Home
ಸುದ್ದಿಜಾಲ

ಜೇಬಿನಲ್ಲಿ ಕ್ರೆಡಿಟ್ ಇಟ್ಟುಕೊಳ್ಳುವ ಮುಂಚೆ ಒಮ್ಮೆ ಈ ವಿಡಿಯೋ ನೋಡಿ..!

By Srinidhi

ಇಂದಿನ ದಿನದಲ್ಲಿ ತಂತ್ರಜ್ಞಾನ ಎನ್ನುವುದು ನಮ್ಮ ಜೀವನವನ್ನು ಸಾಕಷ್ಟು ಸುಧಾರಿಸುತ್ತಿದೆ. ಅಲ್ಲದೇ ಸುಲಭವಾಗಿಸುತ್ತಿದೆ. ಆದರೆ ಇದೇ ತಂತ್ರಜ್ಞಾನಗಳು ನಮಗೆ ಮಾರಾಕವಾಗುತ್ತಿದೆ ಎನ್ನುವ ವಿಚಾರವು ಸಾಕಷ್ಟು ತಲೆ ನೋವು ತರಿಸುತ್ತಿದೆ. ಹಲವರಿಗೆ ಉಪಯೋಗವಾಗುವಂತೆ ನಿರ್ಮಾಣವಾಗುವ ತಂತ್ರಜ್ಞಾನವನ್ನು ಕಿಡಿಗೇಡಿಗಳು ಮತ್ತು ಹ್ಯಾಕರ್ಸ್ ತಮ್ಮ ಲಾಭಕ್ಕೆ ಬಳಕೆ ಮಾಡಿಕೊಂಡು ಅಮಾಯಕರನ್ನು ವಂಚಿಸುವ ಕಾರ್ಯವನ್ನು ಮಾಡುತ್ತಿದ್ದಾರೆ.

ಜೇಬಿನಲ್ಲಿ ಕ್ರೆಡಿಟ್ ಇಟ್ಟುಕೊಳ್ಳುವ ಮುಂಚೆ ಒಮ್ಮೆ ಈ ವಿಡಿಯೋ ನೋಡಿ..!

ಓದಿರಿ: ಟೆಲಿಕಾಂಗೆ ಶಾಕ್ ಕೊಟ್ಟ ಜಿಯೋ: ಮತ್ತೆ ಮೂರು ತಿಂಗಳು ಉಚಿತ ಸೇವೆ...!

ಇದೇ ಮಾದರಿಯಲ್ಲಿ ನಮಗೆ ಬೇಕಾದ ಸಂದರ್ಭದಲ್ಲಿ ಹಣವನ್ನು ನೀಡುವ ಮತ್ತು ವಸ್ತುಗಳನ್ನು ಖರೀದಿಸಲು ಸಹಾಯ ಮಾಡವ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳು ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಬಳಕೆಯಾಗುತ್ತಿದೆ. ಇದೇ ಮಾದರಿಯಲ್ಲಿ ನೋಟ್ ಬ್ಯಾನ್ ನಂತರದಲ್ಲಿ ದೇಶಿಯವಾಗಿಯೂ ಪ್ಲಾಸ್ಟಿಕ್ ಕಾರ್ಡ್ ಮಾದರಿಯ ಹಣದ ಚಲಾವಣೆ ಅಧಿಕವಾಗಿದೆ. ಈ ಹಿನ್ನಲೆಯಲ್ಲಿ ಬಳಕೆದಾರರಿಗೆ ಸಹಾಯ ಮಾಡಲು ನಿರ್ಮಾಣ ಮಾಡಿದ್ದ ತಂತ್ರಜ್ಞಾನ ಈಗ ಬಳಕೆದಾರರಿಗೆ ಮುಳುವಾಗುತ್ತಿದೆ.

ಹೊಸ ಮಾದರಿಯ ಹ್ಯಾಕ್:

ಹೊಸ ಮಾದರಿಯ ಹ್ಯಾಕ್:

ಇಷ್ಟು ದಿನ ಕಾಲ್ ಮಾಡಿ ನಂಬರ್ ಪಡೆದುಕೊಂಡು ಇಲ್ಲವೇ, ಸ್ಪೈಪ್ ಮಾಡಿದ ಸಂದರ್ಭದಲ್ಲಿಯೋ ಅಥಾವ ಎಟಿಎಂ ನಲ್ಲಿ ಹಣ ಪಡೆಯುವ ಸಂದರ್ಭದಲ್ಲಿ ನಿಮ್ಮ ಕಾರ್ಡ್ ಮಾಹಿತಿಯನ್ನು ಅಪಹರಿಸಿ ನಿಮ್ಮ ಖಾತೆಯಲ್ಲಿ ಇರುವ ಹಣವನ್ನು ಲಪಾಟಾಯಿಸುವವರನ್ನು ನೀವು ಕಂಡಿರಬಹುದು. ಆದರೆ ಈಗ ನಾವು ಹೇಳುತ್ತಿರುವುರುದು ಬೇರೆ ಮಾದರಿಯ ಹ್ಯಾಕಿಂಗ್.

ಜೇಬಿನಿಂದಲೇ ಸ್ಕ್ಯಾನ್:

ಜೇಬಿನಿಂದಲೇ ಸ್ಕ್ಯಾನ್:

ನಿಮ್ಮ ಜೇಬಿನಲ್ಲಿ ನೀವು ಕಾರ್ಡ್ ಇಟ್ಟು ಕೊಂಡಿರುವ ಸಂದರ್ಭದಲ್ಲಿ ಸ್ಪೇಪಿಂಗ್ ಮಿಷಿನ್ ಅನ್ನು ನಿಮಗೆ ತಿಳಿಯದಂತೆ ನಿಮ್ಮ ಜೇಬಿನ ಬಳಿ ತಂದರೆ ಸಾಕು ಆಟೋ ಮೆಟಿಕ್ ಆಗಿ ನಿಮ್ಮ ಕಾರ್ಡ್ ಸ್ವೇಪ್ ಆಗಲಿದೆ. ನಿಮಗೆ ತಿಳಿಯದಂತೆ ನಿಮ್ಮ ಖಾತೆಯಲ್ಲಿರುವ ಹಣವೆಲ್ಲವೂ ಬೇರೋಬ್ಬರಿಗೆ ಸೇರಿರುತ್ತದೆ.

ವಿಡಿಯೋ ನೋಡಿ:

ಈ ವಿಡಿಯೋ ನೋಡಿದರೆ ನಿಮಗೆ ನಾವು ಏನು ಹೇಳುತ್ತಿದ್ದೇವೆ ಎಂಬುದು ಅರ್ಥವಾಗಲಿದೆ.

ಎಚ್ಚರಿಕೆ ಅಗತ್ಯ:

ಎಚ್ಚರಿಕೆ ಅಗತ್ಯ:

ನಿಮ್ಮ ಕಾರ್ಡ್‌ಗಳನ್ನು ಆದಷ್ಟು ಸೆಕ್ಯೂರ್ ಆಗಿ ನೋಡಿಕೊಳ್ಳಬೇಕಾಗಿದೆ. ಮೊದಲು ಕಳೆದು ಬೇರೆಯೊಬ್ಬರ ಕೈಗೆ ಸಿಕ್ಕರೆ ಕಷ್ಟ ಎನ್ನುವ ಮಾತಿತ್ತು. ಆದರೆ ಈಗ ನಿಮ್ಮ ಬಳಿ ಜೋಪಾನವಾಗಿದ್ದರೂ ಸಹ ಸೇಫ್ ಅಲ್ಲ ಎನ್ನುವುದು ಮೇಲಿನ ಉದಾಹರಣೆಯಿಂದ ತಿಳಿದು ಬರಲಿದೆ. ಈ ಹಿನ್ನಲೆಯಲ್ಲಿ ಎಚ್ಚರಿಕೆ ಅಗತ್ಯ.

ಕಡಿಮೆ ಬಳಕೆ ಮಾಡಿ:

ಕಡಿಮೆ ಬಳಕೆ ಮಾಡಿ:

ಈ ಹಿನ್ನಲೆಯಲ್ಲಿ ನಿಮ್ಮ ಕಾರ್ಡ್‌ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡುವ ಬದಲು ಬೇಕೆಂದ ಸ್ಥಳದಲ್ಲಿ ಮಾತ್ರವೇ ಬಳಕೆ ಮಾಡಿಕೊಳ್ಳಿ ಮತ್ತು ಸೆಕ್ಯೂರ್ ಕಾರ್ಡ್ ಗಳನ್ನು ಕೇಳಿ ಪಡೆದುಕೊಳ್ಳಿ. ಇದರಿಂದ ನಿಮ್ಮ ಆಕೌಂಟ್ ಅನ್ನು ಸೇಫ್ ಮಾಡಬಹುದಾಗಿದೆ. ಇಲ್ಲವಾದರೆ ಕಷ್ಟವಾಗಲಿದೆ.

Best Mobiles in India

English summary
credit card hacking software. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+