Aadhaar Card ಉಚಿತ ನವೀಕರಣಕ್ಕೆ ದಿನಾಂಕ ವಿಸ್ತರಣೆ...ಇಲ್ಲಿದೆ ಪ್ರಮುಖ ಮಾಹಿತಿ!
ಆಧಾರ್ ಕಾರ್ಡ್(Aadhaar Card) ಇಂದು ಎಲ್ಲಾ ಸೌಲಭ್ಯಗಳಿಗೂ ಅಗತ್ಯ ಆಗಿದ್ದು, ಅದರಲ್ಲೂ ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳಿಗೆ ಈ ಆಧಾರ್ ಕಡ್ಡಾಯ ಎನ್ನಲಾಗಿದೆ. ಈ ಕಾರಣಕ್ಕಾಗಿಯೇ ಆಧಾರ್‌ನಲ್ಲಿ ಏನಾದರೂ ಸಮಸ್ಯೆಗಳಿದ್ದರೆ ಈಗಲೇ ತಿದ್ದುಪಡಿ ಮಾಡಿಕೊಳ್ಳಿ, ಅದೂ ಸಹ ಉಚಿತವಾಗಿ.
ಹೌದು, ಸರ್ಕಾರ ಆಧಾರ್ ಕಾರ್ಡ್ ಉಚಿತ ನವೀಕರಣ ದಿನಾಂಕವನ್ನು ವಿಸ್ತರಣೆ ಮಾಡಲಾಗಿದ್ದು, ಈ ಮೂಲಕ ಯಾರೆಲ್ಲಾ ಇನ್ನೂ ತಮ್ಮ ಆಧಾರ್ ಕಾರ್ಡ್ ಸರಿಪಡಿಸಿಕೊಂಡಿಲ್ಲವೋ ಅವರಿಗೆ ಉತ್ತಮ ಅವಕಾಶ ಇದಾಗಿದೆ. ಇದರಿಂದಾಗಿ ಸರ್ಕಾರ ಗ್ಯಾರಂಟಿ ಯೋಜನೆ ಸೇರಿದಂತೆ ಇನ್ನೂ ಹಲವಾರು ಯೋಜನೆಗಳನ್ನು ಸುಲಭವಾಗಿ ಪಡೆದುಕೊಳ್ಳಬಹುದು. ಹಾಗಿದ್ರೆ, ಮುಂದಿನ ಗಡುವು ಎಲ್ಲಿಯವರೆಗಿದೆ? ಅಪ್‌ಡೇಟ್ ಹೇಗೆ ಮಾಡಿಕೊಳ್ಳುವುದು ಎಂಬ ಮಾಹಿತಿಗಾಗಿ ಈ ಲೇಖನ ಓದಿರಿ.

ಆಧಾರ್ ಕಾರ್ಡ್ ಉಚಿತ ನವೀಕರಣ ದಿನಾಂಕ ವಿಸ್ತರಣೆ: ಆನ್‌ಲೈನ್‌ನಲ್ಲಿ ಬದಲಾವಣೆಗಳನ್ನು ಮಾಡಲು ಹೊಸ ದಿನಾಂಕವನ್ನು ನೀಡಲಾಗಿದೆ. ಜೊತೆಗೆ ಜನಸಂಖ್ಯಾ ಮಾಹಿತಿಯ ನಿರಂತರ ನಿಖರತೆಗಾಗಿ ದಯವಿಟ್ಟು ಆಧಾರ್ ಅನ್ನು ನವೀಕರಿಸಿ ಎಂದು ಆಧಾರ್ ಪ್ರಾಧಿಕಾರ ಮಾಹಿತಿ ನೀಡಿದ್ದು, ಈ ವೇಳೆ ಆಧಾರ್ ನವೀಕರಿಸಲು ನಿಮ್ಮ ಗುರುತಿನ ಪುರಾವೆ ಮತ್ತು ವಿಳಾಸದ ಪುರಾವೆ ದಾಖಲೆಗಳನ್ನು ಅಪ್‌ಲೋಡ್ ಮಾಡಿ ಎಂದು ತಿಳಿಸಿದೆ.
ಯಾರೆಲ್ಲಾ ಅಪ್‌ಡೇಟ್ ಮಾಡಿಸಬೇಕು?: ಆಧಾರ್ ಕಾರ್ಡ್ ಅನ್ನು ಹತ್ತು ವರ್ಷಗಳ ಹಿಂದೆ ನೀಡಲ್ಪಟ್ಟಿದ್ದು ಈವರೆಗೂ ಅಪ್‌ಡೇಟ್ ಮಾಡಿಸದಿದ್ರೆ, ಆಧಾರ್‌ನಲ್ಲಿ ಏನಾದರೂ ತಪ್ಪುಗಳು ಇದ್ದರೆ. ಅಂದರೆ ತಪ್ಪಾದ ಹೆಸರು, ತಪ್ಪಾದ ವಿಳಾಸ ಇದ್ದರೆ ನವೀಕರಿಸಿಕೊಳ್ಳಬಹುದು. ಈ ಉಚಿತ ನವೀಕರಣವು ಜೂನ್ 14 ರೊಳಗೆ ಮಾತ್ರ ಇತ್ತು. ಆ ನಂತರದಲ್ಲಿ ನೀವು ಪಾವತಿ ಮಾಡಿ ಈ ಸೇವೆ ಪಡೆದುಕೊಳ್ಳಬೇಕಾಗುತ್ತದೆ ಎಂದು ತಿಳಿಸಲಾಗಿತ್ತು. ಆದರೆ, ಕೊನೆಯ ದಿನಾಂಕವನ್ನು ಸೆಪ್ಟೆಂಬರ್ 14,2023 ಕ್ಕೆ ವಿಸ್ತರಿಸಿದೆ.
ಯಾವೆಲ್ಲಾ ಕಾರಣಕ್ಕೆ ನವೀಕರಿಸಿಬೇಕು?:ಯುಐಡಿಎಐ ಪ್ರಕಾರ, ಮದುವೆಯಾದ ಸಂದರ್ಭದಲ್ಲಿ ಹೆಸರು ಮತ್ತು ವಿಳಾಸದಂತಹ ಮೂಲಭೂತ ಜನಸಂಖ್ಯಾ ವಿವರಗಳನ್ನು ಬದಲಾಯಿಸಬೇಕಿದೆ. ಹೊಸ ಸ್ಥಳಗಳಿಗೆ ವಲಸೆ ಹೋಗುವುದರಿಂದ ವಿಳಾಸಗಳು ಮತ್ತು ಮೊಬೈಲ್ ಸಂಖ್ಯೆಗಳು ಸಹ ಬದಲಾಗಬಹುದು.ಇದರೊಂದಿಗೆ ಸಂಬಂಧಿಕರ ಸಾವು ಇತ್ಯಾದಿ ಜೀವನದ ಘಟನೆಗಳಿಂದಾಗಿ ನಿವಾಸಿಗಳು ತಮ್ಮ ಸಂಬಂಧಿಕರ ವಿವರಗಳಲ್ಲಿ ಬದಲಾವಣೆಗಳನ್ನು ಮಾಡಿಸಿಕೊಳ್ಳಬೇಕಾಗುತ್ತದೆ. ಜೊತೆಗೆ, ನಿವಾಸಿಗಳು ತಮ್ಮ ಮೊಬೈಲ್ ಸಂಖ್ಯೆ, ಇಮೇಲ್ ವಿಳಾಸವನ್ನೂ ಬದಲಾವಣೆ ಮಾಡಬಹುದು. ಇನ್ನು ವಿಳಾಸ ಪುರಾವೆಯನ್ನು ಉಚಿತವಾಗಿ ಅಪ್‌ಲೋಡ್ ಮಾಡುವುದು ಹೇಗೆ ಎಂದು ತಿಳಿದುಕೊಳ್ಳಿ.
ಹಂತ 1 : ಮೊದಲು ನಿಮ್ಮ ಲ್ಯಾಪ್‌ಟಾಪ್ ಅಥವಾ ಪಿಸಿಯಲ್ಲಿ https://myaadhaar.uidai.gov.in/ ಗೆ ಭೇಟಿ ನೀಡಿ. ಅಲ್ಲಿ ಕೆಲವು ವಿವರಗಳನ್ನು ನೀಡುವ ಮೂಲಕ ಲಾಗಿನ್ ಆಗಿ. ಬಳಿಕ ಹೆಸರು, ಲಿಂಗ, ಹುಟ್ಟಿದ ದಿನಾಂಕ ಮತ್ತು ವಿಳಾಸದ ನವೀಕರಣವನ್ನು ಆಯ್ಕೆಮಾಡಿ. ನಂತರದಲ್ಲಿ ಆಧಾರ್ ಆನ್‌ಲೈನ್‌ನಲ್ಲಿ ನವೀಕರಿಸಿ ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.
ಹಂತ 2: ನಂತರದಲ್ಲಿ ಡೆಮೋಗ್ರಾಫಿಕ್ ಆಯ್ಕೆಯಿಂದ ವಿಳಾಸವನ್ನು ಆರಿಸಿ ಮತ್ತು 'ಆಧಾರ್ ಅನ್ನು ನವೀಕರಿಸಲು ಮುಂದುವರಿಯಿರಿ' ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಕ್ಲಿಕ್ ಮಾಡಿ. ಇದಾದ ನಂತರ ಡಾಕ್ಯುಮೆಂಟ್‌ನ ಸ್ಕ್ಯಾನ್ ಮಾಡಿದ ಪ್ರತಿಯನ್ನು ಅಪ್‌ಲೋಡ್ ಮಾಡಬೇಕಾಗುತ್ತದೆ. ಬಳಿಕ ಸೇವಾ ವಿನಂತಿ ಸಂಖ್ಯೆಯನ್ನು ರಚಿಸಲಾಗುತ್ತದೆ. ಇದನ್ನು ಬಳಕೆ ಮಾಡಿಕೊಂಡು ನವೀಕರಣ ವಿನಂತಿಗಳನ್ನು ಟ್ರ್ಯಾಕ್ ಮಾಡಿಬಹುದು.

ಹಂತ 3 : ನಂತರದಲ್ಲಿ ವಿನಂತಿಯನ್ನು ನೀವು ಯಶಸ್ವಿಯಾಗಿ ಸಲ್ಲಿಸಿದ ನಂತರ, ನಿಮಗೆ ಯುಆರ್‌ಎನ್ ಸಂಖ್ಯೆಯನ್ನು ನೀಡಲಾಗುತ್ತದೆ, ಅದು 0000/00XXX/XXXXX ಸ್ವರೂಪದಲ್ಲಿರುತ್ತದೆ. ಸಂಖ್ಯೆಯು ನಿಮ್ಮ ಡಿಸ್‌ಪ್ಲೇ ಮೇಲೆ ಕಾಣಿಸಕೊಳ್ಳುವುದಲ್ಲದೆ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೂ ಈ ಮಾಹಿತಿ ಬರುತ್ತದೆ. ನಿಮ್ಮ ಯುಆರ್‌ಎನ್ ಸಂಖ್ಯೆಯನ್ನು ಪಡೆದ ಬಳಿಕ ನಿಮ್ಮ ನವೀಕರಣದ ಸ್ಥಿತಿಯನ್ನು ನೀವು https://ssup.uidai.gov.in/checkSSUPStatus/checkupdatestatus ನಲ್ಲಿ ಪರಿಶೀಲಿಸಿಕೊಳ್ಳಬಹುದು.


Click it and Unblock the Notifications








