D2Hನಿಂದ ಹೊಸ ಸೆಟ್‌ಟಾಪ್ ಬಾಕ್ಸ್ ಪರಿಚಯ!..ಬೆಲೆ 2199ರೂ.!
ದೇಶದ ಪ್ರಮುಖ DTH (ಡೈರೆಕ್ಟ್-ಟು-ಹೋಮ್) ಸೇವಾ ಪೂರೈಕೆದಾರರಲ್ಲಿ ಡಿ2ಎಚ್ (d2h) ಸಹ ಒಂದಾಗಿದೆ. ಈ ಸಂಸ್ಥೆಯು ದೇಶದ ಪ್ರತಿಯೊಂದು ಭಾಗದಲ್ಲೂ ತನ್ನ ನೆಟ್‌ವರ್ಕ್ ಹೊಂದಿದೆ. ಈಗಾಗಲೇ ಹಲವು ಸೇವೆಗಳ ಮೂಲಕ ಗ್ರಾಹಕರನ್ನು ಆಕರ್ಷಿಸಿರುವ d2h, ಈಗ ಮತ್ತೊಂದು ಸೇವೆಗೆ ಪರಿಚಯಿಸಿದೆ. ಇತರೆ ಡಿಟಿಹೆಚ್ ಸೇವಾ ಪೂರೈಕೆದಾರರಂತೆ, d2h ಸಹ ಗ್ರಾಹಕರಿಗೆ ಆಂಡ್ರಾಯ್ಡ್ ಸೆಟ್ ಟಾಪ್ ಬಾಕ್ಸ್ ಅನ್ನು ನೀಡುತ್ತಿದೆ.
ಹೌದು, ಡಿ2ಹೆಚ್ ಸಂಸ್ಥೆಯು ಆಂಡ್ರಾಯ್ಡ್ ಸೆಟ್‌ಟಾಪ್ ಬಾಕ್ಸ್ ಪರಿಚಯಿಸಿದೆ. ಕೊರೊನಾ ನಂತರ ದೇಶದಲ್ಲಿ ಓಟಿಟಿ (ಓವರ್-ದಿ-ಟಾಪ್) ಕಂಟೆಂಟ್ ಹೆಚ್ಚು ಮುನ್ನೆಲೆಯಲ್ಲಿ ಕಾಣಿಸಿಕೊಂಡಿದೆ. ಈ ನಿಟ್ಟಿನಲ್ಲಿ ಜನರು ಹೆಚ್ಚಾಗಿ ಓಟಿಟಿ ತಾಣಗಳತ್ತ ಆಕರ್ಷಕ ಆಗಿದ್ದಾರೆ. ಹೀಗಾಗಿ ಗ್ರಾಹಕರಿಗೆ ಓಟಿಟಿ ಸೇವೆ ಒದಗಿಸಲು ಡಿ2ಹೆಚ್ ಸಹ ಆಂಡ್ರಾಯ್ಡ್ ಸೆಟ್‌ಟಾಪ್ ಬಾಕ್ಸ್ ನೀಡುತ್ತಿದೆ. ಇನ್ನು ಸಂಸ್ಥೆಯ ಆಂಡ್ರಾಯ್ಡ್ ಸೆಟ್‌ಟಾಪ್ ಬಾಕ್ಸ್ ಬೆಲೆಯು ಗ್ರಾಹಕ ಸ್ನೇಹಿ ಆಗಿದೆ.

ಡಿ2ಹೆಚ್ ಸಂಸ್ಥೆಯ ನೂತನ ಆಂಡ್ರಾಯ್ಡ್ ಸೆಟ್‌ಟಾಪ್ ಬಾಕ್ಸ್ ಬಳಕೆದಾರರಿಗೆ ಓಟಿಟಿ ಹಾಗೂ ಟೆಲಿವಿಷನ್ ಚಾನೆಲ್‌ಗಳ ಕಂಟೆಂಟ್ ಅನ್ನು ವೀಕ್ಷಿಸಲು ಅನುವು ಮಾಡಿಕೊಡುತ್ತದೆ. ಈ ಸೆಟ್‌ಟಾಪ್ ಬಾಕ್ಸ್ 2K ಹೆಚ್‌ಡಿ ಕ್ವಾಲಿಟಿಯ ಕಂಟೆಂಟ್ ವೀಕ್ಷಿಸಲು ಅನುವು ಮಾಡಿಕೊಡುತ್ತದೆ. ಹಾಗೆಯೇ ಗೂಗಲ್ ವಾಯಿಸ್ ಅಸಿಸ್ಟಂಟ್ ಸೌಲಭ್ಯ ಸಹ ಪಡೆದಿದೆ. ಹಾಗದರೆ ಡಿ2ಹೆಚ್‌ನ ಹೊಸ ಆಂಡ್ರಾಯ್ಡ್ ಸೆಟ್‌ಟಾಪ್ ಬಾಕ್ಸ್‌ನ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.
d2h ಆಂಡ್ರಾಯ್ಡ್ ಸೆಟ್‌ಟಾಪ್ ಬಾಕ್ಸ್ ಫೀಚರ್ಸ್ ಹಾಗೂ ಸೇವೆ :
d2h ಈ ಸೇವೆಯಲ್ಲಿ ಬಳಕೆದಾರರಿಗೆ 2K ಹೆಚ್‌ಡಿ ಗುಣಮಟ್ಟದಲ್ಲಿ ಕಂಟೆಂಟ್ ವೀಕ್ಷಿಸಲು ಅನುಕೂಲವಾಗಲಿದೆ. ಈ ಸೆಟ್‌ಟಾಪ್ ಬಾಕ್ಸ್ ಅಂತರ್ನಿರ್ಮಿತ ವೈ-ಫೈ ಸೌಲಭ್ಯದ ಸಪೋರ್ಟ್ ಅನ್ನು ಒಳಗೊಂಡಿರುವುದರಿಂದ, ಗ್ರಾಹಕರು ಸುಲಭವಾಗಿ ಲಭ್ಯ ಇರುವ ವೈ-ಫೈ ನೆಟ್‌ವರ್ಕ್ ಗೆ ಸಂಪರ್ಕಿಸಬಹುದು. ಅಲ್ಲದೇ ಗ್ರಾಹಕರು ತಮಗೆ ಬೇಕಾದಾಗ ಓಟಿಟಿ ಕಂಟೆಂಟ್ ಅನ್ನು ವೀಕ್ಷಿಸಬಹುದು.
ಹಾಗೆಯೇ d2h ಆಂಡ್ರಾಯ್ಡ್ ಸೆಟ್‌ಟಾಪ್ ಬಾಕ್ಸ್ ಅಂತರ್ನಿರ್ಮಿತ ಗೂಗಲ್ ಅಸಿಸ್ಟಂಟ್ ಅನ್ನು ಹೊಂದಿದ್ದು, ಗ್ರಾಹಕರು ವಾಯಿಸ್ ಕಮಾಂಡ್ ಫೀಚರ್ಸ್ ಅನ್ನು ಸಕ್ರಿಯ ಮಾಡಬಹುದು. ಅಲ್ಲದೇ ವೀಕ್ಷಣೆಯ ಅನುಭವವನ್ನು ಹೆಚ್ಚಿಸಲು, ಈ ಸಾಧನವು STB ಡಾಲ್ಬಿ ಆಡಿಯೊದ ಸಪೋರ್ಟ್ ಸಹ ಒದಗಿಸಲಿದೆ. ಗ್ರಾಹಕರು ಸ್ಪೀಕರ್ ಸಿಸ್ಟಮ್ ಹೊಂದಿದ್ದರೆ, ಖಂಡಿತವಾಗಿಯೂ ಕಂಟೆಂಟ್ ವೀಕ್ಷಣೆಯನ್ನು ಆನಂದಿಸಬಹುದು.
d2h ಆಂಡ್ರಾಯ್ಡ್ ಸೆಟ್‌ಟಾಪ್ ಬಾಕ್ಸ್ ಇತರೆ ಆಯ್ಕೆಗಳು :
d2h ಆಂಡ್ರಾಯ್ಡ್ ಸೆಟ್‌ಟಾಪ್ ಬಾಕ್ಸ್ ಆಂಡ್ರಾಯ್ಡ್ ಸಪೋರ್ಟ್ ಪಡೆದಿರುವುದರಿಂದ, ಇದು ಸಾಮಾನ್ಯವಾಗಿ ಗೂಗಲ್ ಪ್ಲೇ ಸ್ಟೋರ್ ಹೊಂದಿರುತ್ತದೆ. ಹೀಗಾಗಿ ಗ್ರಾಹಕರು ಬೇಕಾದಾಗ ಪ್ಲಾಟ್‌ಫಾರ್ಮ್‌ನಲ್ಲಿ ಗೇಮ್‌ಗಳನ್ನು ಸಹ ಆಡಬಹುದು. ಜೊತೆಗೆ ಈ ಡಿವೈಸ್ ಗೂಗಲ್ ಕ್ರೋಮ್‌ಕಾಸ್ಟ್ (Google Chromecast) ಇನ್ ಬಿಲ್ಟ್ ಅನ್ನು ಸಹ ಒಳಗೊಂಡಿದೆ. ಹೀಗಾಗಿ ಗ್ರಾಹಕರು ಟಿವಿಯಲ್ಲಿ ತಮ್ಮ ಫೋನ್ ಅನ್ನು ಸುಲಭವಾಗಿ ಬಿತ್ತರಿಸಬಹುದಾಗಿದೆ.
d2h ಆಂಡ್ರಾಯ್ಡ್ ಸೆಟ್‌ಟಾಪ್ ಬಾಕ್ಸ್ ಬೆಲೆ ಎಷ್ಟು? :
ಇನ್ನು ಓಟಿಟಿ ಕಂಟೆಂಟ್ (OTT) ವೀಕ್ಷಿಸಲು, ಗ್ರಾಹಕರು ವೂಟ್, ಸೋನಿಲೈವ್, ಅಮೆಜಾನ್ ಪ್ರೈಮ್, ಜೀ5 ಹಾಗೂ ಇತರೆ ಜನಪ್ರಿಯ ಅಪ್ಲಿಕೇಶನ್‌ಗಳನ್ನು ಆಕ್ಸಸ್ ಮಾಡಬಹುದಾಗಿದೆ. ಈ ಎಲ್ಲಾ ಆಪ್‌ಗಳನ್ನು ಗ್ರಾಹಕರು ಅಧಿಕೃತ ಗೂಗಲ್ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಅಂದಹಾಗೆ ಡಿ2ಹೆಚ್ (d2h) ಆಂಡ್ರಾಯ್ಡ್ ಸೆಟ್‌ಟಾಪ್ ಬಾಕ್ಸ್‌ನ ಬೆಲೆಯು 2199 ರೂ. ಆಗಿದೆ.


Click it and Unblock the Notifications