ಕೋವಿಡ್ ಲಸಿಕೆಗಾಗಿ ನೋಂದಾಯಿಸುವಾಗ ಈ ನಕಲಿ ವೆಬ್‌ಸೈಟ್‌ಗಳ ಬಗ್ಗೆ ಎಚ್ಚರ!

|

ದೇಶದಲ್ಲಿ ಕೋವಿಡ್-19 ಎರಡನೇ ಅಲೆ ಅಬ್ಬರದಲ್ಲಿದೆ. ಕೊರೊನಾ ವೈರಸ್‌ ಸಾಂಕ್ರಾಮಿಕದಿಂದ ರಕ್ಷಣೆ ಪಡೆಯಲು ಸರ್ಕಾರ ಲಸಿಕೆ ಅಭಿಯಾನ ಪ್ರಾರಂಭಿಸಿದೆ. ಈಗಾಗಲೇ ಹಂತ ಹಂತವಾಗಿ ಲಸಿಕೆ ಅಭಿಯಾನ ಮುಂದುವರೆದಿದೆ. ಲಸಿಕೆ ಹಾಕಿಸಿಕೊಳ್ಳಲು ಜನರು ಆರೋಗ್ಯ ಸೇತು ಆಪ್ ಅಥವಾ ಕೋವಿನ್ (CoWin) ವೆಬ್‌ಸೈಟ್‌ ಮೂಲಕ ನೋಂದಾಯಿಸಿಕೊಳ್ಳಬಹುದು. ಈ ನಿಟ್ಟಿನಲ್ಲಿ ಜನರು ಲಸಿಕೆ ಸ್ಲಾಟ್‌ ಬುಕ್ ಮಾಡಲು ಈ ವೆಬ್‌ಸೈಟ್‌ಗಳಿಗೆ ಭೇಟಿ ನೀಡುತ್ತಿದ್ದಾರೆ. ಆದರೆ ಜನರು ನಕಲಿ ವೆಬ್‌ಸೈಟ್‌ಗಳ ಬಗ್ಗೆ ಎಚ್ಚರದಿಂದಿರಬೇಕು.

ಪೊಲೀಸರು

ದೆಹಲಿ ಪೊಲೀಸರು ಮತ್ತು ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ (CERT-In) ನಕಲಿ ಕೋವಿನ್ ಲಸಿಕೆ ನೋಂದಣಿ ಅಪ್ಲಿಕೇಶನ್‌ಗಳು ಮತ್ತು ಎಸ್‌ಎಂಎಸ್ ಮೂಲಕ ಹರಡುತ್ತಿರುವ ವೆಬ್‌ಸೈಟ್‌ಗಳ ಬಗ್ಗೆ ನಾಗರಿಕರನ್ನು ಎಚ್ಚರಿಸುತ್ತಿದ್ದಾರೆ. ಹೀಗಾಗಿ ಲಸಿಕೆ ಪಡೆಯಲು ನಾಗರೀಕರು ಸ್ಪಾಟ್ ನೋಂದಾಯಿಸುವಾಗ ಅಧಿಕೃತ CoWin ವೆಬ್‌ಸೈಟ್‌ ಅಥವಾ ಆರೋಗ್ಯ ಸೇತು ಆಪ್‌ ಅನ್ನು ಬಳಸಬೇಕು. ನಾಗರೀಕರನ್ನು ದಾರಿ ತಪ್ಪಿಸುವ ಕೆಲವು ನಕಲಿ ವೆಬ್‌ಸೈಟ್‌ ಹಾಗೂ ಆಪ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ ಮುಂದೆ ಓದಿರಿ.

APK ಫೈಲ್‌ಗಳನ್ನು ಡೌನ್‌ಲೋಡ್ ಮಾಡಬೇಡಿ:

APK ಫೈಲ್‌ಗಳನ್ನು ಡೌನ್‌ಲೋಡ್ ಮಾಡಬೇಡಿ:

ಲಸಿಕೆ ನೋಂದಾಯಿಸಲು ನಿಮ್ಮ ಆಂಡ್ರಾಯ್ಡ್ ಫೋನ್‌ನಲ್ಲಿ APK ಫೈಲ್ ಅನ್ನು ಇನ್‌ಸ್ಟಾಲ್‌ ಮಾಡಲು ಸೂಚಿಸುವ ಯಾವುದೇ ಎಸ್‌ಎಂಎಸ್ ನಿಮಗೆ ಬಂದರೇ ಅದು ನಕಲಿ ಮತ್ತು ಮಾಲ್‌ವೇರ್ ಆಗಿರಬಹುದು ಎಂದು ತಿಳಿಯಿರಿ.

Covid-19.apk - ನಕಲಿ ಕೋವಿಡ್ ಲಸಿಕೆ ನೋಂದಣಿ ಅಪ್ಲಿಕೇಶನ್ ಆಗಿದೆ

Covid-19.apk - ನಕಲಿ ಕೋವಿಡ್ ಲಸಿಕೆ ನೋಂದಣಿ ಅಪ್ಲಿಕೇಶನ್ ಆಗಿದೆ

Covid-19.apk ಎಂಬುದು ಆಂಡ್ರಾಯ್ಡ್ ಫೋನ್‌ಗಳನ್ನು ಗುರಿಯಾಗಿಸುವ ನಕಲಿ ಕೋವಿಡ್ ಲಸಿಕೆ ಅಪ್ಲಿಕೇಶನ್ ಆಗಿದೆ. ಇದು ಬಳಕೆದಾರರ ವೈಯಕ್ತಿಕ ಡೇಟಾವನ್ನು ದೋಚುವ ಮಾಲ್ವೇರ್ ಆಗಿದೆ.

ನಕಲಿ ಕೋವಿನ್ ವೆಬ್‌ಸೈಟ್

ನಕಲಿ ಕೋವಿನ್ ವೆಬ್‌ಸೈಟ್

"Https://app.preprod.co-vin.in/login" URL ನೊಂದಿಗೆ ಈ ರೀತಿಯ ನಕಲಿ ಕೋವಿನ್ ವೆಬ್‌ಸೈಟ್‌ಗಳ ಬಗ್ಗೆ ಜಾಗರೂಕರಾಗಿರಿ ಎಂದು ದೆಹಲಿ ಪೊಲೀಸರು ನಾಗರಿಕರನ್ನು ಎಚ್ಚರಿಸುತ್ತಿದ್ದಾರೆ.

ನಕಲಿ ಕೋವಿಡ್ ಲಸಿಕೆ ನೋಂದಣಿ ವೆಬ್‌ಸೈಟ್

ನಕಲಿ ಕೋವಿಡ್ ಲಸಿಕೆ ನೋಂದಣಿ ವೆಬ್‌ಸೈಟ್

"https://selfregistration.preprod.co-vin.in" URL ಇದು ಸಹ ನಕಲಿ ಲಸಿಕೆ ನೋಂದಣಿ ವೆಬ್‌ಸೈಟ್ ಆಗಿದೆ.

ನಕಲಿ ಲಸಿಕೆ ವೆಬ್‌ಸೈಟ್

ನಕಲಿ ಲಸಿಕೆ ವೆಬ್‌ಸೈಟ್

ಲಸಿಕೆ ನೋಂದಣಿಗಾಗಿ "https://selfregistration.sit.co-vin.in" URL ನೊಂದಿಗೆ ವೆಬ್‌ಸೈಟ್ ತೆರೆಯಬೇಡಿ, ಅದು ನಕಲಿ.

Vaci__Regis.apk-ನಕಲಿ ಕೋವಿಡ್ ಲಸಿಕೆ ಅಪ್ಲಿಕೇಶನ್

Vaci__Regis.apk-ನಕಲಿ ಕೋವಿಡ್ ಲಸಿಕೆ ಅಪ್ಲಿಕೇಶನ್

Vaci__Regis.apk ಲಸಿಕೆಗಾಗಿ ನೋಂದಾಯಿಸುತ್ತಿದ್ದಾರೆ ಎಂದು ನಂಬುವಂತೆ ಜನರನ್ನು ಮರುಳು ಮಾಡಲು ಮಾಡಿದ ಮತ್ತೊಂದು ಮಾಲ್ವೇರ್ ಆಗಿದೆ.

ಅಪ್ಲಿಕೇಶನ್

* MyVaccin_v2.apk" ಎಂಬುದು ಆಂಡ್ರಾಯ್ಡ್ ಫೋನ್‌ಗಳಿಗಾಗಿ ಮತ್ತೊಂದು ನಕಲಿ ಲಸಿಕೆ ಬುಕಿಂಗ್ ಅಪ್ಲಿಕೇಶನ್ ಆಗಿದೆ.* ಲಸಿಕೆ ನೋಂದಣಿ ವೆಬ್‌ಸೈಟ್‌ನ ವೇಷದಲ್ಲಿರುವ "Cov-Regis.apk" ಫಿಶಿಂಗ್ ಅಪ್ಲಿಕೇಶನ್ ಆಗಿದೆ.

* Vccin-Apply.apk" ಎಂಬುದು SMS ಮೂಲಕ ಹರಡುವ ಮತ್ತೊಂದು ನಕಲಿ ಅಪ್ಲಿಕೇಶನ್ ಆಗಿದೆ.

* URL "http://tiny.cc/COVID-VACCINE" ಇದು ಸಹ ನಕಲಿ ವೆಬ್‌ಸೈಟ್‌ ಆಗಿದೆ.

Best Mobiles in India

English summary
Covid Vaccine Online Scam: 10 Websites, Apps That Are Dangerous.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X