ಮಿಸ್‌ಕಾಲ್ ಕೊಟ್ರೆ ಸಾಕು: ಕುಮಾರಣ್ಣನ ಪ್ರತಿ ಸುದ್ಧಿ ನಿಮ್ಮ ಮೊಬೈಲ್‌ನಲ್ಲಿ..!
ರಾಜ್ಯದಲ್ಲಿ ಚುನಾವಣೆಯ ಕಾವು ಹೆಚ್ಚಾಗಿದ್ದು, ಪ್ರಚಾರದ ಕಾರ್ಯ ಈಗಾಗಲೇ ಭರ್ಜರಿಯಾಗಿ ಆರಂಭವಾಗಿದೆ. ಇದೇ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆಯನ್ನು ಬಲಿಷ್ಠವಾಗಿ ಮತ್ತು ಅತ್ಯಧಿಕವಾಗಿ ಪ್ರಚಾರ ಮಾಧ್ಯಮವಾಗಿ ಬಳಕೆ ಮಾಡಿಕೊಳ್ಳುವ ಪ್ರಯತ್ನಗಳು ಹೆಚ್ಚಾಗುತ್ತಿದೆ. ಎಲ್ಲಾ ಪಕ್ಷಗಳು ಈ ಕಾರ್ಯದಲ್ಲಿ ನಿರತವಾಗಿವೆ.

ಓದಿರಿ: ಗೇಮಿಂಗ್ DND ಆಯ್ಕೆಯೊಂದಿಗೆ 'ಒನ್‌ಪ್ಲಸ್ 5T ಸ್ಟಾರ್ ವಾರ್ಸ್: ಬದಲಾಗಲಿದೆ ಗೇಮಿಂಗ್ ಜಗತ್ತು
ಇದೇ ಮಾದರಿಯಲ್ಲಿ ಜೆಡಿಎಸ್ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿತವಾಗಿರುವ, ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಮಾಜಿ ಮುಖ್ಯಮಂತ್ರಿ H D ಕುಮಾರಸ್ವಾಮಿ ಹೊಸದೊಂದು ಹೆಜ್ಜೆಯನ್ನು ಮುಂಡಿಟ್ಟಿದ್ದು, ಮೊಬೈಲ್ ಮೂಲಕವೇ ಜನರ ಮನೆ-ಮನ ತಲುಪುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಈ ಮೂಲಕ ಹೊಸದೊಂದು ಸಾಧ್ಯತೆಯನ್ನು ಮುಂದಿಟ್ಟಿದ್ದಾರೆ.


'ನಮ್ಮ ಹೆಚ್ ಡಿ ಕೆ' ಜಾಲತಾಣ:
ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಮಾಜಿ ಮುಖ್ಯಮಂತ್ರಿ H D ಕುಮಾರಸ್ವಾಮಿ ತಮ್ಮದೇ ಆದ 'ನಮ್ಮ ಹೆಚ್ ಡಿ ಕೆ' ಜಾಲತಾಣವನ್ನು ಈಗಾಗಲೇ ಆರಂಭಿಸಿದ್ದಾರೆ. ಈ ಮೂಲಕ ಫೇಸ್ ಬುಕ್ , ಟ್ವಿಟರ್, ಯು ಟ್ಯೂಬ್, ಸೌಂಡ್ ಕ್ಲೌಡ್‌ನಲ್ಲಿ ಭಾರೀ ಜನಪ್ರಿಯತೆಯನ್ನು ಪಡೆದು ಕೊಂಡಿದ್ದಾರೆ. ಇದೇ ಮಾದರಿಯಲ್ಲಿ ಹೊಸದಾಗಿ ಮೊಬೈಲ್ ಸೇವೆ ಆರಂಭಿಸಲು ಮುಂದಾಗಿದ್ದಾರೆ.

ಮೊಬೈಲ್‌ನಲ್ಲೇ ಸುದ್ದಿ:
ಅಭಿಮಾನಿಗಳಿಗೆ ತಮ್ಮ ಪ್ರಚಾರದ ಕುರಿತದ ಮಾಹಿತಿಗಳನ್ನು ಮೊಬೈಲ್ ಮೂಲಕ ತಲುಪಿಸುವ ಕಾರ್ಯಕ್ಕೆ H D ಕುಮಾರಸ್ವಾಮಿ ಮುಂದಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಮಾಜಿ ಮುಖ್ಯಮಂತ್ರಿ H D ಕುಮಾರಸ್ವಾಮಿ ಅವರ ಕುರಿತ ಪ್ರತಿ ದಿನ ಅವರ ಸುದ್ದಿಯನ್ನು ಮೊಬೈಲ್ ಮೂಲಕ ಪಡೆಯಬಹುದಾಗಿದೆ. ಸಭೆ ಸಮಾರಂಭ, ಭಾಷಣ, ಪತ್ರಿಕಾ ಗೋಷ್ಠಿ ಪ್ರತಿಯೊಂದು ಮೊಬೈಲ್‌ಗೆ ಬರಲಿದೆ.

ಮಿಸ್‌ಕಾಲ್ ನೀಡಿದರೆ ಸಾಕು:
ಹೆಚ್ ಡಿ ಕುಮಾರಸ್ವಾಮಿ ಅಭಿಮಾನಿಗಳು 9483986999 ಗೆ ಒಂದು ಮಿಸ್ ಕಾಲ್ ಕೊಟ್ಟರೆ ಸಾಕು. ಮೀಸ್‌ಕಾಲ್ ಕೊಟ್ಟ ಸಂಖ್ಯೆ 'ನಮ್ಮ ಹೆಚ್ ಡಿ ಕೆ' ಪ್ರತಿ ದಿನ ಮೂರು ಬಾರಿ ಹೆಚ್ ಡಿ ಕುಮಾರಸ್ವಾಮಿ ಕುರಿತಾದ ಸುದ್ದಿಗಳು ದೊರೆಯಲಿದೆ.


Click it and Unblock the Notifications








