SpinOk malware: ನಿಮ್ಮ ಫೋನ್‌ನಲ್ಲಿ ಈ ಆಪ್‌ಗಳಿವೆಯೇ? ಈಗಲೇ ಡಿಲೀಟ್ ಮಾಡಿ,ಇಲ್ಲದಿದ್ದರೆ ಡೇಂಜರ್
ಸ್ಮಾರ್ಟ್‌ಫೋನ್‌ಗಳು ನಮಗೆ ಎಷ್ಟು ಉಪಯುಕ್ತವೋ ಅದಕ್ಕಿಂತ ಹೆಚ್ಚು ಅಪಾಯಕಾರಿಯಾಗಿ ಮಾರ್ಪಾಡಾಗುತ್ತಿವೆ. ಯಾಕೆಂದರೆ ಕೆಲವು ಸ್ಕ್ಯಾಮರ್‌ಗಳು ಸ್ಮಾರ್ಟ್‌ಫೋನ್ ಬಳಕೆದಾರರ ಖಾಸಗಿ ಹಾಗೂ ಬ್ಯಾಂಕ್ ಮಾಹಿತಿಯನ್ನು ಕದಿಯುವ ಉದ್ದೇಶದಿಂದ ಆಪ್‌ಗಳ ಮೂಲಕ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಅದರಂತೆ ಇದೀಗ ಬರೋಬ್ಬರಿ 101 ಆಪ್‌ಗಳ ಬಗ್ಗೆ ಎಚ್ಚರಿಕೆ ನೀಡಲಾಗಿದೆ.
ಹೌದು, ಗೂಗಲ್ ಪ್ಲೇ ಸ್ಟೋರ್‌ನಲ್ಲಿ100ಕ್ಕೂ ಹೆಚ್ಚು ಆಪ್‌ಗಳಿಗೆ ಸೋಂಕು ತಗುಲಿರುವ ಹೊಸ ಅಪಾಯಕಾರಿ ಮಾಲ್‌ವೇರ್ ಅನ್ನು ಸಂಶೋಧಕರು ಕಂಡುಕೊಂಡಿದ್ದಾರೆ. ಬ್ಲೀಪಿಂಗ್ ಕಂಪ್ಯೂಟರ್ ನೊಂದಿಗೆ ಡಾ.ವೆಬ್ ಭದ್ರತಾ ಸಂಶೋಧಕರು ಸ್ಪಿನ್ಒಕೆ (SpinOK) ಎಂಬ ಹೊಸ ಸ್ಪೈವೇರ್ ಅನ್ನು ಪತ್ತೆ ಮಾಡಿದ್ದು, ಇದು 100ಕ್ಕೂ ಹೆಚ್ಚು ಆಂಡ್ರಾಯ್ಡ್ ಆಪ್‌ಗಳಿಗೆ ಸೋಂಕುಂಟು ಮಾಡಿದೆ ಎನ್ನಲಾಗಿದೆ. ಹಾಗಿದ್ರೆ, ಯಾವೆಲ್ಲಾ ಆಪ್‌ಗಳು ಈ ಸ್ಪೈವೇರ್ ದಾಳಿಗೆ ತುತ್ತಾಗಿವೆ, ನಿಮ್ಮ ಸ್ಮಾರ್ಟ್‌ಫೋನ್‌ನಿಂದ ಯಾವ ಆಪ್ ತೆಗೆದುಹಾಕಬೇಕು ಎಂಬುದನ್ನು ತಿಳಿದುಕೊಳ್ಳಿ.

ಈ ಸಮಸ್ಯೆಗಳ ಕುರಿತು ಗೂಗಲ್‌ಗೆ ಮಾಹಿತಿ ನೀಡಲಾಗಿದ್ದು, ಆ ಎಲ್ಲಾ ಅಪ್ಲಿಕೇಶನ್‌ಗಳನ್ನು ತೆಗೆದುಹಾಕಲಾಗಿದೆ ಎಂದು ವರದಿಯಾಗಿದೆ. ಇದರೊಂದಿಗೆ ಬಳಕೆದಾರರು ಈ ಅಪ್ಲಿಕೇಶನ್‌ಗಳನ್ನು ಅಳಿಸಲು ಹಾಗೂ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಮತ್ತು ಭವಿಷ್ಯದಲ್ಲಿ ಈ ರೀತಿಯ ಯಾವುದೇ ಆಪ್ ಅನ್ನು ಡೌನ್‌ಲೋಡ್ ಮಾಡದಂತೆ ಸಲಹೆ ನೀಡಿದ್ದಾರೆ. ಹಾಗಿದ್ರೆ, ಬನ್ನಿ ಈ ಸ್ಪಿನ್ಒಕೆ ಎಂದರೇನು ಎಂದು ತಿಳಿಯೋಣ.
ಸ್ಪಿನ್ಒಕೆ ಮಾಲ್ವೇರ್: ಈ ಟ್ರೋಜನ್ ಮಾಲ್‌ವೇರ್ ಜಾಹೀರಾತಿನ ಎಸ್‌ಡಿಕೆ ವೇಷದಲ್ಲಿ ಕಾಣಿಸಿಕೊಳ್ಳುತ್ತಿದೆ. ಹಾಗೂ ಬಳಕೆದಾರರನ್ನು ಆಕರ್ಷಿಸಲು ದೈನಂದಿನ ಬಹುಮಾನಗಳೊಂದಿಗೆ ಮಿನಿ-ಗೇಮ್‌ಗಳನ್ನು ನೀಡುವ ಮೂಲಕ ಇದು ಕಾನೂನು ಬದ್ಧವಾಗಿದೆ ಎಂಬುದನ್ನು ಬಳಕೆದಾರರಿಗೆ ಮನವರಿಕೆ ಮಾಡಿಕೊಡುತ್ತದೆ. ಆದರೆ, ಈ ಆಪ್ ಅನ್ನು ಒಮ್ಮೆ ಡೌನ್‌ಲೋಡ್ ಮಾಡಿದ ನಂತರ ಮಾಲ್‌ವೇರ್ ಬಳಕೆದಾರರ ಡಿವೈಸ್‌ನಲ್ಲಿ ಸಂಗ್ರಹವಾಗಿರುವ ಖಾಸಗಿ ಡೇಟಾವನ್ನು ಕದಿಯುತ್ತದೆ ಮತ್ತು ಅದನ್ನು ರಿಮೋಟ್ ಸರ್ವರ್‌ಗೆ ಕಳುಹಿಸುತ್ತದೆ.
ಇನ್ನು ಸೋಂಕಿತ ಆಪ್‌ಗಳು ವಿವಿಧ ಹಂತದ ದುರುದ್ದೇಶಪೂರಿತ ಕಂಟೆಂಟ್ ಅನ್ನು ಹೊಂದಿದ್ದು, ಈ ನಡುವೆ ಕೆಲವು ಹಾನಿಕಾರಕ ಸಾಫ್ಟ್‌ವೇರ್ ಅನ್ನು ಹೊಂದಿದ್ದರೆ, ಇನ್ನೂ ಕೆಲವು ನಿರ್ದಿಷ್ಟ ಆವೃತ್ತಿಗಳನ್ನು ಹೊಂದಿದ್ದವು. ಇವುಗಳನ್ನು ಈಗ ಪ್ಲೇ ಸ್ಟೋರ್‌ನಿಂದ ಸಂಪೂರ್ಣವಾಗಿ ತೆಗೆದುಹಾಕಲಾಗಿದೆ. ಜೊತೆಗೆ ಸ್ಪಿನ್‌ಒಕ್ ಮಾಡ್ಯೂಲ್ ಅನ್ನು ಮಿನಿ-ಗೇಮ್‌ಗಳು, ಬಹುಮಾನಗಳು ಮತ್ತು ರಿವಾರ್ಡ್ ಡ್ರಾಯಿಂಗ್‌ಗಳ ಸಹಾಯದಿಂದ ಆಪ್‌ಗಳಲ್ಲಿ ಬಳಕೆದಾರರ ಆಸಕ್ತಿಯನ್ನು ಕಾಪಾಡಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ ಎಂದು ಡಾಕ್ಟರ್ ವೆಬ್‌ನ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.

ಮಾಲ್ವೇರ್ ಸೋಂಕಿಗೆ ಒಳಗಾದ ಪ್ರಮುಖ 10 ಆಪ್‌ಗಳನ್ನು ಗಮನಿಸುವುದಾದರೆ ಅದರಲ್ಲಿ ಪ್ರಮುಖವಾಗಿ Noizz ಆಪ್ ಗುರುತಿಸಿಕೊಂಡಿದೆ. ಇದು ಕನಿಷ್ಠ 100,000,000 ಡೌನ್‌ಲೋಡ್ ಆಗಿದೆ. ನಂತರ ಜಪ್ಯಾ ಆಪ್ ಕನಿಷ್ಠ 100,000,000 ಡೌನ್‌ಲೋಡ್‌ಗಳನ್ನು ಹೊಂದಿದ್ದು, ವಿಪ್ಲೈ 50,000,000 ಡೌನ್‌ಲೋಡ್ ಆಗಿದೆ. ಇದರೊಂದಿಗೆ MVಬಿಟ್ - ಎಂವಿ ಆಪ್ ಸಹ 50,000,000 ಡೌನ್‌ಲೋಡ್ ಆಗಿದೆ.
ಇದರೊಂದಿಗೆ ಬ್ಯಿಗೊ ಆಪ್ ಸಹ 50,000,000 ಡೌನ್‌ಲೋಡ್ ಆಗಿದ್ದು, ಕ್ರೇಜಿ ಡ್ರಾಪ್ 10,000,000, ಕ್ಯಾಶ್ ಜಿನ್ 10,000,000 ಡೌನ್‌ಲೋಡ್ ಆಗಿದ್ದು, ಫಿಜ್ಜೋ ನಾವೆಲ್10,000,000 ಡೌನ್‌ಲೋಡ್‌ಗಳನ್ನು ಹೊಂದಿದೆ. ಜೊತೆಗೆ ಕ್ಯಾಶ್‌ಎಎಂ 5,000,000 ಡೌನ್‌ಲೋಡ್ ಹಾಗೂ ಟಿಕ್: ವಾಟ್ ಟಿ ಅರ್ನ್5,000,000 ಡೌನ್‌ಲೋಡ್‌ಗಳನ್ನು ಹೊಂದಿದೆ. ಹಾಗಿದ್ರೆ ಈ ರೀತಿಯ ದುರುದ್ದೇಶಪೂರಿತ ಆಪ್‌ಗಳನ್ನು ಈ ರೀತಿ ಗುರುತಿಸಿ.
ಅನುಮತಿಗಳನ್ನು ಪರಿಶೀಲಿಸಿ: ಗೂಗಲ್ ಪ್ಲೇ ಸ್ಟೋರ್ ಹಾಗೂ ಆಪ್ ಸ್ಟೋರ್ ನಲ್ಲಿ ಮಾಲ್‌ವೇರ್ ಸೋಂಕಿತ ಆಪ್‌ಗಳನ್ನು ಪತ್ತೆ ಮಾಡಲು ನೀವು ಈ ಸರಳ ಹಂತಗಳನ್ನು ಪಾಲಿಸಬಹುದು. ಮೊದಲು ನಿಮ್ಮ ಫೋನ್‌ನಲ್ಲಿ ಆಪ್ ಅನುಮತಿಗಳನ್ನು ಪರಿಶೀಲಿಸಿ. ಸ್ಪಷ್ಟ ಕಾರಣವಿಲ್ಲದೆ ಸಂಪರ್ಕಗಳಿಗೆ ಅಥವಾ ನೆಟ್‌ವರ್ಕ್ ಸಂಪರ್ಕಕ್ಕೆ ಪ್ರವೇಶದಂತಹ ಅತಿಯಾದ ಅಥವಾ ಅನಗತ್ಯ ಅನುಮತಿ ಇರುವುದನ್ನು ಗಮನಿಸಿ
ರಿವ್ಯೂಗಳನ್ನು ಓದಿ: ಇದರೊಂದಿಗೆ ಯಾವುದೇ ಆಪ್ ಇನ್‌ಸ್ಟಾಲ್ ಮಾಡುವಾಗ ಈಗಾಗಲೇ ಅದನ್ನು ಬಳಕೆ ಮಾಡಿರುವವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿರುತ್ತಾರೆ. ಅದನ್ನು ಕಡ್ಡಾಯವಾಗಿ ಪರಿಶೀಲನೆ ನಡೆಸಿ. ಹಾಗೆಯೇ ವಿಮರ್ಶೆಗಳಲ್ಲಿ ಉಲ್ಲೇಖಿಸಲಾದ ನಕಲಿ ಕೊಡುಗೆಗಳು ಅಥವಾ ಅತಿಯಾದ ಜಾಹೀರಾತುಗಳ ಬಗ್ಗೆಯೂ ಜಾಗರೂಕರಾಗಿರಿ ಮತ್ತು ಬಳಕೆದಾರರ ಪ್ರತಿಕ್ರಿಯೆ ಮತ್ತು ಬೆಂಬಲಕ್ಕೆ ಪ್ರತಿಕ್ರಿಯಿಸುವ ಡೆವಲಪರ್‌ಗಳ ವಿಶ್ವಾಸಾರ್ಹತೆಯನ್ನು ಸಹ ಪರಿಗಣಿಸಿ.

ಇನ್‌ಸ್ಟಾಲ್‌ಗಳಿಗೂ ರಿವ್ಯೂಗಳಿಗೂ ಹೊಂದಿಕೆ ಮಾಡಿ ನೋಡಿ: ಎಷ್ಟು ಜನರು ಆಪ್ ಇನ್‌ಸ್ಟಾಲ್ ಮಾಡಿಕೊಂಡಿದ್ದಾರೆ ಹಾಗೂ ಎಷ್ಟು ಜನರು ವಿಮರ್ಶೆಯನ್ನು ಬರೆದಿದ್ದಾರೆ ಎಂಬುದಕ್ಕೆ ಹೋಲಿಸಿದರೆ ಈ ಆಪ್ ಎಷ್ಟು ವಸ್ತುನಿಷ್ಠತೆಯಿಂದ ಕೂಡಿದೆ ಎಂದು ತಿಳಿದುಬರುತ್ತದೆ. ಅಂದರೆ ಹೆಚ್ಚಿನ ಇನ್‌ಸ್ಟಾಲ್ ಹಾಗೂ ವಿಮರ್ಶೆಗಳ ಅನುಪಾತವು ದುರುದ್ದೇಶಪೂರಿತ ಚಟುವಟಿಕೆಯ ಸಂಕೇತವಾಗಿರಬಹುದು ಎಂಬುದನ್ನು ಊಹಿಸಿಕೊಳ್ಳಿ.
ಗೂಗಲ್ ಪ್ಲೇ ಪ್ರೊಟೆಕ್ಟ್ ಸಕ್ರಿಯಗೊಳಿಸಿ: ಆಂಡ್ರಾಯ್ಡ್‌ನಲ್ಲಿ ಗೂಗಲ್ ಪ್ಲೇ ಪ್ರೊಟೆಕ್ಟ್ ಸೌಲಭ್ಯ ಇದ್ದು, ಇದರ ಮೂಲಕ ನಿಮ್ಮ ಫೋನ್‌ನಲ್ಲಿ ಯಾವುದೇ ಆಪ್ ಇನ್‌ಸ್ಟಾಲ್ ಮಾಡಿದರೂ ಸಹ ಸುರಕ್ಷತೆಗಾಗಿ ಆಪ್‌ಗಳನ್ನು ಮೊದಲು ಪರಿಶೀಲಿಸುತ್ತದೆ ಮತ್ತು ನಿಯಮಿತವಾಗಿ ಆಪ್‌ಗಳನ್ನು ಪರಿಶೀಲನೆ ನಡೆಸುತ್ತಲೇ ಇರುತ್ತದೆ. ಇದರೊಂದಿಗೆ ಆಂಟಿ ವೈರಸ್ ಆಪ್‌ಗಳು ಈ ರೀತಿಯ ವೈಸರ್‌ನಿಂದ ನಿಮ್ಮ ಫೋನ್ ಅನ್ನು ಕಾಪಾಡುತ್ತವೆ.
ಅಪ್ಲಿಕೇಶನ್ ಡೆವಲಪರ್ ಅನ್ನು ತನಿಖೆ ಮಾಡಿ: ಇನ್ನು ಯಾವುದೇ ಆಪ್ ಡೆವಲಪರ್ ಅನ್ನು ವಿಮರ್ಶೆ ಮಾಡಿ. ಅಂದರೆ ಆ ಆಪ್ ಸಂಬಂಧ ವೆಬ್‌ಸೈಟ್‌ಗಳು ಲಭ್ಯ ಇರುತ್ತವೆ. ಜೊತೆಗೆ ಸಾಮಾಜಿಕ ಮಾಧ್ಯಮ ಸಹ ಇರುತ್ತದೆ. ಇವುಗಳನ್ನೆಲ್ಲಾ ಪರಿಶೀಲಿಸುವ ಮೂಲಕ ಡೆವಲಪರ್‌ನ ನ್ಯಾಯಸಮ್ಮತತೆಯನ್ನು ಕಂಡುಕೊಂಡು ಆಪ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳಬಹುದು. ಇದರೊಂದಿಗೆ ಆಪ್‌ನಲ್ಲಿ ಕಾಗುಣಿತ ಅಥವಾ ವ್ಯಾಕರಣ ದೋಷಗಳು, ಅಸ್ಪಷ್ಟ ಮಾಹಿತಿ ಅಥವಾ ಆಪ್‌ನ ಕ್ರಿಯಾತ್ಮಕತೆಯ ವಿವರಗಳ ಕೊರತೆಯ ಬಗ್ಗೆ ಗಮನಹರಿಸಿ
ಇನ್ನು ನೀವು ಇನ್‌ಸ್ಟಾಲ್ ಮಾಡುವ ಯಾವುದೇ ಆಪ್‌ನಲ್ಲಿ ಪಾಸ್‌ವರ್ಡ್‌ಗಳು ಅಥವಾ ಕ್ರೆಡಿಟ್ ಕಾರ್ಡ್ ವಿವರಗಳಂತಹ ಸೂಕ್ಷ್ಮ ಡೇಟಾಗೆ ಪ್ರವೇಶ ಕೇಳಿದರೆ ಯಾವುದೇ ಕಾರಣಕ್ಕೂ ಅನುಮತಿ ನೀಡಬೇಡಿ. ಈ ಕಾರಣಕ್ಕಾಗಿಯೇ ಆಪ್‌ಗಳನ್ನು ಇನ್‌ಸ್ಟಾಲ್ ಮಾಡುವಾಗ ಮೇಲೆ ತಿಳಿಸಿದ ಎಲ್ಲಾ ಮಾಹಿತಿಯನ್ನು ಪರಿಶೀಲಿಸಿ. ಗಮನಿಸಬೇಕಾದ ವಿಷಯ ಏನೆಂದರೆ ಈ ವೈರಸ್ ಇರುವ ಆಪ್‌ಗಳು ಒಟ್ಟಾರೆ 421,290,300 ಬಾರಿ ಡೌನ್‌ಲೋಡ್ ಆಗಿವೆ.


Click it and Unblock the Notifications








