ಡಿ2ಎಚ್‌ HD ಸೆಟ್-ಟಾಪ್ ಬಾಕ್ಸ್ ಮತ್ತು ಮ್ಯಾಜಿಕ್ ಸ್ಟಿಕ್ ಕಾಂಬೊ ಬೆಲೆ 2198ರೂ!

|

ಡಿಶ್ ಟಿವಿ ಒಡೆತನದ ಡಿ2ಎಚ್‌ ಈಗ ಹೊಸದಾಗಿ D2h HD RF ಸೆಟ್-ಟಾಪ್ ಬಾಕ್ಸ್ ಮತ್ತು D2h ಮ್ಯಾಜಿಕ್ ಸ್ಟಿಕ್ ನ ಕಾಂಬೊ ಆಫರ್ ಅನ್ನು ತಂದಿದೆ. ಈ ಹೊಸ ಆಫರ್ನಡಿ ಡಿ2ಎಚ್‌ ಸೆಟ್‌ಟಾಪ್‌ ಬಾಕ್ಸ್‌ ಮತ್ತು ಡಿ2ಎಚ್‌ ಮ್ಯಾಜಿಕ್ ಸ್ಟಿಕ್ ಡಿವೈಸ್‌ಗಳು ಬಳಕೆದಾರರಿಗೆ ಕಡಿಮೆ ಬೆಲೆಯಲ್ಲಿ ಲಭ್ಯವಾಗುತ್ತವೆ. ಈ ಕೊಡುಗೆಯು ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಕಾಣಿಸಿದೆ. ಡಿಟಿಎಚ್‌ ವಲಯದಲ್ಲಿ ಸದ್ದು ಮಾಡಲಿದೆ.

ಡಿ2ಎಚ್‌

ಹೌದು, ಜನಪ್ರಿಯ ಡಿ2ಎಚ್‌ ಈಗ ಹೊಸದೊಂದು ಕೊಡುಗೆ ಘೋಷಿಸಿದ್ದು, D2h HD RF ಸೆಟ್-ಟಾಪ್ ಬಾಕ್ಸ್ ಮತ್ತು D2h ಮ್ಯಾಜಿಕ್ ಸ್ಟಿಕ್ ಕಾಂಬೊ ಆಫರ್‌ನಲ್ಲಿ ತಂದಿದೆ. ಈ ಕಾಂಬೊ ಬೆಲೆಯು 2198ರೂ. ಆಗಿದ್ದು, ಇದರೊಂದಿಗೆ ಗ್ರಾಹಕರಿಗೆ ಒಂದು ತಿಂಗಳ ಪ್ಲಾಟಿನಂ ಹೆಚ್‌ಡಿ ಕಾಂಬೊ ಕೊಡುಗೆ ದೊರೆಯುತ್ತದೆ. ಇನ್ನು D2h ಮ್ಯಾಜಿಕ್ ಸ್ಟಿಕ್ ಗ್ರಾಹಕರಿಗೆ ಹೆಚ್ಚಿನ ಮನರಂಜನೆಯ ಆಯ್ಕೆಗಳನ್ನು ನೀಡುತ್ತದೆ. ಮ್ಯಾಜಿಕ್ ಸ್ಟಿಕ್‌ ಫೀಚರ್ಸ್‌ಗಳ ಬಗ್ಗೆ ಸೌಲಭ್ಯಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

D2h ಮ್ಯಾಜಿಕ್ ಸ್ಟಿಕ್ ಸೌಲಭ್ಯಗಳು

D2h ಮ್ಯಾಜಿಕ್ ಸ್ಟಿಕ್ ಸೌಲಭ್ಯಗಳು

D2h ಮ್ಯಾಜಿಕ್ ಸ್ಟಿಕ್ ಅಮೆಜಾನ್ ಫೈರ್‌ ಸ್ಟಿಕ್‌ ತರಹನಾದ ಡಿವೈಸ್‌ ಆಗಿದೆ. ಈ ಡಿವೈಸ್‌ನಲ್ಲಿ ZEE5 5, ಸೋನಿ, ಎಲ್ಐವಿ, ವಾಚೊ, ಸೇರಿದಂತೆ ಇನ್ನಿತರ ಒಟಿಟಿ ಪ್ಲಾಟ್‌ಫಾರ್ಮ್‌ಗಳ ಸೌಲಭ್ಯ ಸಹ ಲಭ್ಯ ಇವೆ. ಇದು ಮಾತ್ರವಲ್ಲದೆ ವಾಯಿಸ್‌ ಅಸಿಸ್ಟಂಟ್ ಸೌಲಭ್ಯ ಹೊಂದಿದ್ದು, 30,000+ ಅಲೆಕ್ಸಾ ಕೌಶಲ್ಯಗಳು ಸೇರಿವೆ. ಇವೆ. ಸಂಗೀತ ಮತ್ತು ಹೆಚ್ಚಿನದನ್ನು ಕೇಳಲು ಅನುಮತಿಸುತ್ತದೆ. ಅಲ್ಲದೆ, ಗ್ರಾಹಕರು ಕ್ಯಾಬ್‌ಗಳನ್ನು ಕಾಯ್ದಿರಿಸಬಹುದು, ಅಲಾರಂಗಳು ಮತ್ತು ಜ್ಞಾಪನೆಗಳನ್ನು ಹೊಂದಿಸಬಹುದು.

ಡಿ2ಎಚ್‌ ಮ್ಯಾಜಿಕ್ ಸ್ಟಿಕ್‌ನಲ್ಲಿ ಪ್ರಿ-ಇನ್‌ಸ್ಟಾಲ್‌ ಆಪ್ಸ್‌

ಡಿ2ಎಚ್‌ ಮ್ಯಾಜಿಕ್ ಸ್ಟಿಕ್‌ನಲ್ಲಿ ಪ್ರಿ-ಇನ್‌ಸ್ಟಾಲ್‌ ಆಪ್ಸ್‌

ಡಿ2ಎಚ್‌ ಮ್ಯಾಜಿಕ್ ಸ್ಟಿಕ್ ಡಿವೈಸ್‌ ಲೈವ್ ಟಿವಿ ಮತ್ತು ಜೀ5, ಹಂಗಾಮಾ ಪ್ಲೇ, ಎಎಲ್‌ಟಿ ಬಾಲಾಜಿ, ಸೋನಿ ಲೈವ್, ವಾಚೋ ಸೇರಿದಂತೆ ಜನಪ್ರಿಯ OTT ವಿಡಿಯೊ ಸ್ಟ್ರಿಮಿಂಗ್ ಆಪ್ಸ್‌ಗಳ ನಡುವೆ ಬ್ರಿಡ್ಜ್ ಇದ್ದಂತೆ. ಈ ಮ್ಯಾಜಿಕ್ ಸ್ಟಿಕ್‌ ಜನಪ್ರಿಯ ವಿಡಿಯೊ ಸ್ಟ್ರಿಮಿಂಗ್ ಆಪ್ಸ್‌ಗಳ ಪ್ರಿ-ಇನ್‌ಸ್ಟಾಲ್‌ ಹೊಂದಿದ್ದು, ಅವುಗಳು ಅನೇಕ ಮನರಂಜನೆಯ ಕಾರ್ಯಕ್ರಮಗಳ ಸಂಗ್ರಹ ಮತ್ತು ಲೈವ್ ಸೇವೆ ಹೊಂದಿವೆ. ಒಟ್ಟಾರೇ ಗ್ರಾಹಕರಿಗೆ ಮನರಂಜನೆಯ ಧಮಾಕ ಲಭ್ಯವಾಗಲಿದೆ.

ಮ್ಯಾಜಿಕ್ ಸ್ಟಿಕ್‌

ಇನ್ನು ಡಿಶ್‌ಟಿವಿ ಸಂಸ್ಥೆಯು ಡಿ2ಎಚ್‌ ಮ್ಯಾಜಿಕ್ ಸ್ಟಿಕ್‌ ಅನ್ನು ಪ್ರತ್ಯೇಕವಾಗಿ ಖರೀದಿಸಬೇಕಿದ್ದರೇ 399ರೂ.ಗಳಿಗೆ ಲಭ್ಯ. ಹಾಗೂ ಡಿ2ಎಚ್‌ ಸೆಟ್‌ಟಾಪ್‌ ಬಾಕ್ಸ್‌ ಶುಲ್ಕ ಬೇರೆ. ಆದ್ರೆ ಈಗ ಕಪಂಬೊ ಕೊಡುಗೆಯಲ್ಲಿ ಖರೀದಿಸಿದರೆ ಗ್ರಾಹಕಸ್ನೇಹಿ ಬೆಲೆಯಲ್ಲಿ ಎರಡು ಡಿವೈಸ್‌ ಲಭ್ಯವಾಗುತ್ತವೆ.

Most Read Articles
Best Mobiles in India

English summary
The offer is now listed on the official website of D2h with accurate pricing.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X