ಟೆಲಿಕಾಂಗೆ ಶಾಕ್ ಕೊಟ್ಟ ಜಿಯೋ: ಮತ್ತೆ ಮೂರು ತಿಂಗಳು ಉಚಿತ ಸೇವೆ...!

|

ಟೆಲಿಕಾಂ ಮಾರುಕಟ್ಟೆಯಲ್ಲಿ ಸಾಕಷ್ಟು ಹೊಸ ತನಗಳಿಗೆ ಸಾಕ್ಷಿಯಾಗುವ ಮೂಲಕ ಉಚಿತ ಸೇವೆಯಿಂದಲೇ ಅಭಿಮಾನಿಗಳನ್ನು ಸೆಳೆದಿರುವ ರಿಲಯನ್ಸ್ ಮಾಲೀಕತ್ವದ ಜಿಯೋ, ಈಗ ತನ್ನ ಬಳಕೆದಾರರಿಗೆ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಆಫರ್ ಅನ್ನು ನೀಡಲು ಮುಂದಾಗಿದೆ. ಬಳಕೆದಾರರು ಎಷ್ಟಕ್ಕೆ ರಿಚಾರ್ಜ್ ಮಾಡಿಸುತ್ತಾರೆಯೋ ಅದರಷ್ಟೆ ಕ್ಯಾಷ್ ಬ್ಯಾಕ್ ಅನ್ನು ನೀಡಲಿದೆ ಎನ್ನಲಾಗಿದೆ.

ಟೆಲಿಕಾಂಗೆ ಶಾಕ್ ಕೊಟ್ಟ ಜಿಯೋ: ಮತ್ತೆ ಮೂರು ತಿಂಗಳು ಉಚಿತ ಸೇವೆ...!

ಈಗಾಗಲೇ ಮಾರುಕಟ್ಟೆಗೆ ಜಿಯೋ ಫೋನ್ 2 ಅನ್ನು ಲಾಂಚ್ ಮಾಡಿದೆ. ಇದರೊಂದಿಗೆ ಹಳೇಯ ಫೀಚರ್ ಫೋನ್ ಅನ್ನು ನೀಡಿ ಜಿಯೋ ಫೋನ್ ಅನ್ನು ಪಡೆದುಕೊಳ್ಳುವಂತೆ ಎಕ್ಸ್‌ಚೇಂಜ್ ಆಫರ್ ಅನ್ನು ನೀಡಿದೆ. ಇದರೊಂದಿಗೆ ಸದ್ಯ, 100% ಕ್ಯಾಷ್ ಬ್ಯಾಕ್ ಆಫರ್ ಅನ್ನು ಲಾಂಚ್ ಮಾಡಿದೆ. ಈ ಮೂಲಕ ತನ್ನ ಬಳಕೆದಾರರಿಗೆ ಮತ್ತೊಮ್ಮೆ ಉಚಿತ ಸೇವೆಯನ್ನು ಪಡೆದುಕೊಳ್ಳಬಹುದಾಗಿದೆ. ಮೊದಲು ಜಿಯೋ ಉಚಿತ ಸೇವೆಯನ್ನು ನೀಡದಂತೆ ತಡೆ ಹಿಡಿದಿದ್ದ ಟೆಲಿಕಾಂ ಕಂಪನಿಗಳಿಗೆ ಈ ಮೂಲಕ ಸೆಡ್ಡು ಹೊಡೆಯಲು ಮುಂದಾಗಿದೆ.

ಈಗಾಗಲೇ ರಿಚಾರ್ಜ್ ಮಾಡಿಸಿ:

ಈಗಾಗಲೇ ರಿಚಾರ್ಜ್ ಮಾಡಿಸಿ:

ಈಗಲೇ ರಿಚಾರ್ಜ್ ಮಾಡಿಸಿದವರಿಗೆ ಜಿಯೋ 100% ಕ್ಯಾಷ್ ಬ್ಯಾಕ್ ಅನ್ನು ನೀಡಲಿದೆ ಎನ್ನಲಾಗಿದೆ. ರೂ.398 ಗಿಂತಲೂ ಅಧಿಕವಾಗಿ ರಿಚಾರ್ಜ್ ಮಾಡಿಸಿಕೊಂಡವರಿಗೆ ವೋಚರ್ ಅನ್ನು ನೀಡುತ್ತಿದೆ. ಇದರಿಂದಾಗಿ ಬಳಕೆದಾರರಿಗೆ ಉಚಿತವಾಗಿ ರಿಚಾರ್ಜ್ ದೊರೆತಂತೆ ಆಗಲಿದೆ. ಇದರಿಂದಾಗಿ ಮತ್ತೆ ಮೂರು ತಿಂಗಳು ಉಚಿತ ಸೇವೆಯನ್ನು ಪಡೆದುಕೊಳ್ಳಬಹುದಾಗಿದೆ.

ರೂ.400 ವೋಚರ್:

ರೂ.400 ವೋಚರ್:

ಜಿಯೋ ರೂ.398 ಗಿಂತಲೂ ಅಧಿಕವಾಗಿ ರಿಚಾರ್ಜ್ ಮಾಡಿಸಿಕೊಂಡ ತನ್ನ ಬಳಕೆದಾರರಿಗೆ ರೂ.400ರ ವೋಚರ್ ಅನ್ನು ಬಳಕೆಗೆ ನೀಡುತ್ತಿದೆ. ಇದರಿಂದಾಗಿ ಮುಂದಿನ ರಿಚಾರ್ಜ್ ಸಂದರ್ಭದಲ್ಲಿ ಕ್ಯಾಷ್ ಬ್ಯಾಕ್ ವೋಚರ್ ಅನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಇದರಿಂದಾಗಿ ರಿಚಾರ್ಜ್ ಮಾಡಿಸಿದಷ್ಟೆ ಕ್ಯಾಷ್ ಬ್ಯಾಕ್ ದೊರೆಯುವುದರಿಂದ ಮತ್ತೆ ಉಚಿತ ಸೇವೆಯೇ ದೊರೆತಂತಾಗಲಿದೆ.

100% ಕ್ಯಾಷ್ ಬ್ಯಾಕ್:

100% ಕ್ಯಾಷ್ ಬ್ಯಾಕ್:

ಜಿಯೋ ತನ್ನ ಬಳಕೆದಾರರಿಗೆ ರಿಚಾರ್ಜ್ ಮಾಡಿಸಿಕೊಂಡ ಸಂದರ್ಭದಲ್ಲಿ ರೂ.100 ವರೆಗೂ 100% ಕ್ಯಾಷ್ ಬ್ಯಾಕ್ ಅನ್ನು ನೀಡುತ್ತಿದೆ. ಇದರಿಂದಾಗಿ ಬಳಕೆದಾರರಿಗೆ ರೂ.400 ವೋಚರ್ ನೊಂದಿಗೆ 100% ಕ್ಯಾಷ್ ಬ್ಯಾಕ್ ಲಾಭವು ದೊರೆಯಲಿದೆ. ಒಟ್ಟಿನಲ್ಲಿ ಒಂದೇ ರಿಚಾರ್ಜ್‌ನಲ್ಲಿ ಎರಡು ಲಾಭವನ್ನು ಪಡೆದುಕೊಳ್ಳಬಹುದಾಗಿದೆ.

ಪ್ರೈಮ್ ಬಳಕೆದಾರರಿಗೆ ಮಾತ್ರ:

ಪ್ರೈಮ್ ಬಳಕೆದಾರರಿಗೆ ಮಾತ್ರ:

ಜಿಯೋ ಪ್ರೈಮ್ ಬಳಕೆದಾರರಿಗೆ ಮಾತ್ರವೇ ಈ ಆಫರ್ ಲಭ್ಯವಿದ್ದು, ಉಳಿದವರಿಗೆ ಇದರಲ್ಲಿ ಲಾಭ ದೊರೆಯುವುದಿಲ್ಲ ಎನ್ನಲಾಗಿದೆ. ಈ ಹಿಂದೆಯೂ ಜಿಯೋ ತನ್ನ ಪ್ರೈಮ್ ಬಳಕೆದಾರರಿಗೆ ಮಾತ್ರವೇ ಅನೇಕ ಹೊಸ ಆಯ್ಕೆಗಳನ್ನು ಬಳಕೆಗೆ ನೀಡುತ್ತಿದೆ. ಇನ್ನು ಮುಂದೆಯೂ ಬಳಕೆದಾರರಿಗೆ ಮಾಹಿತಿ ದೊರೆಯಲಿದೆ.

ಟೆಲಿಕಾಂ ಕಂಪನಿಗಳಿಗೆ ಸೆಡ್ಡು:

ಟೆಲಿಕಾಂ ಕಂಪನಿಗಳಿಗೆ ಸೆಡ್ಡು:

ಜಿಯೋ ಈ ಹಿಂದೆ ಉಚಿತ ಸೇವೆಯನ್ನು ನೀಡಿದ ಸಂದರ್ಭದಲ್ಲಿ ಸಾಕಷ್ಟು ಟೆಲಿಕಾಂ ಕಂಪನಿಗಳನ್ನು ಅದನ್ನು ಬಂದ್ ಮಾಡಲು ಪ್ರಯತ್ನಿಸಿದವು, ಈ ಹಿನ್ನಲೆಯಲ್ಲಿ ಜಿಯೋ ತನ್ನ ಬಳಕೆದಾರರಿಗೆ ಹೊಸ ಮಾದರಿಯಲ್ಲಿ ಉಚಿತ ಸೇವೆಯನ್ನು ನೀಡಲು ಮುಂದಾಗಿದೆ. ಇದರಿಂದಾಗಿ ಬಳಕೆದಾರರಿಗೆ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಲಾಭವಾಗಲಿದೆ.

'ಜಿಯೋ ಫೋನ್' ಜೊತೆಗೆ ಇತಿಹಾಸದಲ್ಲಿಯೇ ಕಾಣದ ಬಿಗ್ ಆಫರ್ ಪ್ರಕಟಿಸಿತು ಜಿಯೋ!!

'ಜಿಯೋ ಫೋನ್' ಜೊತೆಗೆ ಇತಿಹಾಸದಲ್ಲಿಯೇ ಕಾಣದ ಬಿಗ್ ಆಫರ್ ಪ್ರಕಟಿಸಿತು ಜಿಯೋ!!

ಯಾವುದೇ ಫೀಚರ್ ಫೋನ್ ನೀಡಿ ನೂತನ ಜಿಯೋ ಫೋನ್‌ಗೆ ಬದಲಾವಣೆ ಮಾಡಿಕೊಳ್ಳಲು ಅವಕಾಶ ನೀಡಿರುವ ಜಿಯೋ ಇದೀಗ ಮತ್ತೊಂದು ಬಂಪರ್ ಕೊಡುಗೆಯನ್ನು ಘೋಷಿಸಿದೆ. ನಾಳೆಯಿಂದ ಆರಂಭವಾಗುತ್ತಿರುವ ಜಿಯೋ ಎಕ್ಸ್‌ಚೇಂಜ್ ಮೇಳದಲ್ಲಿ, ಪ್ರಸ್ತುತ ಬಳಕೆ ಮಾಡುತ್ತಿರುವ ಹಳೆಯ ಫೋನ್ ನೀಡಿ ಭರಪೂರ ಕೊಡುಗೆಗಳನ್ನು ಪಡೆಯಬಹುದಾಗಿದೆ.
ಜಿಯೋ ಇಂದು ಪ್ರಕಟಿಸಿರುವಂತೆ, ಹಳೆಯ ಜಿಯೋ ಪೋನ್‌ಗೂ ಮತ್ತು ನೂತನ ಜಿಯೋ ಪೋನಿಗೂ ಯಾವುದೇ ವ್ಯತ್ಯಾಸವಿಲ್ಲ. ಹಾಗಾಗಿ, ಈ ಎಕ್ಸ್‌ಚೇಂಜ್ ಮೇಳ ಕೇವಲ ಇತರೆ ಫೀಚರ್‌ಪೋನ್‌ಗಳಿಗೆ ಮಾತ್ರ ಎಂದು ಸ್ಪಷ್ಟಪಡಿಸಿದೆ. ಇದರಿಂದ ಈ ವರೆಗೂ ಇದ್ದ ಗೊಂದಲ ಪರಿಹಾರವಾಗಿದ್ದು, ಹಳೆ ಜಿಯೋ ಪೋನ್ ಬಳಕೆದಾರರಿಗೆ ಈಗ ಸ್ಪಷ್ಟ ಉತ್ತರ ಸಿಕ್ಕಿದೆ.

ಇನ್ನು ಹಳೆಯ ಫೀಚರ್ ಫೋನ್ ನೀಡಿ ನೂತನ ಜಿಯೋ ಫೋನ್‌ ಪಡೆದವರಿಗಾಗಿ ಜಿಯೋ ಮತ್ತೊಂದು ಇತಿಹಾಸದಲ್ಲಿಯೇ ಯಾರೂ ನೀಡದ ಆಫರ್ ಅನ್ನು ಘೋಷಿಸಿದೆ. ಕೇವಲ 99 ರೂಪಾಯಿಗಳಿಗೆ ಪ್ರತಿತಿಂಗಳ ಸೇವೆಯನ್ನು ಹೆಚ್ಚು ಡೇಟಾದ ಜೊತೆಗೆ ಪಡೆಯಬಹುದಾಗಿದೆ. ಹಾಗಾಗಿ, ಜಿಯೋ ಫೋನ್ ಎಕ್ಸ್‌ಚೇಂಜ್ ಬಗೆಗಿನ ಪೂರ್ಣ ಮಾಹಿತಿಯನ್ನು ಮುಂದೆ ತಿಳಿಯಿರಿ.

ಜಿಯೋ ಪೋನ್ ಗೊಂದಲ ಪರಿಹಾರ!

ಜಿಯೋ ಪೋನ್ ಗೊಂದಲ ಪರಿಹಾರ!

ಈ ವರೆಗೂ ಹುಟ್ಟಿಕೊಂಡಿದ್ದ ಗೊಂದಲಕ್ಕೆ ಜಿಯೋ ಸ್ಪಷ್ಟ ಉತ್ತರ ನೀಡಿದೆ. ಹಳೆಯ ಜಿಯೋ ಪೋನ್‌ಗೂ ಮತ್ತು ನೂತನ ಜಿಯೋ ಪೋನಿಗೂ ಯಾವುದೇ ವ್ಯತ್ಯಾಸವಿಲ್ಲ. ಹಾಗಾಗಿ, ಈ ಎಕ್ಸ್‌ಚೇಂಜ್ ಮೇಳ ಕೇವಲ ಇತರೆ ಫೀಚರ್‌ಪೋನ್‌ಗಳಿಗೆ ಮಾತ್ರ ಎಂದು ಸ್ಪಷ್ಟಪಡಿಸಿದೆ. ಹಳೆ ಜಿಯೋ ಪೋನ್ ಬಳಕೆದಾರರಿಗೆ ಈ ಎಕ್ಸ್‌ಚೇಂಜ್ ಆಫರ್‌ಗೂ ಸಂಬಂಧವಿಲ್ಲ.!

ಜುಲೈ 21 ರಿಂದ ಚಾಲನೆ!

ಜುಲೈ 21 ರಿಂದ ಚಾಲನೆ!

ಜುಲೈ 21 ರಿಂದ. ಅಂದರೆ, ನಾಳೆಯಿಂದ ಜಿಯೋ ಫೋನ್ ಎಕ್ಸ್‌ಚೇಂಜ್ ಆಫರ್‌ಗೆ ಚಾಲನೆ ಸಿಗುತ್ತಿದೆ. ದೇಶದಲ್ಲಿನ ಎಲ್ಲಾ ಜಿಯೋ ಸ್ಟೋರ್‌ಗಳಲ್ಲಿಯೂ ಸಹ ಜಿಯೋ ಫೋನ್ ಅನ್ನು ಹಳೆಯ ಫೀಚರ್ ಫೋನಿಗೆ ಬದಲಾಗಿ ಎಕ್ಸ್‌ಚೇಂಜ್ ಮಾಡಿಕೊಳ್ಳಬಹುದಾಗಿದ್ದು, ಹಳೆಯ ಫೋನ್ ನೀಡಿ ಹೊಸ ಫೋನ್ ಪಡೆದುಕೊಳ್ಳಲು ಕೇವಲ 501 ರೂಪಾಯಿಗಳನ್ನು ಪಾವತಿಸಬೇಕಿದೆ.

ಈ ಫೋನ್ ಕೂಡ ಉಚಿತ!

ಈ ಫೋನ್ ಕೂಡ ಉಚಿತ!

ಹಳೆಯ ಫೀಚರ್ ಫೋನ್ ನೀಡಿ ನೂತನ ಜಿಯೋ ಫೋನ್‌ ಪಡೆಯುವಾಗ ಪಾವತಿಸುವ ಹಣವನ್ನು ಜಿಯೋ ಮತ್ತೆ ವಾಪಸ್ ಮಾಡುವುದಾಗಿ ತಿಳಿಸಿದೆ. ಈಗ ಪಾವತಿಸಿದ 501 ರೂಪಾಯಿಗಳನ್ನು ಡೆಪಾಸಿಟ್ ಎಂದು ಪರಿಗಣಿಸಲಾಗಿದ್ದು, ಮೂರು ವರ್ಷಗಳ ನಂತರ ಮತ್ತೆ 501 ರೂಪಾಯಿ ಹಣವನ್ನು ವಾಪಸ್ ನೀಡುವುದಾಗಿ ಜಿಯೋ ತಿಳಿಸಿದೆ.

ಕೆಳಗಿನ ಷರತ್ತುಗಳನ್ನು ಪೂರೈಸಬೇಕಿದೆ.

ಕೆಳಗಿನ ಷರತ್ತುಗಳನ್ನು ಪೂರೈಸಬೇಕಿದೆ.

ಹೊಸ ಜಿಯೋ ಫೋನ್‌ಗೆ ನಿಮ್ಮ ಹಳೆಯ ಫೋನ್ ಅನ್ನು ಬದಲಾಯಸಲು ಈ ಷರತ್ತುಗಳನ್ನು ಪೂರೈಸಬೇಕಿದೆ. ನಿಮ್ಮ ಹಳೆಯ ಮೊಬೈಲ್ ಫೋನ್ ಕೆಲಸ ಮಾಡುತ್ತಿರಬೇಕು. ಕಳೆದ 3.5 ವರ್ಷಗಳ (2015) ಒಳಗೆ ಖರೀದಿಸಿದ ಮೊಬೈಲ್ ಆಗಿರಬೇಕು, ಅದು ಯಾವುದೇ 2ಜಿ, 3ಜಿ, 4ಜಿ (ನಾನ್-ವೋಲ್ಟ್) ಸಾಧನಗಳನ್ನು ವಿನಿಮಯಕ್ಕಾಗಿ ಒಪ್ಪಿಕೊಳ್ಳಲಾಗುತ್ತದೆ.

ವಿನಿಮಯ ಮಾಡಿಕೊಳ್ಳಲು ನೆನಪಿಡಿ!

ವಿನಿಮಯ ಮಾಡಿಕೊಳ್ಳಲು ನೆನಪಿಡಿ!

ಹಳೆಯ ಫೀಚರ್ ಫೋನ್ ಅನ್ನು ವಿನಿಮಯ ಮಾಡಿಕೊಳ್ಳಲು ಹೋಗುವ ಮುನ್ನ ನೀವು ಈ ಅಂಶಗಳನ್ನು ನೆನಪಿನಲ್ಲಿ ಇಡಬೇಕಾಗುತ್ತದೆ. ಹಳೆಯ ಮೊಬೈಲ್ ಫೋನ್ ಕೆಲಸ ಮಾಡುತ್ತಿರಬೇಕು. ಹಳೆಯ ಫೋನ್ ಬ್ಯಾಟರಿ ಮತ್ತು ಚಾರ್ಜರ್ ಹೊಂದಿರಬೇಕು. MNP(ಮೊಬೈಲ್ ನಂಬರ್ ಪೋರ್ಟಬಲಿಟಿ)ಗೆ ಬದಲಾಗಲು ಹೊಸ MNP JIO ಸಂಖ್ಯೆಯಮನ್ನು ಹೊಂದಿರಬೇಕು.

ಎಕ್ಸ್‌ಚೇಂಜ್ ನಂತರ ಮುಂದೇನು?

ಎಕ್ಸ್‌ಚೇಂಜ್ ನಂತರ ಮುಂದೇನು?

ನಿಮ್ಮ ಹಳೆಯ ಫೋನ್ ಅನ್ನು ಹೊಸ ಜಿಯೋ ಫೋನ್‌ಗೆ ಬದಲಾಯಿಸಿಕೊಂಡ ನಂತರ, ನಿಮಗೆ ಜಿಯೋ ಸ್ಟೋರ್‌ನಲ್ಲಿ ಹೊಸ ಸಿಮ್ ಅನ್ನು ನೀಡಲಾಗುತ್ತದೆ. ಒಂದು ವೇಳೆ ನಿಮ್ಮ ಹಳೆ ನಂಬರ್ ಅನ್ನು ನೀವು ಉಳಿಸಿಕೊಳ್ಳಲು ಬಯಸಿದರೆ, ನಿಮ್ಮ ಹಳೆಯ ನಂಬರ್‌ ಅನ್ನೇ ಜಿಯೋಗೆ ಪೋರ್ಟ್ ಮಾಡಲಾಗುತ್ತದೆ ಎಂದು ಜಿಯೋ ಪ್ರಕಟಣೆಯಲ್ಲಿ ತಿಳಿಸಿದೆ.

ಏನೆಲ್ಲಾ ಆಫರ್‌ಗಳು ಲಭ್ಯ?

ಏನೆಲ್ಲಾ ಆಫರ್‌ಗಳು ಲಭ್ಯ?

ಹಳೆಯ ಫೋನ್ ಅನ್ನು ಹೊಸ ಜಿಯೋ ಫೋನ್‌ಗೆ ಬದಲಾಯಿಸಿಕೊಂಡವರಿಗೆ, ಮಾನ್ಸೂನ್ ಆಫರ್ ಅಂಗವಾಗಿ ಜಿಯೋ ಹೊಸದಾಗಿ ಎರಡು ಆಫರ್‌ಗಳನ್ನು ನೀಡಿದೆ.! ಜಿಯೋ 594 ರೂಪಾಯಿಗಳ ಆಫರ್ ಅಥವಾ ಜಿಯೋ 99 ರೂಪಾಯಿಗಳ ಆಫರ್‌ಗಳು ಕ್ರಮವಾಗಿ, ಒಂದು ತಿಂಗಳು ಮತ್ತು ಆರು ತಿಂಗಳ ವ್ಯಾಲಿಡಿಟಿಯನ್ನು ಹೊಂದಿವೆ.

Best Mobiles in India

English summary
Reliance Jio's 100% cashback offer. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X