ಗೂಗಲ್ ವಿಜ್ಞಾನ ಮೇಳದಲ್ಲಿ ಪ್ರಶಸ್ತಿ ಗೆದ್ದ 9 ನೇ ತರಗತಿ ಹುಡುಗಿ

By Suneel
|

9 ನೇ ತರಗತಿ ಹುಡುಗಿಯೊಬ್ಬಳು ವೈಜ್ಞಾನಿಕ ಸಂಶೋಧನೆ ಮೂಲಕ ಕಡಿಮೆ ವೆಚ್ಚದಲ್ಲಿ ಜೋಳದ ಜೊಂಡುಗಳ ಮೂಲಕ ವಾಟರ್‌ ಪ್ಯೂರಿಫೈಯರ್‌ವಿಧಾನವನ್ನು ಕಂಡುಹಿಡಿದು ಗೂಗಲ್ ವಿಜ್ಞಾನ ಮೇಳದಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದಾಳೆ. ಈಕೆಯ ಈ ಚಟುವಟಿಕೆಗೆ ಸ್ಫೂರ್ತಿಯಾಗಿರುವವರು ಮಿಸೆಲ್‌ ಮ್ಯಾನ್‌ ಹಾಗೂ ಕ್ಷಿಪಣಿ ತಯಾರಕರಾದ ಎಪಿಜೆ ಅಬ್ದುಲ್‌ ಕಲಾಂ. ಈ ಬಗ್ಗೆ ನಿಮಗಾಗಿ ಇನ್ನಷ್ಟು ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಿದ್ದೇವೆ.

ಓದಿರಿ: ಫೋನ್ ಖರೀದಿಸುವಾಗ ಈ ಅಂಶಗಳಿಗಿರಲಿ ಆದ್ಯತೆ

 ಲಲಿತಾ ಪ್ರಸಿದ ಶ್ರೀಪಾದ ಶ್ರೀಶೈ

ಲಲಿತಾ ಪ್ರಸಿದ ಶ್ರೀಪಾದ ಶ್ರೀಶೈ

ಲಲಿತಾ ಪ್ರಸಿದ ಶ್ರೀಪಾದ ಶ್ರೀಶೈ ಎಂಬ ಒಡಿಶಾದ ಹುಡುಗಿಯೇ ಕಡಿಮೆ ವೆಚ್ಚದಲ್ಲಿ ವಾಟರ್‌ ಪ್ಯೂರಿಫೈಯರ್‌ ಯೋಜನೆ ಅಭಿವೃದ್ಧಿಗೊಳಿಸಿ ಅದನ್ನು ವಿಜ್ಞಾನ ಕ್ಷೇತ್ರಕ್ಕೆ ಉಡುಗೊರೆಯಾಗಿ ನೀಡಿರುವವರು.

'ಕಂಮ್ಯೂನಿಟಿ ಇಂಪ್ಯಾಕ್ಟ್ ಅವಾರ್ಡ್'

'ಕಂಮ್ಯೂನಿಟಿ ಇಂಪ್ಯಾಕ್ಟ್ ಅವಾರ್ಡ್'

ಒಡಿಶಾದ ಕೋರಾಪುಟ್ ಜಿಲ್ಲೆಯ ಆದಿವಾಸಿ ಜನಾಂಗದ 13 ವರ್ಷದ ವಿದ್ಯಾರ್ಥಿನಿ ಇತ್ತೀಚೆಗೆ ಕ್ಯಾಲಿಫೋರ್ನಿಯಾದಲ್ಲಿ ನಡೆದ 2015 ಪ್ರತಿಷ್ಠಿತ ಗೂಗಲ್ ವಿಜ್ಞಾನ ಮೇಳದಲ್ಲಿ 'ಕಂಮ್ಯೂನಿಟಿ ಇಂಪ್ಯಾಕ್ಟ್ ಅವಾರ್ಡ್' ಗೆಲ್ಲುವ ಮೂಲಕ ಪ್ರಶಸ್ತಿಗಳನ್ನು ಗೆದ್ದಿದ್ದಾಳೆ.

ಪ್ರಶಸ್ತಿ ಗೆದ್ದ ಲಲಿತಾ ಹೇಳಿದ ಮಾತುಗಳು

ಪ್ರಶಸ್ತಿ ಗೆದ್ದ ಲಲಿತಾ ಹೇಳಿದ ಮಾತುಗಳು

"ನಾನು ಹಳ್ಳಿಗಳಿಗೆ ಬೇಟಿನೀಡಿ ಅಲ್ಲಿನ ಜೀವನ ಶೈಲಿಯನ್ನು ಗಮನಿಸಿದೆ. ನಂತರದಲ್ಲಿ ರೋಡ್‌ ಬದಿಗಳಲ್ಲಿ ಹೋಗುತ್ತಾ ಜೋಳದ ಜೊಂಡು ಹರಡಿರುವುದನ್ನು ನೋಡಿದೆ. ಇದರಿಂದ ಸಮಾಜಕ್ಕೆ ಹೆಚ್ಚು ಅನುಕೂಲವಾಗುವ ಬಗ್ಗೆ ಯೋಚನೆ ಹೊಳೆಯಿತು. ಇದಕ್ಕೆ ಸಂಬಂಧಿಸಿದಂತೆ ನಿರುಪಯೋಗ ನೀರನ್ನು ಪ್ಯೂರಿಫೈ ಮಾಡುವ ಬಗ್ಗೆ ನಮ್ಮ ಶಾಲಾ ಶಿಕ್ಷಕಿ ಪಲ್ಲವಿಯವರಲ್ಲಿ ಪ್ರಸ್ತಾಪಿಸಿದೆ ಎಂದು ಗೂಗಲ್‌ ಹುಡುಗಿ ಹೇಳಿದಳು''.

Damanjodi ಡೆಲ್ಲಿ ಪಬ್ಲಿಕ್ ಸ್ಕೂಲ್

Damanjodi ಡೆಲ್ಲಿ ಪಬ್ಲಿಕ್ ಸ್ಕೂಲ್

ಈಕೆಯ ಅಮೂಲ್ಯವಾದ ಯೋಜನೆ " ಜೋಳದ ಜೊಂಡು, ಕಡಿಮೆ ವೆಚ್ಚದಲ್ಲಿ ಮನೆಗಳು ಮತ್ತು ಕಾರ್ಖಾನೆಗಳು ಬಿಡುವ ತ್ಯಾಜ್ಯ ನೀರನ್ನು ಶುದ್ಧೀಕರಿಸಲಿದೆ"

Damanjodi ಡೆಲ್ಲಿ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿನಿ ಲಲಿತಾ ಪ್ರಕಾರ, ಆಕೆ ಪ್ರಶಸ್ತಿ ಪಡೆದುಕೊಂಡ ಈ ವೇದಿಕೆಯು ಆಕೆಯ ಮುಂದಿನ ವೈಜ್ಞಾನಿಕ ಸಂಶೋಧನೆಗೆ ಸಹಾಯ ಒದಗಿಸಲಿದೆ.

ಬಹುದೊಡ್ಡ ಸುಸಂದರ್ಭ

ಬಹುದೊಡ್ಡ ಸುಸಂದರ್ಭ

"ಅಂತರರಾಷ್ಟ್ರೀಯ ವೇದಿಕೆ ಮಟ್ಟದಲ್ಲಿ ಪ್ರಶಸ್ತಿ ಪಡೆದಿರುವ ನನಗೆ ಇದು ನನ್ನ ಜೀವನದ ಬಹುದೊಡ್ಡ ಸುಸಂದರ್ಭವಾಗಿದೆ. ಇದು ನನ್ನ ಭವಿಷ್ಯವನ್ನು ನಿರ್ಧಾರ ಮಾಡಲಿದ್ದು, ವೈಜ್ಞಾನಿಕ ಸಂಶೋಧನೆಯಲ್ಲಿ ಕುತೂಹಲಕಾರಿ ಸಂಶೋಧನೆ ಕೈಗೊಂಡು ಸಮಾಜಕ್ಕೆ ಅನುಕೂಲವಾಗುವ ಚಟುವಟಿಕೆಗಳನ್ನು ಕೈಗೊಳ್ಳುತ್ತೇನೆ" ಎಂದ ಲಲಿತಾ

 'ಎಂ ಎಸ್‌ ಸ್ವಾಮಿನಾಥನ್‌'

'ಎಂ ಎಸ್‌ ಸ್ವಾಮಿನಾಥನ್‌'

ಭಾರತದ ಹಸಿರು ಕ್ರಾಂತಿ ಪಿತಾಮಹ 'ಎಂ ಎಸ್‌ ಸ್ವಾಮಿನಾಥನ್‌' ಗೂಗಲ್‌ ಗರ್ಲ್‌ ಆದರ್ಶ ವ್ಯಕ್ತಿಯಾಗಿದ್ದು, ಈಕೆಯು ಕೃಷಿಗೆ ಸಂಬಂಧಿಸಿದಂತ ಸಂಶೊಧನೆಗಳನ್ನು ಕೈಗೊಳ್ಳುವುದಾಗಿ ಹೇಳಿಕೊಂಡಿದ್ದಾಳೆ.

ಸಂಶೋಧನೆಗೆ ವಯಸ್ಸಿನ ಅಂತರ ಇರುವುದಿಲ್ಲ,

ಸಂಶೋಧನೆಗೆ ವಯಸ್ಸಿನ ಅಂತರ ಇರುವುದಿಲ್ಲ,

ಸಂಶೋಧನೆಗೆ ವಯಸ್ಸಿನ ಅಂತರ ಇರುವುದಿಲ್ಲ, ಕುತೂಹಲ ಒಮ್ಮೆ ಬಂದರೆ ಅದನ್ನು ತಡೆಹಾಕಬಾರದು ಆದರೆ, ಉತ್ತಮ ಗುರುಗಳು ಗುರಿ ಮುಟ್ಟಲು ಬೇಕು ಎಂದು ಲಲಿತಾ ಹೇಳಿದ್ದಾಳೆ.

ವಿನ್ಯಾಸ ಮತ್ತು ಯೋಜನೆ

ವಿನ್ಯಾಸ ಮತ್ತು ಯೋಜನೆ

ಕುತೂಹಲವು ನಮ್ಮಲ್ಲಿದ್ದರೇ ಈದಿನ ಅಥವಾ ನಾಳೆ ವಿನ್ಯಾಸ ಮತ್ತು ಯೋಜನೆಯ ವ್ಯವಸ್ಥೆ ಖಂಡಿತ ತಿಳಿಯುತ್ತದೆ.

ಬಹುಮಾನವಾಗಿ 660,000 ರೂ

ಬಹುಮಾನವಾಗಿ 660,000 ರೂ

ಲಲಿತಾ ಬಹುಮಾನವಾಗಿ 660,000 ರೂ ಗೆದ್ದುಕೊಂಡಿರುವ ಜೊತೆಗೆ ಆಕೆಯ ಯೋಜನೆಗೆ ಗೂಗಲ್‌ ಒಂದು ವರ್ಷ ಕೆಲಸ ಮಾಡಲಿದೆ.

 ಗೂಗಲ್‌ ಸೈನ್ಸ್‌ ಫೇರ್‌ ಸ್ಫರ್ಧೆ

ಗೂಗಲ್‌ ಸೈನ್ಸ್‌ ಫೇರ್‌ ಸ್ಫರ್ಧೆ

ಗೂಗಲ್‌ ಸೈನ್ಸ್‌ ಫೇರ್‌ ಸ್ಫರ್ಧೆಯು, 15 ಭಾಷೆಗಳಲ್ಲಿ, 90 ಪ್ರಾದೇಶಿಕ ಮತ್ತು 20 ಗ್ಲೋಬಲ್‌ ಫೈನಲಿಸ್ಟ್‌ಗಳನ್ನು ಶಾರ್ಟ್‌ಲಿಸ್ಟ್‌ ಮಾಡಿದೆ.

Most Read Articles
Best Mobiles in India

English summary
Despite being a class 9 student, she nourishes a passion for serving the society through scientific research of mass interest. For her, age is never a bar for quenching libido sciendi as if inspired by the Wings of Fire and following the footsteps of missile man APJ Abdul Kalam.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more