Home
ಸುದ್ದಿಜಾಲ

credit card: ಈ ಹೊಸ ಕ್ರೆಡಿಟ್‌ ಕಾರ್ಡ್‌ಗೆ ಸಂಖ್ಯೆ, ಸಿವಿವಿ, ಮುಕ್ತಾಯ ದಿನಾಂಕ ಇಲ್ಲ! ಸೌಲಭ್ಯ ಮಾತ್ರ ಸಾಕಷ್ಟು!

ಕ್ರೆಡಿಟ್‌ ಕಾರ್ಡ್‌ಗಳು (credit cards) ಗ್ರಾಹಕರಿಗೆ ವಿವಿಧ ಸೌಲಭ್ಯಗಳನ್ನು ನೀಡುವ ಮೂಲಕ ಹಲವಾರು ರೀತಿಯಲ್ಲಿ ಅನುಕೂಲ ಮಾಡಿಕೊಡುತ್ತಿವೆ. ಅದರಲ್ಲೂ ಈ ಕಾರ್ಡ್‌ಗಳನ್ನು ಎಷ್ಟು ಜೋಪಾನವಾಗಿ ಬಳಕೆ ಮಾಡುತ್ತೇವೋ ಅಷ್ಟೇ ಒಳ್ಳೆಯದು. ಈ ನಡುವೆ ಭಾರತದಲ್ಲಿ ಹೊಸ ರೀತಿಯ ಕ್ರೆಡಿಟ್ ಲಾರ್ಡ್‌ ಅನ್ನು ಪರಿಚಯಿಸಲಾಗುತ್ತಿದೆ.

ಹೌದು, ಯಾವುದೇ ಬ್ಯಾಂಕ್‌ ಸಂಬಂಧಿ ಕಾರ್ಡ್‌ ಅಂದರೆ ಅದರಲ್ಲಿ ಕಾರ್ಡ್‌ನ ಸಂಖ್ಯೆ, ಹೆಸರು, ಸಿವಿವಿ, ಮುಕ್ತಾಯದ ದಿನಾಂಕಗಳು ಇರುತ್ತವೆ. ಆದರೆ ಈಗ ಪರಿಚಯಿಸಲಾಗುತ್ತಿರುವ ಕಾರ್ಡ್‌ನಲ್ಲಿ ಇದ್ಯಾವುದೂ ಇಲ್ಲ. ಹಾಗಿದ್ರೆ ಇದ್ಯಾವ ಕಾರ್ಡ್‌?, ಯಾವ ಬ್ಯಾಂಕ್‌ ಈ ಕ್ರೆಡಿಟ್‌ ಕಾರ್ಡ್‌ ಅನ್ನು ಪರಿಚಯಿಸುತ್ತಿದೆ?, ಈ ಕಾರ್ಡ್‌ ಬಳಕೆ ಮಾಡಿಕೊಂಡು ವ್ಯವಹಾರ ಮಾಡಿದ್ರೆ ಏನೆಲ್ಲಾ ಲಾಭ? ಎಂಬ ಮಾಹಿತಿ ಇಲ್ಲಿದೆ ನೋಡಿ.

ಈ ಹೊಸ ಕ್ರೆಡಿಟ್‌ ಕಾರ್ಡ್‌ಗೆ ಸಂಖ್ಯೆ, ಸಿವಿವಿ, ಮುಕ್ತಾಯ ದಿನಾಂಕ ಇಲ್ಲ!...

ಆಕ್ಸಿಸ್ ಬ್ಯಾಂಕ್ ನಂಬರ್‌ಲೆಸ್ ಕ್ರೆಡಿಟ್ ಕಾರ್ಡ್: ಆಕ್ಸಿಸ್‌ ಬ್ಯಾಂಕ್‌ (fibe Axis Bank Numberless Credit Card) ಈ ಹೊಸ ರೀತಿಯ ಕ್ರೆಡಿಟ್ ಕಾರ್ಡ್‌ ಅನ್ನು ಮೊದಲ ಬಾರಿಗೆ ಭಾರತದಲ್ಲಿ ಪರಿಚಯಿಸಲು ಮುಂದಾಗಿದೆ. ಮೊದಲೇ ತಿಳಿಸಿದಂತೆ ಈ ಕಾರ್ಡ್‌ನಲ್ಲಿ ಯಾವುದೇ ಕಾರ್ಡ್ ಸಂಖ್ಯೆಯನ್ನು ಇರುವುದಿಲ್ಲ, ಯಾವುದೇ ಮುಕ್ತಾಯ ದಿನಾಂಕವೂ ಇರುವುದಿಲ್ಲ. ಜೊತೆಗೆ ನೀವು ಇದರಲ್ಲಿ ಸಿವಿವಿ ಸಂಖ್ಯೆಯನ್ನೂ ಸಹ ನೋಡಲು ಆಗುವುದಿಲ್ಲ.

ಫೈಬ್‌(fibe) ಆಕ್ಸಿಸ್ ಬ್ಯಾಂಕ್ ನಂಬರ್‌ಲೆಸ್ ಕ್ರೆಡಿಟ್ ಕಾರ್ಡ್: ಆಕ್ಸಿಸ್ ಬ್ಯಾಂಕ್ ಮತ್ತು ಫೈಬ್‌ (ಇದನ್ನು ಈ ಹಿಂದೆ ಅರ್ಲಿ ಸ್ಯಾಲರಿ ಎಂದು ಕರೆಯಲಾಗುತ್ತಿತ್ತು) ಭಾರತದ ಮೊದಲ ನಂಬರ್‌ಲೆಸ್ ಕ್ರೆಡಿಟ್ ಕಾರ್ಡ್ ಅನ್ನು ಪ್ರಾರಂಭಿಸಲು ಪಾಲುದಾರಿಕೆ ಮಾಡಿಕೊಂಡಿವೆ. ಈ ಕಾರ್ಡ್ ಟೆಕ್ ಬುದ್ಧಿವಂತ ಪೀಳಿಗೆಗೆ ಬಹಳ ಪರಿಣಾಮಕಾರಿಯಾಗಲಿದೆ. ಅದೆಲ್ಲಕ್ಕೂ ಮಿಗಿಲಾಗಿ ಭದ್ರತೆಯ ವಿಷಯದಲ್ಲಿ ಹೆಚ್ಚಿನ ಫೀಚರ್ಸ್‌ ಪಡೆದಿದೆ.

ಅಂದರೆ ಹೆಚ್ಚುವರಿ ಭದ್ರತಾ ಲೇಯರ್‌ನೊಂದಿಗೆ ಬರುವ ಈ ರೀತಿಯ ಮೊದಲ ಕ್ರೆಡಿಟ್ ಕಾರ್ಡ್ ಇದಾಗಿರಲಿದೆ. ಈ ಫೈಬ್‌ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್(Fibe Axis Bank Credit Card) ಯಾವುದೇ ರೀತಿಯ ಸಂಖ್ಯೆಯನ್ನು ಹೊಂದಿರದ ಕಾರ್ಡ್ ಆಗಿದ್ದು, ಈ ಮೂಲಕ ದೇಶದ ಮೊದಲ ಕಾರ್ಡ್ ಆಗಿಯೂ ಜನಪ್ರಿಯವಾಗಿರಲಿದೆ. ಈ ಮೂಲಕ ಆಕ್ಸಿಸ್‌ ಬ್ಯಾಂಕ್‌ಗಳ ಕ್ರೆಡಿಟ್‌ ಕಾರ್ಡ್‌ಗಳ ಸಾಲಿನಲ್ಲಿ ವಿಶೇಷವಾಗಿ ಗುರುತಿಸಿಕೊಳ್ಳಲಿದೆ.

ಈ ಕಾರ್ಡ್‌ನಲ್ಲಿ ಯಾವುದೇ ಮಾಹಿತಿ ಇರುವುದಿಲ್ಲ: ಗ್ರಾಹಕರು ಈ ಕಾರ್ಡ್‌ನಲ್ಲಿ ಯಾವುದೇ ಕಾರ್ಡ್ ಸಂಖ್ಯೆಯನ್ನು ಪಡೆಯುವುದಿಲ್ಲ, ಅಥವಾ ಯಾವುದೇ ಮುಕ್ತಾಯ ದಿನಾಂಕ ಇರುವುದಿಲ್ಲ ಹಾಗೂ ಯಾವುದೇ ಸಿವಿವಿ ಸಂಖ್ಯೆ ಸಹ ಇರುವುದಿಲ್ಲ. ಈ ಮೂಲಕ ಕಾರ್ಡ್‌ ಹಾಗೂ ಕಾರ್ಡ್ ಮಾಲೀಕರ ಗುರುತನ್ನು ಎಂದಿಗೂ ತಿಳಿದುಕೊಳ್ಳಲು ಆಗುವುದಿಲ್ಲ. ಈ ಮೂಲಕ ಅಕ್ರಮ ಬಳಕೆಯ ಸಾಧ್ಯತೆಯನ್ನು ಕಡಿಮೆ ಮಾಡಿದಂತೆ ಆಗಲಿದೆ.

ಇದರೊಂದಿಗೆ ಈ ಕಾರ್ಡ್‌ ಅನ್ನು ಕಳ್ಳತನ ಮಾಡಿ ಬಳಕೆ ಮಾಡಲು ಮುಂದಾದರೆ ಯಾವುದೇ ಕಾರಣಕ್ಕೂ ಆಗುವುದಿಲ್ಲ. ಗ್ರಾಹಕರ ಗುರುತನ್ನು ರಕ್ಷಿಸುವಲ್ಲಿ ಇದು ತುಂಬಾ ಪರಿಣಾಮಕಾರಿಯಾಗಿದ್ದು, ಕಾರ್ಡ್‌ನಲ್ಲಿ ಯಾವುದೇ ಸಂಖ್ಯೆಯಿಲ್ಲದ ಕಾರಣ, ಗ್ರಾಹಕರು ಸಂಪೂರ್ಣ ಭದ್ರತೆ ಮತ್ತು ಗೌಪ್ಯತೆಯ ಪ್ರಯೋಜನಗಳನ್ನು ಈ ಮೂಲಕ ಪಡೆದುಕೊಳ್ಳಲಿದ್ದಾರೆ.

ಇನ್ನು ಗ್ರಾಹಕರು ತಮ್ಮ ಫೈಬ್ ಆಕ್ಸಿಸ್‌ ಬ್ಯಾಂಕ್ ಕ್ರೆಡಿಟ್ ಕಾರ್ಡ್ ವಿವರಗಳನ್ನು ಫೈಬ್‌ ಆಪ್‌ ಬಳಕೆ ಮಾಡಿಕೊಂಡು ಬಳಕೆ ಮಾಡಬಹುದಾಗಿದೆ. ಸ್ವಲ್ಪ ಮಾಹಿತಿಯನ್ನು ಒದಗಿಸುವ ಮೂಲಕ ಅದರ ಮೇಲೆ ಸಂಪೂರ್ಣ ಕಂಟ್ರೋಲ್‌ ಅನ್ನು ನೀವು ಪಡೆಯಬಹುದು. ಇದರೊಂದಿಗೆ ಈ ಕಾರ್ಡ್‌ ವ್ಯವಹಾರದಲ್ಲಿ ಏನೆಲ್ಲಾ ಪ್ರಯೋಜನ ಸಿಗಲಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

- ಎಲ್ಲಾ ರೀತಿಯ ರೆಸ್ಟೋರೆಂಟ್‌ಗಳಿಂದ ಆನ್‌ಲೈನ್ ಆಹಾರ ವಿತರಣಾ ಆರ್ಡರ್‌ಗಳಲ್ಲಿ ಫ್ಲಾಟ್ 3% ಕ್ಯಾಶ್‌ಬ್ಯಾಕ್ ಲಭ್ಯವಿದೆ ಹಾಗೂ ರೈಡ್ ಹೈಲಿಂಗ್ ಆಪ್‌ಗಳಲ್ಲಿ ಸ್ಥಳೀಯ ಪ್ರಯಾಣದ ಮೇಲೆ ನೀವು 3% ಕ್ಯಾಶ್‌ಬ್ಯಾಕ್ ಪಡೆಯಬಹುದು. ಇದರೊಂದಿಗೆ ಆನ್‌ಲೈನ್ ಟಿಕೆಟಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ 3 ಪ್ರತಿಶತ ಕ್ಯಾಶ್‌ಬ್ಯಾಕ್ ಸಹ ಲಭ್ಯವಿದೆ.

- ಇದಲ್ಲದೆ ಗ್ರಾಹಕರು ಎಲ್ಲಾ ಆನ್‌ಲೈನ್ ಮತ್ತು ಆಫ್‌ಲೈನ್ ವಹಿವಾಟುಗಳಲ್ಲಿ 1 ಶೇಕಡಾ ಕ್ಯಾಶ್‌ಬ್ಯಾಕ್ ಪಡೆಯುತ್ತಾರೆ, ರುಪೇ (Rupay) ಮೂಲಕ ಯುಪಿಐ ಗೆ ಕ್ರೆಡಿಟ್ ಕಾರ್ಡ್ ಲಿಂಕ್ ಮಾಡುವ ಸೌಲಭ್ಯ ಸಹ ಇದ್ದು, ಈ ಕಾರ್ಡ್ ರುಪೇ ಮೂಲಕ ಸಂಯೋಜಿತವಾಗಿದೆ, ಇದು ಗ್ರಾಹಕರು ಈ ಕ್ರೆಡಿಟ್ ಕಾರ್ಡ್ ಅನ್ನು ಯುಪಿಐ (UPI) ಯೊಂದಿಗೆ ಲಿಂಕ್ ಮಾಡಲು ಅನುಮತಿಸುತ್ತದೆ.

- ಎಲ್ಲಾ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಮೂಲಕ ವಹಿವಾಟುಗಳನ್ನು ಮಾಡುವುದಲ್ಲದೆ, ಈ ಕಾರ್ಡ್ ಅನ್ನು ಎಲ್ಲಾ ಆಫ್‌ಲೈನ್ ಸ್ಟೋರ್‌ಗಳಲ್ಲಿ ಸಹ ಸ್ವೀಕರಿಸಲಾಗುತ್ತದೆ. ಗ್ರಾಹಕರ ಅನುಕೂಲಕ್ಕಾಗಿ ಇದು ಟ್ಯಾಪ್ ಮತ್ತು ಪೇ ಫೀಚರ್ (Tap and Pay Feature) ಅನ್ನು ಸಹ ಹೊಂದಿದ್ದು, ಸುಲಭವಾಗಿ ಇದನ್ನು ಬಳಕೆ ಮಾಡಬಹುದಾಗಿದೆ.

ಈ ಹೊಸ ಕ್ರೆಡಿಟ್‌ ಕಾರ್ಡ್‌ಗೆ ಸಂಖ್ಯೆ, ಸಿವಿವಿ, ಮುಕ್ತಾಯ ದಿನಾಂಕ ಇಲ್ಲ!...

ಕಾರ್ಡ್ ಶುಲ್ಕ ಎಷ್ಟು?: ಈ ಕಾರ್ಡ್ ಪಡೆದುಕೊಳ್ಳಲು ನೀವು ಯಾವುದೇ ಹಣ ಪಾವತಿ ಮಾಡಬೇಕಿಲ್ಲ. ಜೊತೆಗೆ ಶೂನ್ಯ ವಾರ್ಷಿಕ ಶುಲ್ಕದೊಂದಿಗೆ ಬರುತ್ತದೆ ಮತ್ತು ಈ ಸೌಲಭ್ಯವು ಜೀವಿತಾವಧಿವರೆಗೆ ಲಭ್ಯವಿದೆ. ಈ ಕಾರ್ಡ್‌ನ ಇತರ ಫೀಚರ್ಸ್ ಏನೆಂದರೆ ಇದು ಪ್ರತಿ ವರ್ಷ ನಾಲ್ಕು ದೇಶೀಯ ವಿಮಾನ ನಿಲ್ದಾಣದ ಲಾಂಜ್‌ಗಳಿಗೆ ಪ್ರವೇಶವನ್ನು ನೀಡುತ್ತದೆ. 400 ರೂ. ರಿಂದ 5000 ರೂ. ಗಳ ನಡುವೆ ಇಂಧನ ಸರ್ಚಾರ್ಜ್ ಮನ್ನಾ ಪ್ರಯೋಜನವನ್ನು ಸಹ ನೀಡುತ್ತದೆ.

Best Mobiles in India

English summary
Credit card means it contains card number, name, CVV, expiry dates. But these informantion is not available in Fibe Axis Bank Numberless Credit Card which is being introduced now.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+