Home
ಸುದ್ದಿಜಾಲ

ಲಾಕ್‌ಡೌನ್‌ ಅವಧಿಯಲ್ಲಿ ಜನರು ಗೂಗಲ್‌ನಲ್ಲಿ ಏನೆಲ್ಲಾ ಸರ್ಚ್ ಮಾಡಿದ್ದಾರೆ ನೋಡಿ!

ದೇಶದಲ್ಲಿ ಕೊರೊನಾ ವೈರಸ್ ವ್ಯಾಪಕವಾಗಿ ಹರಡುವುಕ್ಕೆ ಬ್ರೇಕ್ ಹಾಕುವ ಉದ್ದೇಶದಿಂದ ಸರ್ಕಾರ ದೇಶದಲ್ಲಿ 21 ದಿನಗಳ ಲಾಕ್‌ಡೌನ್‌ ಘೋಷಿಸಿತ್ತು. ಈ ಲಾಕ್‌ಡೌನ್‌ ಜನರನ್ನು ಕಟ್ಟಿಹಾಕಿದ್ದು, ಈ ಅವಧಿಯಲ್ಲಿ ಅನೇಕರು ತಮ್ಮ ನೆಚ್ಚಿನ ಹವ್ಯಾಸದಲ್ಲಿ ತೊಡಗಿದ್ದಾರೆ, ಹಾಗೆಯೇ ಮತ್ತೆ ಕೆಲವರು ಗೇಮ್ಸ್‌ ಆಡುವುದರಲ್ಲಿ ಬ್ಯುಸಿ ಆಗಿದ್ದರೇ, ಇನ್ನು ಅನೇಕರು ಗೂಗಲ್‌ ಸರ್ಚ್‌ನಲ್ಲಿ ಕೊರೊನಾ ಬಗ್ಗೆ ತಮ್ಮಲ್ಲಿರುವ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ನಡೆಸಿದ್ದಾರೆ.

ಗೂಗಲ್ ಸರ್ಚ್‌ನಲ್ಲಿ

ಹೌದು, ಲಾಕ್‌ಡೌನ್‌ನಿಂದಾಗಿ ಮನೆಯಲ್ಲಿ ಕುಳಿತಿರುವ ಅನೇಕ ಜನರು ಇಡೀ ವಿಶ್ವವನ್ನೆ ಆತಂಕದಲ್ಲಿ ಮುಳಿಗಿಸಿರುವ ಮಾಹಾಮಾರಿ ಕೊರೊನಾ ವೈರಸ್‌ ಬಗ್ಗೆ ಗೂಗಲ್ ಸರ್ಚ್‌ನಲ್ಲಿ ಮಾಹಿತಿ ತಿಳಿದುಕೊಂಡಿದ್ದಾರೆ. ಸುಮಾರು ಮೂರು ವಾರಗಳ ಲಾಕ್‌ಡೌನ್‌ ಅವಧಿಯಲ್ಲಿ ದೇಶದ ಜನರು ಕೊರೊನಾ ವೈರಸ್‌ ಬಗ್ಗೆ ಏನೆಲ್ಲಾ ಸರ್ಚ್ ಮಾಡಿದ್ದಾರೆ ಗೊತ್ತಾ? ಯಾವ ವಿಷಯವನ್ನು ಹೆಚ್ಚಾಗಿ ಹುಡುಕಾಡಿದ್ದಾರೆ? ಎನ್ನುವ ಬಗ್ಗೆ ಗೂಗಲ್ ಮಾಹಿತಿ ಹಂಚಿಕೊಂಡಿದೆ. ಮುಂದೆ ಓದಿರಿ.

Coronavirus tips-ಕೊರೊನಾ ಟಿಪ್ಸ್

Coronavirus tips-ಕೊರೊನಾ ಟಿಪ್ಸ್

ಲಾಕ್‌ಡೌನ್‌ ಅವಧಿಯಲ್ಲಿ ಜನರು ಗೂಗಲ್‌ ಸರ್ಚ್‌ನಲ್ಲಿ ಅತೀ ಹೆಚ್ಚಾಗಿ ಸರ್ಚ್ ಮಾಡಿರುವ ವಿಷಯ ಅಂದ್ರೇ ಅದು ಕೊರೊನಾ ಟಿಪ್ಸ್. ಈ ಕೀ ವರ್ಡ್‌ ಅನ್ನು 10 ಮಿಲಿಯನ್‌ಗಿಂತಲೂ ಅಧಿಕ ಸರ್ಚ್ ಮಾಡಿದ್ದಾರೆ.

Coronavirus-ಕೊರೊನಾ ವೈರಸ್‌

Coronavirus-ಕೊರೊನಾ ವೈರಸ್‌

ಮೂರು ವಾರದ ಲಾಕ್‌ಡೌನ್ ಸಂದರ್ಭದಲ್ಲಿ ಈ ಲಾಕ್‌ಡೌನ್‌ಗೆ ಕಾರಣ ಆಗಿರುವ ಕೊರೊನಾ ವೈರಸ್‌-Coronavirus ಬಗ್ಗೆಯು ಹೆಚ್ಚಾಗಿ ಸರ್ಚ್ ಮಾಡಿದ್ದಾರೆ. ಗೂಗಲ್ ಸರ್ಚ್‌ನಲ್ಲಿ 5 ಮಿಲಿಯನ್‌ಗಿಂತಲೂ ಅಧಿಕ ಭಾರಿ ಕೊರೊನಾ ವೈರಸ್‌-Coronavirus ಕೀ ವರ್ಡ್‌ ಮಾಡಲಾಗಿದೆ.

Lockdown Extension- ಲಾಕ್‌ಡೌನ್‌ ವಿಸ್ತರಣೆ

Lockdown Extension- ಲಾಕ್‌ಡೌನ್‌ ವಿಸ್ತರಣೆ

21 ದಿನಗಳು ಜಾರಿಯಲ್ಲಿದ್ದ ಲಾಕ್‌ಡೌನ್‌ ಅನ್ನು ಸರ್ಕಾರ ಮತ್ತೆ ವಿಸ್ತರಣೆ ಮಾಡಲಿದೆಯಾ ಎನ್ನುವ ಬಗ್ಗೆ ತಿಳಿಯಲು Lockdown Extension- ಲಾಕ್‌ಡೌನ್‌ ವಿಸ್ತರಣೆ ಕುರಿತಾಗಿಯು ಜನರು ಹೆಚ್ಚಾಗಿ ಸರ್ಚ್ ಮಾಡಿದ್ದಾರೆ. ಒಂದು ಬಿಲಿಯನ್‌ಗಿಂತಲೂ ಅಧಿಕ Lockdown Extension ಬಗ್ಗೆ ಮಾಹಿತಿ ಸರ್ಚ್ ಮಾಡಿದ್ದಾರೆ.

Covid-19-ಕೋವಿಡ್‌-19

Covid-19-ಕೋವಿಡ್‌-19

ಕೋವಿಡ್‌-19 ಕೀ ವರ್ಡ್‌ನಿಂದಲೂ ಸಹ ಜನರು ಗೂಗಲ್‌ ಸರ್ಚ್‌ನಲ್ಲಿ ಮಾಹಿತಿ ಹುಡುಕಾಟ ನಡೆಸಿದ್ದಾರೆ. ಲಾಕ್‌ಡೌನ್ ಅವಧಿಯಲ್ಲಿ Covid-19 ಬಗ್ಗೆ 7 ಲಕ್ಷಕಿಂತಲೂ ಅಧಿಕ ಸರ್ಚ್ ಆಗಿದೆ.

Hydroxychloroquine-ಹೈಡ್ರಾಕ್ಸಿಕ್ಲೋರೋಕ್ವಿನ್

Hydroxychloroquine-ಹೈಡ್ರಾಕ್ಸಿಕ್ಲೋರೋಕ್ವಿನ್

ಮೂರು ವಾರದ ಲಾಕ್‌ಡೌನ್ ಟೈಮ್‌ನಲ್ಲಿ Hydroxychloroquine ಮಾತ್ರಗಳ ಬಗ್ಗೆ 6 ಲಕ್ಷಕ್ಕಿಂತಲೂ ಅಧಿಕ ಬಾರಿ ಸರ್ಚ್ ಮಾಡಲಾಗಿದೆ. ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳನ್ನು ಕೊಡುವಂತೆ ಭಾರತವನ್ನು ಅಮೆರಿಕಾ ಕೇಳಿತ್ತು. ಬಹುಶಃ ಈ ಕಾರಣದಿಂದಾಗಿ ಹೆಚ್ಚು ಜನರು ಸರ್ಚ್ ಮಾಡಿರಬಹುದು.

Coronavirus symptoms-ಕೊರೊನಾ ವೈರಸ್‌ ಲಕ್ಷಣಗಳು

Coronavirus symptoms-ಕೊರೊನಾ ವೈರಸ್‌ ಲಕ್ಷಣಗಳು

ಕೊರೊನಾ ವೈರಸ್‌ ಸಾಂಕ್ರಾಮಿಕದ ಲಕ್ಷಣಗಳು ಏನು ಎಂಬ ಬಗ್ಗೆಯು ಸಹ ಜನರು ಗೂಗಲ್‌ ಸರ್ಚ್‌ನಲ್ಲಿ ಮಾಹಿತಿ ಹುಡುಕಾಡಿದ್ದಾರೆ. Coronavirus symptoms ಕೀ ವರ್ಡ್‌ ಅನ್ನು 5 ಲಕ್ಷಕ್ಕಿಂತಲೂ ಅಧಿಕವಾಗಿ ಸರ್ಚ್ ಮಾಡಿದ್ದಾರೆ.

Aarogya Setu app-ಆರೋಗ್ಯ ಸೇತು ಆಪ್

Aarogya Setu app-ಆರೋಗ್ಯ ಸೇತು ಆಪ್

ಕೊರೊನಾ ವೈರಸ ತಡೆಗೆ ಸರ್ಕಾರ ಆರೋಗ್ಯ ಸೇತು ಆಪ್ ಅಭಿವೃದ್ಧಿಪಡಿಸಿದೆ. ಹಾಗೂ ಈ ಆಪ್‌ ಅನ್ನು ಬಳಕೆ ಮಾಡಿ ಎಂದು ಸಹ ಹೇಳಿದೆ. ಈ ನಿಟ್ಟಿನಲ್ಲಿ ಆರೋಗ್ಯ ಸೇತು ಆಪ್‌ ಬಗ್ಗೆಯು ಜನರು ಸರ್ಚ್ ಮಾಡಿದ್ದಾರೆ. ಲಾಕ್‌ಡೌನ್ ಅವಧಿಯಲ್ಲಿ Aarogya Setu app ಬಗ್ಗೆ 3.2 ಲಕ್ಷಕ್ಕಿಂತಲೂ ಹೆಚ್ಚಿನ ಬಾರಿ ಜನರು ಸರ್ಚ್ ಮಾಡಿದ್ದಾರೆ.

Lockdown-ಲಾಕ್‌ಡೌನ್

Lockdown-ಲಾಕ್‌ಡೌನ್

ಲಾಕ್‌ಡೌನ್‌ ಬಗ್ಗೆ 2 ಲಕ್ಷಕ್ಕಿಂತ ಅಧಿಕ ಬಾರಿ ಸರ್ಚ್ ಮಾಡಲಾಗಿದೆ. ಬಹುಶಃ ಜನರು ಲಾಕ್‌ಡೌನ್ ಅಂದರೇ ಏನು ಲಾಕ್‌ಡೌನ್‌ ವ್ಯವಸ್ಥೆ ಹೇಗಿರುತ್ತೆ ಎಂಬುದನ್ನು ತಿಳಿಯಲು ಈ ಬಗ್ಗೆ ಸರ್ಚ್ ಮಾಡಿರಬಹುದು.

Aarogya Setu-ಆರೋಗ್ಯ ಸೇತು

Aarogya Setu-ಆರೋಗ್ಯ ಸೇತು

ಆರೋಗ್ಯ ಸೇತು ಆಪ್ ಬಗ್ಗೆ ತಿಳಿಯುವ ನಿಟ್ಟಿನಲ್ಲಿ ಜನರು ಆರೋಗ್ಯ ಸೇತು ಅಂತಾ ಸರ್ಚ್ ಮಾಡಿರಬಹುದು. ಆದರೆ ಆರೋಗ್ಯ ಸೇತು ಕೀ ವರ್ಡ್‌ಗಿಂತಾ ಆರೋಗ್ಯ ಸೇತು ಆಪ್ ಅಂತಾನೇ ಹೆಚ್ಚು ಸರ್ಚ್ ಆಗಿವೆ. Aarogya Setu ಕೀ ಅನ್ನು 2 ಲಕ್ಷಕ್ಕಿಂತಲೂ ಅಧಿಕ ಬಾರಿ ಸರ್ಚ್ ಮಾಡಲಾಗಿದೆ.

India Covid-19 tracker- ಇಂಡಿಯಾ ಕೋವಿಡ್‌-19 ಟ್ರಾಕರ್

India Covid-19 tracker- ಇಂಡಿಯಾ ಕೋವಿಡ್‌-19 ಟ್ರಾಕರ್

ಕೊರೊನಾ ವೈರಸ್‌ ವ್ಯಾಪಿಸಿರುವ ಬಗ್ಗೆ ತಿಳಿಯಲು ಕೋವಿಡ್-19 ಟ್ರಾಕರ್ ಸರ್ಚ್ ಮಾಡಿರಬಹುದು. ಗೂಗಲ್ ಸೇರಿದಂತೆ ಹಲವು ಟೆಕ್ ಸಂಸ್ಥೆಗಳು ಕೊರೊನಾ ಸೋಂಕಿತ ಅಂಕಿ-ಸಂಖ್ಯೆ ತಿಳಿಸಲು ಟ್ರಾಕರ್ ರೂಪಿಸಿವೆ. ಲಾಕ್‌ಡವಣ್ ಅವಧಿಯಲ್ಲಿ 1.2 ಲಕ್ಷಕ್ಕಿಂತ ಹೆಚ್ಚು ಬಾರಿ ಜನರು ಸರ್ಚ್ ಮಾಡಿದ್ದಾರೆ.

Best Mobiles in India

English summary
Google shares and found out that these were the most-popular searches made by Indians in the last three weeks.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+