Home
ಸುದ್ದಿಜಾಲ

Croma: ಕ್ರೋಮಾ ದೀಪಾವಳಿ ಸೇಲ್‌: ಇಯರ್‌ಬಡ್ಸ್‌,ಸ್ಪೀಕರ್ ಸೇರಿದಂತೆ ಅನೇಕ ಡಿವೈಸ್‌ಗಳಿಗೆ ಬೊಂಬಾಟ್‌ ಡಿಸ್ಕೌಂಟ್‌!

ಕ್ರೋಮಾ (Croma) ಈಗಾಗಲೇ ಸಾಕಷ್ಟು ಸ್ಮಾರ್ಟ್‌ಡಿವೈಸ್‌ಗಳನ್ನು ಆಫರ್ ಬೆಲೆಗೆ ನೀಡುವ ಮೂಲಕ ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡಿತ್ತು. ಆದರೆ, ಈಗ ದೀಪಾವಳಿ ಹಿನ್ನೆಲೆ ವಿಶೇಷ ಸೇಲ್‌ ಆಯೋಜನೆ ಮಾಡಿದ್ದು, ಸ್ಪೀಕರ್‌, ಇಯರ್‌ಬಡ್ಸ್‌, ಕಾಫಿ ಮೇಕರ್ ಸೇರಿದಂತೆ ಅನೇಕ ಸ್ಮಾರ್ಟ್‌ ಡಿವೈಸ್‌ಗಳಿಗೆ ದೊಡ್ಡ ಮಟ್ಟದ ರಿಯಾಯಿತಿ ಘೋಷಣೆ ಮಾಡಿದೆ.

ಹೌದು, ದೀಪಾವಳಿ ಹಬ್ಬಕ್ಕೆ ತನ್ನೆಲ್ಲಾ ಗ್ರಾಹಕರಿಗೆ ಸಂತಸ ನೀಡಲು ಕ್ರೋಮಾ ವಿಶೇಷ ದೀಪಾವಳಿ ಸೇಲ್‌ (Croma Diwali Sale) ಆಯೋಜನೆ ಮಾಡಿದೆ. ಅದರಲ್ಲೂ ಎಚ್‌ಡಿಎಫ್‌ಸಿ ಮತ್ತು ಐಸಿಐಸಿಐ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳ ಬಳಕೆ ಮಾಡಿ ಖರೀದಿ ಮಾಡಿದ್ರೆ ಗ್ರಾಹಕರು 2,000 ರೂ.ವರೆಗೆ ಅಥವಾ 10 % ರಿಯಾಯಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಹಾಗಿದ್ರೆ, ಯಾವೆಲ್ಲಾ ಡಿವೈಸ್‌ಗಳಿಗೆ ಏನೆಲ್ಲಾ ಆಫರ್ ಇದೆ ನೋಡೋಣ ಬನ್ನಿ.

ಇಯರ್‌ಬಡ್ಸ್‌,ಸ್ಪೀಕರ್ ಸೇರಿದಂತೆ ಅನೇಕ ಡಿವೈಸ್‌ಗಳಿಗೆ ಬೊಂಬಾಟ್‌ ಡಿಸ್ಕೌಂಟ್‌!

ಕಳೆದ ಕೆಲವು ವರ್ಷಗಳಿಂದ ತನ್ನದೇ ಆದ ಲೇಬಲ್ ಉತ್ಪನ್ನಗಳು ಕ್ರೋಮಾ ಮಾರಾಟ ಮಾಡಿಕೊಂಡು ಬರುತ್ತಿದೆ. ಜೊತೆಗೆ ಈ ವಿಭಾಗದಲ್ಲಿ ದೊಡ್ಡ ಬೆಳವಣಿಗೆಯನ್ನೂ ಸಹ ಕಂಡಿದೆ. ಕಂಪನಿಯು ಪ್ರಸ್ತುತ ಸ್ವಂತ-ಲೇಬಲ್ ವಿಭಾಗದಲ್ಲಿ 400+ ಉತ್ಪನ್ನಗಳನ್ನು ಹೊಂದಿದ್ದು, ಇವುಗಳು ಸುಧಾರಿತ ಫೀಚರ್ಸ್‌ ಅನ್ನು ಹೊಂದಿವೆ. ಈ ವಸ್ತುಗಳಿಗೆ ಈಗ ವಿಶೇಷ ಆಫರ್ ನೀಡಲಾಗಿದ್ದು, ಬ್ಯಾಂಕ್‌ ಆಫರ್ ಮೂಲಕ ಇನ್ನೂ ಕಡಿಮೆ ದರದಲ್ಲಿ ಖರೀದಿ ಮಾಡಲು ಅನುಕೂಲ ಮಾಡಿಕೊಡಲಾಗಿದೆ.

ಕ್ರೋಮಾ ಬ್ಯಾಂಕ್ ಆಫರ್: ಎಚ್‌ಡಿಎಫ್‌ಸಿ ಮತ್ತು ಐಸಿಐಸಿಐ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳ ಮೂಲಕ ಗ್ರಾಹಕರು 2,000ರೂ.ವರೆಗೆ 10 ಪ್ರತಿಶತ ರಿಯಾಯಿತಿಯನ್ನು ಪಡೆಯಬಹುದು. ಹಾಗೆಯೇ ಕ್ರೋಮಾ ವೆಬ್‌ಸೈಟ್ ಮತ್ತು ಸ್ಟೋರ್‌ನಲ್ಲಿ ಪ್ರಮುಖ ಬ್ಯಾಂಕ್ ಕಾರ್ಡ್‌ ಮೇಲೆ ಖರೀದಿ ಮಾಡಿದ್ರೆ 12 ತಿಂಗಳವರೆಗೆ ಯಾವುದೇ ವೆಚ್ಚದ ಇಎಮ್‌ಐ ಆಯ್ಕೆ ಇದೆ.

ಇದರೊಂದಿಗೆ 1,000 ಕ್ಕಿಂತ ಹೆಚ್ಚಿನ ಬೆಲೆ ಇರುವ ಎಲ್ಲಾ ಕ್ರೋಮಾ ಆಡಿಯೋ ಡಿವೈಸ್‌ಗಳ ಮೇಲೆ 500 ರೂ. ರಿಯಾಯಿತಿ ಪಡೆಯುತ್ತಾರೆ. ಜೊತೆಗೆ ಕ್ರೋಮಾ ಸೈಡ್-ಬೈ-ಸೈಡ್ ರೆಫ್ರಿಜರೇಟರ್ ಅನ್ನು ಖರೀದಿಸುವ ಗ್ರಾಹಕರು 45L ಡೈರೆಕ್ಟ್ ಕೂಲ್ ರೆಫ್ರಿಜರೇಟರ್ ಅನ್ನು ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ. ಜೊತೆಗೆ ಕ್ರೋಮಾ ವಾಷಿಂಗ್ ಮೆಷಿನ್‌ಗಳನ್ನು ಖರೀದಿಸುವ ಗ್ರಾಹಕರಿಗೆ ಕ್ರೋಮಾ 2000W ಸ್ಟೀಮ್ ಐರನ್ ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ.

ಇಯರ್‌ಬಡ್ಸ್‌,ಸ್ಪೀಕರ್ ಸೇರಿದಂತೆ ಅನೇಕ ಡಿವೈಸ್‌ಗಳಿಗೆ ಬೊಂಬಾಟ್‌ ಡಿಸ್ಕೌಂಟ್‌!

ಕ್ರೋಮಾ-ಮಸಾಜ್-ಗನ್: ಇನ್ನು ಕ್ರೋಮಾ ಫುಲ್ ಬಾಡಿ ಮಿನಿ ಮಸಾಜರ್ ಗನ್ ಅನ್ನು ಆಫರ್ ಬೆಲೆಗೆ ಮಾರಾಟ ಮಾಡುತ್ತಿದೆ. ಕ್ರೋಮಾದ ಸ್ವಂತ ಲೇಬಲ್ ಫುಲ್ ಬಾಡಿ ಮಿನಿ ಮಸಾಜರ್ ಗನ್ ಕೇವಲ 6,990 ರೂಗಳಲ್ಲಿ ಲಭ್ಯ ಇದೆ. ವಯಸ್ಸಾದವರಿಗೆ ಇದು ಅತ್ಯುತ್ತಮ ಡಿವೈಸ್‌ ಆಗಿದೆ. ಈ ಮಸಾಜರ್ ಇತ್ತೀಚಿನ ಫೀಚರ್ಸ್‌ ಆಯ್ಕೆ ಪಡೆದಿದ್ದು, ಸಮರ್ಥ ಕಾರ್ಯಕ್ಷಮತೆಯನ್ನು ನೀಡುತ್ತದೆ.

ಕ್ರೋಮಾ ಪೋರ್ಟಬಲ್ ಸ್ಪೀಕರ್: ಕ್ರೋಮಾ ಪೋರ್ಟಬಲ್ ಸ್ಪೀಕರ್ ಅನ್ನು ಕೇವಲ 799ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಈ ಡಿವೈಸ್ ಚಮತ್ಕಾರಿ ಸೌಂಡ್‌ ಜೊತೆಗೆ ಮತ್ತು ಆಕರ್ಷಕ ನೋಟವನ್ನು ಹೊಂದಿದೆ. ಈ ಸ್ಪೀಕರ್ 5W ಔಟ್‌ಪುಟ್ ಅನ್ನು ನೀಡಲಿದ್ದು, ಒಂದೇ ಚಾರ್ಜ್‌ನಲ್ಲಿ 21 ಗಂಟೆಗಳವರೆಗೆ ಬ್ಯಾಕಪ್‌ ನೀಡಲಿದೆ. ಇದರೊಂದಿಗೆ ಟ್ರೂ ವೈರ್‌ಲೆಸ್ ಸ್ಟಿರಿಯೊಗೆ ಬೆಂಬಲ ಮತ್ತು ಬ್ಲೂಟೂತ್, ಯುಎಸ್‌ಬಿ ಮತ್ತು ಎಸ್‌ಡಿ ಕಾರ್ಡ್‌ ಕನೆಕ್ಟಿವಿಟಿ ಸೌಲಭ್ಯ ಪಡೆದಿದೆ.

ಕ್ರೋಮಾ ಕಾಫಿ ಮೇಕರ್: ಈ ಡಿವೈಸ್‌ ಅನ್ನು ನೀವು ಕೇವಲ 990 ರೂ.ಗಳ ಆರಂಭಿಕ ಬೆಲೆಯೊಂದಿಗೆ ಖರೀದಿ ಮಾಡಬಹುದು. ಕ್ರೋಮಾ ಕಾಫಿ ಮೇಕರ್ ಕಾಫಿ ಪ್ರಿಯರಿಗೆ ಅತ್ಯುತ್ತಮ ಕೊಡುಗೆಯಾಗಿದೆ. ಇದು ಡಿಟ್ಯಾಚೇಬಲ್ ನೈಲಾನ್ ಫಿಲ್ಟರ್ ಮತ್ತು ತೊಳೆಯಬಹುದಾದ ಮತ್ತು ಮರುಬಳಕೆ ಮಾಡಬಹುದಾದ ನೈಲಾನ್ ಫಿಲ್ಟರ್‌ಗಳ ಆಯ್ಕೆ ಪಡೆದಿದ್ದು, ಇದನ್ನು ನಿರ್ವಹಿಸಲು ಸುಲಭವಾಗಿದೆ. ಅಂದರೆ ಡ್ರಿಪ್ ಸ್ಟಾಪ್ ಫಂಕ್ಷನ್, ಕೀಪ್ ವಾರ್ಮ್ ಫಂಕ್ಷನ್ ಮತ್ತು ಆಂಟಿ ಡ್ರಿಪ್ ವಾಲ್ವ್ ಅನ್ನು ಹೊಂದಿದೆ.

ಇಯರ್‌ಬಡ್ಸ್‌,ಸ್ಪೀಕರ್ ಸೇರಿದಂತೆ ಅನೇಕ ಡಿವೈಸ್‌ಗಳಿಗೆ ಬೊಂಬಾಟ್‌ ಡಿಸ್ಕೌಂಟ್‌!

ಕ್ರೋಮಾ ಟಿಡಬ್ಲ್ಯೂಎಸ್ ಇಯರ್‌ಬಡ್‌ಗಳು: ಕ್ರೋಮಾ ಟಿಡಬ್ಲ್ಯೂಎಸ್ ಇಯರ್‌ಬಡ್‌ಗಳು ನಿಮಗೆ 1,099 ರೂ.ಗಳಿಗೆ ಲಭ್ಯ ಇವೆ. ಇವುಗಳು ನಿಷ್ಕ್ರಿಯ ಶಬ್ದ ರದ್ದತಿ ಬೆಂಬಲದೊಂದಿಗೆ ಬರಲಿದ್ದು, ಆಡಿಯೊ ಉತ್ಸಾಹಿಗಳಿಗೆ ಉತ್ತಮ ಕಾರ್ಯಕ್ಷಮತೆ ಮತ್ತು ವಿನ್ಯಾಸದ ಮೂಲ ಇಷ್ಟ ಆಗಲಿವೆ. ಈ ಇಯರ್‌ಬಡ್ಸ್‌ ಅದ್ಭುತವಾದ ಬೆಸ್‌ ಧ್ವನಿಯನ್ನು ನೀಡಲಿದ್ದು, ಗೂಗಲ್‌ ಅಸಿಸ್ಟೆಂಟ್‌, ಟಚ್ ಕಂಟ್ರೋಲ್ ತಂತ್ರಜ್ಞಾನ ಮತ್ತು ಇನ್ನೂ ಹೆಚ್ಚಿನ ಆಕರ್ಷಕ ಫೀಚರ್ಸ್‌ ಅನ್ನು ಹೊಂದಿದೆ.

ಕ್ರೋಮಾ ಹೇರ್ ಸ್ಟ್ರೈಟೆನಿಂಗ್ ಬ್ರಷ್: ಕ್ರೋಮಾ ಹೇರ್ ಸ್ಟ್ರೈಟೆನಿಂಗ್ ಬ್ರಷ್ ಅನ್ನು ನೀವು 2,199 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಈ ಡಿವೈಸ್‌ ಕೇವಲ ಸೆಕೆಂಡುಗಳಲ್ಲಿ ನಿಮ್ಮ ಕೂದಲಿಗೆ ನಯವಾದ ಮತ್ತು ಹೊಳೆಯುವ ನೋಟವನ್ನು ನೀಡುತ್ತದೆ. ಈ ಗ್ಯಾಜೆಟ್ ಯಾವುದೇ ಸಂದರ್ಭಕ್ಕೂ ಸೂಕ್ತವಾಗಿದೆ. 360 ಡಿಗ್ರಿ ಸ್ವಿವೆಲ್ ನೊಂದಿಗೆ ಕಾಣಿಸಿಕೊಂಡಿದ್ದು, ಅಧಿಕ ತಾಪ ರಕ್ಷಣೆ, ಸ್ವಯಂ ಆಫ್‌ ಆಯ್ಕೆ ಸೇರಿದಂತೆ ಇನ್ನಿತರೆ ಸುರಕ್ಷತಾ ಫೀಚರ್ಸ್‌ ಆಯ್ಕೆ ಪಡೆದಿದೆ.

ಕ್ರೋಮಾ 3 ಜಾರ್ ಮಿಕ್ಸರ್ ಗ್ರೈಂಡರ್: ಕ್ರೋಮಾ 3 ಜಾರ್ ಮಿಕ್ಸರ್ ಗ್ರೈಂಡರ್ ಪ್ರತಿ ಅಡುಗೆಮನೆಗೂ ಹೊಂದಿಕೆಯಾಗುವ ಡಿವೈಸ್‌ ಆಗಿದೆ. ಇದನ್ನು ಕೇವಲ 1,399 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಇದು 500W ಪವರ್ ಮತ್ತು 3 ಜಾರ್‌ಗಳನ್ನು ಆಯ್ಕೆಯಲ್ಲಿ ಕಂಡುಬದಿದ್ದು, ಅಫ್‌ ಗ್ರೈಂಡಿಂಗ್, ಡ್ರೈ ಗ್ರೈಂಡಿಂಗ್ ಮತ್ತು ಬ್ಲೆಂಡಿಂಗ್ ಕಾರ್ಯಗಳಿಗೆ ಬೆಂಬಲ ನೀಡಲಿದೆ. ಅಷ್ಟೇ ಅಲ್ಲದೆ ಇದನ್ನು ಖರೀದಿ ಮಾಡಿದ್ರೆ 2 ವರ್ಷಗಳ ವಾರಂಟಿಯನ್ನು ಪಡೆಯಬಹುದಾಗಿದೆ.

Best Mobiles in India

English summary
Croma has organized a special Diwali Sale to delight all its customers on the occasion of Diwali. Customers can avail up to Rs 2,000 or 10% discount on purchases made using HDFC and ICICI credit and debit cards.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+