ಸೈನಿಕರು 'ಪಬ್​ಜಿ ಗೇಮ್‌' ಆಡದಂತೆ ನಿಷೇಧ!..ಕಾರಣ ಏನು ಗೊತ್ತಾ?

|

ಯುದ್ಧಭೂಮಿಯ ಫೀಲ್​ ಕೊಡುವ ಪಬ್​ಜಿ ಗೇಮ್‌ ಆಡದಂತೆ ಸೈನಿಕರಿಗೆ ಭಾರತೀಯ ಸೇನೆ ಆದೇಶ ಹೊರಡಿಸಿದೆ. ಯುದ್ಧಭೂಮಿಯಲ್ಲಿ ಶತ್ರುಗಳನ್ನು ಹೊಡೆದುರುಳಿಸಿ ನಮ್ಮನ್ನು ರಕ್ಷಿಸೋ ಸೈನಿಕರೂ ಸಹ ಮೊಬೈಲ್‌ನಲ್ಲಿ ಪಬ್​ಜಿ ಗೇಮ್‌ ಆಡಿಕೊಂಡು ಸಮಯ ಕಳೆಯುತ್ತಿದ್ದಾರೆ ಎಂದು ಪಬ್​ಜಿ ಗೇಮ್‌ ಅನ್ನು ಸೈನಿಕರಿಗೆ ಭಾರತೀಯ ಸೇನೆ ನಿಷೇಧಿಸಿದೆ ಎಂದು ತಿಳಿದುಬಂದಿದೆ.

ಹೌದು, ಸಿಆರ್​ಪಿಎಫ್​ ಯೋಧರು ಮೊಬೈಲ್‌ನಲ್ಲಿ ಪಬ್​ಜಿ ಆಡುತ್ತಿದ್ದು, ಬಿಡುವು ಸಿಕ್ಕಾಗಲೆಲ್ಲಾ ಪಬ್​ಜಿ ಮೊರೆ ಹೋಗ್ತಿದ್ರಂತೆ. ಹಾಗಾಗಿ, ಮೇ 6 ರಂದೇ ಸಿಆರ್​ಪಿಎಫ್​ ಹೆಡ್​ ಕ್ವಾಟ್ರಸ್​ ಈ ಬಗ್ಗೆ ಅಧಿಕೃತ ಆದೇಶ ಹೊರಡಿಸಿದ್ದು, ರಕ್ಷಣಾ ಇಲಾಖೆಯ ಎಲ್ಲಾ ಯುನಿಟ್​ಗಳ ಡೆಪ್ಯುಟಿ ಇನ್ಸ್​ಪೆಕ್ಟರ್ಸ್​ ಆಫ್​ ಜೆನರಲ್​ಗಳೂ ಪಬ್​ಜಿ ಬ್ಯಾನ್ ಮಾಡಲು ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.

ಸೈನಿಕರು 'ಪಬ್​ಜಿ ಗೇಮ್‌' ಆಡದಂತೆ ನಿಷೇಧ!..ಕಾರಣ ಏನು ಗೊತ್ತಾ?

ಪಬ್‌ಜಿ ಗೇಮ್ ಆಡುತ್ತಿರುವುದರಿಂದ ಸೈನಿಕರು, ತಮ್ಮ ಸಹೋದ್ಯೋಗಿಗಳ ಜೊತೆ ಹೆಚ್ಚು ಬೆರೆಯುತ್ತಿಲ್ಲ, ನಿದ್ದೆಗೆಟ್ಟು ರಾತ್ರಿ ಸಮಯ ಸಹ ಪಬ್‌ಜಿ ಆಡುತ್ತಿರುವ ಕಾರಣ ಅವರ ಆರೋಗ್ಯದ ಮೇಲೆಯೂ ಪರಿಣಾಮ ಬೀರುತ್ತಿದೆ. ಇದರಿಂದ ಆತಂಕಕ್ಕೊಳಗಾಗಿದ್ದ ರಕ್ಷಣಾ ಇಲಾಖೆ ಪಬ್​ಜಿಯನ್ನುನ ಬ್ಯಾನ್ ಮಾಡಿದೆ ಎಂದು ಸಿಆರ್‌ಪಿಎಫ್‌ನ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಓದಿರಿ: ಅಶ್ಲೀಲ ವೀಡಿಯೊ ನೋಡುವ ಶೇ 90% ಜನರಿಗೆ ಗೊತ್ತಿಲ್ಲದ ಶಾಕಿಂಗ್ ವಿಷಯಗಳು!!

ಪಬ್‌ಜಿ ಆಡುವುದರಿಂದ ಸೈನಿಕರ ಮಾನಸಿಕ ಸ್ಥಿಮಿತತೆ ತಪ್ಪುವ ಸಾಧ್ಯತೆ ಇದೆ. ಸಾಮಾಜಿಕ ಸಾಮರ್ಥ್ಯ ಹಾಗೂ ಯುದ್ಧಭೂಮಿ ಸಾಮರ್ಥ್ಯವನ್ನ ಕಳೆದುಕೊಳ್ಳುತ್ತಿದ್ದಾರೆ. ಅವರು ಹೆಚ್ಚು ಆಕ್ರಮಣಶೀಲರಾಗಿ ಸಂಯಮ ಕಳೆದುಕೊಳ್ಳುತ್ತಾರೆ, ಗೇಮ್‌ನ ಮಾದರಿಯಲ್ಲಿಯೇ ಯೋಚನೆ ಮಾಡಲು ಯತ್ನಿಸುತ್ತಾರೆ ಎಂಬ ಆತಂಕ ಇರುವ ಕಾರಣ ಈ ನಿರ್ಣಯ ತೆಗೆದುಕೊಳ್ಳಲಾಗಿದೆ.

ಸೈನಿಕರು 'ಪಬ್​ಜಿ ಗೇಮ್‌' ಆಡದಂತೆ ನಿಷೇಧ!..ಕಾರಣ ಏನು ಗೊತ್ತಾ?

ಈಗೀಗ ಚಿಕ್ಕ ಮಕ್ಕಳಿಂದ ಹಿಡಿದು, ದೊಡ್ಡವರು ಕೂಡಾ ಮೊಬೈಲ್​ ಹಿಡಿದು ಪಬ್​ಜಿ ಗೇಮ್ ಆಡುತ್ತಾ ಕುಳಿತುಬಿಡ್ತಾರೆ. ಈ ಪಬ್​​ಜಿಯಿಂದ ಅದೆಷ್ಟೋ ಅವಾಂತರಗಳು ನಡೆದುಹೋಗಿವೆ, ಇನ್ನೂ ನಡೆಯುತ್ತಿವೆ. ಯುದ್ಧಭೂಮಿಯ ಫೀಲ್​ ಕೊಡುವ ಪಬ್​ಜಿ ಒಂದು ರೀತಿಯ ಅಡಿಕ್ಷನ್​ ಗೇಮ್ ಆಗಿದ್ದು, ಭಾರಿ ಗೀಳು ಹತ್ತಿಸುವ ಮೊಬೈಲ್ ಗೇಮ್‌ಗಳಲ್ಲಿ ಇದೂ ಕೂಡ ಒಂದು ಎಂದೆನ್ನಬಹುದು.

ಓದಿರಿ: ಶಿಯೋಮಿ 'ರೆಡ್ಮಿ ಕೆ20 ಪ್ರೊ' ಬಂದರೆ 'ಒನ್‌ಪ್ಲಸ್ 7 ಪ್ರೊ' ಕಥೆ ಕ್ಲೋಸ್!

Best Mobiles in India

English summary
CRPF bans PUBG, says game addiction affecting operational capabilities of jawans. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X