ಡಿ2ಎಚ್‌ನಿಂದ ಅಲೆಕ್ಸಾ ಬೆಂಬಲಿತ ಸ್ಟಿಕ್ ಬಿಡುಗಡೆ!..ಬೆಲೆ ಜಸ್ಟ್ 1199ರೂ!

|

ಪ್ರಸ್ತುತ ಟೆಲಿವಿಷನ್ ಉದ್ಯಮ ಸಾಕಷ್ಟು ಬದಲಾವಣೆಗಳನ್ನು ಕಂಡಿದ್ದು, ಕೇಬಲ್‌ ಮೂಲಕ ಡಿಶ್‌ ಪಡೆಯುವ ವ್ಯವಸ್ಥೆ ಮರೆಯಾಗುವತ್ತ ಸಾಗಿದೆ. ಹಾಗೆಯೇ ಟಿವಿ ವಲಯದಲ್ಲಿ ಹೊಸ ಅಲೇ ಎಬ್ಬಿಸಿದ್ದ, ಡಿಟಿಎಚ್ ಸೇವೆಯು ಸಹ ಈಗ ಹಿಂದೆ ಸರಿಯುವಂತಾಗಿದ್ದು, ಸದ್ಯ ಲೈವ್‌ ಟಿವಿ ಸ್ಟಿಕ್ ಡಿವೈಸ್‌ಗಳು ಗ್ರಾಹಕರನ್ನು ಹೆಚ್ಚು ಆಕರ್ಷಿಸುತ್ತಿವೆ. ಆ ಪೈಕಿ ಅಮೆಜಾನ್ ಫೈರ್‌ ಸ್ಟಿಕ್ ಟ್ರೆಂಡಿಂಗ್‌ನಲ್ಲಿದೆ. ಆದ್ರೆ ಡಿ2ಎಚ್‌(D2H) ಇದೀಗ ಹೊಸದೊಂದು ಸ್ಟಿಕ್ ಡಿವೈಸ್‌ ಪರಿಚಯಿಸಿದ್ದು, ಅಚ್ಚರಿ ಫೀಚರ್‌ಗಳವೆ.

'ಡಿ2ಎಚ್‌'

ಹೌದು, ದೇಶದ ಡಿಟಿಎಚ್‌ ಉದ್ಯಮದಲ್ಲಿ ಮುಂಚೂಣಿಯಲ್ಲಿರುವ ಗುರುತಿಸಿಕೊಂಡಿರುವ 'ಡಿ2ಎಚ್‌' ಸಂಸ್ಥೆಯು ಹೊಸದಾಗಿ ವಾಯಿಸ್‌ ಬೆಂಬಲಿತ ಮ್ಯಾಜಿಕ್ ಸ್ಟಿಕ್ ಡಿವೈಸ್‌ ಅನ್ನು ಪರಿಚಯಿಸಿದೆ. ಈ ಡಿವೈಸ್‌ ಜನಪ್ರಿಯ ವಿಡಿಯೊ ಸ್ಟ್ರೀಮಿಂಗ್ ಆಪ್ಸ್‌ಗಳನ್ನು ಇನ್‌ಬಿಲ್ಟ್‌ ಆಗಿ ಒಳಗೊಂಡಿದ್ದು, ಅದರೊಂದಿಗೆ ಅಲೆಕ್ಸಾ ವಾಯಿಸ್‌ ಅಸಿಸ್ಟಂಟ್ ಸೌಲಭ್ಯವನ್ನು ಪಡೆದುಕೊಂಡಿದೆ. ಇನ್ನು ರೀಚಾರ್ಜ್ ಬೆಲೆಯು ಗ್ರಾಹಕರಿಗೆ ಹೊರೆ ಅನಿಸುವುದಿಲ್ಲ. ಹಾಗಾದರೇ ಡಿ2ಎಚ್‌ ಮ್ಯಾಜಿಕ್ ವಾಯಿಸ್‌ ಅಸಿಸ್ಟಂಟ್ ಸ್ಟಿಕ್ ಡಿವೈಸ್‌ ಇತರೆ ಸೌಲಭ್ಯಗಳೆನು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಪ್ರಿ-ಲೋಡೆಡ್‌ ಆಪ್ಸ್‌

ಪ್ರಿ-ಲೋಡೆಡ್‌ ಆಪ್ಸ್‌

ಡಿ2ಎಚ್‌ ತನ್ನ ಹೊಸ ವಾಯಿಸ್‌ ಬೆಂಬಲಿತ ಸ್ಟಿಕ್ ಡಿವೈಸ್‌ನಲ್ಲಿ ಜಿ5, ಸೋನಿಲೈವ್, ಹಂಗಾಮಾ, ALT ಬಾಲಾಜಿ, Watcho ಸೇರಿದಂತೆ ಇತರೆ ವಿಡಿಯೊ ಸ್ಟ್ರೀಮಿಂಗ್‌ ಆಪ್ಸ್‌ಗಳನ್ನು ಇನ್‌ಬಿಲ್ಟ್‌ ಆಗಿ ನೀಡಿದೆ. ಈ ಆಪ್ಸ್‌ಗಳು ಗ್ರಾಹಕರ ಮನರಂಜನೆಗೆ ಅತ್ಯುತ್ತಮ ಪ್ಲಾಟ್‌ಫಾರ್ಮ್ ಒದಗಿಸಲಿವೆ. ಇವುಗಳೊಂದಿಗೆ ಅಮೆಜಾನ್ ಪ್ರೈಮ್ ಮತ್ತು ನೆಟ್‌ಫ್ಲಿಕ್ಸ್‌ ಲಭ್ಯವಾಗುವ ಸಾಧ್ಯತೆಗಳಿವೆ.

ಪ್ರಮುಖ ಸೌಲಭ್ಯಗಳು

ಪ್ರಮುಖ ಸೌಲಭ್ಯಗಳು

ಡಿ2ಎಚ್‌ನ ಹೊಸ ವಾಯಿಸ್‌ ಅಸಿಸ್ಟಂಟ್ ಸ್ಟಿಕ್ ಡಿವೈಸ್‌ನ ಪ್ರಮುಖ ಆಕರ್ಷಣೆಯೇ ವಾಯಿಸ್‌ ಅಸಿಸ್ಟಂಟ್ ಸೌಲಭ್ಯ ಪಡೆದಿರುವುದು. ಅಲೆಕ್ಸಾ ವಾಯಿಸ್‌ ಬೆಂಬಲ ಹೊಂದಿರುವ ಈ ಡಿವೈಸ್‌ ಇದರೊಂದಿಗೆ ವಾಯಿಸ್‌ ಬೆಂಬಲಿತ ರಿಮೋಟ್‌ ಸಹ ಪಡೆದುಕೊಂಡಿರುವುದು ಮತ್ತೊಂದು ವಿಶೇಷ. ಈ ಫೀಚರ್ ಗ್ರಾಹಕರಿಗೆ ಹೆಚ್ಚಿನ ಅನುಕೂಲ ಒದಗಿಸಲಿದೆ.

ಅಲೆಕ್ಸಾ ಅನುಕೂಲಗಳು

ಅಲೆಕ್ಸಾ ಅನುಕೂಲಗಳು

ಡಿ2ಎಚ್‌ನ ಹೊಸ ಸ್ಟಿಕ್ ಅಲೆಕ್ಸಾ ಬೆಂಬಲ ಪಡೆದಿದ್ದು, ಈ ಅಲೆಕ್ಸಾ ವಾಯಿಸ್‌ ಬೆಂಬಲದಿಂದ ಗ್ರಾಹಕರು ಇನ್ನಷ್ಟು ಸೇವೆಗಳನ್ನು ಪಡೆಯಬಹುದಾಗಿದೆ. ಮುಖ್ಯವಾಗಿ ಲೆಟೆಸ್ಟ್ ಬಾಲಿವುಡ್ ಮ್ಯೂಸಿಕ್, ಹೆಲ್ಪ್ ಮಿ ಅಲೆಕ್ಸಾ, ಬುಕ್ ಎ ಕ್ಯಾಬ್, ರೇಸೆಪಿ ಬಗ್ಗೆ ಹೇಳಿ ತಿಳಿಯಬಹುದಾಗಿದೆ. ಜೊತೆಗೆ ಬ್ಲೂಟೂತ್, ವೈಫೈ ಮೂಲಕ ಸ್ಮಾರ್ಟ್‌ ಬಲ್ಬ್, ಸ್ಮಾರ್ಟ್‌ ಡಿವೈಸ್‌ ನಿಯಂತ್ರಿಸಬಹುದಾಗಿದೆ.

ಬೆಲೆ ಎಷ್ಟಿದೆ

ಬೆಲೆ ಎಷ್ಟಿದೆ

ಡಿ2ಎಚ್‌ನ ಹೊಸ ಅಲೆಕ್ಸಾ ಆಧಾರಿತ ಸ್ಟಿಕ್ ಡಿವೈಸ್‌ ಬೆಲೆಯು 1,199ರೂ.ಗಳಾಗಿದೆ. ಸ್ಟೀಕ್ ಡಿವೈಸ್‌ನೊಂದಿಗೆ ವಾಯಿಸ್‌ ಬೆಂಬಲಿತ ರಿಮೋಟ್ ಹಾಗೂ ವೈಫೈ-ಬ್ಲೂಟೂತ್ ಡೊಂಗಲ್ ಸಹ ಲಭ್ಯವಾಗಲಿದೆ. ಹಾಗೆಯೇ ಸ್ಟಿಕ್ ಡಿವೈಸ್‌ ತಿಂಗಳ ಸರ್ವೀಸ್‌ ಶುಲ್ಕವಾಗಿ 49ರೂ.ಪಡೆಯುತ್ತದೆ. ಈ ಸರ್ವೀಸ್‌ ಮೊತ್ತ ಡಿ2ಎಚ್‌ ಬಿಲ್ ಮೊತ್ತದಲ್ಲಿ ಸೇರಿರುತ್ತದೆ.

Most Read Articles
Best Mobiles in India

English summary
The d2h Magic Voice Enabled comes preloaded apps like ZEE5, Watcho, SonyLIV and Alexa. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X