ಕ್ರೋಮಾ ಸಂಸ್ಥೆಯಿಂದ ಬಜೆಟ್‌ ದರದಲ್ಲಿ 5 ಸ್ಮಾರ್ಟ್‌ ಟಿವಿ ಬಿಡುಗಡೆ!

|

ಭಾರತದ ಅತಿದೊಡ್ಡ ಎಲೆಕ್ಟ್ರಾನಿಕ್ ಸರಕುಗಳು ಮತ್ತು ವಸ್ತುಗಳ ರೀಟೇಲ್‌ ವ್ಯಾಪಾರಿಗಳಲ್ಲಿ ಒಂದಾದ ಕ್ರೋಮಾ ಕಂಪನಿಯು ಇದೀಗ ಅಮೆಜಾನ್ ಪಾಲುದಾರಿಕೆ ಜೊತೆಗೆ ಹೊಸ ಫೈರ್ ಟಿವಿ ಆವೃತ್ತಿ ಸ್ಮಾರ್ಟ್ LED ಟಿವಿಗಳನ್ನು ಪರಿಚಯಿಸಿದೆ. ಕ್ರೋಮಾ ಕಂಪನಿಯ ಹೊಸ ಫೈರ್ ಟಿವಿ ಸರಣಿಯಲ್ಲಿ ಒಟ್ಟು ಐದು ಸ್ಮಾರ್ಟ್ ಟಿವಿಗಳನ್ನು ಬಿಡುಗಡೆ ಮಾಡಲಾಗಿದ್ದು, ಆರಂಭಿಕ ಬೆಲೆಯು 17,999ರೂ. ಆಗಿದೆ. ಈ ಸ್ಮಾರ್ಟ್‌ ಟಿವಿಗಳು ಅಮೆಜಾನ್‌ನ ಫೈರ್ ಟಿವಿಯ ಸಪೋರ್ಟ್‌ ಪಡೆದಿವೆ.

ಎಡಿಷನ್

ಹೌದು, ಜನಪ್ರಿಯ ಎಲೆಕ್ಟ್ರಾನಿಕ್ ಸಂಸ್ಥೆಗಳಲ್ಲಿ ಒಂದಾದ ಕ್ರೋಮಾ ಈಗ ದೇಶಿಯ ಮಾರುಕಟ್ಟೆಯಲ್ಲಿ ಕ್ರೋಮಾ ಫೈರ್ ಟಿವಿ ಎಡಿಷನ್ ಸ್ಮಾರ್ಟ್ LED ಟಿವಿಗಳನ್ನು ಲಾಂಚ್ ಮಾಡಿದೆ. ZEE5, ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ, ಡಿಸ್ನಿ + ಹಾಟ್‌ಸ್ಟಾರ್, ಸೋನಿಲಿವ್ ಸೇರಿದಂತೆ ಸುಮಾರು 500ಕ್ಕೂ ಹೆಚ್ಚಿನ ಓಟಿಟಿ ಆಪ್‌ಗಳಿಗೆ ಆಕ್ಸಸ್ ಮಾಡುವ ಸೌಲಭ್ಯವನ್ನು ಪಡೆದಿರುವುದು ವಿಶೇಷ ಎನಿಸಲಿದೆ.

ಅಮೆಜಾನ್

ಕ್ರೋಮಾ ಸಂಸ್ಥೆಯು ಹೊಸ ಸ್ಮಾರ್ಟ್ ಟಿವಿಗಳನ್ನು ಫೈರ್ ಟಿವಿ ನಡೆಸುತ್ತಿರುವುದರಿಂದ, ಟಿವಿಗಳು ಅಮೆಜಾನ್ ಅಲೆಕ್ಸಾ ವಾಯಿಸ್‌ ಅಸಿಸ್ಟಂಟ್ ಸೌಲಭ್ಯವನ್ನು ಬೆಂಬಲಿಸುತ್ತವೆ. ಈ ಸ್ಮಾರ್ಟ್ ಟಿವಿಗಳೊಂದಿಗೆ, ಬಳಕೆದಾರರು ತಮ್ಮ ಇಚ್ಛೆಯಂತೆ ಒಟಿಟಿ ಮತ್ತು ಡಿಟಿಎಚ್ ಕಂಟೆಂಟ್‌ ನಡುವೆ ಮನಬಂದಂತೆ ಬದಲಾಯಿಸಲು ಸಾಧ್ಯವಾಗುತ್ತದೆ. ಈ ಸರಣಿಯ ಎಲ್ಲಾ ಸ್ಮಾರ್ಟ್ ಟಿವಿಗಳು ತಲ್ಲೀನಗೊಳಿಸುವ ಆಡಿಯೋ ಮತ್ತು ಅದ್ಭುತ ಚಿತ್ರ ಗುಣಮಟ್ಟವನ್ನು ಒದಗಿಸಲು ಡಾಲ್ಬಿ ಅಟ್ಮೋಸ್ ಮತ್ತು ಡಾಲ್ಬಿ ವಿಷನ್ ಅನ್ನು ಬೆಂಬಲಿಸುತ್ತವೆ.

ಇಂಚಿನ

ಕ್ರೋಮಾ ಫೈರ್ ಟಿವಿ ಆವೃತ್ತಿ ಸ್ಮಾರ್ಟ್ LED ಟಿವಿಗಳು ಒಟ್ಟು ಐದು ವೇರಿಯಂಟ್‌ ಆಯ್ಕೆಗಳನ್ನು ಹೊಂದಿದ್ದು, ಅವುಗಳು ಕ್ರಮವಾಗಿ 32 ಇಂಚು, 43 ಇಂಚು, 50 ಇಂಚು ಮತ್ತು 55 ಇಂಚಿನ ವಿವಿಧ ಗಾತ್ರಗಳಲ್ಲಿ ಆಯ್ಕೆಗಳಲ್ಲಿ ಇವೆ. ಆರಂಭಿಕ ವೇರಿಯಂಟ್‌ 32 ಇಂಚಿನ ಗಾತ್ರದಲ್ಲಿದ್ದು, ಇದು ಎಚ್‌ಡಿ ರೆಸಲ್ಯೂಶನ್ ಬೆಂಬಲವನ್ನು ಪಡೆದಿದೆ. ಈ ಡಿವೈಸ್‌ನ ಬೆಲೆಯು 17,999ರೂ. ಆಗಿದೆ. ಅದೇ ರೀತಿ ಆನಂತರದ ವೇರಿಯಂಟ್‌ 43 ಇಂಚಿನ ಸ್ಕ್ರೀನ್ ಆಯ್ಕೆಯಲ್ಲಿದ್ದು, ಇದು ಪೂರ್ಣ-ಹೆಚ್‌ಡಿ ರೆಸಲ್ಯೂಶನ್ ಪಡೆದಿದೆ. ಇನ್ನು ಈ ಟಿವಿಯ ಬೆಲೆಯು 29,999ರೂ. ಆಗಿದೆ. ಹಾಗೆಯೇ 43 ಇಂಚಿನ 4K ವೇರಿಯಂಟ್‌ ಟಿವಿಯ ಬೆಲೆಯು 34,999ರೂ. ಆಗಿದೆ.

ಲಾಂಚ್

ಇನ್ನು UHD 4K ರೆಸಲ್ಯೂಶನ್ ಹೊಂದಿರುವ 50 ಇಂಚಿನ ವೇರಿಯಂಟ್‌ ಟಿವಿಯ ಬೆಲೆಯು 39,999ರೂ. ಆಗಿದೆ. ಹಾಗೆಯೇ UHD 4K ರೆಸಲ್ಯೂಶನ್ ಹೊಂದಿರುವ 55 ಇಂಚಿನ ರೂಪಾಂತರದ ಟಿವಿಯ ದರವು 46,499ರೂ.ಗಳ ಪ್ರೈಸ್‌ಟ್ಯಾಗ್‌ ಹೊಂದಿದೆ. ಹೊಸದಾಗಿ ಲಾಂಚ್ ಆಗಿರುವ ಈ ಕ್ರೋಮಾ ಫೈರ್ ಟಿವಿ ಎಡಿಷನ್ ಸ್ಮಾರ್ಟ್ ಎಲ್ಇಡಿ ಟಿವಿಗಳು ಇಂದಿನಿಂದ ಕ್ರೋಮಾ ಮತ್ತು ಅಮೆಜಾನ್ ಇಂಡಿಯಾದ ಆಫ್‌ಲೈನ್ / ಆನ್‌ಲೈನ್ ಮಳಿಗೆಗಳಲ್ಲಿ ಲಭ್ಯವಿದೆ. ಎಲ್ಲಾ ಟಿವಿಗಳು ಮತ್ತಷ್ಟು ಒಂದು ವರ್ಷ ಜಿರೋ ಡಾಟ್ ರಿಪ್ಲೇಸ್‌ಮೆಂಟ್‌ ಹಾಗೂ 3 ವರ್ಷಗಳ ಕಾಂಪ್ರೆಹೆನ್ಸಿವ್ ವಾರಂಟಿ ಪಡೆದಿವೆ.

Most Read Articles
Best Mobiles in India

English summary
Croma Fire TV Edition Smart LED TVs just launched in India and their starting price is Rs 17,999.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X