ಏರ್‌ಟೆಲ್‌ ನಿಂದ ಮತ್ತೊಂದು ಫೋನ್‌; ಜಿಯೋ ಫೋನ್ ಕಥೆ!?

ಏರ್‌ಟೆಲ್ ಕಾರ್ಬನ್ A40 ಸ್ಮಾರ್ಟ್‌ಫೋನ್ ಲಾಂಚ್ ಮಾಡಿದ್ದು, ಇದು ಜಿಯೋ ಫೋನ್‌ನೊಂದಿಗೆ ನೇರಾ ಸ್ಪರ್ಧೆಯನ್ನು ನಡೆಸಲು ಮುಂದಾಗಿದೆ. ಇದೇ ಮಾದರಿಯಲ್ಲಿ ಮತ್ತೊಂದು ಫೋನ್ ಅನ್ನು ಲಾವಾದೊಂದಿಗೆ ಬಿಡುಗಡೆ ಮಾಡಲಿದೆ.

|

ಕಾರ್ಬನ್ ಜೊತೆಗೂಡಿ ಮೊನ್ನೆ ತಾನೆ ಸ್ಮಾರ್ಟ್‌ಫೋನ್ ಲಾಂಚ್ ಮಾಡಿದ್ದ ಟೆಲಿಕಾಂ ದೈತ್ಯ ಏರ್‌ಟೆಲ್, ಮತ್ತೊಂದು ಕಡಿಮೆ ಬೆಲೆಯ ಫೋನ್ ಅನ್ನು ಬಿಡುಗಡೆ ಮಾಡಲು ಮುಂದಾಗಿದೆ. ಇದಕ್ಕಾಗಿ ಸ್ಮಾರ್ಟ್‌ಫೋನ್ ತಯಾರಕಾ ಕಂಪನಿ ಲಾವಾದೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದೆ ಎನ್ನಲಾಗಿದೆ.

ಏರ್‌ಟೆಲ್‌ ನಿಂದ ಮತ್ತೊಂದು ಫೋನ್‌; ಜಿಯೋ ಫೋನ್ ಕಥೆ!?

ಓದಿರಿ: ವಿಮಾನದಲ್ಲಿ ಉಚಿತವಾಗಿ ಗ್ಯಾಲೆಕ್ಸಿ ನೋಟ್ 8 ಹಂಚಿದ ಸ್ಯಾಮ್‌ಸಂಗ್: ಯಾಕೆ..?

ಏರ್‌ಟೆಲ್ ಕಾರ್ಬನ್ A40 ಸ್ಮಾರ್ಟ್‌ಫೋನ್ ಲಾಂಚ್ ಮಾಡಿದ್ದು, ಇದು ಜಿಯೋ ಫೋನ್‌ನೊಂದಿಗೆ ನೇರಾ ಸ್ಪರ್ಧೆಯನ್ನು ನಡೆಸಲು ಮುಂದಾಗಿದೆ. ಇದೇ ಮಾದರಿಯಲ್ಲಿ ಮತ್ತೊಂದು ಫೋನ್ ಅನ್ನು ಲಾವಾದೊಂದಿಗೆ ಬಿಡುಗಡೆ ಮಾಡಲಿದೆ. ಇದು ಸಹ ಜಿಯೋ ಫೋನಿನೊಂದಿಗೆ ಸ್ಪರ್ಧೆಯಲ್ಲಿ ಕಾಣಿಸಿಕೊಳ್ಳಲಿದೆ.

ಏರ್‌ಟೆಲ್-ಲಾವಾ ಫೋನ್:

ಏರ್‌ಟೆಲ್-ಲಾವಾ ಫೋನ್:

ಆಂಡ್ರಾಯ್ಡ್ ನಲ್ಲಿ ಕಾರ್ಯನಿರ್ವಹಿಸಲಿರುವ ಏರ್‌ಟೆಲ್ ಲಾವಾ ಫೋನ್ 4.5 ಇಲ್ಲವೇ 5 ಇಂಚಿನ ಡಿಸ್‌ಪ್ಲೇಯನ್ನು ಹೊಂದಿರಲಿದೆ. ಅಲ್ಲದೇ ಆಂಡ್ರಾಯ್ಡ್ ನ್ಯಾಗವನ್ನು ಇದರಲ್ಲಿ ಕಾಣಬಹುದಾಗಿದೆ. ಅಲ್ಲದೇ 1.3GHz ವೇಗದ ಕ್ವಾಡ್ ಪ್ರೋಸೆಸರ್ ಹಾಗೂ 1GB RAM ಮ್ತು 8GB ಇಂಟರ್ನಲ್ ಮೆಮೊರಿಯನ್ನು ಈ ಫೋನಿನಲ್ಲಿ ನೀಡಲಾಗಿದೆ

ಏರ್‌ಟೆಲ್-ಲಾವಾ ಫೋನ್ ಕ್ಯಾಮೆರಾ:

ಏರ್‌ಟೆಲ್-ಲಾವಾ ಫೋನ್ ಕ್ಯಾಮೆರಾ:

ಏರ್‌ಟೆಲ್-ಲಾವಾ ಫೋನಿನ ಹಿಂಭಾಗದಲ್ಲಿ 2 MP ಕ್ಯಾಮೆರಾವನ್ನು ಕಾಣಬಹುದಾಗಿದೆ. ಇದಲ್ಲದೇ ಮುಂಭಾಗದಲ್ಲಿ VGA ಕ್ಯಾಮೆರಾವನ್ನು ಅಳವಡಿಸಲಾಗಿದೆ. ಜೊತೆಗೆ 1400mAh ಬ್ಯಾಟರಿಯನ್ನು ನೀಡಲಾಗಿದೆ. ಅಲ್ಲದೇ ಉತ್ತಮ ವಿನ್ಯಾಸವನ್ನು ಹೊಂದಿರಲಿದೆ ಎನ್ನಲಾಗಿದೆ.

ವೊಡಾಪೋನ್ ಫೋನ್:

ವೊಡಾಪೋನ್ ಫೋನ್:

ವೊಡಾಫೋನ್ ಮೈಕ್ರೋಮಾಕ್ಸ್ ನೊಂದಿಗೆ ಸೇರಿ. ಭಾರತ್ 2 ಆಲ್ಟ್ರಾ 4G ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 6.0ದಲ್ಲಿ ಕಾರ್ಯನಿರ್ವಹಿಸಲು ಶಕ್ತವಾಗಿದ್ದು, ಈ ಫೋನಿನಲ್ಲಿ 512 MB RAM ಅನ್ನು ಕಾಣಬಹುದಾಗಿದೆ. ಇದಲ್ಲದೇ ಕ್ವಾಡ್ ಕೋರ್ ಸೆರೆಡ್ರಮ್ ಪ್ರೋಸೆಸರ್ ಸಹ ಅಳವಡಿಸಲಾಗಿದೆ. ಇದರಲ್ಲಿ 1300mAh ಬ್ಯಾಟರಿಯನ್ನು ಸಹ ನೀಡಲಾಗಿದೆ.

BSNL ಫೋನ್:

BSNL ಫೋನ್:

ಈಗಾಗಲೇ ಮಾರುಕಟ್ಟೆಯಲ್ಲಿ ಮೈಕ್ರೋಮಾಕ್ಸ್ ಗುರುತಿಸಿಕೊಂಡಿದ್ದು, BSNL ಮೈಕ್ರೋ ಮಾಕ್ಸ್ ಜೊತೆಗೂಡಿ ಭಾರತ್ 1 ಲಾಂಚ್ ಮಾಡಿದೆ. ಭಾರತ-1 ಫೋನಿನಲ್ಲಿ 2.4 ಇಂಚಿನ QVGA ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ. ಇದರೊಂದಿಗೆ ಕ್ವಾಲ್ಕಮ್ ಸ್ನಾಪ್‌ಡ್ರಾಗನ್ ಪ್ರೋಸೆಸರ್ ಅನ್ನು ಅಳವಡಿಸಲಾಗಿದೆ. 4G VoLTE ಸಫೋರ್ಟ್ ಮಾಡಲಿದೆ.

ಏರ್‌ಟೆಲ್ ಫೋನ್:

ಏರ್‌ಟೆಲ್ ಫೋನ್:

ಏರ್‌ಟೆಲ್ ಕಾರ್ಬನ್ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡು ಕಾರ್ಬನ್ A 40 ಸ್ಮಾರ್ಟ್‌ಫೋನ್ ಲಾಂಚ್ ಮಾಡಿದ್ದು, ಏರ್‌ಟೆಲ್‌ ಫೋನ್ ರೂ. 1,399ಕ್ಕೆ ದೊರೆಯುತ್ತಿದೆ ಎನ್ನಲಾಗಿದೆ.

Best Mobiles in India

English summary
Airtel might be working with Lava for a second low-cost 4G phone. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X