Subscribe to Gizbot

ಇಮೇಲ್ ಬಳಕೆದಾರರೇ ಎಚ್ಚರ: ಮೇಲ್ ಹ್ಯಾಕ್ ಮಾಡಿ ರೂ. 76.78 ಲಕ್ಷ ಲೂಟಿ..!

Written By:

ದಿನೇ ದಿನೇ ಸೈಬರ್ ಕ್ರೈಮ್ ಅಧಿಕವಾಗುತ್ತಿದ್ದು, ಬೆಂಗಳೂರು ಮೂಲದ ಕಂಪನಿಯೊಂದರ ಇಮೇಲ್ ಖಾತೆಯನ್ನು ಹ್ಯಾಕ್ ಮಾಡಿ ಸರಿ ಸುಮಾರು ರೂ. 76.78 ಲಕ್ಷ ಹಣವನ್ನು ಸೈಬರ್‌ ಖದೀಮರು ಲೂಟಿ ಮಾಡಿದ್ದಾರೆ ಎನ್ನಲಾಗಿದೆ.

ಇಮೇಲ್ ಬಳಕೆದಾರರೇ ಎಚ್ಚರ: ಮೇಲ್ ಹ್ಯಾಕ್ ಮಾಡಿ ರೂ. 76.78 ಲಕ್ಷ ಲೂಟಿ..!

ಓದಿರಿ: ನಿಮ್ಮ ಮನೆಗೆ ಬೆಸ್ಟ್‌ TV ಫ್ಲಿಪ್‌ಕಾರ್ಟ್‌ನಲ್ಲಿ ಮಾತ್ರವೇ: ಕೇವಲ ರೂ.13,999ಕ್ಕೆ ಸ್ಮಾರ್ಟ್ LED TV..!

ಬೆಂಗಳೂರು ಮೂಲದ ಕಂಪನಿ ಎಂಜಿನಿಯರಿಂಗ್‌ ಉತ್ಪನ್ನಗಳನ್ನು ಸ್ಪೇನ್‌, ಅರ್ಜಂಟಿನಾ, ಬ್ರೆಜಿಲ್‌, ಜರ್ಮನಿ ಸೇರಿದಂತೆ ವಿವಿಧ ರಾಷ್ಟ್ರಗಳಿಗೆ ರಫ್ತು ಮಾಡುತ್ತಿದ್ದು, ಅದರಂತೆ ಸ್ಪೇನ್‌ನಲ್ಲಿರುವ ಕಂಪನಿಯೊಂದಕ್ಕೆ ತನ್ನ ಉತ್ಪನ್ನಗಳನ್ನು ರಫ್ತು ಮಾಡಿತ್ತು ಆದರೆ ಹಣ ಸ್ವೀಕರಿಸುವ ಸಂದರ್ಭದಲ್ಲಿ ಸೈಬರ್‌ ಖದೀಮರು ತಮ್ಮ ಕೈಚಳಕ ತೋರಿಸಿದ್ದಾರೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೇಲ್‌ ಹ್ಯಾಕ್:

ಮೇಲ್‌ ಹ್ಯಾಕ್:

ಹಣ ಪಾವತಿ ಆಗದ ಕಾರಣ ವಿಚಾರಿಸಿದಾಗ ಕಂಪನಿ ಇ ಮೇಲ್‌ನಿಂದ ಬ್ಯಾಂಕ್‌ ಖಾತೆಗಳನ್ನು ಬದಲಾವಣೆ ಮಾಡಲಾಗಿದೆ. ಹೊಸ ಬ್ಯಾಂಖ್ ಖಾತೆಗೆ ಪೇಮೆಂಟ್‌ ಮಾಡಿ ಎಂಬ ಸಂದೇಶವನ್ನು ಸೈಬರ್‌ ಖದೀಮರು ಮೇಲ್‌ ಹ್ಯಾಕ್ ಕಳುಹಿಸಿದ್ದು, ಆ ಮೂಲಕ ತಮ್ಮ ಆಕೌಂಟ್‌ಗೆ ಹಣವನ್ನು ಹಾಕಿಸಿಕೊಂಡಿದ್ದಾರೆ ಎಂಬ ವಿಚಾರವೂ ಬೆಳಕಿಗೆ ಬಂದಿದೆ.

ಮೂರು ಹಂತದಲ್ಲಿ ಕೈಚಳಕ:

ಮೂರು ಹಂತದಲ್ಲಿ ಕೈಚಳಕ:

ಅಪರಿಚಿತ ಸೈಬರ್‌ ಖದೀಮರು ಬೆಂಗಳೂರು ಮೂಲದ ಕಂಪನಿಯ ಇ ಮೇಲ್‌ ಹ್ಯಾಕ್‌ ಮಾಡಿ ಹಣ ವರ್ಗಾವಣೆ ಮಾಡಿಸಿಕೊಂಡಿರುವುದು ಪರಿಶೀಲನೆಯಲ್ಲಿ ಗೊತ್ತಾಗಿದೆ. ಮೂರು ಹಂತಗಳಲ್ಲಿ ತಮ್ಮ ಖಾತೆಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ ಎನ್ನಲಾಗಿದೆ.

ಎಚ್ಚರ:

ಎಚ್ಚರ:

ಇತರಹದ ಪ್ರಕರಣಗಳು ಪ್ರತಿ ನಿತ್ಯ ವರದಿಯಾಗುತ್ತಿದ್ದು, ಈ ಹಿನ್ನಲೆಯಲ್ಲಿ ನಿಮ್ಮ ಈ ಮೇಲ್ ಖಾತೆಯನ್ನು ಸರಿಯಾದ ರೀತಿಯಲ್ಲಿ ಸೆಕ್ಯೂರ್ ಮಾಡಿಕೊಳ್ಳುವುದು ಉತ್ತಮ ಇಲ್ಲವಾದರೆ ಈ ಮಾದರಿಯಲ್ಲಿ ನಷ್ಟವನ್ನು ಅನುಭವಿಸಬೇಕಾಗುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
cyber crime e mail hack. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot