ಆನ್‌ಲೈನಲ್ಲಿ ಪಾನ್-ಆಧಾರ್ ಲಿಂಕ್ ಮಾಡಿಲ್ವಾ..? ಚಿಂತೆ ಬೇಡ.!
ಬ್ಯಾಂಕ್ ಖಾತೆ, ಮೊಬೈಲ್ ಸಂಖ್ಯೆ, ಪ್ಯಾನ್ ಕಾರ್ಡ್‌ಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಲು ಅವಧಿಯನ್ನು ಮಾರ್ಚ್ 31, 2018ರ ವರೆಗೂ ವಿಸ್ತರಿಸಲಾಗಿದೆ. ಈ ಅವಧಿ ವಿಸ್ತರಣೆಯ ಕುರಿತು ಕೇಂದ್ರ ಸರಕಾರವೂ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ಕೇಂದ್ರ ಮತ್ತು ರಾಜ್ಯ ಸರಕಾರಗಳು ವಿವಿಧ ಯೋಜನೆಗಳಿಗೆ ಆಧಾರ್ ಕಾರ್ಡ್ ಕಡ್ಡಾಯ ಮಾಡಿರುವ ಹಿನ್ನಲೆಯಲ್ಲಿ ಬ್ಯಾಂಕ್ ಖಾತೆ, ಮೊಬೈಲ್ ಸಂಖ್ಯೆ, ಪ್ಯಾನ್ ಕಾರ್ಡ್‌ಗೆ ಆಧಾರ್ ಸಂಖ್ಯೆಯನ್ನು ಕಡ್ಡಾಯವಾಗಿ ಲಿಂಕ್ ಮಾಡಬೇಕಾಗಿದೆ. ಆದರೆ ಇದರಕ್ಕಾಗಿ ವಿಧಿಸಿದ್ದ ಅವಧಿಯನ್ನು ಕೇಂದ್ರ ಸರಕಾರ ವಿಸ್ತರಿಸಿದೆ ಎನ್ನಲಾಗಿದೆ.

ಓದಿರಿ: ಏರ್‌ಟೆಲ್ ನಿಂದ ಮತ್ತೊಂದು ಫೋನ್; ಜಿಯೋ ಫೋನ್ ಕಥೆ!?
ಬ್ಯಾಂಕ್ ಖಾತೆ, ಮೊಬೈಲ್ ಸಂಖ್ಯೆ, ಪ್ಯಾನ್ ಕಾರ್ಡ್‌ಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಲು ಅವಧಿಯನ್ನು ಮಾರ್ಚ್ 31, 2018ರ ವರೆಗೂ ಕಾಲಾವಕಾಶ ನೀಡಲಾಗಿದೆ. ಈ ಅವಧಿ ವಿಸ್ತರಣೆಯ ಕುರಿತು ಕೇಂದ್ರ ಸರಕಾರವೂ ಸುಪ್ರೀಂ ಕೋರ್ಟ್ ಪ್ರಶ್ನೆಗೆ ಉತ್ತರಿಸಿದೆ ಎನ್ನಲಾಗಿದೆ.

ಮೂರು ತಿಂಗಳು ವಿಸ್ತರಣೆ:
ಈ ಹಿಂದೆ ಕೇಂದ್ರ ಸರಕಾರವು ಬ್ಯಾಂಕ್ ಖಾತೆ, ಮೊಬೈಲ್ ಸಂಖ್ಯೆ, ಪ್ಯಾನ್ ಕಾರ್ಡ್‌ಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಲು ಈ ವರ್ಷದ ಡಿಸೆಂಬರ್ ಅಂತ್ಯಕ್ಕೆ ನಿಗಧಿ ಪಡಿಸಿತ್ತು, ಆದರೆ ಇನ್ನು ಸಾಕಷ್ಟು ಮಂದಿ ಧಾರ್ ಸಂಖ್ಯೆಯನ್ನು ಲಿಂಕ್ ಮಾಡಿಲ್ಲದ ಕಾರಣ ಅವಧಿಯನ್ನು ಮೂರು ತಿಂಗಳು ವಿಸ್ತರಿಸಿ ಮಾರ್ಚ್ 31ರವರೆಗೆ ನೀಡಲಾಗಿದೆ.

ಆಧಾರ್ ಜೋಡನೆ ಮಾಡಲೇ ಬೇಕು:
ಆಧಾರ್ ಕಾರ್ಡ್ ಹೊಂದಿರುವವರು ಮೊಬೈಲ್ ಸಂಖ್ಯೆ, ಬ್ಯಾಂಕ್ ಖಾತೆ, ಪ್ಯಾನ್ ಕಾರ್ಡ್ ನೊಂದಿಗೆ ಜೋಡಣೆ ಮಾಡಲೇ ಬೇಕು ಎಂದು ಸರ್ಕಾರ ಹೇಳಿದೆ, ಇಲ್ಲವಾದರೆ ಮಾರ್ಚ್ 31ರ ನಂತರದಲ್ಲಿ ಸರಕಾರದ ಸೌಲಭ್ಯಗನ್ನು ತಡೆಹಿಡಿಯುವ ಸಾಧ್ಯತೆ ಇದೆ ಎನ್ನಲಾಗಿದೆ.

ಮಾರ್ಚ್ 31ರವರೆಗೆ ಚಿಂತೆ ಇಲ್ಲ:
ಮಾರ್ಚ್ 31ರವರೆಗೆ ಆಧಾರ್ ಸಂಖ್ಯೆಯನ್ನು ಹೊಂದಿಲ್ಲದವರಿಗೆ ಮತ್ತು ಸಂಖ್ಯೆಯನ್ನು ಬ್ಯಾಂಕ್ ಖಾತೆ, ಮೊಬೈಲ್ ಸಂಖ್ಯೆ, ಪ್ಯಾನ್ ಕಾರ್ಡ್‌ಗೆ ಲಿಂಕ್ ಮಾಡದವರಿಗೆ ಯಾವುದೇ ಯೋಜನೆಗಳ ಸೌಲಭ್ಯಗಳನ್ನು ನಿರಾಕರಿಸುವಂತಿಲ್ಲ ಎನ್ನಲಾಗಿದೆ.

ಈಗಲೇ ಆಧಾರ್ ಕಾರ್ಡ್ ಮಾಡಿಸಿಕೊಳ್ಳಿ:
ಆಧಾರ್ ಸಂಖ್ಯೆ ಹೊಂದಿಲ್ಲದವರು ಮತ್ತು ಆಧಾರ್‌ಗಾಗಿ ಇನ್ನೂ ನೋಂದಣಿ ಮಾಡದವರಿಗೆ ಇದೇ ಸರಿಯಾದ ಸಮಯವಾಗಿದ್ದು, ಈಗಲೇ ಆಧಾರ್ ಕಾರ್ಡ್ ಮಾಡಿಸಿಕೊಳ್ಳಿ. ಇಲ್ಲವಾದರೆ ನಿಮಗೆ ಬ್ಯಾಂಕ್ ಸೇವೆ ಸೇರಿದಂತೆ ವಿವಿಧ ಸರಕಾರಿ ಯೋಜನೆಗಳ ಲಾಭವು ದೊರೆಯುವುದಿಲ್ಲ ಎನ್ನಲಾಗಿದೆ.

ಆನ್‌ಲೈನಿನಲ್ಲಿ ಸರಳ ಮತ್ತು ಸುಲಭ:
ಸರಕಾರವೂ ಮೊಬೈಲ್ ಸಂಖ್ಯೆ, ಬ್ಯಾಂಕ್ ಖಾತೆ, ಪ್ಯಾನ್ ಕಾರ್ಡ್ ನೊಂದಿಗೆ ಆಧಾರ್ ಕಾರ್ಡ್ ಸಂಖ್ಯೆಯನ್ನು ಜನ ಸಾಮಾನ್ಯರು ಸರಳ ಮತ್ತು ಸುರಕ್ಷಿತವಾಗಿ ಮಾಡಿಕೊಳ್ಳಲಿ ಎನ್ನುವ ಕಾರಣಕ್ಕಾಗಿ ಆನ್‌ಲೈನ್ ಸೇವೆಯನ್ನು ನೀಡುತ್ತಿದೆ. ಗ್ರಾಹಕರು ಇದರ ಉಪಯೋಗವನ್ನು ಪಡೆಯಬೇಕಾಗಿದೆ.


Click it and Unblock the Notifications








