Home
ಸುದ್ದಿಜಾಲ

ಒಂದು ದೇಶದ ಪ್ರಧಾನಿಯ ವೈಯಕ್ತಿಕ ಮಾಹಿತಿಯನ್ನೇ ಕದ್ದರು ಸೈಬರ್ ಕ್ರಿಮಿನಲ್‌ಗಳು!!

By Bhaskar N J

ಇಲ್ಲಿಯವರೆಗೂ ಸಣ್ಣಪುಟ್ಟ ಮೀನುಗಳನಷ್ಟೆ ಬಲೆಗೆ ಹಾಕಿಕೊಳ್ಳುತ್ತಿದ್ದ ಸೈಬರ್ ಕ್ರಿಮಿನಲ್‌ಗಳು ಈ ಸಿಂಗಾಪುರ ಪ್ರಧಾನಿ ಲೀ ಹೈನ್ ಲೂಂಗ್ ಸೇರಿ ಸುಮಾರು 1.5 ಮಿಲಿಯನ್ ಸಿಂಗಾಪುರ ಪ್ರಜೆಗಳ ಆರೋಗ್ಯ ದಾಖಲೆಗಳಿಗೆ ಕನ್ನಹಾಕಿದ್ದಾರೆ. ಪ್ರಧಾನಿ ಲೀ ಹೈನ್ ಲೂಂಗ್ ಅವರ ಮಾಹಿತಿಯನ್ನೇ ಗುರಿಯಾಗಿಸಿಕೊಂಡು ಈ ಸೈಬರ್ ದಾಳಿ ನಡೆದಿದೆ ಎಂದು ತಿಳಿದುಬಂದಿದೆ.

ಹೌದು, ಸಿಂಗಾಪುರದ ಅತಿದೊಡ್ಡ ಆಸ್ಪತ್ರೆ ಸಮೂಹ ​ಸಿಂಗ್​ಹೆಲ್ತ್​ನ ಕಂಪ್ಯೂಟರ್ ಗಳನ್ನು ಹ್ಯಾಕ್ ಮಾಡಿರುವ ಖದೀಮರು ರೋಗಿಗಳ ಆರೋಗ್ಯ ದಾಖಲೆ ಸೇರಿ ವೈಯುಕ್ತಿಕ ದಾಖಲೆಗಳನ್ನು ಕಳವು ಮಾಡಿದ್ದಾರೆ. ಇದು ಈವರೆಗೆ ನಡೆದಿರುವ ದೊಡ್ಡ ಆನ್‌ಲೈನ್ ಹ್ಯಾಕ್ ಪ್ರಕರಣಗಳ ಸಾಲಿಗೆ ಸೇರುವಂತಹ ಗಂಭೀರ ಪ್ರಕರಣ ಎಂದು ಮಾಧ್ಯಮಗಳು ವರದಿ ಮಾಡಿವೆ.

ಒಂದು ದೇಶದ ಪ್ರಧಾನಿಯ ವೈಯಕ್ತಿಕ ಮಾಹಿತಿಯನ್ನೇ ಕದ್ದರು ಸೈಬರ್ ಕ್ರಿಮಿನಲ್‌ಗಳು!!

2015ರ ಮೇ 1 ರಿಂದ 2018ರ ಜುಲೈ 4ರ ನಡುವಿನ ಅವಧಿಯಲ್ಲಿ ಈ ಸೈಬರ್ ದಾಳಿ ನಡೆದಿರುವುದಾಗಿ ತಿಳಿದುಬಂದಿದ್ದು, ದಾಳಿಕೋರರು ನಿರ್ದಿಷ್ಟವಾಗಿ ಪ್ರಧಾನಿ ಲೀ ಹೈನ್ ಲೂಂಗ್ ಅವ್ರ ದಾಖಲೆಗಳನ್ನು ವೈಯಕ್ತಿಕ ವಿವರಗಳನ್ನು ಗುರಿಯಾಗಿರಿಸಿಕೊಂಡಿದ್ದರು ಎಂದು ಅಲ್ಲಿನ ಆರೋಗ್ಯ ಸಚಿವ ಗ್ಯಾನ್ ಕಿಮ್ ಯಾಂಗ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಸಿಂಗಾಪುರ ಪ್ರಧಾನಿ ಲೀ ಹೈನ್ ಲೂಂಗ್ ಸೇರಿ ​ಸಿಂಗ್​ಹೆಲ್ತ್​ ಆಸ್ಪತ್ರೆ ಸಮೂಹದ 1,60,000 ಹೊರರೋಗಿಗಳ ದಾಖಲೆಗಳಿಗೆ ಸಹ ಇವರು ಕನ್ನ ಹಾಕಿದ್ದಾರೆ. ಆದರೆ ಹ್ಯಾಕರ್ ಗಳು ಯಾವ ದಾಖಲೆಗಳನ್ನು ತಿರುಚಿಲ್ಲ, ಎಲ್ಲರ ವೈಯುಕ್ತಿಕ ಮಾಹಿತಿ, ದಾಖಲೆಗಳ ಕಾಪಿ ಮಾಡಲಾಗಿದೆ ಎಂದು ಸಿಂಗಾಪುರದ ಆರೋಗ್ಯ ಸಚಿವಾಲಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಒಂದು ದೇಶದ ಪ್ರಧಾನಿಯ ವೈಯಕ್ತಿಕ ಮಾಹಿತಿಯನ್ನೇ ಕದ್ದರು ಸೈಬರ್ ಕ್ರಿಮಿನಲ್‌ಗಳು!!

ಕ್ರಿಮಿನಲ್‌ಗಳು ರೋಗಿಗಳ ಹೆಸರು, ರಾಷ್ಟ್ರೀಯ ನೋಂದಣಿ ಗುರುತಿನ ಚೀಟಿ ಸಂಖ್ಯೆ ಸೇರಿ ಅನೇಕ ಮಾಹಿತಿಯನ್ನು ಕಳವು ಮಾಡಿದ್ದಾರೆ. ನಾವು ಮುಂದಿನ ದಿನಗಳಲ್ಲಿ ಐಟಿ ಸುರಕ್ಷತೆ ಕ್ರಮಗಳನ್ನು ಇನ್ನಷ್ಟು ಹೆಚ್ಚಿಸುತ್ತೇವೆ. ಈ ಮೂಲಕ ಭವಿಷ್ಯದಲ್ಲಿ ಇಂತಹ ದಾಳಿ ಮರುಕಳಿಸದಂತೆ ಎಚ್ಚರ ವಹಿಸಲಾಗುತ್ತದೆ ಎಂದು ಅಲ್ಲಿನ ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ.

ಓದಿರಿ: ಜಿಯೋ ಫೋನ್ ಎಕ್ಸ್‌ಚೇಂಜ್ ಮೇಳ ಆರಂಭ!..ಫೋನ್ ಪಡೆಯಲು ಇವೆ 5 ಷರತ್ತುಗಳು!!

Best Mobiles in India

English summary
Cyber attack on Singapore health database steals details of 1.5 million, including PM. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+