Home
ಸುದ್ದಿಜಾಲ

iPhone: ಆಪಲ್‌ ಐಫೋನ್‌ ಖರೀದಿ ಮಾಡುವವರಿಗೆ ಉತ್ತಮ ಟೈಮ್‌; ಅಂತಹುದ್ದೇನಿದೆ ಆಫರ್?

ಐಫೋನ್‌ (iPhone) ಖರೀದಿ ಮಾಡುವುದು ಸಾಕಷ್ಟು ಜನರ ಕನಸು. ಅದರಲ್ಲೂ ಹೊಸ ಸರಣಿಯ ಫೋನ್‌ಗಳಿಗೆ ಗ್ರಾಹಕರು ಮಾರುಹೋಗಿದ್ದಾರೆ. ಇದರಿಂದಾಗಿಯೇ ಭಾರತದಲ್ಲಿ ಈ ಫೋನ್‌ಗಳು ಹೆಚ್ಚು ಹೆಚ್ಚಾಗಿ ಸೇಲ್‌ ಆಗುತ್ತಿವೆ. ಅದಾಗ್ಯೂ ಯಾರೆಲ್ಲಾ ದುಬಾರಿ ಬೆಲೆಯಿಂದಾಗಿ ಈ ಫೋನ್‌ ಖರೀದಿ ಮಾಡಲು ಸಾಧ್ಯ ಆಗಿಲ್ಲವೋ ಅವರು ಈಗ ಈ ಫೋನ್‌ ಅನ್ನು ಸುಲಭವಾಗಿ ಕೊಂಡುಕೊಳ್ಳಬಹುದಾಗಿದೆ.

ಹೌದು, ಈಗಾಗಲೇ ಪ್ರಮುಖ ಇ-ಕಾಮರ್ಸ್‌ ಸೈಟ್‌ಗಳಲ್ಲಿ ಐಫೋನ್‌ ಸೇರಿದಂತೆ ಸಾಕಷ್ಟು ಸ್ಮಾರ್ಟ್ಫೋನ್‌ಗಳಿಗೆ ವಿವಿಧ ರೀತಿಯಲ್ಲಿ ಆಫರ್ ಘೋ‍ಷಣೆ ಮಾಡಲಾಗಿದೆ. ಆದರೆ ಈ ಸೈಟ್‌ನಲ್ಲಿ ಇನ್ನೂ ಹೆಚ್ಚಿನ ಆಫರ್ ಘೋಷಣೆ ಮಾಡಲಾಗಿದ್ದು, ಇದರಿಂದ ಸುಲಭವಾಗಿ ಹೊಸ ಐಫೋನ್ ಅನ್ನು ಖರೀದಿ ಮಾಡಬಹುದಾಗಿದೆ. ಹಾಗಿದ್ರೆ, ಎಲ್ಲಿ ಈ ಆಫರ್ ಲಭ್ಯ?, ಈ ಫೋನ್‌ ಸೇರಿದಂತೆ ಇತರೆ ಡಿವೈಸ್‌ಗಳಿಗೆ ಏನೆಲ್ಲಾ ಆಫರ್ ಇದೆ ಅನ್ನೋದನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಆಪಲ್‌ ಐಫೋನ್‌ ಖರೀದಿ ಮಾಡುವವರಿಗೆ ಉತ್ತಮ ಟೈಮ್‌; ಅಂತಹುದ್ದೇನಿದೆ ಆಫರ್?

ಕ್ರೋಮಾ ಇದೀಗ ಎವೆರಿಥಿಂಗ್ ಆಪಲ್ ಕ್ಯಾಂಪೇನ್ (croma everything Apple campaign) ಎಂಬ ವಿಶೇಷ ಸೇಲ್‌ ಅನ್ನು ಘೋಷಣೆ ಮಾಡಿದೆ. ಈ ಸೇಲ್‌ನಲ್ಲಿ ಗ್ರಾಹಕರಿಗೆ ಆಪಲ್ ಉತ್ಪನ್ನಗಳ ಮೇಲೆ ಫೆಬ್ರವರಿ 9 ರಿಂದ 19 ರವರೆಗೆ ಪ್ರಮುಖ ರಿಯಾಯಿತಿಗಳನ್ನು ನೀಡುತ್ತಿದೆ. ಅದರಲ್ಲೂ ನೀವು ಆಪಲ್‌ ಉತ್ಪನ್ನಗಳನ್ನು ಅಪ್‌ಗ್ರೇಡ್ ಮಾಡಲು ಅಥವಾ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ನಿಂದ ಐಫೋನ್‌ಗೆ ಬದಲಾಗಲು ಮುಂದಾಗಿದ್ರೆ ಈ ಆಫರ್ ಮಿಸ್‌ ಮಾಡಿಕೊಳ್ಳಬೇಡಿ.

ಈ ವಿಶೇಷ ಕೊಡುಗೆಗಳು ಸೀಮಿತ ಅವಧಿಗೆ ಮಾತ್ರ ಲಭ್ಯವಿರುತ್ತವೆ ಎಂಬುದು ನಿಮ್ಮ ಗಮನಕ್ಕೆ ಇರಲಿ. ಅದರಂತೆ ಈ ಆಪಲ್ ಉತ್ಪನ್ನಗಳನ್ನು ರಿಯಾಯಿತಿ ದರದಲ್ಲಿ ಖರೀದಿಸಲು, ನೀವು ನಿಮ್ಮ ಹತ್ತಿರದ ಕ್ರೋಮಾ ಸ್ಟೋರ್‌ಗೆ ಭೇಟಿ ನೀಡಬೇಕು ಅಥವಾ ಆನ್‌ಲೈನ್‌ನಲ್ಲಿಯೂ ಸಹ ಶಾಪಿಂಗ್ ಮಾಡಬಹುದಾಗಿದೆ. ಹಾಗೆಯೇ ಇತ್ತೀಚಿನ ಐಫೋನ್‌ಗಳು, ಮ್ಯಾಕ್‌ಬುಕ್‌ಗಳು, ಐಪ್ಯಾಡ್‌ಗಳು, ಆಪಲ್ ವಾಚ್‌ಗಳು ಮತ್ತು ಏರ್‌ಪಾಡ್‌ಗಳನ್ನು ಒಳಗೊಂಡಿರುವ ಹಲವಾರು ಆಪಲ್ ಉತ್ಪನ್ನಗಳು ಆಫರ್ ಬೆಲೆಯಲ್ಲಿ ಕಾಣಿಸಿಕೊಂಡಿವೆ.

ಆಪಲ್‌ ಐಫೋನ್‌ ಖರೀದಿ ಮಾಡುವವರಿಗೆ ಉತ್ತಮ ಟೈಮ್‌; ಅಂತಹುದ್ದೇನಿದೆ ಆಫರ್?

ಈ ಸೇಲ್‌ನಲ್ಲಿ ಗ್ರಾಹಕರು 24 ತಿಂಗಳ ನೋ-ಕಾಸ್ಟ್ ಇಎಮ್‌ಐ ಲಾಭವನ್ನು ಪಡೆಯಬಹುದಾಗಿದ್ದು,10,000 ರೂಪಾಯಿಗಳ ಎಕ್ಸ್‌ಚೇಂಜ್ ಬೋನಸ್ ಮತ್ತು ಹೆಚ್‌ಡಿಎಫ್‌ಸಿ ಬ್ಯಾಂಕ್ ಕಾರ್ಡ್‌ಗಳೊಂದಿಗೆ 6,000 ರೂಪಾಯಿಗಳ ತತ್‌ಕ್ಷಣದ ರಿಯಾಯಿತಿಯನ್ನು ಸಹ ಪಡೆಯಬಹುದಾಗಿದೆ. ಈ ಮೂಲಕ ಭಾರೀ ಹಣ ಉಳಿತಾಯದೊಂದಿಗೆ ನಿಮ್ಮಿಷ್ಟದ ಐಫೋನ್‌ ಅಥವಾ ಆಪಲ್‌ ಡಿವೈಸ್‌ಗಳನ್ನು ಖರೀದಿ ಮಾಡಬಹುದಾಗಿದೆ.

ಅದರಲ್ಲೂ ಗ್ರಾಹಕರು ಇತ್ತೀಚಿನ ಐಫೋನ್‌ 15 (iPhone 15) ಅನ್ನು ಅಫರ್ ಬೆಲೆಗೆ ಖರೀದಿ ಮಾಡಬಹುದಾಗಿದೆ. ಅಥವಾ ಇಷ್ಟು ಹಣ ಇಲ್ಲ ಎಂದಾದರೆ 1750 ರೂ.ಗಳಿಂದ ಪ್ರಾರಂಭವಾಗುವ ಮಾಸಿಕ ಇಎಮ್‌ಐ ಮೂಲಕ ಖರೀದಿ ಮಾಡಬಹುದು. ಇದರೊಂದಿಗೆ ಮ್ಯಾಕ್‌ಬುಕ್‌ ಏರ್‌ M1 (MacBook Air M1) ಅನ್ನು ಸಹ ಅಫರ್‌ನಲ್ಲಿ ಖರೀದಿ ಮಾಡಬಹುದಾಗಿದ್ದು, ಈ ಡಿವೈಸ್‌ಗೂ ಸಹ ಇಎಮ್‌ಐ ಆಫರ್ ನೀಡಲಾಗಿದೆ. ಅಂದರೆ ತಿಂಗಳಿಗೆ 1,299 ರೂ.ಗಳನ್ನು ಪಾವತಿ ಮಾಡಿದ್ರೆ ಸಾಕು.

ಆಪಲ್‌ ಐಫೋನ್‌ ಖರೀದಿ ಮಾಡುವವರಿಗೆ ಉತ್ತಮ ಟೈಮ್‌; ಅಂತಹುದ್ದೇನಿದೆ ಆಫರ್?

ಇವಿಷ್ಟೇ ಅಲ್ಲದೆ ಐಪ್ಯಾಡ್ ಅನ್ನು ಖರೀದಿಸಲು ಆಸಕ್ತಿಯುಳ್ಳವರು 9 ನೇ ಜನ್‌ ಐಪ್ಯಾಡ್‌ ಅನ್ನು 28,290 ರೂ.ಗಳಿಂದ ಆರಂಭವಾಗುವ ಬೆಲೆಯೊಂದಿಗೆ ಖರೀದಿ ಮಾಡಬಹುದಾಗಿದೆ. ಜೊತೆಗೆ ಆಪಲ್‌ ವಾಚ್‌ SE 2 ಮತ್ತು ಸರಣಿ 9 ಕ್ರಮವಾಗಿ 25,900 ರೂ.ಗಳು ಮತ್ತು 32,400 ರೂ.ಗಳಿಂದ ಪ್ರಾರಂಭವಾಗುತ್ತವೆ. ಈ ಸ್ಮಾರ್ಟ್‌ವಾಚ್‌ಗಳ ಮೇಲೆ ಗ್ರಾಹಕರು ರಿಯಾಯಿತಿಗಳು, ಕ್ಯಾಶ್‌ಬ್ಯಾಕ್ ಮತ್ತು ವಿನಿಮಯ ಬೋನಸ್‌ ಪಡೆಯಬಹುದಾಗಿದೆ. ಅಲ್ಲದೆ ಏರ್‌ಪಾಡ್ಸ್‌ ಪ್ರೊ 2 ಜನ್‌ ಅನ್ನೂ ಸಹ 20,490 ರೂ.ಗಳ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ.

Best Mobiles in India

English summary
Croma now announced a special sale called everything Apple campaign. In this sale, Apple is offering major discounts to customers on iPhone and other devices from February 9 to 19.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+