Home
ಸುದ್ದಿಜಾಲ

Dangerous apps: ನಿಮ್ಮ ಫೋನ್‌ನಲ್ಲಿ ಈ ಆಪ್‌ಗಳು ಇದ್ದೇ ಇರುತ್ತದೆ: ತಕ್ಷಣವೇ ಅನ್‌ಇನ್‌ಸ್ಟಾಲ್ ಮಾಡಿ

ಸ್ಮಾರ್ಟ್‌ಫೋನ್‌ (Smartphone) ಬಳಕೆ ಮಾಡುವ ಯಾರೇ ಆದರೂ ಸಹ ಅವರಿಗೆ ಅಗತ್ಯ ಎನಿಸುವ ಸಾಕಷ್ಟು ಆಪ್‌ಗಳನ್ನು (apps) ಇಟ್ಟುಕೊಂಡಿರುತ್ತಾರೆ. ಈ ಆಪ್‌ಗಳಲ್ಲಿ ಕೆಲವು ಉತ್ತಮವಾಗಿ ಸೇವೆ ನೀಡಿದರೆ ಇನ್ನೂ ಕೆಲವು ಆಪ್‌ಗಳು ಬಳಕೆದಾರರು ಡೇಟಾ ಕದಿಯುವ ಕೆಲಸ ಮಾಡುತ್ತವೆ. ಈಗಾಗಲೇ ಗೂಗಲ್‌ ಪ್ಲೇ ಸ್ಟೋರ್‌ ಇಂತಹ ಆಪ್‌ಗಳ ವಿರುದ್ಧ ಸಮರ ಸಾರುತ್ತಲೇ ಬರುತ್ತಿದೆ.

ಹೌದು, ಸಿಕ್ಕ ಸಿಕ್ಕ ಆಪ್‌ಗಳನ್ನು ಇನ್‌ಸ್ಟಾಲ್‌ ಮಾಡಿಕೊಳ್ಳುವವರು ಈ ಲೇಖನ ಓದಲೇ ಬೇಕಿದೆ. ಯಾವೆಲ್ಲಾ ಉತ್ತಮ ಆಪ್‌ಗಳು ಎಂದು ಹೆಸರು ಪಡೆದಿದ್ದವೋ ಅವುಗಳೇ ಇಂದು ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಕೇಡು ಬಯಸುವ ಕೆಲಸ ಮಾಡುತ್ತಿವೆ. ಇನ್ನು ಥ್ರೆಟ್‌ಫ್ಯಾಬ್ರಿಕ್‌ನ ಮೊಬೈಲ್ ಥ್ರೆಟ್ ಇಂಟೆಲಿಜೆನ್ಸ್ (ThreatFabric's Mobile Threat Intelligence) ಪ್ರಕಾರ, ಮಾಲ್‌ವೇರ್ ಸೋಂಕಿತ 5 ಆಂಡ್ರಾಯ್ಡ್ ಆಪ್‌ಗಳನ್ನು ಪತ್ತೆ ಮಾಡಲಾಗಿದೆ. ಹಾಗಿದ್ರೆ, ಯಾವುವು ಆ ಆಪ್‌ಗಳು?, ಎಚ್ಚರಿಕೆ ವಹಿಸುವುದು ಹೇಗೆ ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ನಿಮ್ಮ ಫೋನ್‌ನಲ್ಲಿ ಈ ಆಪ್‌ಗಳು ಇದ್ದೇ ಇರುತ್ತದೆ: ತಕ್ಷಣವೇ ಅನ್‌ಇನ್‌ಸ್ಟಾಲ್ ಮಾಡಿ

ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಕೆಟ್ಟ ಆಪ್‌ಗಳು: ಗೂಗಲ್ ಪ್ಲೇ ಸ್ಟೋರ್‌ನಲ್ಲಿ(Google Play Store) 5 ಮಾಲ್‌ವೇರ್ ಪೀಡಿತ ಆಪ್‌ಗಳು ಪತ್ತೆಯಾಗಿವೆ ಎಂದು ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ. ಮಾಲ್‌ವೇರ್ ಮತ್ತು ಇತರ ರಾಜಿ ಮಾಡಿಕೊಂಡ ಆಪ್‌ಗಳು ಎಲ್ಲಾ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಬೆದರಿಕೆ ಒಡ್ಡಲಿವೆ ಎಂದು ತಿಳಿಸಲಾಗಿದೆ.

ಹಾಗೆಯೇ ಗೂಗಲ್ ಪ್ಲೇ ಸ್ಟೋರ್ ಅನತ್ಸಾ ಮಾಲ್‌ವೇರ್ (Anatsa malware) ಸೋಂಕಿತ ನಕಲಿ ಆಪ್‌ಗಳನ್ನು ಹೊಂದಿದ್ದು, ಥ್ರೆಟ್‌ಫ್ಯಾಬ್ರಿಕ್‌ನ ಮೊಬೈಲ್ ಥ್ರೆಟ್ ಇಂಟೆಲಿಜೆನ್ಸ್ (MTI) ತಂಡದ ಪ್ರಕಾರ, ಪೀಡಿತ ಆಪ್‌ಗಳನ್ನು ಈಗಾಗಲೇ 150,000 ಕ್ಕೂ ಹೆಚ್ಚು ಜನರು ಡೌನ್‌ಲೋಡ್ ಮಾಡಿಕೊಂಡಿದ್ದಾರಂತೆ. ಪರಿಣಾಮ ನಿಮ್ಮ ಫೋನ್‌ನಲ್ಲಿ ಏನಾದರೂ ಇದ್ದರೆ ಈಗಲೇ ಅನ್‌ಇನ್‌ಸ್ಟಾಲ್ ಮಾಡಿ.

ನಿಮ್ಮ ಫೋನ್‌ನಲ್ಲಿ ಈ ಆಪ್‌ಗಳು ಇದ್ದೇ ಇರುತ್ತದೆ: ತಕ್ಷಣವೇ ಅನ್‌ಇನ್‌ಸ್ಟಾಲ್ ಮಾಡಿ

ಈ ಆಪ್‌ಗಳು ಫೋನ್ ಕ್ಲೀನಿಂಗ್ ಅಥವಾ ಡಾಕ್ಯುಮೆಂಟ್ ವೀಕ್ಷಣೆಗೆ ಸಹಾಯ ಮಾಡುವ ಆಪ್‌ಗಳಂತೆ ಕಂಡುಬಂದಿವೆ. ಆದರೆ, ಇವು ಹಣಕಾಸಿನ ಮಾಹಿತಿಯನ್ನು ಸಂಗ್ರಹಿಸುತ್ತಿವೆ ಎಂದು ಕಂಡುಕೊಳ್ಳಲಾಗಿದೆ. ಕೆಲವು ಮಾಹಿತಿ ಪ್ರಕಾರ, ಈ ಆಪ್‌ಗಳನ್ನು ನಿರ್ದಿಷ್ಟವಾಗಿ ಸ್ಯಾಮ್‌ಸಂಗ್ ಫೋನ್‌ಗಳನ್ನು ಗುರಿಯಾಗಿಸಲು ವಿನ್ಯಾಸಗೊಳಿಸಲಾಗಿದೆ ಎನ್ನಲಾಗಿದೆ. ಹಾಗಿದ್ರೆ, ಯಾವೆಲ್ಲಾ ಆಪ್‌ಗಳಲ್ಲಿ ಈ ಸಮಸ್ಯೆ ಇದೆ ನೋಡೋಣ ಬನ್ನಿ.

ಪಿಡಿಎಫ್‌ ವೀವರ್ - ಫೈಲ್ ಎಕ್ಸ್‌ಪ್ಲೋರರ್ (com.xolab.fileexplorer)
ಫೋನ್ ಕ್ಲೀನರ್: ಫೈಲ್ ಎಕ್ಸ್‌ಪ್ಲೋರರ್ (com.appiclouds.phonecleaner)
ಪಿಡಿಎಫ್‌ ರೀಡರ್: ಫೈಲ್ ಮ್ಯಾನೇಜರ್ (com.tragisoap.fileandpdfmanager)
ಪಿಡಿಎಫ್‌ ರೀಡರ್ - ವೀವರ್‌ ಆಂಡ್‌ ಎಡಿಟರ್‌ (com.jumbodub.fileexplorerpdfviewer)
ಫೋನ್ ಕ್ಲೀನರ್ - ಫೈಲ್ ಎಕ್ಸ್‌ಪ್ಲೋರರ್ (com.volabs.androidcleaner)

ನಿಮ್ಮ ಫೋನ್‌ನಲ್ಲಿ ಈ ಆಪ್‌ಗಳು ಇದ್ದೇ ಇರುತ್ತದೆ: ತಕ್ಷಣವೇ ಅನ್‌ಇನ್‌ಸ್ಟಾಲ್ ಮಾಡಿ

ಈ ಆಪ್‌ಗಳು ಉಂಟು ಮಾಡುವ ಸಮಸ್ಯೆಯಿಂದ ಪಾರಾಗುವುದು ಹೇಗೆ?
ಗೂಗಲ್‌ ಪ್ಲೇ ಮತ್ತು ಆಪಲ್‌ ಆಪ್‌ ಸ್ಟೋರ್ (Google Play, Apple App Store) ನಂತಹ ಅಧಿಕೃತ ಸ್ಟೋರ್‌ಗಳಿಂದ ಮಾತ್ರ ಆಪ್‌ಗಳನ್ನು ಡೌನ್‌ಲೋಡ್ ಮಾಡಿ. ಅಂದರೆ ನೀವು ಯಾವುದೇ ಥರ್ಡ್‌ ಪಾರ್ಟಿ ಆಪ್‌ಗಳನ್ನು ಬಳಕೆ ಮಾಡುವುದನ್ನು ತಪ್ಪಿಸಿ.

ಯಾವುದೇ ಆಪ್‌ಗಳನ್ನು ಇನ್‌ಸ್ಟಾಲ್ ಮಾಡುವ ಮುನ್ನ ಪ್ರಕಾಶಕರ ಹೆಸರನ್ನು (publisher's name) ಪರಿಶೀಲಿಸಿ. ಈ ವೇಳೆ, ಟೈಪ್‌ ಫೇಸ್‌ಗಳು, ಲೋಗೋಗಳು ಮತ್ತು ಇನ್ನೂ ಹೆಚ್ಚಿನ ಚಿಕ್ಕ ಚಿಕ್ಕ ವಿಷಯಗಳನ್ನು ಗಮನಿಸಿ. ಅಧಿಕೃತ ಎಂದು ಖಚಿತಪಡಿಸಿಕೊಂಡು ಆಪ್‌ ಇನ್‌ಸ್ಟಾಲ್‌ ಮಾಡಲು ಮುಂದಾಗಿ.

ಅಲ್ಲದೆ ನಿಮಗೆ ಅನಾಮಿಕರಿಂದ ಬರುವ ಲಿಂಕ್‌ ಅನ್ನು ಕ್ಲಿಕ್‌ ಮಾಡಿ ಯಾವುದೇ ಆಪ್‌ ಇನ್‌ಸ್ಟಾಲ್ ಮಾಡಬೇಡಿ. ಅಂದರೆ ಯುಆರ್‌ಎಲ್‌ಗಳಿಂದ ಪ್ರೋಗ್ರಾಂಗಳನ್ನು ಡೌನ್‌ಲೋಡ್ ಮಾಡುವುದನ್ನು ತಡೆಯಿರಿ. ಇದರೊಂದಿಗೆ ನಿಮ್ಮ ಫೋನ್‌ನಲ್ಲಿ ಇತ್ತೀಚಿನ ಭದ್ರತಾ ನವೀಕರಣಗಳನ್ನು ಇನ್‌ಸ್ಟಾಲ್‌ ಮಾಡಲಾಗಿದೆಯಾ ಎಂದು ಪರಿಶೀಲಿಸಿ.

Best Mobiles in India

English summary
Five dangerous apps have been detected in the Google Play Store. Malware in these apps is said to threaten smartphone users.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+