ಎಸ್‌ಎಂಎಸ್‌ ಮಾಡಿ ತರಕಾರಿ, ಹಣ್ಣಿನ ದರ ತಿಳೀರಿ

Posted By:

ಇನ್ನು ಮಂದೆ ನೀವು ತರಕಾರಿ ರೇಟ್‌ ಎಷ್ಟಿದೆ ಎಂದು ತಿಳಿಯಲು ಹಾಪ್‌ಕಾಮ್ಸ್‌ ಶಾಪ್‌ಗೆ ಹೋಗಬೇಕಾಗಿಲ್ಲ. ನಿಮ್ಮ ಮೊಬೈಲ್‌ನಿಂದ ಒಂದು ಎಸ್‌ಎಂಎಸ್‌ ಮಾಡಿದ್ರೆ ಸಾಕು ಕೆಲವೇ ಸೆಕೆಂಡ್‌ಗಳಲ್ಲಿ 30 ವಿವಿಧ ರೀತಿಯ ತರಕಾರಿ ಮತ್ತು ಹಣ್ಣಿನ ದರಪಟ್ಟಿ ಸಿಗುತ್ತದೆ.

ನಿಮ್ಮ ಮೊಬೈಲ್‌ನಿಂದ ತರಕಾರಿ ದರ ತಿಳಿಯಲು hop veg ಇನ್ನು ಹಣ್ಣಿನ ದರ ತಿಳಿಯಲು hop fruit ಎಂದು ಟೈಪ್‌ ಮಾಡಿ 92123 57123 ಈ ನಂಬರ್‌ಗೆ ಮೆಸೇಜ್‌ ಮಾಡಿದರೆ  ಮೊಬೈಲ್‌ಗೆ ಅಂದಿನ ದರ ಪಟ್ಟಿ ಸಿಗುತ್ತದೆ.

ಎಸ್‌ಎಂಎಸ್‌ ಮಾಡಿ ತರಕಾರಿ, ಹಣ್ಣಿನ ದರ ತಿಳೀರಿ

ರಾಜ್ಯ ಸರ್ಕಾರದ ತೋಟಗಾರಿಕಾ ಇಲಾಖೆ ಹಾಗೂ ಕೇಂದ್ರ ಸರ್ಕಾರದ ನ್ಯಾಷನಲ್ ಇನ್ಫರ್ಮೇಷನ್ ಸೆಂಟರ್ (ಎನ್ ಐಸಿ) ಜತೆಗೂಡಿ ಈ ಯೋಜನೆಯನ್ನು ರೂಪಿಸಲಾಗಿದೆ.ಈ ಯೋಜನೆಯಿಂದ ವಹಿವಾಟು ಹೆಚ್ಚಳದ ಜೊತೆಗೆ ಮಾರಾಟದಲ್ಲಿ ಮೋಸ, ಗ್ರಾಹಕರಿಗೆ ತರಕಾರಿ ಆಯ್ಕೆ ಸೌಲಭ್ಯ, ರೈತರಿಗೆ ಸೂಕ್ತ ಬೆಲೆ ನೀಡುವ ಉದ್ದೇಶಕ್ಕಾಗಿ ಈ ಯೋಜನೆಯನ್ನು ಹಾಪ್‌ಕಾಮ್ಸ್‌ ಆರಂಭಿಸಿದೆ.

ನೀವು ಅನಗತ್ಯ ಕಾಲರ್‌ಟ್ಯೂನ್‌,ಮೊಬೈಲ್‌ ಇಂಟರ್‌ ನೆಟ್‌ ಆಕ್ಟಿವೇಷನ್‌ ಆಗಿ ತೊಂದರೆ ಅನುಭವಿಸಿದ್ದೀರಾ? ಮೊಬೈಲ್‌ ಕಂಪೆನಿಗಳ ಗ್ರಾಹಕರ ಸೇವೆಗೆ ಕರೆ ಮಾಡಿ ನೀವು ಜಗಳಮಾಡಿಕೊಂಡಿದ್ದೀರಾ..? ಹಾಗಾದ್ರೆ ನಿಮಗೆಲ್ಲಾ ಇಲ್ಲಿ ಒಂದು ಗುಡ್‌ ನ್ಯೂಸ್‌ ಇದೆ. ಇನ್ನು ಮುಂದೆ ನಿಮ್ಮ ಅನುಮತಿಯಿಲ್ಲದೇ ಚಾಲು ಆಗುವಂತಹ ಎಲ್ಲಾ ಸೇವೆಗಳನ್ನು ಬಂದ್‌ ಮಾಡಲು ಒಂದು ನಂಬರ್‌ ಬಂದಿದೆ. ನೀವು ಮೊಬೈಲ್‌ನಿಂದ 155223 ನಂಬರ್‌ಗೆ ಕಾಲ್‌ ಮಾಡಿದ್ರೆ ಆಯ್ತು. ಈ ಸೇವಾ ಪೀಡೆಗಳು ದೂರವಾಗುತ್ತದೆ.ಹೆಚ್ಚಿನ ಓದಿಗೆ ಇಲ್ಲಿ ಕ್ಲಿಕ್‌ ಮಾಡಿ.
155223ನಂಬರ್‌ಗೆ ಕಾಲ್‌ ಮಾಡಿ ಅನಗತ್ಯ ಸೇವೆ ಬಂದ್‌ ಮಾಡಿ

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot