದಿನ ಮ್ಯಾಚ್ ಟಾಸ್ ಯಾರು ವಿನ್ ಆಗಲಿದ್ದಾರೆ? ಇಂದಿನ ಮ್ಯಾಚ್‌ನಲ್ಲಿ ಯಾರು ಅತೀ ಹೆಚ್ಚು ರನ್ನ ಗಳಿಸುತ್ತಾರೆ? ಮತ್ತು ಇಂದಿನ ಮ್ಯಾಚ್‌ನಲ್ಲಿ ಯಾರು ಹೆಚ್ಚು ವಿಕೆಟ್‌ಗಳನ್ನು ಪಡೆಯುತ್ತಾರೆ? ಇಂಥಹ ಪ್ರಶ್ನೆಗಳನ್ನು ಕೇಳಲಾಗುತ್ತದೆ.

50ರೂ.ಕ್ಯಾಶ್
ಕೂಲ್ ಟ್ರಿಕ್ಸ್ ಐಪಿಎಲ್ ಕ್ವಿಜ್ ಕಂಟೆಸ್ಟ್ ನಲ್ಲಿ ಸರಿ ಉತ್ತರ ನೀಡಿ ಲಕ್ಕಿ ಡ್ರಾದಲ್ಲಿ ವಿಜೇತರಾಗುವ ಇಬ್ಬರೂ ಗ್ರಾಹಕರಿಗೆ 50ರೂ.ಕ್ಯಾಶ್ ನೀಡಲಾಗುತ್ತದೆ. ಈ ಹಣವನ್ನು ಅವರ ಪೇಟಿಎಮ್ ವಾಲೆಟ್‌ಗೆ ವರ್ಗಾಯಿಸಲಾಗಲಿದ್ದು, ವಿಜೇತರ ಹೆಸರನ್ನು ವೆಬ್‌ಪೇಜ್‌ನಲ್ಲಿ ಸಹ ನಮೂದಿಸಲಾಗುವುದು.

ಆಡುವುದು ಹೇಗೆ
ಕೂಲ್ ಟ್ರಿಕ್ಸ್ ಐಪಿಎಲ್ ಕಂಟೆಸ್ಟ್ ಪೇಜ್ ಅನ್ನು ತೆರೆಯುವುದು ನಂತರ ನಿಮ್ಮ ಸರಿಯಾದ ಇಮೇಲ್ ಐಡಿಯನ್ನು ನಮೂದಿಸುವುದು, ಆನಂತರ ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ಸರಿ ಉತ್ತರ ಗುರುತಿಸುವುದು ಕೊನೆಯಲ್ಲಿ ನಿಮ್ಮ ಪೇಟಿಎಮ್ ನಂಬರ್ ನೀಡುವುದು ಮತ್ತು ಕಂಟೆಸ್ಟ್ ಸಬ್‌ಮೀಟ್ ಮಾಡಿರಿ. www.coolztricks.com

ಡೇಡ್‌ಲೈನ್
ಕೂಲ್ ಟ್ರಿಕ್ಸ್ ಐಪಿಎಲ್ ಕಂಟೆಸ್ಟ್‌ನಲ್ಲಿ ಭಾಗವಹಿಸುವವರು ತಮ್ಮ ಸರಿ ಉತ್ತರಗಳನ್ನು ಮ್ಯಾಚ್ ಆರಂಭವಾಗುವ ಒಂದು ಗಂಟೆ ಮೊದನೆ ಕಳುಹಿಸಬೇಕು. ರಾತ್ರಿ 8 ಗಂಟೆಗೆ ಮ್ಯಾಚ್ ಆರಂಭವಾಗಲಿದ್ದರೇ 7ಗಂಟೆಯ ಒಳಗೆ ನಿಮ್ಮ ಉತ್ತರಗಳನ್ನು ಸಬ್‌ಮೀಟ್ ಮಾಡಬೇಕು.


Click it and Unblock the Notifications