ಡಿ2ಹೆಚ್‌ನಿಂದ ಭರ್ಜರಿ ಕೊಡುಗೆ; ಸೆಟ್‌ಟಾಪ್‌ ಬಾಕ್ಸ್‌ಗೆ 5 ವರ್ಷ ವಾರಂಟಿ!

|

ಡಿಶ್ ಟಿವಿ ಒಡೆತನದ ಡಿ2ಹೆಚ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಲಭ್ಯವಿರುವ ಎಲ್ಲಾ ಮಾದರಿಯ ಸೆಟ್-ಟಾಪ್ ಬಾಕ್ಸ್‌ಗಳಲ್ಲಿ (ಎಸ್‌ಟಿಬಿ) ಐದು ವರ್ಷಗಳ ವಾರಂಟಿಯನ್ನು ನೀಡಲು ಪ್ರಾರಂಭಿಸಿದೆ. ಈಗಾಗಲೇ ಸೆಟ್‌ಟಾಪ್‌ ಬಾಕ್ಸ್‌ಗಳಿಗೆ ಮೂರು ವರ್ಷ ವಾರಂಟಿ ನೀಡುವ ಮೂಲಕ ಗ್ರಾಹಕರನ್ನು ಆಕರ್ಷಿಸಿ, ಭಾರತದ ಅತ್ಯುತ್ತಮ ಡಿಟಿಎಚ್ ಆಪರೇಟರ್‌ಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಈಗ ಐದು ವರ್ಷ ವಾರಂಟಿ ನೀಡುವ ಮೂಲಕ ಡಿ2ಹೆಚ್‌ ವಲಯದಲ್ಲಿ ಹೊಸ ಹೆಜ್ಜೆಗಳನ್ನು ಹಾಕಿದೆ.

ಎಸ್‌ಟಿಬಿಗಳಲ್ಲಿ

ಹೌದು, ಡಿಶ್ ಟಿವಿ ತನ್ನ ಸೆಟ್‌ಟಾಪ್‌ ಬಾಕ್ಸ್‌ಗಳಿಗೆ ಈಗ ಐದು ವರ್ಷಗಳ ವಾರಂಟಿ ಘೋಷಿಸಿದೆ. ಬಹುಶಃ ಇದು ಈ ಡಿಟಿಎಚ್ ಉದ್ಯಮದಲ್ಲಿ ಮೊದಲನೆಯ ಪ್ರಯತ್ನ ಎನ್ನಲಾಗಿದೆ. ಈ ಹಿಂದೆ, ಟಾಟಾ ಸ್ಕೈ ತನ್ನ ಎಲ್ಲಾ ಎಸ್‌ಟಿಬಿಗಳಲ್ಲಿ ಮೂರು ವರ್ಷಗಳ ವಾರಂಟಿ ಘೋಷಿಸಿತ್ತು. ಮತ್ತೆ ಕೇವಲ ಒಂದು ವರ್ಷಕ್ಕೆ ಪರಿಷ್ಕರಿಸಿದೆ. ಏರ್ಟೆಲ್ ಡಿಜಿಟಲ್ ಟಿವಿ ಮತ್ತು ಸನ್ ಡೈರೆಕ್ಟ್ ಗಳು ಸೆಟ್‌ಟಾಪ್‌ ಬಾಕ್ಸ್‌ಗಳಿಗೆ ಕೇವಲ ಒಂದು ವರ್ಷದ ವಾರಂಟಿ ನೀಡುತ್ತಿದೆ.

ಡಿಟಿಎಚ್

ಡಿ2ಹೆಚ್‌ನ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಹೊಸ ಮಾಹಿತಿಯ ಪ್ರಕಾರ, ಎಲ್ಲಾ ಹೊಸ ಸಂಪರ್ಕ ಹೊಂದಿರುವವರು ಸೆಟ್-ಟಾಪ್ ಬಾಕ್ಸ್‌ನಲ್ಲಿ ಐದು ವರ್ಷಗಳ ವಾರಂಟಿ ಪಡೆಯುತ್ತಾರೆ. ಡಿಟಿಎಚ್ ಆಪರೇಟರ್ ನಾಲ್ಕು ಸೆಟ್‌ಟಾಪ್‌ ಬಾಕ್ಸ್‌ಗಳನ್ನು ಹೊಂದಿದೆ ಅವುಗಳು ಕ್ರಮವಾಗಿ ಡಿ2ಹೆಚ್‌ ಸ್ಟ್ರೀಮ್ ಆಂಡ್ರಾಯ್ಡ್ ಟಿವಿ ಆಧಾರಿತ ಬಾಕ್ಸ್ 3,999ರೂ, ಡಿ2ಹೆಚ್‌ ಡಿಜಿಟಲ್ ಹೆಚ್‌ಡಿ ಸೆಟ್-ಟಾಪ್ ಬಾಕ್ಸ್ ವಿತ್ ರೇಡಿಯೋ ಫ್ರೀಕ್ವೆನ್ಸಿ ರಿಮೋಟ್ 1,799ರೂ, ಡಿ2ಹೆಚ್‌ ಡಿಜಿಟಲ್ ಹೆಚ್‌ಡಿ ಸೆಟ್-ಟಾಪ್ ಬಾಕ್ಸ್ 1,599ರೂ. ಮತ್ತು ಡಿ2ಹೆಚ್‌ ಡಿಜಿಟಲ್ ಎಸ್‌ಡಿ ಸೆಟ್-ಟಾಪ್ ಬಾಕ್ಸ್ 1,499ರೂ. ತೆರಿಗೆಗಳನ್ನು ಹೊರತುಪಡಿಸಿವೆ.

ಅಮೆಜಾನ್

ಇನ್ನು D2h ಮ್ಯಾಜಿಕ್ ಸ್ಟಿಕ್ ಹೆಚ್ಚು ಗಮನ ಸೆಳೆದಿದ್ದು, ಇದು ಅಮೆಜಾನ್ ಫೈರ್‌ ಸ್ಟಿಕ್‌ ತರಹನಾದ ಡಿವೈಸ್‌ ಆಗಿದೆ. ಈ ಡಿವೈಸ್‌ನಲ್ಲಿ ZEE5 5, ಸೋನಿ, ಎಲ್ಐವಿ, ವಾಚೊ, ಸೇರಿದಂತೆ ಇನ್ನಿತರ ಒಟಿಟಿ ಪ್ಲಾಟ್‌ಫಾರ್ಮ್‌ಗಳ ಸೌಲಭ್ಯ ಸಹ ಲಭ್ಯ ಇವೆ. ಇದು ಮಾತ್ರವಲ್ಲದೆ ವಾಯಿಸ್‌ ಅಸಿಸ್ಟಂಟ್ ಸೌಲಭ್ಯ ಹೊಂದಿದ್ದು, 30,000+ ಅಲೆಕ್ಸಾ ಕೌಶಲ್ಯಗಳು ಸೇರಿವೆ. ಇವೆ. ಸಂಗೀತ ಮತ್ತು ಹೆಚ್ಚಿನದನ್ನು ಕೇಳಲು ಅನುಮತಿಸುತ್ತದೆ. ಅಲ್ಲದೆ, ಗ್ರಾಹಕರು ಕ್ಯಾಬ್‌ಗಳನ್ನು ಕಾಯ್ದಿರಿಸಬಹುದು, ಅಲಾರಂಗಳು ಮತ್ತು ಜ್ಞಾಪನೆಗಳನ್ನು ಹೊಂದಿಸಬಹುದು.

OTT ಆಪ್ಸ್‌ ಪ್ರಯೋಜನಗಳು

OTT ಆಪ್ಸ್‌ ಪ್ರಯೋಜನಗಳು

ಡಿ2ಎಚ್‌ ಮ್ಯಾಜಿಕ್ ಸ್ಟಿಕ್ ಡಿವೈಸ್‌ ಪ್ರಿ-ಇನ್‌ಸ್ಟಾಲ್‌ ಆಪ್ಸ್‌ ಆಯ್ಕೆ ಇದೆ. ಲೈವ್ ಟಿವಿ ಮತ್ತು ಜೀ5, ಹಂಗಾಮಾ ಪ್ಲೇ, ಎಎಲ್‌ಟಿ ಬಾಲಾಜಿ, ಸೋನಿ ಲೈವ್, ವಾಚೋ ಸೇರಿದಂತೆ ಜನಪ್ರಿಯ OTT ವಿಡಿಯೊ ಸ್ಟ್ರಿಮಿಂಗ್ ಆಪ್ಸ್‌ಗಳ ನಡುವೆ ಬ್ರಿಡ್ಜ್ ಇದ್ದಂತೆ. ಈ ಮ್ಯಾಜಿಕ್ ಸ್ಟಿಕ್‌ ಜನಪ್ರಿಯ ವಿಡಿಯೊ ಸ್ಟ್ರಿಮಿಂಗ್ ಆಪ್ಸ್‌ಗಳ ಪ್ರಿ-ಇನ್‌ಸ್ಟಾಲ್‌ ಹೊಂದಿದ್ದು, ಅವುಗಳು ಅನೇಕ ಮನರಂಜನೆಯ ಕಾರ್ಯಕ್ರಮಗಳ ಸಂಗ್ರಹ ಮತ್ತು ಲೈವ್ ಸೇವೆ ಹೊಂದಿವೆ. ಒಟ್ಟಾರೇ ಗ್ರಾಹಕರಿಗೆ ಮನರಂಜನೆಯ ಧಮಾಕ ಲಭ್ಯವಾಗಲಿದೆ.

Most Read Articles
Best Mobiles in India

Read more about:
English summary
In addition to five years of warranty on STB, all the new connections will get a free channel pack for one month.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X