ಗ್ರಾಹಕರೇ ಎಚ್ಚರಿಕೆ!.1.3 ಮಿಲಿಯನ್ ಭಾರತೀಯರ ATM ಕಾರ್ಡಗಳ ಮಾಹಿತಿ ಸೋರಿಕೆ!

|

ಪ್ರಸ್ತುತ ಭಾರತದಲ್ಲಿ ನಗದು ರಹಿತ ಹಣಕಾಸಿನ ವ್ಯವಹಾರಗಳು ಅಧಿಕವಾಗಿದ್ದು, ಗ್ರಾಹಕರು ಹೆಚ್ಚಾಗಿ ಯುಪಿಐ ಆಧಾರಿತ ಪೇಮೆಂಟ್ ಆಪ್‌ಗಳನ್ನು ಬಳಕೆ ಮಾಡುತ್ತಿದ್ದಾರೆ. ಹಾಗೆಯೇ ಗ್ರಾಹಕರು ಈಗ ಎಟಿಎಮ್‌ ಕಾರ್ಡ್‌ಗಳ ಬಳಕೆಗೆ ಒಗ್ಗಿಕೊಂಡಿದ್ದಾರೆ. ಆದರೆ ಎಟಿಎಮ್‌ ಸೆಂಟರ್‌ಗಳಲ್ಲಿ ಗ್ರಾಹಕರು ಬಳಸುವ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳಿಗೆ ಸುರಕ್ಷತೆ ಇದೆಯೇ ಎನ್ನುವ ಪ್ರಶ್ನೆ ನಿಮ್ಮಲ್ಲಿ ಮೂಡಿದ್ದರೇ ಅದಕ್ಕೆ ಉತ್ತರ ಇಲ್ಲ ಎನ್ನಬಹುದು.

ಜೋಕರ್ ಸ್ಟ್ಯಾಶ್‌

ಇದೇ ಅಕ್ಟೋಬರ್ 28ರಂದು ಜೋಕರ್ ಸ್ಟ್ಯಾಶ್‌ (Joker's Stash) ಡಾರ್ಕ್ ವೆಬ್‌ ( ಸೈಬರ್ ಭೂಗತ ಅಪರಾಧಿ ತಂಡ) ಭಾರತದ ಸುಮಾರು 1.3 ಮಿಲಿಯನ್ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಮಾಹಿತಿಗಳನ್ನು ಸೋರಿಕೆ ಮಾಡಿದೆ ಎನ್ನುವ ಮಾಹಿತಿಯನ್ನು ಸಿಂಗಪೂರ ಮೂಲದ ಗ್ರೂಪ್ IB ಸೆಕ್ಯುರಿಟಿ ರಿಸರ್ಚ್‌ ತಂಡವು ಪತ್ತೆ ಹಚ್ಚಿದೆ. ಈ ದತ್ತಾಂಶಗಳು ಟ್ರಾಕ್ 1 ಮತ್ತು ಟ್ರಾಕ್ 2 ಎಂಬ ಎರಡು ಮಾದರಿಯಲ್ಲಿದ್ದವು ಎನ್ನಲಾಗಿದೆ.

ಪೇಮೆಂಟ್‌ ಕಾರ್ಡ್‌ಗಳು

ಅವುಗಳಲ್ಲಿ ಶೇ.98% ಪೇಮೆಂಟ್‌ ಕಾರ್ಡ್‌ಗಳು ಭಾರತೀಯ ಬ್ಯಾಂಕ್‌ಗಳಿಗೆ ಸೇರಿದವಾಗಿವೆ ಎನ್ನಲಾಗಿದ್ದು, ಆದರೆ ಯಾವ ಬ್ಯಾಂಕುಗಳು ಎನ್ನುವ ಬಗ್ಗೆ ಸ್ಪಷ್ಟನೆ ಇಲ್ಲ. ಈ ಘಟನೆಯಲ್ಲಿ ದೇಶದ ಕೆಲವು ಕಾರ್ಡ್‌ಗಳು ಸುಮಾರು $100 ಡಾಲರ್‌ (7,099.95ರೂ)ಗಳಿಗೆ ಮಾರಾಟಕ್ಕೆ ಇವೆ ಎನ್ನಲಾಗಿದ್ದು, ಹಾಗೆಯೇ ಒಟ್ಟಾರೇ ಎಟಿಎಮ್ ಕಾರ್ಡ್‌ ದತ್ತಾಂಶಗಳು ಸುಮಾರು $130 ಡಾಲರ್‌ಗಳಿಗೆ (9,228.64ಕೋಟಿ) ಗಳಿಗೆ ಮಾರಾಟಕ್ಕೆ ಇವೆ ಎನ್ನಲಾಗಿದೆ.

ಡೇಟಾಬೇಸ್ ಮಾರಾಟ

ಭೂಗತ ಮಾರುಕಟ್ಟೆಗಳಲ್ಲಿ ಈ ಪ್ರದೇಶದ ಕಾರ್ಡ್‌ಗಳು ಬಹಳ ವಿರಳ, ಕಳೆದ 12 ತಿಂಗಳುಗಳಲ್ಲಿ, ಇದು ಭಾರತೀಯ ಬ್ಯಾಂಕುಗಳಿಗೆ ಸಂಬಂಧಿಸಿದ ಕಾರ್ಡ್ ಡಂಪ್‌ಗಳ ಏಕೈಕ ದೊಡ್ಡ ಮಾರಾಟವಾಗಿದೆ. ಗ್ರೂಪ್-ಐಬಿಯ ಸೆಕ್ಯುರಿಟಿ ತಂಡವು ಗ್ರಾಹಕರಿಗೆ ಈ ಡೇಟಾಬೇಸ್ ಮಾರಾಟದ ಬಗ್ಗೆ ಈಗಾಗಲೇ ತಿಳಿಸಲಾಗಿದೆ. ಮಾಹಿತಿಯನ್ನು ಭದ್ರತೆಯ ಅಧಿಕಾರಿಗಳೊಂದಿಗೆ ಹಂಚಿಕೊಳ್ಳಲಾಗಿದೆ. ಎಂದು ಗ್ರೂಪ್-ಐಬಿ ಸ್ಥಾಪಕ ಇಲ್ಯಾ ಸಚ್ಕೋವ್ ಹೇಳಿದ್ದಾರೆ

ಕಾರ್ಡ್‌ಗಳ ಮಾಹಿತಿ ಸೋರಿಕೆ ಹೇಗೆ

ಕಾರ್ಡ್‌ಗಳ ಮಾಹಿತಿ ಸೋರಿಕೆ ಹೇಗೆ

ಎಟಿಎಮ್‌ ಸೆಂಟರ್‌ಗಳ ಕೀ ಪ್ಯಾಡ್‌ನಲ್ಲಿ ಹೆಚ್ಚುವರಿ ಕೀ ಸ್ಟ್ರೋಕ್‌ಗಳನ್ನು ಬಳಕೆಮಾಡುತ್ತಾರೆ ಗ್ರಾಹಕರು ಎಟಿಎಮ್‌ ಕಾರ್ಡ್‌ ಇನ್‌ಸರ್ಟ್‌ ಮಾಡಿದಾಗ ಮಾಹಿತಿಯು ಮಾಹಿತಿಯು ಮ್ಯಾಗ್ನೆಟಿಕ್ ಸ್ಟ್ರಿಪ್‌ನಲ್ಲಿ ದಾಖಲಾಗುವ ವ್ಯವಸ್ಥೆ ಮಾಡಿರುತ್ತಾರೆ. ಹಾಗೆಯೇ ಕೆಲವೊಮ್ಮೆ ಕಿರು ಹಿಡೆನ್ ಕ್ಯಾಮೆರಾಗಳನ್ನು ಎಟಿಎಮ್‌ ಕೀ ಪ್ಯಾಡ್‌ಗಳ ಬಳಿ ಫಿಕ್ಸ್ ಮಾಡಿ ಮಾಹಿತಿ ದೋಚುವ ಕೆಲಸಗಳು ನಡೆಯುವ ಸಾಧ್ಯತೆ ಇರುತ್ತವೆ.

ಪತ್ತೆ ಮಾಡುವುದು ಹೇಗೆ

ಪತ್ತೆ ಮಾಡುವುದು ಹೇಗೆ

* ಎಟಿಎಮ್ ಕಾರ್ಡ್‌ ಸಾರ್ಟ್‌ನಲ್ಲಿ ಮತ್ತು ಕೀ ಪ್ಯಾಡ್‌ ಸಡಿಲವಾಗಿದೆಯಾ ಚೆಕ್‌ ಮಾಡಿ.
* ಎಟಿಎಮ್‌ ಕೀ ಪ್ಯಾಡ್‌ ಸುತ್ತಲೂ ಗಮ್‌, ಟೇಪ್‌ ಹಚ್ಚಲಾಗಿದೆಯಾ ಪರಿಶೀಲಿಸಿ.
* ಅದಾಗ್ಯೂ ನಿಮಗೆ ಎಟಿಎಮ್‌ ಸೆಕ್ಯುರಿಟಿ ಬಗ್ಗೆ ಅನುಮಾನ ಬಂದಲ್ಲಿ, ಪಾಸ್‌ವರ್ಡ್/ಪಿನ್ ನಮೂದಿಸುವಾಗ ಕಾಣದಂತೆ ಕೈ ಮುಚ್ಚಿ ಎಂಟ್ರಿ ಮಾಡಿ.
* ಅದೇ ರೀತಿ POS ಮಿಶಿನ್‌ ಬಳಕೆ ಮಾಡುವಾಗಲೂ ಚೆಕ್ ಮಾಡಿರಿ.

Best Mobiles in India

English summary
Singapore-based Group-IB security research team has unearthed a large database of credit and debit card details on the dark web. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X