ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಕ್ರೋಮಾದಿಂದ ವಿಶೇಷ ಸೇಲ್,ಈ ಡಿವೈಸ್‌ಗಳು ಅಗ್ಗದ ಬೆಲೆಗೆ!
ಕ್ರೋಮಾ (Croma) ಇದೀಗ ಲೆಟ್ ಫ್ರೀಡಂ ಫೈಂಡ್ ಯು ಎಂಬ ಅಭಿಯಾನದೊಂದಿಗೆ ಭಾರತದ 76 ನೇ ವರ್ಷದ ಸ್ವಾತಂತ್ರ್ಯದ ಆಚರಣೆ ಹಿನ್ನೆಲೆ ಸ್ಮಾರ್ಟ್‌ಫೋನ್‌ಗಳು, ಟಿವಿಗಳು, ಗೃಹೋಪಯೋಗಿ ವಸ್ತುಗಳು ಮತ್ತು ಇನ್ನೂ ಹಲವು ಸ್ಮಾರ್ಟ್ ಡಿವೈಸ್‌ಗಳ ಮೇಲೆ ಭರ್ಜರಿ ಆಫರ್ ಘೋಷಣೆ ಮಾಡಿದೆ. ಈ ಮೂಲಕ ಗ್ರಹಕರು ಭಾರೀ ಹಣ ಉಳಿತಾಯ ಮಾಡಬಹುದಾಗಿದೆ.
ಹೌದು, ಕ್ರೋಮಾ ದೇಶದ ಎಲ್ಲಾ ಕಡೆ ಆಫ್‌ಲೈಟ್ ಸ್ಟೋರ್‌ಗಳನ್ನೂ ಸಹ ಹೊಂದಿದೆ. ಅಂದರೆ ಈ 385 ಕ್ಕೂ ಹೆಚ್ಚು ಕ್ರೋಮಾ ಸ್ಟೋರ್‌ಗಳಲ್ಲಿ ಹಾಗೂ ಅಧಿಕೃತ ವೆಬ್‌ಸೈಟ್ ಮೂಲಕ ಖರೀದಿ ಮಾಡುವ ಯಾವುದೇ ಸ್ಮಾರ್ಟ್ ಡಿವೈಸ್‌ಗಳಿಗೆ ಭಾರೀ ರಿಯಾಯಿತಿ ಸಿಗಲಿದೆ. ಹಾಗಿದ್ರೆ, ಯಾವೆಲ್ಲಾ ಡಿವೈಸ್‌ಗಳಿಗೆ ಏನೆಲ್ಲಾ ಆಫರ್ ಇದೆ ಹಾಗೂ ಬ್ಯಾಂಕ್ ಹಾಗೂ ವಿನಿಮಯ ಸೇರಿದಂತೆ ಇತರೆ ಯಾವ ಕೊಡುಗೆಗಳು ಇವೆ ಎಂಬಿತ್ಯಾದಿ ಮಾಹಿತಿ ಇಲ್ಲಿದೆ ನೋಡಿ.

ಪ್ರಮುಖವಾಗಿ ಕ್ರೋಮಾದಲ್ಲಿ ಕ್ರೋಮಾ ವಾಷರ್‌ಗಳು ಮತ್ತು ಡ್ರೈಯರ್‌ಗಳನ್ನು ಸುಲಭವಾಗಿ ಖರೀದಿ ಮಾಡಬಹುದು. ಯಾಕೆಂದರೆ ತಿಂಗಳಿಗೆ 1,997ರೂ.ಗಳ ಇಎಮ್‌ಐ ಇರಲಿದೆ. ಜೊತೆಗೆ ಕ್ರೋಮಾದಲ್ಲಿ ಫ್ರಂಟ್ ಲೋಡ್ ವಾಷಿಂಗ್ ಮೆಷಿನ್‌ನಲ್ಲಿ 19,990 ರೂ.ಗಳ ವರೆಗೂ ಕ್ಯಾಶ್‌ಬ್ಯಾಕ್ ಡೀಲ್ ಸಹ ಲಭ್ಯ ಇದ್ದು, ಈ ಮೂಲಕ ಗ್ರಾಹಕರು ಸಂತೋಷದಿಂದ ಶಾಪಿಂಗ್ ಮಾಡಬಹುದಾಗಿದೆ.
ಉಳಿದಂತೆ 55 ಇಂಚಿನ OLED ಟಿವಿ ಗಳನ್ನು ಕೇವಲ 2,999 ರೂಪಾಯಿಗಳಿಂದ ಪ್ರಾರಂಭವಾಗುವ ಅನುಕೂಲಕರ ಇಎಮ್‌ಐ ಪಾವತಿ ಆಯ್ಕೆ ಮೂಲಕ ಖರೀದಿ ಮಾಡಬಹುದು ಹಾಗೂ ಕ್ರೋಮಾ ಎಲ್ಇಡಿ ಗೂಗಲ್ ಟಿವಿ ಸಹ ಈ ವೇಳೆ 50,999ರೂ.ಗಳ ಬೆಲೆಯಿಂದ ಆರಂಭ ಆಗಿದೆ. ಪ್ರಮುಖವಾಗಿ ಕ್ರೋಮಾ 28L ಕನ್ವೆಕ್ಷನ್ ಮೈಕ್ರೋವೇವ್ ಚಾರ್ಕೋಲ್ ತಂತ್ರಜ್ಞಾನದೊಂದಿಗೆ ಬಂದಿದ್ದು, ಇದನ್ನು ನೀವು ಪ್ರತಿ ತಿಂಗಳಿಗೆ 1,499 ರೂಪಾಯಿಗಳ ಕೈಗೆಟುಕುವ ಇಎಮ್‌ಐ ದರದಲ್ಲಿ ಖರೀದಿ ಮಾಡಬಹುದು.
ಕ್ರೋಮಾವು ಫ್ರಾಸ್ಟ್-ಫ್ರೀ ರೆಫ್ರಿಜರೇಟರ್‌ಗಳ ಶ್ರೇಣಿಯನ್ನೇ ಹೊಂದಿದ್ದು, ಇದರಲ್ಲಿ ಮಾಸಿಕ ಕೇವಲ 1,999 ರೂಗಳ ಇಎಮ್‌ಐ ಯಿಂದ ಪ್ರಾರಂಭವಾಗುತ್ತದೆ ಹಾಗೂ ಫ್ರಾಸ್ಟ್-ಫ್ರೀ ಇನ್ವರ್ಟರ್-ಕನ್ವರ್ಟಿಬಲ್ ರೆಫ್ರಿಜರೇಟರ್ ವೇರಿಯಂಟ್‌ನ ಬೆಲೆ 26,990ರೂ.ಗಳಿಂದ ಆರಂಭ ಆಗಲಿದೆ. ಉಳಿದಂತೆ ಕ್ರೋಮಾ 5G ಸ್ಮಾರ್ಟ್‌ಫೋನ್‌ಗಳ ಮೇಲೂ ಭರ್ಜರಿ ಆಫರ್ ನೀಡಿದೆ.
ಸ್ಮಾರ್ಟ್‌ಫೋನ್‌ಗಳ ಆಫರ್ ಬೆಲೆ 12,499 ರೂ.ಗಳಿಂದ ಆರಂಭ ಆಗುತ್ತದೆ. ಈ ನಡುವೆ ಆಯ್ದ ಸ್ಮಾರ್ಟ್‌ಫೋನ್‌ಗಳನ್ನು ಖರೀದಿ ಮಾಡಿದರೆ ಕೇವಲ 49ರೂ.ಗಳಿಗೆ ಸ್ಮಾರ್ಟ್ ವಾಚ್ ಅಥವಾ ಇತರೆ ಸ್ಮಾರ್ಟ್‌ಡಿವೈಸ್ ಖರೀದಿ ಮಾಡುವ ಆಯ್ಕೆ ನೀಡಲಾಗಿದೆ. ಈ ವಿಭಾಗದಲ್ಲಿ ಆಪಲ್, ಸ್ಯಾಮ್‌ಸಂಗ್ ಹಾಗೂ ಒನ್‌ಪ್ಲಸ್ ನಂತಹ ಬ್ರಾಂಡ್‌ಗಳ ಸ್ಮಾರ್ಟ್‌ಫೋನ್ ಲಭ್ಯ ಇವೆ.
ಇದರೊಂದಿಗೆ ಡೈನಾಮಿಕ್ ಪಾರ್ಟಿ ಸ್ಪೀಕರ್‌ಗಳ ಬೆಲೆ ಕೇವಲ 4,199 ರೂ.ಗಳಿಂದ ಆರಂಭ ಆಗಲಿದೆ. ಜೊತೆಗೆ ಕ್ರೋಮಾ ಸ್ಮಾರ್ಟ್ ವಾಚ್‌ಗಳನ್ನು 2,999 ರೂ.ಗಳ ಆರಂಭಿಕ ಬೆಲೆಯೊಂದಿಗೆ ಖರೀದಿ ಮಾಡಬಹುದು. ಹಾಗೆಯೇ ಇತ್ತೀಚಿನ ಆಪಲ್ ವಾಚ್‌ಗಳು ಕ್ರೋಮಾ ಸ್ಟೋರ್‌ನಲ್ಲಿ 25,400ರೂ.ಗಳ ಬೆಲೆಯಿಂದ ಆರಂಭ ಆಗಿವೆ. ಇದೆಲ್ಲದರ ಜೊತೆಗೆ 20,000 ವರೆಗಿನ ವಿನಿಮಯ ಪ್ರಯೋಜನ ಹಾಗೂ 15% ವರೆಗೆ ಕ್ಯಾಶ್‌ಬ್ಯಾಕ್ ಆಫರ್ ಮತ್ತು 24 ತಿಂಗಳವರೆಗೆ ಇಎಮ್‌ಐ ಆಯ್ಕೆ ಲಭ್ಯ ಇದೆ.

ಅದರಲ್ಲೂ ಈ ಆಫರ್ ನಲ್ಲಿ ನೀವು ಒಪ್ಪೋ A78 5G (8GB RAM, 128GB) ಸ್ಮಾರ್ಟ್‌ಫೋನ್ ಅನ್ನು 18,999ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಇದರ ಸಾಮಾನ್ಯ ದರ 21,999ರೂ.ಗಳು ಹಾಗೂ ಬೋಟ್ ಸ್ಟೋನ್ 650R 10 ವ್ಯಾಟ್ಸ್ ಪೋರ್ಟಬಲ್ ಬ್ಲೂಟೂತ್ ಸ್ಪೀಕರ್ ಅನ್ನು 1,599ರೂ.ಗಳಿಗೆ ಕೊಂಡುಕೊಳ್ಳಬಹುದಾಗಿದ್ದು, ಇದರ ಸಾಮಾನ್ಯ ದರ 4,990ರೂ.ಗಳಾಗಿದೆ. ಜೊತೆಗೆ ಕ್ರೋಮಾ 600 ವ್ಯಾಟ್ 5 ಕಪ್ ಮ್ಯಾನುಯಲ್ ಬ್ಲ್ಯಾಕ್ ಕಾಫಿ ಮೇಕರ್ ಅನ್ನು ಸಹ ನೀವು ಕೇವಲ 999 ರೂ.ಗಳಿಗೆ ಖರೀದಿ ಮಾಡಬಹುದು.
ಇದರೊಂದಿಗೆ ಒನ್‌ಪ್ಲಸ್ Y ಸರಣಿಯ 80 cm ಸ್ಮಾರ್ಟ್‌ಟಿವಿಗೂ ಆಫರ್ ನೀಡಲಾಗಿದೆ. ಅಂದರೆ ಇದರ ಸಾಮಾನ್ಯ ದರ 14,999ರೂ.ಗಳಾಗಿದ್ದು, ಈ ವಿಶೇಷ ಸೇಲ್‌ನಲ್ಲಿ ನೀವು 19,999 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಜೊತೆಗೆ ವರ್ಲ್‌ಪೂಲ್ 7.5 ಕೆಜಿ ಫುಲ್ ಆಟೋಮ್ಯಾಟಿಕ್ ಟಾಪ್ ಲೋಡ್ ವಾಷಿಂಗ್ ಮೆಷಿನ್ ಅನ್ನು 16,640ರೂ.ಗಳಿಗೆ ಖರೀದಿ ಮಾಡಬಹುದು. ಇದರ ಸಾಮಾನ್ಯ ದರ 21,900ರೂ.ಗಳಾಗಿದೆ.


Click it and Unblock the Notifications








