Smartwatch: ಮಾರುಕಟ್ಟೆಗೆ ಎಂಟ್ರಿ ನೀಡಲಿದೆ ಚಾಟ್‌ಜಿಪಿಟಿ ತಂತ್ರಜ್ಞಾನದ ಸ್ಮಾರ್ಟ್‌ವಾಚ್: ಬೆಲೆ ಎಷ್ಟು?
ಸ್ಮಾರ್ಟ್‌ವಾಚ್‌ಗಳ (Smartwatch) ವಿಭಾಗದಲ್ಲಿ ಈಗಾಗಲೇ ಸಾಕಷ್ಟು ಸ್ಮಾರ್ಟ್‌ವಾಚ್‌ಗಳು ಭಿನ್ನ ವಿಭಿನ್ನ ಫೀಚರ್ಸ್ ಆಯ್ಕೆ ಪಡೆದುಕೊಂಡಿದ್ದು, ಇವುಗಳು ಬಳಕೆದಾರರ ಹಲವಾರು ಅಗತ್ಯತ್ಯೆಗಳನ್ನು ಪೂರೈಕೆ ಮಾಡುತ್ತಿವೆ. ಈ ನಡುವೆ ಚಾಟ್‌ಜಿಪಿಟಿ ತಂತ್ರಜ್ಞಾನದ (ChatGPT technology) ಸ್ಮಾರ್ಟ್‌ವಾಚ್ ಬಗ್ಗೆ ಘೋಷಣೆ ಮಾಡಲಾಗಿದೆ.
ಹೌದು, ಕ್ರಾಸ್‌ಬೀಟ್ಸ್ (Crossbeats) ತನ್ನ ಇತ್ತೀಚಿನ ಸೇರ್ಪಡೆಯನ್ನು ಸ್ಮಾರ್ಟ್‌ವಾಚ್ ಶ್ರೇಣಿಗೆ ಪರಿಚಯಿಸಿದೆ. ಈ ಸ್ಮಾರ್ಟ್‌ವಾಚ್‌ಗೆ ಕ್ರಾಸ್‌ಬೀಟ್ಸ್ ನೆಕ್ಸಸ್ (Crossbeats Crossbeats Nexus) ಎಂದು ಕರೆಯಾಲಾಗಿದೆ. ಈ ಸ್ಮಾರ್ಟ್‌ವಾಚ್ ಧರಿಸಬಹುದಾದ ತಂತ್ರಜ್ಞಾನದಲ್ಲಿ ಗಮನಾರ್ಹ ಪ್ರಗತಿಯನ್ನು ಹೊಂದಿದ್ದು, ಅಮೋಲೆಡ್ (AMOLED) ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದೆ. ಹಾಗಿದ್ರೆ, ಈ ಸ್ಮಾರ್ಟ್‌ವಾಚ್ ಹೊಂದಿರುವ ವಿಶೇಷ ಫೀಚರ್ಸ್ ಏನು?, ಇದರ ಬೆಲೆ ಎಷ್ಟು ಎಂಬ ಮಾಹಿತಿ ಇಲ್ಲಿದೆ ನೋಡಿ.

ಕ್ರಾಸ್‌ಬೀಟ್ಸ್ ನೆಕ್ಸಸ್ ಡಿಸ್‌ಪ್ಲೇ ವಿವರ: ಈ ಸ್ಮಾರ್ಟ್‌ವಾಚ್2.1 ಇಂಚಿನ ಅಮೋಲೆಡ್ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿರಲಿದ್ದು, 500 ಕ್ಕೂ ಹೆಚ್ಚು ಗ್ರಾಹಕೀಯಗೊಳಿಸಬಹುದಾದ ವಾಚ್ ಫೇಸ್ ಅನ್ನು ಹೊಂದಿರಲಿದೆ ಎಂದು ಕಂಪೆನಿ ತಿಳಿಸಿದೆ. ಇದರೊಂದಿಗೆ ನ್ಯಾವಿಗೇಷನ್ ಗಾಗಿ ಬಳಕೆದಾರ ಸ್ನೇಹಿ ಕ್ರೌನ್ ಬಟನ್ ಆಯ್ಕೆ ಹೊಂದಿದೆ.
ಕ್ರಾಸ್‌ಬೀಟ್ಸ್ ನೆಕ್ಸಸ್ ಫೀಚರ್ಸ್: ಈ ಸ್ಮಾರ್ಟ್‌ವಾಚ್ ಜಿಪಿಎಸ್ ಡೈನಾಮಿಕ್ ರೂಟ್ ಟ್ರ್ಯಾಕಿಂಗ್, ಡೈನಾಮಿಕ್ ಐಲ್ಯಾಂಡ್ ಮತ್ತು ಇಬುಕ್ ರೀಡರ್‌ನಂತಹ ಅತ್ಯಾಧುನಿಕ ಫೀಚರ್ಸ್ ಆಯ್ಕೆ ಪಡೆದುಕೊಂಡಿದ್ದು, ಇದು ಆಲ್ಟಿಮೀಟರ್, ಬ್ಯಾರೋಮೀಟರ್ ಮತ್ತು ಕಂಪಾಸ್ ಸಾಮರ್ಥ್ಯಗಳನ್ನು ಪಡೆದುಕೊಂಡಿದೆ. ಅಷ್ಟೇ ಅಲ್ಲದೆ ಬ್ಲೂಟೂತ್ ಕರೆ ಸೌಲಭ್ಯ, ಹೃದಯ ಬಡಿತದ ಮಾನಿಟರಿಂಗ್, SpO2 ಮಾಪನ, ನಿದ್ರೆ ಟ್ರ್ಯಾಕಿಂಗ್ ಮತ್ತು ರಕ್ತದೊತ್ತಡದ ಮಾನಿಟರಿಂಗ್ ಸೇರಿದಂತೆ ಹಲವಾರು ಆರೋಗ್ಯ ಮೇಲ್ವಿಚಾರಣಾ ಕಾರ್ಯಗಳನ್ನು ಈ ಸ್ಮಾರ್ಟ್‌ವಾಚ್ ನೀಡಲಿದೆ.

ಇದೆಲ್ಲಕ್ಕಿಂತ ಮಿಗಿಲಾಗಿ ಈ ಸ್ಮಾರ್ಟ್‌ವಾಚ್ ಚಾಟ್‌ಜಿಪಿಟಿ ತಂತ್ರಜ್ಞಾನ (ChatGPT technology) ಹೊಂದಿದೆ. ಇದರಿಂದಾಗಿ ಬಳಕೆದಾರರು ಹೊಸ ರೀತಿಯ ಭಿನ್ನ ಫೀಚರ್ಸ್ ಆಯ್ಕೆಯನ್ನು ಬಳಕೆದಾರರು ಅನುಭವಿಸಬಹುದಾಗಿದೆ. ಜೊತೆಗೆ ಒಂದು ಪೂರ್ಣ ಚಾರ್ಜಿಂಗ್‌ನಲ್ಲಿ ಬರೋಬ್ಬರಿ ಒಂದುವಾರಗಳ ಕಾಲ ಬಳಕೆ ಮಾಡಬಹುದು. ಈ ನಡುವೆ ಈ ವಾಚ್‌ನ ಪೂರ್ವ ಬುಕಿಂಗ್‌ಗೆ ಅವಕಾಶ ನೀಡಲಾಗಿದೆ.
ಪೂರ್ವ ಬುಕಿಂಗ್ ಆಯ್ಕೆ ಮೂಲಕ ಗ್ರಾಹಕರು ಹಲವಾರು ರೀತಿಯ ಪ್ರಯೋಜನ ಪಡೆದುಕೊಳ್ಳಬಹುದು. ಅಂದರೆ ಕ್ರಾಸ್‌ಬೀಟ್‌ಸೋನ್ ವಿಐಪಿ ಪಾಸ್‌ನೊಂದಿಗೆ ಪ್ರೊಡಕ್ಟ್ ಅನ್ನು 999ರೂ.ಗಳನ್ನು ನೀಡಿ ಮುಂಗಡವಾಗಿ ಆರ್ಡರ್ ಮಾಡಬಹುದಾಗಿದೆ. ಹಾಗೆಯೇ ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಈ ವಾಚ್‌ನ ಒಟ್ಟು ಖರೀದಿ ಬೆಲೆಯಿಂದ ಕಡಿಮೆ ಇರಲಿದೆ. ಹೆಚ್ಚುವರಿಯಾಗಿ, ನೀವು ಮುಂಗಡ-ಆರ್ಡರ್ ಮಾಡಿದಾಗ, ಈ ಕೆಳಗಿನಂತೆ ಕೆಲವು ಹೆಚ್ಚುವರಿ ಸೇವೆಗಳನ್ನು ಪಡೆದುಕೊಳ್ಳಬಹುದಾಗಿದೆ.

ನೀವು ಈ ವಾಚ್ ಅನ್ನು ಪ್ರೀ ಬುಕಿಂಗ್ ಮಾಡಿದ್ರೆ ವಾಚ್‌ಗಾಗಿ ಉಚಿತ ಸ್ಕ್ರೀನ್ ಗಾರ್ಡ್ ಪಡೆದುಕೊಳ್ಳಬಹುದು ಇದರೊಂದಿಗೆ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಹೆಚ್ಚುವರಿ 6 ತಿಂಗಳ ಖಾತರಿಯನ್ನು ಪಡೆಯಬಹುದು, ಹಾಗೆಯೇ ಆಯ್ದ TWS ಉತ್ಪನ್ನಗಳ ಮೇಲೆ 25% ರಿಯಾಯಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಇಷ್ಟೇ ಅಲ್ಲದೆ ಹೆಚ್ಚುವರಿ 5% ರಿಯಾಯಿತಿಯನ್ನೂ ಸಹ ನೀಡಲಾಗುತ್ತದೆ.

ಕ್ರಾಸ್‌ಬೀಟ್ಸ್ ನೆಕ್ಸಸ್ ಬೆಲೆ ಹಾಗೂ ಲಭ್ಯತೆ: ಕ್ರಾಸ್‌ಬೀಟ್ಸ್ ನೆಕ್ಸಸ್ ಈ ದೀಪಾವಳಿಯ ಸಮಯದಲ್ಲಿ ಬಿಡುಗಡೆಗೆ ಸಿದ್ಧವಾಗಿದೆ. ಇದರ ಬೆಲೆ 5,999ರೂ.ಗಳಾಗಿದ್ದು, ಇದನ್ನು ಎರಡು ಬಣ್ಣದ ಆಯ್ಕೆಗಳಲ್ಲಿ ನೋಡಬಹುದು. ಅಂದರೆ ಬೆಳ್ಳಿ ಮತ್ತು ಕಪ್ಪು ಬಣ್ಣ. ಈ ಸಂಬಂಧ ಕ್ರಾಸ್‌ಬೀಟ್ಸ್‌ನ ಸಹ ಸಂಸ್ಥಾಪಕ ಅರ್ಚಿತ್ ಅಗರ್ವಾಲ್ ಮಾಹಿತಿ ನೀಡಿದ್ದು, ಕ್ರಾಸ್‌ಬೀಟ್ ನೆಕ್ಸಸ್‌ನ ಉಡಾವಣೆಯೊಂದಿಗೆ ನಾವು ನವೀನ, ಉದ್ದೇಶ-ಚಾಲಿತ ಪರಿಹಾರಗಳಿಗೆ ಉತ್ತೇಜಕ ಪ್ರಯಾಣವನ್ನು ಪ್ರಾರಂಭಿಸುತ್ತಿದ್ದೇವೆ. ಅತ್ಯಾಧುನಿಕ ಉತ್ಪಾದನಾ ಸೌಲಭ್ಯಗಳು, ಅತ್ಯಾಧುನಿಕ ತಂತ್ರಜ್ಞಾನವನ್ನು ಸಂಯೋಜಿಸುವ ನಮ್ಮ ಮುಂಬರುವ ಹೂಡಿಕೆಗಳ ಬಗ್ಗೆ ನಾವು ಉತ್ಸುಕರಾಗಿದ್ದೇವೆ ಎಂದಿದ್ದಾರೆ.


Click it and Unblock the Notifications








