iPhone: ಐಫೋನ್ 15 ಪ್ರೊ ಮ್ಯಾಕ್ಸ್ ಕೊಡಿಸದಿದ್ದಕ್ಕೆ ತನ್ನ ಜೀವನವನ್ನೇ ಹಾಳು ಮಾಡಿದ ತಂದೆ ಎಂದ ಮಗಳು! ಯಾಕೆ ಗೊತ್ತಾ?
ಐಫೋನ್ (iPhone) ಕ್ರೇಜ್ ಎಲ್ಲಾ ವಯೋಮಾನದವರಿಗೂ ಇದೆ. ಅದರಲ್ಲೂ ಭಾರತದಲ್ಲಂತೂ ಸಾಲ ಮಾಡಿಯಾದರೂ ಐಫೋನ್ ಅನ್ನು ಖರೀದಿ ಮಾಡುತ್ತಾರೆ. ಅಷ್ಟರ ಮಟ್ಟಿಗೆ ಈ ಫೋನ್‌ಗಳು ಜನಪ್ರಿಯತೆ ಪಡೆದುಕೊಂಡಿವೆ. ಇದಕ್ಕೆ ಕಾರಣ ಈ ಫೋನ್‌ಗಳಲ್ಲಿ ಇರುವ ಕಾರ್ಯಕ್ಷಮತೆ.
ಹೌದು, ಐಫೋನ್ ಕೇವಲ ಕರೆ ಮಾಡಲು ಅಥವಾ ಉತ್ತಮ ಫೋಟೋ ತೆಗೆದುಕೊಳ್ಳಲು ಮಾತ್ರವಲ್ಲದೆ ಎಲ್ಲಾ ರೀತಿಯ ಬಳಕೆಗೂ ಯೋಗ್ಯವಾದ ಫೋನ್ ಆಗಿದೆ. ಅದರಲ್ಲೂ ಗೇಮರ್‌ಗಳನ್ನು ಈ ಫೋನ್ ಹೊಸ ಲೋಕಕ್ಕೆ ಕರೆದೊಯ್ಯುತ್ತದೆ. ಅದರಂತೆ ಇಲ್ಲೊಂದು ವಿಚಿತ್ರ ಘಟನೆ ವರದಿಯಾಗಿದ್ದು, ಐಫೋನ್ 15 ಪ್ರೊ ಮ್ಯಾಕ್ಸ್ (iPhone 15 Pro Max) ಅನ್ನು ಕೊಡಿಸದಿದ್ದಕ್ಕೆ ಗೇಮರ್ ಮಗಳು ತಂದೆಯನ್ನೇ ಕಟುವಾಗಿ ದೂರಿದ್ದಾಳೆ. ಹಾಗಿದ್ರೆ, ಈ ಆರೋಪ ಮಾಡಲು ಮುಖ್ಯ ಕಾರಣ ಏನು ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಐಫೋನ್ 15 ಪ್ರೊ ಮ್ಯಾಕ್ಸ್ ಗಾಗಿ ಮಗಳ ಬೇಡಿಕೆ: ಐಫೋನ್ 15 ಪ್ರೊ ಸರಣಿಯು ರೆಸಿಡೆಂಟ್ ಇವಿಲ್, ಡೆತ್ ಸ್ಟ್ರಾಂಡಿಂಗ್ ಮತ್ತು ಅಸ್ಸಾಸಿನ್ಸ್ ಕ್ರೀಡ್ ಮಿರಾಜ್‌ನಂತಹ ದೊಡ್ಡ ಸಮಯದ ಕನ್ಸೋಲ್ ಗೇಮ್‌ಗಳನ್ನು (console game) ಉತ್ತಮವಾಗಿ ನಿಭಾಯಿಸಬಲ್ಲ ಸ್ಮಾರ್ಟ್‌ಫೋನ್‌ಗಳ ಲಿಸ್ಟ್‌ನಲ್ಲಿ ಅಗ್ರಸ್ಥಾನದಲ್ಲಿದೆ. ಈ ಕಾರಣಕ್ಕೆ ಗೇಮರುಗಳು ಈ ಫೋನ್ ಅನ್ನು ಮುಗಿಬಿದ್ದು ಖರೀದಿ ಮಾಡುತ್ತಿದ್ದಾರೆ. ಅದರಲ್ಲೂ ಐಫೋನ್ 15 ಪ್ರೊ ಮತ್ತು ಐಫೋನ್ 15 ಪ್ರೊ ಮ್ಯಾಕ್ಸ್ (iPhone 15 Pro and iPhone 15 Pro Max) ಎರಡೂ ಸಹ ಈ ವಿಷಯದಲ್ಲಿ ಮುಂದಿವೆ.

ಅದರಂತೆ 11 ವರ್ಷದ ಬಾಲಕಿ ದೊಡ್ಡ ಗೇಮರ್ ಆಗಿದ್ದು, ಆಕೆ ಇದೀಗ ತನ್ನ ತಂದೆಯ ಮೇಲೆ ಕಿಡಿಕಾರಿದ್ದಾಳೆ. ಅವರು ತನ್ನ ಜೀವನವನ್ನೇ ಹಾಳುಮಾಡಿದ್ದಾರೆ ಎಂದು ದೂರಿದ್ದಾಳೆ. ಇದಕ್ಕೆ ಕಾರಣ ತಂದೆ ಮಗಳಿಗೆ ಐಫೋನ್ 15 ಪ್ರೊ ಮ್ಯಾಕ್ಸ್ ಅನ್ನು ಕೊಡಿಸದೇ ಇರುವುದು. ಮಗಳ ಈ ಆರೋಪದ ಬಳಿಕ ತಂದೆ ರೆಡ್ಡಿಟ್‌ನಲ್ಲಿ ತಮ್ಮ ಸಂಪೂರ್ಣ ಸ್ಟೋರಿಯನ್ನು ಶೇರ್ ಮಾಡಿಕೊಂಡಿದ್ದಾರೆ.
ನನಗೆ 11 ವರ್ಷದ ಮಗಳಿದ್ದು, ಎರಡು ವರ್ಷಗಳ ಹಿಂದೆ ಅವಳಿಗೆ ಒಂದು ಫೋನ್ ಕೊಟ್ಟೆವು. ಅದು ನನ್ನ ಹಳೆಯ ಐಫೋನ್ 8 ಆಗಿತ್ತು. ಆಕೆಯ ಸ್ನೇಹಿತರು ಮತ್ತು ಸಾಮಾಜಿಕ ಮಾಧ್ಯಮದೊಂದಿಗೆ ಕರೆ ಮಾಡಲು ಮತ್ತು ಮೆಸೆಜ್ ಮಾಡಲು ಆಕೆ ಅದನ್ನು ಬಳಸುತ್ತಾಳೆ. ಆದರೆ, ಅವಳ ಎಲ್ಲಾ ಸ್ನೇಹಿತರ ಬಳಿ ಹೊಸ ಫೋನ್ ಇರುವುದರಿಂದ ಅವಳು ಹೊಸ ಫೋನ್ ಬಯಸುತ್ತಿದ್ದಳು.

ಇದರಿಂದಾಗಿ ಐಫೋನ್ 13 ಉತ್ತಮ ಆಯ್ಕೆಯಾಗಿದೆ ಎಂದು ನಾನು ಭಾವಿಸಿದ್ದೆ. ಯಾಕೆಂದರೆ ಇದು 600 ಡಾಲರ್ ಹೊಂದಿದ್ದು. ಈ ಬೆಲೆಯಲ್ಲಿ ಉತ್ತಮ ಕ್ಯಾಮೆರಾ ಹಾಗೂ ಬ್ಯಾಟರಿ ಬಾಳಿಕೆ ಹೊಂದಿತ್ತು. ಆದರೆ, ಅವಳು ನಿರ್ದಿಷ್ಟವಾಗಿ ಐಫೋನ್ 15 ಪ್ರೊ ಮ್ಯಾಕ್ಸ್ ಅನ್ನೇ ಕೇಳುತ್ತಿದ್ದಳು. ಇದಕ್ಕೆ ಕಾರಣ ಏನೆಂದರೆ ಇದು ಕನ್ಸೋಲ್ ಮಟ್ಟದ ಗೇಮ್‌ಗಳಿಗೆ ಬೆಂಬಲ ನೀಡುತ್ತದೆ ಮತ್ತು 120hz ರಿಫ್ರೆಶ್ ರೇಟ್ ಆಯ್ಕೆಯ ಡಿಸ್‌ಪ್ಲೇ ಹೊಂದಿತ್ತು ಎಂದು ರೆಡ್ಡಿಟ್ ನಲ್ಲಿ ಬರೆದಿದ್ದಾರೆ.
ಇನ್ನು ಇದು ಹಣದ ವ್ಯರ್ಥ ಎಂದು ನಾನು ಭಾವಿಸಿ, ಅದನ್ನು ಖರೀದಿ ಮಾಡಲು ಸಾಧ್ಯ ಇಲ್ಲ ಎಂದು ಹೇಳಿದೆ. ಇದರಿಂದ ನನ್ನ ಮಗಳು ನನ್ನ ಮೇಲೆ ಕೋಪಗೊಂಡಳು ಮತ್ತು ನಾನು ಅವಳ ಜೀವನವನ್ನು ಹಾಳುಮಾಡುತ್ತಿದ್ದೇನೆ ಅಲ್ಲದೆ ಅವಳ ಫ್ರೆಂಡ್ಸ್ ಬಳಿ ಐಫೋನ್ 15 ಪ್ರೊ ಮ್ಯಾಕ್ಸ್ ಇದೆ ಎಂದು ಹೇಳುತ್ತಿದ್ದಾಳೆ ಎಂದು ಉಲ್ಲೇಖಿಸಿದ್ದಾರೆ.
ಇನ್ನು ಐಫೋನ್ 15 ಪ್ರೊ ಮತ್ತು ಐಫೋನ್ 15 ಪ್ರೊ ಮ್ಯಾಕ್ಸ್ ನಲ್ಲಿ ಉತ್ತಮ ಗೇಮಿಂಗ್ ಅನುಭವ ಪಡೆಯಬಹುದಾಗಿದೆ. ಗೇಮಿಂಗ್ ಕನ್ಸೋಲ್‌ಗಳಲ್ಲಿ ನೀವು ಕಾಣುವ ಸಂಪೂರ್ಣ ಮತ್ತು ಶಕ್ತಿಯುತ ಗೇಮ್ ಆಗಿವೆ ಎಂದು ಆಪಲ್ ಈ ಹಿಂದೆ ಹಂಚಿಕೊಂಡಿತ್ತು. ಈ ಫೋನ್‌ಗಳು A17 ಪ್ರೊ ಚಿಪ್‌ನಿಂದ ಕಾರ್ಯ ನಿರ್ವಹಿಸುವುದರಿಂದ ಇದೆಲ್ಲಾ ಸಾಧ್ಯ ಎಂದೂ ಸಹ ತಿಳಿಸಿತ್ತು.


Click it and Unblock the Notifications








