Subscribe to Gizbot

ಆನ್‌ಲೈನಿನಲ್ಲಿ ಪ್ಯಾನ್‌-ಆಧಾರ್ ಲಿಂಕ್ ಮಾಡಲು ಅವಧಿ ವಿಸ್ತರಣೆ: ಕೊನೆ ದಿನಾಂಕ ಎಂದು..?

Written By:

ಕೇಂದ್ರ ಸರಕಾರವೂ ಅಕ್ರಮ ಪ್ಯಾನ್‌ ಕಾರ್ಡ್‌ ಗಳನ್ನು ನಿಯಂತ್ರಿಸುವ ಸಲುವಾಗಿ ಪ್ಯಾನ್‌ ನೊಂದಿಗೆ ಆಧಾರ್ ಸಂಖ್ಯೆಯನ್ನು ಕಡ್ಡಾಯ ಜೋಡಣೆ ಮಾಡುವಂತೆ ಆದೇಶ ನೀಡಿತ್ತು. ಅಲ್ಲದೇ ಇದಕ್ಕೆ ಗಡುವನ್ನು ನಿರ್ಧರಿಸಿತ್ತು. ಸದ್ಯ ಈ ಗಡುವನ್ನು ಮೂರು ತಿಂಗಳ ಕಾಲ ವಿಸ್ತರಿಸಿ ಹೊಸದಾಗಿ ಆದೇಶ ಹೊರಡಿಸಿದೆ.

ಆನ್‌ಲೈನಿನಲ್ಲಿ ಪ್ಯಾನ್‌-ಆಧಾರ್ ಲಿಂಕ್ ಮಾಡಲು ಅವಧಿ ವಿಸ್ತರಣೆ: ಕೊನೆ ದಿನಾಂಕ ಎಂದ

ಓದಿರಿ: ಮಿಸ್‌ಕಾಲ್‌ ಕೊಟ್ರೆ ಸಾಕು: ಕುಮಾರಣ್ಣನ ಪ್ರತಿ ಸುದ್ಧಿ ನಿಮ್ಮ ಮೊಬೈಲ್‌ನಲ್ಲಿ..!

ದೇಶದ ನಾಗರೀಕರು ಸರಕಾರದ ವಿವಿಧ ಯೋಜನೆಗಳ ಲಾಭವನ್ನು ಪಡೆಯುವ ಸಲುವಾಗಿ ಆಧಾರ್‌ ಜೋಡಣೆಯ ಮಾಡಬೇಕಾಗಿದೆ. ಇದಕ್ಕಾಗಿ ಇದೇ ಡಿಸೆಂಬರ್ 31ರ ವರೆಗೆ ಇದ್ದ ಗಡುವನ್ನು 2018ರ ಮಾರ್ಚ್ 31ರವರೆಗೂ ವಿಸ್ತರಣೆ ಮಾಡಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಎರಡು ಬಾರಿ ಅವಧಿ ವಿಸ್ತರಣೆ:

ಎರಡು ಬಾರಿ ಅವಧಿ ವಿಸ್ತರಣೆ:

ಈ ಹಿಂದೆ ಕೇಂದ್ರ ಸರಕಾರವೂ ಜುಲೈ 31, 2017ರ ಒಳಗಾಗಿ ಪ್ಯಾನ್‌-ಆಧಾರ್‌ ಲಿಂಕ್‌ ಮಾಡಲು ಗಡುವನ್ನು ನೀಡಿತ್ತು. ನಂತರದ ಈ ಗಡುವನ್ನು 2017ರ ಆಗಸ್ಟ್‌ 31ರವರೆಗೂ ಮತ್ತು ಆ ನಂತರ ಡಿಸೆಂಬರ್ 31ರವರೆಗೂ ಎರಡು ಬಾರಿ ವಿಸ್ತರಣೆ ಮಾಡಿತ್ತು. ಈಗ ಮತ್ತೆ ಅವಧಿಯೂ ವಿಸ್ತರಣೆಯಾಗಿದೆ.

ಇನ್ನು ಅರ್ಧದಷ್ಟು ಪ್ಯಾನ್‌ಗಳು ಲಿಂಕ್ ಆಗಿಲ್ಲ:

ಇನ್ನು ಅರ್ಧದಷ್ಟು ಪ್ಯಾನ್‌ಗಳು ಲಿಂಕ್ ಆಗಿಲ್ಲ:

ಈಗಾಗಲೇ ದೇಶದಲ್ಲಿ ಸುಮಾರು 33 ಕೋಟಿ ಮಂದಿ ಪ್ಯಾನ್‌ ಕಾರ್ಡ್‌ಗಳನ್ನು ಮಾಡಿಸಿದ್ದಾರೆ. ಆದರೆ ಇದರಲ್ಲಿ ಸುಮಾರು 13.28 ಕೋಟಿ ಪ್ಯಾನ್‌ಗಳು ಆಧಾರ್ ನೊಂದಿಗೆ ಲಿಂಕ್‌ಗಿದೆ. ಅರ್ಧಕ್ಕಿಂತ ಹೆಚ್ಚಿನ ಪ್ಯಾನ್‌ಗಳು ಲಿಂಕ್ ಆಗಿಲ್ಲ ಎನ್ನಲಾಗಿದೆ.

ಆದರೆ ಇನ್ನೊಂದು ವಿಚಾರ:

ಆದರೆ ಇನ್ನೊಂದು ವಿಚಾರ:

ಪ್ಯಾನ್‌-ಆಧಾರ್ ಲಿಂಕ್ ಮಾಡಲು ಅವಧಿ ವಿಸ್ತರಣೆ ಮಾಡಿದ ಮಾದರಿಯಲ್ಲಿಯೇ ಬ್ಯಾಂಕ್‌ ಖಾತೆ ಹಾಗೂ ಮೊಬೈಲ್‌ ಸಂಖ್ಯೆ ಜತೆ ಆಧಾರ್‌ ಜೋಡಣೆಯ ಗಡುವು ವಿಸ್ತರಣೆ ಮಾಡುವುದಿಲ್ಲ ಎಂದು ಆಧಾರ್ ತಿಳಿಸಿದೆ. ಬ್ಯಾಂಕ್‌ ಖಾತೆ ಜತೆ ಆಧಾರ್‌ ಜೋಡಣೆಗೆ ಡಿ.31 ಅಂತಿಮ ಗಡುವಾಗಿದೆ ಹಾಗೆಯೇ ಮೊಬೈಲ್‌ ಸಂಖ್ಯೆ-ಆಧಾರ್‌ ಲಿಂಕ್‌‌ಗೆ 2018ರ ಫೆಬ್ರವರಿ 06 ಕೊನೆಯ ದಿನಾಂಕವಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Deadline for PAN-Aadhaar linkage extended to March 31. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot