ಫೋನ್ ಖರೀದಿಸುವಾಗ ಈ ಅಂಶಗಳಿಗಿರಲಿ ಆದ್ಯತೆ

By Suneel
|

ಹಲವು ವೇಳೆ ಎಲ್ಲರೂ ಯಾವ ಸ್ಮಾರ್ಟ್‌ಫೋನ್‌ ಕೊಂಡರೆ ಉತ್ತಮ ಎಂಬ ಚಿಂತೆಯಲ್ಲೇ ತಮ್ಮ ಅಮೂಲ್ಯ ಸಮಯ ಕಳೆದುಕೊಳ್ಳುವುದುಂಟು. ಇದು ಎಲ್ಲರಿಗೂ ಇರುವ ಸಾಮಾನ್ಯ ಪ್ರಶ್ನೆಯೂ ಹೌದು. ಹಲವರಂತೂ ಸ್ಮಾರ್ಟ್‌ಫೋನ್‌ ಬಗ್ಗೆ ತಿಳಿದಿರುವವರನ್ನು ಕೇಳುತ್ತಾರೆ. ಅವರು ತಕ್ಷಣ Samsung Galaxy S6 ಮತ್ತು iPhone 6 Plus ಎಂದೂ ಸುಲಭ ರೀತಿಯಲ್ಲಿ ಮಾರುಕಟ್ಟೆಯಲ್ಲಿರುವ ಉತ್ತಮ ಸ್ಮಾರ್ಟ್‌ಫೋನ್‌ಗಳನ್ನು ಪ್ರಸ್ತಾಪಿಸಬಹುದು. ಆದರೆ ಬೇಕಾಗಿರುವ ಉತ್ತರವೇ ಬೇರೆ.

ಓದಿರಿ: ಸೆಕೆಂಡ್‌ಹ್ಯಾಂಡ್‌ ಫೋನ್‌ ಖರೀದಿಗೆ ಮುನ್ನ ನೆನಪಿಡಬೇಕಾದ ಅಂಶಗಳೇನು?

ಹೌದು ಹಲವರು ತಮ್ಮ ಬೆಲೆಗೆ ತಕ್ಕ ಸ್ಮಾರ್ಟ್‌ಫೋನ್‌ ಅವರಿರುವ ಪ್ರದೇಶದಲ್ಲಿ ಯಾವುದು ಉತ್ತಮ ಎಂಬುದನ್ನು ಹುಡುಕುತ್ತಿರುತ್ತಾರೆ. ಅವರಿಗಾಗಿ ನಾವು ಈ ಲೇಖನದಲ್ಲಿ ಸ್ಮಾರ್ಟ್‌ಫೋನ್‌ ಕೊಳ್ಳಲು ಮಾರ್ಗದರ್ಶಿ ಸಲಹೆಗಳನ್ನು ನೀಡುತ್ತಿದ್ದೇವೆ. ಈ ಸಲಹೆಗಳು ನೀವು ನಿಮ್ಮ ಬೆಲೆಗೆ ತಕ್ಕ ಉತ್ತಮ ಫೋನ್‌ಗಳನ್ನು ಖರೀದಿಸಲು ಸಹಾಯವಾಗಲಿವೆ.

 ಜಿಪುಣನಾಗದಿರಿ

ಜಿಪುಣನಾಗದಿರಿ

ನಿಮಗೆ ಬೇಕಾದ ಲಕ್ಷಣ ಮತ್ತು ಗುಣಗಳನ್ನು ಹೊಂದಿದ ಫೋನ್‌ ತೆಗೆದುಕೊಳ್ಳಲು ಜಿಪುಣತನ ತೋರಿಸದಿರಿ. ಕಾರಣ ಅಂತಹ ಫೋನ್‌ ತೆಗೆದುಕೊಂಡಲ್ಲಿ ಆ ಫೋನ್‌ ನಿಮ್ಮಲ್ಲಿ ಬಹಳದಿನ ಇರುತ್ತದೆ

 ನಿಮಗೆ ಬೇಕಾದ ಗುಣಗಳನ್ನು ಹೊಂದಿರುವ ಫೋನ್‌ ಬಗ್ಗೆ ತಿಳಿಯಿರಿ

ನಿಮಗೆ ಬೇಕಾದ ಗುಣಗಳನ್ನು ಹೊಂದಿರುವ ಫೋನ್‌ ಬಗ್ಗೆ ತಿಳಿಯಿರಿ

Samsung Galaxy S6 edge, ಸಾಮಾನ್ಯವಾಗಿ ನಿಮಗೆ ಬೇಕಾದ ಎಲ್ಲಾ ರೀತಿಯ ಗುಣಗಳನ್ನು ಹೊಂದಿದ್ದು, ಹೆಚ್ಚು ಹಣ ವ್ಯಯಿಸಬೇಡಿ

ಸರಿಯಾದ ವಿನ್ಯಾಸದ ಬಗ್ಗೆ ತಿಳಿಯಿರಿ

ಸರಿಯಾದ ವಿನ್ಯಾಸದ ಬಗ್ಗೆ ತಿಳಿಯಿರಿ

ನೀವು ಹಣ ಕೊಟ್ಟು ಕೊಂಡುಕೊಳ್ಳುವ ಫೋನ್‌ ಜೊತೆ ಹೆಚ್ಚು ಸಂಬಂಧ ಹೊಂದುವುದರಿಂದ ಅದನ್ನು ಹೆಚ್ಚು ಕಾಲ ನಿಮ್ಮಲ್ಲಿ ಇಟ್ಟುಕೊಳ್ಳುತ್ತೀರಿ. ಆದ್ದರಿಂದ ಫೋನ್‌ ವಿನ್ಯಾಸ ಸರಿಯಿದ್ದು, ನಿಮ್ಮ ಕೈಯಲ್ಲಿ ಉತ್ತಮವಾಗಿ ಅನುಭವ ಕೊಡಬಲ್ಲದೇ ಎಂದು ತಿಳಿದುಕೊಳ್ಳಿ.

ಸೆಲ್‌ ಫೋನ್‌ ವಿಧಗಳನ್ನು ತಿಳಿಯಿರಿ

ಸೆಲ್‌ ಫೋನ್‌ ವಿಧಗಳನ್ನು ತಿಳಿಯಿರಿ

ಫೋನ್‌ಗಳಲ್ಲಿ ಸ್ಮಾರ್ಟ್‌ಫೋನ್‌, ಮೆಸೇಜಿಂಗ್‌ ಅಥವಾ ಪೀಚರ್‌ಫೋನ್ ಮತ್ತು ಬೇಸಿಕ್‌ ಫೋನ್‌ಗಳಿದ್ದು ಅವುಗಳ ಬಗ್ಗೆ ತಿಳಿಯಿರಿ

ಸ್ಕ್ರೀನ್‌ ಸೈಜ್‌

ಸ್ಕ್ರೀನ್‌ ಸೈಜ್‌

ಲಾರ್ಜ್‌ ಸ್ಕ್ರೀನ್ (5.3 inches), ಮೀಡಿಯಮ್‌ ಸ್ಕ್ರೀನ್‌(5.0-5.2inches), ಸ್ಮಾಲ್‌ ಸ್ಕ್ರೀನ್‌(4.5-4.9inches) ಇದ್ದು, ಇವುಗಳಲ್ಲಿ ನಿಮಗೆ ಯಾವುದು ಉತ್ತಮ ಎಂದು ಆಯ್ಕೆ ಮಾಡಿಕೊಳ್ಳಿ ಹಾಗೂ ಈ ಸೈಜ್‌ಗಳ ಫೋನ್‌ ಬಗ್ಗೆ ತಿಳಿಯಿರಿ

 ಪ್ರೊಸೆಸರ್ಸ್‌

ಪ್ರೊಸೆಸರ್ಸ್‌

ಸ್ಮಾರ್ಟ್‌ಫೋನ್‌ಗಳು ಮುಖ್ಯವಾಗಿ ಕಾರ್ಯನಿರ್ವಹಿಸಲು ಅವುಗಳ ಪ್ರೊಸೆಸರ್ಸ್‌ ಆಧಾರವಾಗಿದೆ. ಹಾಗೂ ನಿಮ್ಮ ಫೋನಿನ ಎಲ್ಲಾ ವಿಧದ ಕಾರ್ಯನಿರ್ವಹಿಸುವಲ್ಲಿ ಇದು ಮುಖ್ಯವಾಗಿರುವುದರಿಂದ ಪ್ರೊಸೆಸರ್ಸ್‌ ಬಗ್ಗೆ ತಿಳಿದುಕೊಳ್ಳಿ. ಕ್ವಾಲ್‌ಕಂ ಸ್ನಾಪ್‌ಡ್ರಾಗನ್‌, ಆಪಲ್‌ ಎ8, ಸಾಮ್‌ಸಂಗ್‌ ಇಕ್ಸಿನಾಸ್‌, ಮೊಟರೋಲಾ x8, ಮಿಡಿಯಾಟೆಕ್‌ ಎಂಬ ಹಲವು ಪ್ರೊಸೆಸರ್ಸ್‌ಗಳಿದ್ದು ಅವುಗಳಲ್ಲಿ ಉತ್ತಮ ಯಾವುದು ಎಂಬುದನ್ನು ತಿಳಿದುಕೊಳ್ಳಿ.

ಕ್ಯಾಮೆರಾ

ಕ್ಯಾಮೆರಾ

ಕೆಲವೊಂದು 20mp ಕ್ಯಾಮೆರಾಗಳಿಗಿಂತ 13mp ಕ್ಯಾಮೆರಾಗಳು ಉತ್ತಮ ಚಿತ್ರಗಳನ್ನು ಸೆರೆಹಿಡಿಯಬಲ್ಲವು. ಕಾರಣ ಕ್ಯಾಮೆರಾದಲ್ಲಿ ಲೆನ್ಸ್‌ಗಳ ಕ್ವಾಲಿಟಿ ಮುಖ್ಯವಾಗಿರುತ್ತವೆ. HTC ಮತ್ತು Microsoft ಫೋನ್‌ಗಳು ಉತ್ತಮ ಚಿತ್ರಗಳನ್ನು ಸೆರೆಹಿಡಿಯಬಲ್ಲವೂ. ಹಾಗೂ ಕೆಲವೊಂದು ಆಟೋಫೋಕಸ್‌ ಗುಣವಿರುವ ಕ್ಯಾಮೆರಾಗಳು ಲಭ್ಯವಿದ್ದು, ಫ್ಲಾಸ್‌ಹೊಂದಿರುತ್ತವೆ. ಆದ್ದರಿಂದ ಕ್ಯಾಮೆರಾ ಕಾರ್ಯನಿರ್ವಹಣೆಯ ಬಗ್ಗೆಯೂ ಎಚ್ಚರವಹಿಸಿ.

ಬ್ಯಾಟರಿ

ಬ್ಯಾಟರಿ

ನಿಮ್ಮ ಫೋನ್‌ನೊಂದಿಗಿನ ಚಟುವಟಿಕೆಗೆ ತಕ್ಕಂತೆ ಬ್ಯಾಟರಿ ಪವರ್‌ ಬಗ್ಗೆ ತಿಳಿದುಕೊಂಡು, ಹೇಗೆ ನಿರ್ವಹಿಸಿದರೆ, ಎಷ್ಟು ಗಂಟೆಗಳ ಕಾಲ ಬ್ಯಾಟರಿ ಬಾಳಿಕೆ ಬರುತ್ತದೆ ಎಂಬುದನ್ನು ತಿಳಿಯಿರಿ.

ವೈರ್‌ಲೆಸ್‌ ಕ್ಯಾರಿಯರ್ಸ್‌ ಮತ್ತು ನೆಟ್‌ವರ್ಕ್‌ ಮತ್ತು 4G ಡಾಟಾ

ವೈರ್‌ಲೆಸ್‌ ಕ್ಯಾರಿಯರ್ಸ್‌ ಮತ್ತು ನೆಟ್‌ವರ್ಕ್‌ ಮತ್ತು 4G ಡಾಟಾ

ನಿಮ್ಮ ಬಳಕೆಗೆ ತಕ್ಕಂತೆ ಸಂಪರ್ಕ ಕ್ಯಾರಿಯರ್ಸ್‌ ಮಟ್ಟವನ್ನು ತಿಳಿದುಕೊಳ್ಳಿ. ವೈರ್‌ಲೆಸ್‌ ನೆಟ್‌ವರ್ಕ್‌ ತಂತ್ರಜ್ಞಾನವು ಸ್ಮಾರ್ಟ್‌ಫೋನ್‌ಗಳ ಬ್ಯಾಕ್‌ಬೋನ್‌ ಆಗಿದೆ. ಆದ್ದರಿಂದ ಫೋನ್‌ ತೆಗೆದುಕೊಳ್ಳುವ ಮೊದಲು ನೆಟ್‌ವರ್ಕ್‌ ಸಂಬಂಧ ಪಟ್ಟಂತೆ CDMA, GSM, 4G ಮತ್ತು LTE ಮೊಬೈಲ್‌ ಸಂವಹನ ಹೇಗಿದೆ ಎಂಬುದನ್ನು ತಿಳಿದುಕೊಳ್ಳಿ.

ಸ್ಕ್ರೀನ್‌ ಟೆಕ್ನಾಲಜೀಸ್‌

ಸ್ಕ್ರೀನ್‌ ಟೆಕ್ನಾಲಜೀಸ್‌

ನೀವು ಬಳಸುವ ವಿಧಾನಕ್ಕೆ ಸಂಬಂಧಸಿದಂತೆ ಮೊಬೈಲ್‌ ಡಿಸ್‌ಪ್ಲೇಗಳಲ್ಲಿ ಹಲವು ರೀತಿಯ ಟೆಕ್‌ ಅಳವಡಿಸಿದ್ದು, LCD, Retina Display, AMOLED ಡಿಸ್‌ಪ್ಲೇಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ತಿಳಿದುಕೊಳ್ಳಿ..

ಅಪರೇಟಿಂಗ್‌ ಸಿಸ್ಟಮ್‌

ಅಪರೇಟಿಂಗ್‌ ಸಿಸ್ಟಮ್‌

iOS, ಆಂಡ್ರಾಯ್ಡ್‌, ವಿಂಡೋಸ್‌ ಫೋನ್‌, ಬ್ಲಾಕ್‌ಬೆರ್ರಿ ಎಂಬ ಹಲವು ವಿಧದ ಅಪರೇಟಿಂಗ್‌ ಸಿಸ್ಟಮ್‌ಗಳಿದ್ದು, ಅವುಗಳನ್ನು ತಿಳಿಯಿರಿ.

 ಕಟಿಂಗ್‌ ಎಡ್ಜ್‌ ಫೋನ್‌ ಫೀಚರ್‌

ಕಟಿಂಗ್‌ ಎಡ್ಜ್‌ ಫೋನ್‌ ಫೀಚರ್‌

NFC, ವೈರ್‌ಲೆಸ್‌ ಚಾರ್ಜಿಂಗ್‌, ಫಿಂಗರ್‌ಪ್ರಿಂಟ್‌ ಸ್ಕ್ಯಾನಿಂಗ್‌, ಹಾರ್ಟ್‌ ರೇಟ್‌ ಮಾನಿಟರ್‌, ಕರ್ವ್ಡ್ ಸ್ಕ್ರೀನ್‌ ಎಂಬ ಹಲವು ಫೀಚರ್‌ಗಳು ಕಟಿಂಗ್‌ ಎಡ್ಜ್‌ ಫೋನ್‌ಗಳ ಗುಣಲಕ್ಷಣಗಳಾಗಿವೆ.

Most Read Articles
Best Mobiles in India

English summary
"Which phone should I buy?" This is the single most common question readers like you ask phone reviewers like us every day. We get it, it can be a challenge, especially with superb choices such as the Samsung Galaxy S6 and iPhone 6 Plus.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X