ಕೊರೊನಾ ವೈರಸ್ ಭೀತಿ: ರದ್ದಾದ 'ರೆಡ್ಮಿ ನೋಟ್ 9' ಫೋನ್ ಲಾಂಚ್ ಕಾರ್ಯಕ್ರಮ!
ಚೀನಾದಿಂದ ಶುರುವಾದ ಮಾರಕ ಕೊರೊನಾ ವೈರಸ್ ವಿಶ್ವವ್ಯಾಪಿ ವ್ಯಾಪಕವಾಗಿ ಹರಡುತ್ತಿದೆ. ಇತರೆ ರಾಷ್ಟ್ರಗಳಲ್ಲಿಯೂ ಕೊರೊನಾ ವೈರಸ್ ಭಾರಿ ಆತಂಕ ಮೂಡಿಸಿದ್ದು, ಭಾರತಕ್ಕೂ ಕಾಲಿಟ್ಟಿದೆ. ಕೊರೊನಾ ವೈರಸ್ ಭೀತಿಯು ಚೀನಾ ಮೂಲದ ಶಿಯೋಮಿ ಕಂಪನಿಗೂ ತಟ್ಟಿದ್ದು, ಅದರ ಪರಿಣಾಮವಾಗಿ ಈ ತಿಂಗಳು ಲಾಂಚ್ ಆಗಬೇಕಿದ್ದ ಹೊಸ ಸ್ಮಾರ್ಟ್‌ಫೋನ್‌ಗಳ ಬಿಡುಗಡೆ ಕಾರ್ಯಕ್ರಮಗಳವನ್ನು ರದ್ದುಗೊಳಿಸಿದೆ.

ಹೌದು, ಶಿಯೋಮಿ ಸಂಸ್ಥೆಯು ಈ ತಿಂಗಳು ತನ್ನ ಕೆಲವು ನೂತನ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡುವ ಕಾರ್ಯಕ್ರಮಗಳನ್ನು ಮಾಡಿತ್ತು. ಆದರೆ ಸದ್ಯ ವಿಶ್ವವ್ಯಾಪಿ ಕೊರೊನಾ ವೈರಸ್ ಭೀತಿ ಇರುವುದರಿಂದ ಮುನ್ನೆಚ್ಚರಿಕೆಯ ಕ್ರಮವಾಗಿ ಈ ತಿಂಗಳು ನಡೆಯಬೇಕಿದ್ದ ಲಾಂಚ್ ಕಾರ್ಯಕ್ರಮಗಳನ್ನು ರದ್ದು ಮಾಡಲಾಗಿದೆ ಎಂದು ಶಿಯೋಮಿ ಪತ್ರಿಕಾ ಪ್ರಕಟಣೆ ನೀಡಿದೆ.

ಇದೇ ಮಾರ್ಚ್ 12ರಂದು ಮಧ್ಯಾಹ್ನ 12ಕ್ಕೆ ರೆಡ್ಮಿ ನೋಟ್ ಸರಣಿಯಲ್ಲಿ ನೂತನ ರೆಡ್ಮಿ ನೋಟ್ 9 ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುವುದಾಗಿ ಕಂಪನಿಯು ತಿಳಿಸಿತ್ತು. ಆದರೆ ಕೊರೊನಾ ವೈರಸ್ ಹರಡುವ ಆತಂಕ ಇರುವುದರಿಂದ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮಿ ಅಭಿಮಾನಿಗಳಿಗೆ, ಮೀಡಿಯಾ ಬಳಗ, ಮಿ ಪಾಲುದಾರರು ಮತ್ತು ಶಿಯೋಮಿ ಉದ್ಯೋಗಿಗಳ ಕಾಳಜಿಯ ದೃಷ್ಠಿಯಿಂದ ಸಂಸ್ಥೆಯು ಕಾರ್ಯಕ್ರಮಕ್ಕೆ ಬ್ರೇಕ್ ಹಾಕಿದೆ.

ಶಿಯೋಮಿ ಸಂಸ್ಥೆಯ ಉತ್ಪನ್ನಗಳಲ್ಲಿ ನೋಟ್ ಸರಣಿಯ ಸ್ಮಾರ್ಟ್‌ಫೋನ್‌ಗಳ ಬಿಡುಗಡೆ ಕಾರ್ಯಕ್ರಮ ಬಹಳ ಮಹತ್ವದ್ದಾಗಿದ್ದು, ಹಾಗೆಯೇ ದೊಡ್ಡ ಮಟ್ಟದ ಆಕರ್ಷಣೆ ಆಗಿದೆ. ಆದರೆ ಈ ಬಾರಿ ಕೊರೊನಾ ವೈಸರ್ ಕಾರಣದಿಂದಾಗಿ ರೆಡ್ಮಿ ನೋಟ್ 9 ಸರಣಿ ಫೋನ್‌ಗಳನ್ನು ಆನ್‌ಲೈನ್ ಮೂಲಕವೇ ಬಿಡುಗಡೆ ಮಾಡಲಾಗುವುದು ಎಂದು ಹೇಳಿದೆ. ಆನ್‌ಲೈನ್ ತಾಣಗಳ ಮೂಲಕ ಕಾರ್ಯಕ್ರಮ ವೀಕ್ಷಿಸಬಹುದು ಎಂದು ಹೇಳಿದೆ.


Click it and Unblock the Notifications




