Realme: ರಿಯಲ್‌ಮಿ ನಾರ್ಜೋ 70x 5G ಸ್ಮಾರ್ಟ್‌ಫೋನ್ ಲಾಂಚ್‌ಗೆ ದಿನಗಣನೆ! ಅಮೋಲೆಡ್ ಡಿಸ್‌ಪ್ಲೇ ಆಯ್ಕೆ
ರಿಯಲ್‌ಮಿ ಸ್ಮಾರ್ಟ್‌ಫೋನ್‌ಗಳು (Realme smartphones) ಅಗ್ಗದ ಬೆಲೆಯಲ್ಲಿ ಅತ್ಯುತ್ತಮ ಫೀಚರ್ಸ್ ಆಯ್ಕೆ ಪಡೆದಿದ್ದು, ಈ ನಡುವೆ ಇನ್ನೇನು ಕೆಲವೇ ದಿನಗಳಲ್ಲಿ ರಿಯಲ್‌ಮಿ ನಾರ್ಜೋ 70x 5G ಸ್ಮಾರ್ಟ್‌ಫೋನ್ ಅನಾವರಣ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.
ಹೌದು, ಏಪ್ರಿಲ್ 24 ರಂದು ಭಾರತದಲ್ಲಿ ಮುಂದಿನ 5G ನಾರ್ಜೊ ಸ್ಮಾರ್ಟ್‌ಫೋನ್ ನಾರ್ಜೊ 70x 5G (Realme Narzo 70x 5G) ಬಿಡುಗಡೆಯನ್ನು ರಿಯಲ್‌ಮಿ ದೃಢಪಡಿಸಿದೆ. ಈ ಸ್ಮಾರ್ಟ್‌ಫೋನ್ 12,000 ರೂ.ಗಳ ಅಡಿಯಲ್ಲಿ ಲಭ್ಯ ಇರಲಿದೆ ಎಂದು ತಿಳಿದುಬಂದಿದೆ. ಹಾಗೆಯೇ 45W ಚಾರ್ಜಿಂಗ್ ಬೆಂಬಲ ಪಡೆದಿದೆ ಎಂದು ಹೇಳಲಾಗಿದೆ. ಹಾಗಿದ್ರೆ, ಈ ಸ್ಮಾರ್ಟ್‌ಫೋನ್‌ನ ನಿರೀಕ್ಷಿತ ಫೀಚರ್ಸ್‌ಏನು ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ರಿಯಲ್‌ಮಿ ನಾರ್ಜೊ 70x 5G: ಈ ಸ್ಮಾರ್ಟ್‌ಫೋನ್ ಬಗ್ಗೆ ಸಾಕಷ್ಟು ಮಾಹಿತಿ ಲೀಕ್ ಆಗಿದ್ದು, 5000mAh ಸಾಮರ್ಥ್ಯದ ಬ್ಯಾಟರಿ, 120Hz ರಿಫ್ರೆಶ್ ರೇಟ್ ಆಯ್ಕೆಯ ಅಮೋಲೆಡ್ ಡಿಸ್‌ಪ್ಲೇ ಆಯ್ಕೆ ಪಡೆದಿಲಿದ್ದು, IP54 ಧೂಳು ಮತ್ತು ನೀರು-ನಿರೋಧಕ ರೇಟಿಂಗ್ ಅನ್ನು ಹೊಂದಿರಲಿದೆ ಎಂದು ತಿಳಿದುಬಂದಿದೆ. ಅಲ್ಲದೆ, ಈ ಫೋನ್ ವಿನ್ಯಾಸ ಮತ್ತು ಫೀಚರ್ಸ್ ವಿಚಾರದಲ್ಲಿ ಭಾರತದಲ್ಲಿ ಬಿಡುಗಡೆಯಾದ ರಿಯಲ್‌ಮಿ P1 5G ಗೆ ಹೋಲುತ್ತದೆ.
ಇನ್ನು ರಿಯಲ್‌ಮಿ P1 5G ಸ್ಮಾರ್ಟ್‌ಫೋನ್ 6.7 ಇಂಚಿನ ಫುಲ್‌ಹೆಚ್‌ಡಿಪ್ಲಸ್ 120Hz ಅಮೋಲೆಡ್ ಡಿಸ್‌ಪ್ಲೇ ಆಯ್ಕೆ ಪಡೆದಿರಲಿದ್ದು, ಮೀಡಿಯಾಟೆಕ್ ಡೈಮೆನ್ಸಿಟಿ 7050 ಪ್ರೊಸೆಸರ್ ಬಲ ಪಡೆದುಕೊಂಡಿದೆ. ಇದರ ಜೊತೆಗೆ 8GB RAM, ರಿಯಲ್‌ಮಿಯುಐ 5.0 ಆಧಾರಿತ ಆಂಡ್ರಾಯ್ಡ್ 14, 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಜೊತೆಗೆ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸರ್ ಮತ್ತು 16 ಮೆಗಾಪಿಕ್ಸೆಲ್ ಸೆಲ್ಫಿ ಹೊಂದಿದೆ.

ಹಾಗೆಯೇ ಈ ಸ್ಮಾರ್ಟ್‌ಫೋನ್ 6GB + 128GB ಮತ್ತು 8GB + 128GB ಸ್ಟೋರೇಜ್ ಆಯ್ಕೆಯಲ್ಲಿ ಲಭ್ಯ ಇರಲಿದ್ದು, 15,999 ರೂ.ಗಳ ಆರಂಭಿಕ ಬೆಲೆ ಪಡೆದಿದೆ. ಅದಾಗ್ಯೂ ನಾರ್ಜೊ 70x 5G ಸ್ಮಾರ್ಟ್‌ಫೋನ್ 4GB + 128GB ಆವೃತ್ತಿಯಲ್ಲಿ ಬರಲಿದೆ ಎಂದು ನಿರೀಕ್ಷಿಸಲಾಗಿದೆ. ಈ ಫೋನ್ 12,000 ರೂ.ಗಳ ಪರಿಚಯಾತ್ಮಕ ರಿಯಾಯಿತಿಯೊಂದಿಗೆ ಲಭ್ಯ ಇರಲಿದೆ ಎಂದು ತಿಳಿದುಬಂದಿದೆ. ಈ ಸ್ಮಾರ್ಟ್‌ಫೋನ್ ಲಾಂಚ್ ಆದ ನಂತರ ರಿಯಲ್‌ಮಿ ಹಾಗೂ ಅಮೆಜಾನ್‌ನ ಅಧಿಕೃತ ಸೈಟ್‌ನಲ್ಲಿ ಸೇಲ್ ಮಾಡಲಾಗುತ್ತದೆ.
ರಿಯಲ್‌ಮಿ P1 5G ಸರಣಿಯನ್ನು ಕೆಲವು ದಿನಗಳ ಹಿಂದೆ ಭಾರತದಲ್ಲಿ ಲಾಂಚ್ ಮಾಡಲಾಗಿದ್ದು, ಮಧ್ಯಮ ಶ್ರೇಣಿಯ ವಿಭಾಗದಲ್ಲಿ ಉತ್ತಮ ಕಾರ್ಯಕ್ಷಮತೆಯನ್ನು ನೀಡುವುದರ ಮೇಲೆ ಈ ಫೋನ್ ಕೇಂದ್ರೀಕರಿಸಿದೆ. ದೇಶದಲ್ಲಿ ಎರಡು ಹೊಸ ಡಿವೈಸ್‌ಗಳನ್ನು ಬಿಡುಗಡೆ ಮಾಡಲಾಗಿದೆ. ಅವುಗಳೆಂದರೆ ರಿಯಲ್‌ಮಿ P1 5G ಮತ್ತು ರಿಯಲ್‌ಮಿ P1 Pro 5G. ಈ ಸ್ಮಾರ್ಟ್‌ಫೋನ್‌ಗಳ ಆರಂಭಿಕ ಬೆಲೆ 15,999ರೂ.ಗಳಾಗಿದೆ.

ಅಂದರೆ ರಿಯಲ್‌ಮಿ P1 5G ಸ್ಮಾರ್ಟ್‌ಫೋನ್‌ನ 6GB RAM/128GB ವೇರಿಯಂಟ್‌ಗೆ 15,999 ರೂ.ಗಳು ಮತ್ತು 8GB RAM/256GB ಸ್ಟೋರೇಜ್ ವೇರಿಯಂಟ್‌ಗೆ 18,999 ರೂ.ಗಳ ಬೆಲೆ ನಿಗದಿ ಮಾಡಲಾಗಿದೆ. ಹಾಗೆಯೇ ರಿಯಲ್‌ಮಿ P1 ಪ್ರೊ 5G ಸ್ಮಾರ್ಟ್‌ಫೋನ್‌ನ 8GB RAM/128GB ಸ್ಟೋರೇಜ್ ವೇರಿಯಂಟ್‌ಗೆ 21,999 ರೂ.ಗಳು ಮತ್ತು 8GB RAM/256GB ಸ್ಟೋರೇಜ್ ವೇರಿಯಂಟ್‌ಗೆ 22,999ರೂ.ಗಳ ಬೆಲೆ ನಿಗದಿ ಮಾಡಲಾಗಿದೆ. ಈ ಸ್ಮಾರ್ಟ್‌ಫೋನ್ ಪೀಕಾಕ್ ಗ್ರೀನ್ ಮತ್ತು ಫೀನಿಕ್ಸ್ ರೆಡ್ ಬಣ್ಣಗಳಲ್ಲಿ ಲಭ್ಯವಿರುತ್ತದೆ. ಏ
ರಿಯಲ್‌ಮಿ P1 5G ಸ್ಮಾರ್ಟ್‌ಫೋನ್ ಸರಣಿ 2400 x 1080 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಪಡೆದಿದ್ದು, 120Hz ರಿಫ್ರೆಶ್ ರೇಟ್, 240Hz ಟಚ್ ಸ್ಯಾಂಪ್ಲಿಂಗ್ ರೇಟ್ ಮತ್ತು 2000 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್‌ನೊಂದಿಗೆ 6.67 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಅಮೋಲೆಡ್ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದೆ. ಎರಡೂ ಸ್ಮಾರ್ಟ್‌ಫೋನ್‌ಗಳು ಆಂಡ್ರಾಯ್ಡ್ 14 ಆಪರೇಟಿಂಗ್ ಸಿಸ್ಟಮ್ ಆಧಾರಿತ ರಿಯಲ್‌ಮಿಯುಐ 5.0 ನಲ್ಲಿ ಕಾರ್ಯನಿರ್ವಹಿಸುತ್ತವೆ.


Click it and Unblock the Notifications








