ಭಾರತಕ್ಕೆ ಎಂಟ್ರಿ ಕೊಟ್ಟ ಡೈವಾ ಸಂಸ್ಥೆಯ 43-ಇಂಚಿನ D43 QFS ಸ್ಮಾರ್ಟ್‌ಟಿವಿ!

|

ಟಿವಿ ಮಾರುಕಟ್ಟೆ ಇಂದು ಸಾಕಷ್ಟು ಬದಲಾಗಿದೆ. ವಿಭಿನ್ನ ಗಾತ್ರದ ಸ್ಮಾರ್ಟ್‌ಟಿವಿಗಳು ಇಂದು ಟಿವಿ ಮಾರುಕಟ್ಟೆಯಲ್ಲಿ ವಿಜೃಂಭಿಸುತ್ತಿವೆ. ಈಗಾಗಲೇ ಹಲವು ಕಂಪೆನಿಗಳು ತಮ್ಮ ವೈವಿಧ್ಯ ಮಾದರಿಯ ಸ್ಮಾರ್ಟ್‌ಟಿವಿಯನ್ನು ಪರಿಚಯಿಸಿವೆ. ಸದ್ಯ ಇದೀಗ ಡೈವಾ ಕಂಪೆನಿ ತನ್ನ ಹೊಸ 43-ಇಂಚಿನ D 43 QFS ಸ್ಮಾರ್ಟ್ ಟಿವಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್ ಟಿವಿ ಅಮೆಜಾನ್ ಅಲೆಕ್ಸಾ ಏಕೀಕರಣದೊಂದಿಗೆ ಬರುತ್ತದೆ, ಇದು ಬಳಕೆದಾರರಿಗೆ ಟಿವಿಯೊಂದಿಗೆ ಮ್ಯೂಸಿಕ್‌ ಪ್ಲೇ ಮಾಡಲು, ಹವಾಮಾನ, ನ್ಯೂಸ್‌ ಆಪ್ಡೇಟ್‌, ಅಲಾರಂಗಳು ಮತ್ತು ಜ್ಞಾಪನೆಗಳನ್ನು ಹೊಂದಿಸಲು ಅವಕಾಶ ನೀಡುತ್ತದೆ.

ಡೈವಾ

ಹೌದು, ಡೈವಾ ಕಂಪೆನಿ ತನ್ನ ಹೊಸ ಡೈವಾ 43 QFS ಸ್ಮಾರ್ಟ್‌ಟಿವಿಯನ್ನು ಭಾರತದಲ್ಲಿ ಪರಿಚಯಿಸಿದೆ. ಅಲ್ಲದೆ ಡೈವಾ ಕಂಪೆನಿ 32 ಇಂಚಿನ ಮತ್ತು 39 ಇಂಚಿನ ಹೆಚ್‌ಡಿ ರೆಡಿ ರೂಪಾಂತರಗಳನ್ನು ಸಹ ಬಿಡುಗಡೆ ಮಾಡಲಿದೆ ಎಂದು ಕಂಪನಿ ಹೇಳಿದೆ. ಇದಲ್ಲದೆ, ಸ್ಮಾರ್ಟ್ ಎಸಿಗಳಂತಹ ಅಲೆಕ್ಸಾ-ಶಕ್ತಗೊಂಡ ಸ್ಮಾರ್ಟ್ ಹೋಮ್ ಡಿವೈಸ್‌ಗಳನ್ನು ಕಂಟ್ರೋಲ್‌ ಮಾಡಬಹುದಾಗಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಟಿವಿ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಡೈವಾ

ಡೈವಾ 43-ಇಂಚಿನ D 43 QFS ಸ್ಮಾರ್ಟ್‌ಟಿವಿ 1920x1080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯದ ಫುಲ್‌ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ಟಿವಿ ಡಿಸ್‌ಪ್ಲೇ ಕ್ವಾಂಟಮ್ ಲುಮಿನಿಟ್ ಟೆಕ್ನಾಲಜಿಯನ್ನು ಹೊಂದಿದೆ. ಇದು ಗರಿಗರಿಯಾದ ಮತ್ತು ಎದ್ದುಕಾಣುವ ಫಿಕ್ಚರ್‌ ಔಟ್‌ಪುಟ್‌ಗೆ 1.07 ಬಿಲಿಯನ್ ಬಣ್ಣಗಳನ್ನು ಬೆಂಬಲಿಸುತ್ತದೆ. ಈ ಸ್ಮಾರ್ಟ್‌ಟಿವಿ ಯು ಮೀಸಲಾದ ಕ್ರಿಕೆಟ್ ಮತ್ತು ಸಿನೆಮಾ ಪಿಕ್ಚರ್ ಮೋಡ್‌ಗಳ ಜೊತೆಗೆ ಸರೌಂಡ್ ಸೌಂಡ್ ಹೊಂದಿರುವ 20 ಡಬ್ಲ್ಯೂ ಸ್ಟೀರಿಯೋ ಬಾಕ್ಸ್ ಸ್ಪೀಕರ್‌ಗಳೊಂದಿಗೆ ಬರುತ್ತದೆ.

ಪ್ರೊಸೆಸರ್

ಇದು ಕ್ವಾಡ್ ಕೋರ್ A53 ಪ್ರೊಸೆಸರ್ ಹೊಂದಿದ್ದು, ಟಿವಿ ಆಂಡ್ರಾಯ್ಡ್ 8.0 ಆಧಾರಿತ ಬಿಗ್ ವಾಲ್ ಯುಐನಲ್ಲಿ ಕಾರ್ಯನಿರ್ವಹಿಸುತ್ತದೆ. ಇದರೊಂದಿಗೆ 1 GB RAM ಮತ್ತು 8GB ಸ್ಟೋರೇಜ್‌ ಅನ್ನು ಹೊಂದಿದೆ. ಡೈವಾ 43-ಇಂಚಿನ D43 QFS ಸ್ಮಾರ್ಟ್ ಟಿವಿ ಕ್ಲೌಡ್ ಟಿವಿ ಪ್ರಮಾಣೀಕೃತ ಅಪ್ಲಿಕೇಶನ್‌ಗಳಾದ ಡಿಸ್ನಿ + ಹಾಟ್‌ಸ್ಟಾರ್, ಇರೋಸ್ ನೌ, ವೂಟ್ ಮತ್ತು ಹೆಚ್ಚಿನವುಗಳೊಂದಿಗೆ 25,00,000 ಗಂಟೆಗಳ ವಿಷಯಕ್ಕೆ ಪ್ರವೇಶವನ್ನು ನೀಡುತ್ತದೆ. ಇದು ಅಮೆಜಾನ್ ಪ್ರೈಮ್, ನೆಟ್‌ಫ್ಲಿಕ್ಸ್ ಮತ್ತು ಯೂಟ್ಯೂಬ್‌ನಂತಹ ಅಪ್ಲಿಕೇಶನ್‌ಗಳನ್ನು ಬೆಂಬಲಿಸುತ್ತದೆ. ಈ ಅಪ್ಲಿಕೇಶನ್‌ಗಳನ್ನು ಅಲೆಕ್ಸಾ ಚಾಲಿತ ಸ್ಮಾರ್ಟ್ ರಿಮೋಟ್‌ನಿಂದಲೂ ನಿಯಂತ್ರಿಸಬಹುದಾಗಿದೆ.

ಸ್ಮಾರ್ಟ್‌ಟಿವಿ

ಇನ್ನು ಈ ಸ್ಮಾರ್ಟ್‌ಟಿವಿ ಸರ್ಚ್‌ ಸಂಪೋರ್ಟ್‌ ಹೊರತಾಗಿ, ಡಿಸ್ನಿ + ಹಾಟ್‌ಸ್ಟಾರ್ ಮತ್ತು ಸೋನಿ ಎಲ್‌ಐವಿ ಅಪ್ಲಿಕೇಶನ್‌ಗಳಿಗೆ ರಿಮೋಟ್‌ನಲ್ಲಿ ಮೀಸಲಾದ ಗುಂಡಿಗಳನ್ನು ಹೊಂದಿವೆ. ಸುಲಭ ನಿಯಂತ್ರಣಕ್ಕಾಗಿ ಮೌಸ್ ಬಟನ್ ಇದೆ. ಇದರಲ್ಲಿ ಡಿಸ್ಕವರಿ ಸರ್ಚ್ ಎಂಜಿನ್ ಸಹ ಇದ್ದು, ಟಿವಿಗೆ ಆಟೋಮ್ಯಾಟಿಕ್‌ ಒಟಿಎ ಆಪ್ಡೇಟ್‌ ಸಿಗುತ್ತವೆ ಎಂದು ಡೈವಾ ಹೇಳಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಮೂರು ಎಚ್‌ಡಿಎಂಐ, ಎರಡು ಯುಎಸ್‌ಬಿ ಪೋರ್ಟ್‌ಗಳು, ಬ್ಲೂಟೂತ್ ಮತ್ತು ಇ-ಶೇರ್ ಅನ್ನು ಬೆಂಬಲಿಸಲಿದೆ. ಜೊತೆಎ ಇದು ಸ್ಕ್ರೀನ್ ಮಿರರಿಂಗ್‌ಗೆ ಸಹಾಯ ಮಾಡುತ್ತದೆ.

ಡೈವಾ

ಡೈವಾ 43 ಇಂಚಿನ D43 QFS ಈಗ ಪರಿಚಯಾತ್ಮಕ ದರದಲ್ಲಿ 24,490 ರೂ. ಬೆಲೆಗೆ ಲಭ್ಯವಾಗಲಿದೆ. ಇದನ್ನು ಕಂಪನಿಯ ಆನ್‌ಲೈನ್ ಸ್ಟೋರ್‌ ಮತ್ತು ರಿಟೇಲ್‌ ಸ್ಟೋರ್‌ನಲ್ಲಿ ಖರೀದಿಸಬಹುದು. ಸ್ಕ್ರೀನ್‌ ನಲ್ಲಿ ಹೆಚ್ಚುವರಿ ಒಂದು ವರ್ಷದ ಖಾತರಿ ಪಡೆಯಲು ಗ್ರಾಹಕರು ತಮ್ಮ ಉತ್ಪನ್ನವನ್ನು ‘ಮೈ ಡೈವಾ' ಅಪ್ಲಿಕೇಶನ್‌ನಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆ.

Best Mobiles in India

English summary
Daiwa 43-Inch D43QFS features a Full-HD display (1920x1080 pixels resolution) with Quantum Luminit Technology and 1.07 billion colours support for crisp and vivid picture output.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X